AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಲ್ಲು ಕತ್ತರಿಸುವ ಯಂತ್ರದಲ್ಲಿ ಸಿಲುಕಿ 11ವರ್ಷದ ಬಾಲಕನ ಕೈ ಕಟ್: ವೈದ್ಯರಿಂದ ತೋಳು ಮರು ಜೋಡಣೆ ಯಶಸ್ವಿ

ಆಂಧ್ರ ಪ್ರದೇಶದ 11 ವರ್ಷದ ಯುವಕ ಹುಲ್ಲು ಕತ್ತರಿಸುವ ಯಂತ್ರದಿಂದ ಆಕಸ್ಮಿಕವಾಗಿ ಕೈ ಕತ್ತರಿಸಿಕೊಂಡಿದ್ದು ನಾರಾಯಣ ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಬಾಲಕನ ಪ್ರಾಣ ಉಳಿಸಿದ್ದಾರೆ.

ಹುಲ್ಲು ಕತ್ತರಿಸುವ ಯಂತ್ರದಲ್ಲಿ ಸಿಲುಕಿ 11ವರ್ಷದ ಬಾಲಕನ ಕೈ ಕಟ್: ವೈದ್ಯರಿಂದ ತೋಳು ಮರು ಜೋಡಣೆ ಯಶಸ್ವಿ
ನಾರಾಯಣ ಹೆಲ್ತ್ ವೈದ್ಯರು ಮತ್ತು ಬಾಲಕ
Follow us
TV9 Web
| Updated By: ಆಯೇಷಾ ಬಾನು

Updated on:Apr 13, 2023 | 7:48 AM

ಹೈದರಾಬಾದ್: ಆಂಧ್ರಪ್ರದೇಶದ ಕುಪ್ಪಂನಲ್ಲಿ ಹನ್ನೊಂದು ವರ್ಷದ ಚರಣ್ ಎಂಬ ಹುಡುಗ ಹುಲ್ಲು ಕತ್ತರಿಸುವ ಯಂತ್ರದಿಂದ ಮರದ ಕೋಲನ್ನು ಕತ್ತರಿಸಲು ಪ್ರಯತ್ನಿಸುತ್ತಿರುವಾಗ ಆಕಸ್ಮಿಕವಾಗಿ ಮುಂಗೈ ಕತ್ತರಿಸಿಕೊಂಡಿರುವ ಘಟನೆ ನಡೆದಿದೆ. ಮುಂಗೈ ತುಂಡಾಗಿದ್ದು ಸದ್ಯ ವೈದ್ಯರ ಪರಿಶ್ರಮದಿಂದ ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿದೆ. ಹುಡುಗನಿಗೆ ಹೊಸ ಜೀವನ ಸಿಕ್ಕಿದೆ. ಈ ಘಟನೆಯ ನಂತರ, ಬಾಲಕನನ್ನು ಸ್ಥಳೀಯ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಅಲ್ಲಿ ಚರಣ್​ಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಾರಾಯಣ ಹೆಲ್ತ್ ಸಿಟಿ​ಗೆ ಶಿಫ್ಟ್ ಮಾಡಲಾಯಿತು. ರವಿ ಡಿ.ಆರ್ ಮತ್ತು ಸುದರ್ಶನ ರೆಡ್ಡಿ ನೇತೃತ್ವದ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ನಡೆಸಿ ಚರಣ್​ಗೆ ಮರು ಜೀವ ನೀಡಿದ್ದಾರೆ.

ಆರು ಗಂಟೆಗಳಿಗೂ ಹೆಚ್ಚು ಕಾಲ ಬಾಲಕನ ತುಂಡರಿಸಿದ ತೋಳು ದೇಹದಿಂದ ಬೇರ್ಪಟ್ಟಿದ್ದರೂ, ವೈದ್ಯರ ತಂಡವು ತಕ್ಷಣವೇ ಸ್ಪಂದಿಸಿ, ಆರು ಗಂಟೆಗಳ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದರು. “ಆರು ಗಂಟೆಗಳ ಗೋಲ್ಡನ್ ಅವಧಿಯಲ್ಲಿ ನಡೆಸಿದ ಶಸ್ತ್ರಚಿಕಿತ್ಸೆ ಮೂಲಕ ಕೈಕಾಲುಗಳ ಜೋಡಣೆಯು ಹೆಚ್ಚಿನ ಯಶಸ್ಸಿನ ಪ್ರಮಾಣವನ್ನು ಹೊಂದಿದೆ, ಆದರೆ ಚರಣ್ ಪ್ರಕರಣದಲ್ಲಿ ಇದು ವಿಶೇಷವಾಗಿ ಸವಾಲಿನ ರೀತಿಯ ಗಾಯ, ಕ್ರಷ್ ಅವಲ್ಶನ್ ಕಟ್, ಮತ್ತು ಅವನಿದ್ದ ಸ್ಥಳದಿಂದ ಆಸ್ಪತ್ರೆಗೆ ಇರುವ ದೂರದ ಜೊತೆಗೆ ಹುಡುಗನ ಚಿಕ್ಕ ವಯಸ್ಸಿನವ ಹೀಗಾಗಿ ಸ್ವಲ್ಪ ಕಷ್ಟವೆನಿಸಿದರು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ವೈದ್ಯರು ತಿಳಿಸಿದರು. ಶಸ್ತ್ರಚಿಕಿತ್ಸೆಯ ನಂತರ, 10 ದಿನಗಳ ಕಾಲ ಚರಣ್​ನನ್ನು ತೀವ್ರ ನಿಗದಲ್ಲಿ ಇರಿಸಲಾಗಿದೆ.

ಶಸ್ತ್ರಚಿಕಿತ್ಸೆಯ ನಂತರ ಚರಣ್​ನಿಗೆ ಯಾವುದೇ ತೊಂದರೆಗಳಾಗಲಿ ಸಂಭವಿಸಿಲ್ಲ. ಸದ್ಯ ಚರಣ್​ನನ್ನು ಡಿಸ್ಚಾರ್ಜ್ ಮಾಡಲಾಗಿದೆ. ಅವನ ಅಳವಡಿಸಲಾದ ಕೈಯ ಸ್ಥಿತಿಯೂ ಉತ್ತಮವಾಗಿದೆ. ಇನ್ನು 9-12 ತಿಂಗಳ ಅವಧಿಯಲ್ಲಿ ಅವನು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:48 am, Thu, 13 April 23

ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ