ಜುಬೀನ್ ದಾ ಇಲ್ಲ ನಾನಿದ್ದು ಏನು ಮಾಡಲಿ ಎಂದು ನದಿಗೆ ಹಾರಿದ ಖ್ಯಾತ ಗಾಯಕನ ಅಭಿಮಾನಿ

ಜುಬೀನ್ ದಾ ಇಲ್ಲ ನಾನಿದ್ದು ಏನು ಮಾಡಲಿ ಎಂದು ಗುವಾಹಟಿಯಲ್ಲಿ ಅಸ್ಸಾಮಿ ಗಾಯಕನ ಅಭಿಮಾನಿಯೊಬ್ಬ ಸಾರಾ ಘಾಟ್ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಜನಪ್ರಿಯ ಗಾಯಕ ಜುಬಿನ್ ಗಾರ್ಗ್(Zu​been Garg) ಸಾವು ಇಡೀ ದೇಶವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದರು. ಜುಬಿನ್ 40ಕ್ಕೂ ಅಧಿಕ ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ಜನರ ಮನಗೆದ್ದಿದ್ದರು.

ಜುಬೀನ್ ದಾ ಇಲ್ಲ ನಾನಿದ್ದು ಏನು ಮಾಡಲಿ ಎಂದು ನದಿಗೆ ಹಾರಿದ ಖ್ಯಾತ ಗಾಯಕನ ಅಭಿಮಾನಿ
ಜುಬೀನ್ ಗಾರ್ಗ್​

Updated on: Sep 26, 2025 | 7:51 AM

ಗುವಾಹಟಿ, ಸೆಪ್ಟೆಂಬರ್ 26: ಜುಬೀನ್ ದಾ ಇಲ್ಲ ನಾನಿದ್ದು ಏನು ಮಾಡಲಿ ಎಂದು ಗುವಾಹಟಿಯಲ್ಲಿ ಅಸ್ಸಾಮಿ ಗಾಯಕನ ಅಭಿಮಾನಿಯೊಬ್ಬ ಸಾರಾ ಘಾಟ್ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಜನಪ್ರಿಯ ಗಾಯಕ ಜುಬಿನ್ ಗಾರ್ಗ್(Zu​been Garg) ಸಾವು ಇಡೀ ದೇಶವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದರು. ಜುಬಿನ್ 40ಕ್ಕೂ ಅಧಿಕ ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ಜನರ ಮನಗೆದ್ದಿದ್ದರು.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಆ ಯುವಕ ಮೊದಲು ತನ್ನ ಬಟ್ಟೆಗಳನ್ನು ಹರಿದುಕೊಂಡಿದ್ದಾನೆ, ಬಳಿಕ ಜುಬಿನ್ ದಾ ಇಲ್ಲ ನಾನು ಇದ್ದು ಏನು ಮಾಡೋದು ಎಂದು ಜೋರಾಗಿ ಕೂಗಿ ಬ್ರಹ್ಮಪುತ್ರ ನದಿಗೆ ಹಾರಿದ್ದಾನೆ. ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಇದುವರೆಗೂ ಆ ಯುವಕನ ಯಾವುದೇ ಕುರಹು ಸಿಕ್ಕಿಲ್ಲ.

ಏತನ್ಮಧ್ಯೆ, ಗುರುವಾರ ಬೆಳಗ್ಗೆ, ಗುವಾಹಟಿಯ ದತಲ್ಪಾರಾ ಪ್ರದೇಶದಲ್ಲಿರುವ ಜುಬಿನ್ ಗಾರ್ಗ್ ಅವರ ಮ್ಯಾನೇಜರ್ ಸಿದ್ಧಾರ್ಥ ಶರ್ಮಾ ಅವರ ಮನೆಯ ಮೇಲೆ ಎಸ್‌ಐಟಿ ದಾಳಿ ನಡೆಸಿತು . ಮೂಲಗಳ ಪ್ರಕಾರ, ಸಿಐಡಿ ಅಧಿಕಾರಿಗಳ ತಂಡವು ಬೆಳಗ್ಗೆಯಿಂದ ಮೂರು ಅಂತಸ್ತಿನ ಕಟ್ಟಡದ ಹೊರಗೆ ಇತ್ತು. ಸುಮಾರು ಎರಡು ಗಂಟೆಗಳ ಕಾಲ ಗಮನಿಸಿದ ನಂತರ, ತಂಡವು ಫ್ಲಾಟ್ ಸಂಖ್ಯೆ 3A ಅನ್ನು ಪ್ರವೇಶಿಸಿತು. ಈ ಫ್ಲಾಟ್ 3BHK ಘಟಕವಾಗಿದ್ದು, ಸಿದ್ಧಾರ್ಥ್ ಶರ್ಮಾ ಮತ್ತು ಅವರ ಕುಟುಂಬವು 2019 ರಿಂದ ವಾಸಿಸುತ್ತಿದೆ.

ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ದಾಳಿ ನಡೆಸಲಾಯಿತು ಮತ್ತು ಅಪಾರ್ಟ್ಮೆಂಟ್ನಲ್ಲಿ ಸುಮಾರು ಒಂದು ಗಂಟೆ ಶೋಧ ನಡೆಸಲಾಯಿತು. ದಾಳಿಯ ಸಮಯದಲ್ಲಿ ಏನು ಪತ್ತೆಯಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಸುದ್ದಿ ಹರಡಿದ ತಕ್ಷಣ, ಜುಬೀನ್ ಗಾರ್ಗ್ ಅವರ ಅಭಿಮಾನಿಗಳ ಗುಂಪು ಘಟನಾ ಸ್ಥಳಕ್ಕೆ ಆಗಮಿಸಿತು.

ಮತ್ತಷ್ಟು ಓದಿ: ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಭಾರತದ ಖ್ಯಾತ ಗಾಯಕ ನಿಧನ

ಕೋಪಗೊಂಡ ಅಭಿಮಾನಿಗಳು ಎಸ್‌ಐಟಿಯ ಕ್ರಮಗಳನ್ನು ಪ್ರಶ್ನಿಸಿದರು. ಪರಿಸ್ಥಿತಿ ಉಲ್ಬಣಗೊಳ್ಳದಂತೆ ತಡೆಯಲು, ಪೊಲೀಸರು ಹೆಚ್ಚುವರಿ ಪಡೆಗಳು ಮತ್ತು ಸಂಚಾರ ಪೊಲೀಸರನ್ನು ಸ್ಥಳಕ್ಕೆ ನಿಯೋಜಿಸಿದರು. ಜನಸಮೂಹವನ್ನು ಶಾಂತಗೊಳಿಸಲು ಮನವಿ ಮಾಡಲಾಯಿತು. ಪ್ರಸ್ತುತ, ಎಸ್‌ಐಟಿ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

ಜುಬೀನ್ ಗಾರ್ಗ್​ ಮೃತಪಟ್ಟಿದ್ಹೇಗೆ?
ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ಅಪಘಾತದಲ್ಲಿ ಭಾರತದ ಖ್ಯಾತ ಅಸ್ಸಾಮಿ ಗಾಯಕ ಜುಬೀನ್ ಗಾರ್ಗ್​(52) ಶುಕ್ರವಾರ ಮೃತಪಟ್ಟಿದ್ದರು. ಸೆ.20ರಂದು ನಡೆಯುವ ಈಶಾನ್ಯ ಸಂಗೀತ ಉತ್ಸವದಲ್ಲಿ ತಮ್ಮ ಪ್ರದರ್ಶನ ನೀಡಲು ಜುಬೀನ್ ಗಾರ್ಗ್​​ ಸಿಂಗಾಪುರದಲ್ಲಿದ್ದರು ಎನ್ನಲಾಗಿದೆ. ಈ ವೇಳೆ ಸ್ಕೂಬಾ ಡೈವಿಂಗ್ ಅಪಘಾತ ನಡೆದಿದ್ದು, ತಕ್ಷಣ ಪೊಲೀಸರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು. ಗಾಯಕ್ ಜುಬೀನ್ ಗಾರ್ಗ್​ ಲೈಫ್​ ಜಾಕೆಟ್​ ಧರಿಸಿ ನೀರಿಗೆ ಹಾರುವ ದೃಶ್ಯಗಳು ಸೆರೆಯಾಗಿವೆ.ಅಲ್ಲದೆ, ಕೆಲ ಹೊತ್ತು ನೀರಿನಲ್ಲೇ ಈಜುವುದು ಕಾಣಸಿಗುತ್ತದೆ. ಆದರೆ, ಕೆಲ ಹೊತ್ತಿನ ಬಳಿಕ ಉಸಿರಾಟದ ತೊಂದೆರೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ. ಗಾಯಕನ ಕೊನೆ ಕ್ಷಣದ ಈ ದೃಶ್ಯಗಳು ಸೆರೆಯಾಗಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ