ಅಕ್ರಮ ಹಣ ವರ್ಗಾವಣೆ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಪ್ರಕರಣ ದಾಖಲಿಸಿದ ಜಾರಿ ನಿರ್ದೇಶನಾಲಯ
Anil Deshmukh: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಮತ್ತು ‘ಅಪರಿಚಿತ ಇತರರು’ ತಮ್ಮ ಅಧಿಕೃತ ಸ್ಥಾನವನ್ನು ಅನಗತ್ಯ ಲಾಭ ಪಡೆಯಲು ಬಳಸಿಕೊಂಡಿದ್ದಾರೆ ಎಂದು ಸಿಬಿಐ ಹೇಳಿದೆ.
ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ ಬಂದಿದ್ದು ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ಕೇಸು ದಾಖಲಿಸಿದೆ. ಸಿಬಿಐ ಸಲ್ಲಿಸಿದ ಎಫ್‌ಐಆರ್ ಆಧಾರದ ಮೇಲೆ ಈ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಮಾಜಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಮತ್ತು ‘ಅಪರಿಚಿತ ಇತರರು’ ತಮ್ಮ ಅಧಿಕೃತ ಸ್ಥಾನವನ್ನು ಅನಗತ್ಯ ಲಾಭ ಪಡೆಯಲು ಬಳಸಿಕೊಂಡಿದ್ದಾರೆ ಎಂದು ಸಿಬಿಐ ಹೇಳಿದೆ. ಇದರ ಜೊತೆಗೆ ಮುಂಬೈ ಪೊಲೀಸರ ವರ್ಗಾವಣೆ ಮತ್ತು ನೇಮಕಾತಿ ಮೇಲೆ ಪ್ರಭಾವ ಬೀರಿದೆ ಎಂದು ಮಾಜಿ ನಗರ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಆರೋಪಿಸಿದ್ದಾರೆ. ಸಿಬಿಐ ಪ್ರಕರಣದ ಹಣಕಾಸಿನ ಅಂಶಗಳನ್ನು ಇಡಿ ಪರಿಶೀಲಿಸುತ್ತಿತ್ತು.
ಅನಿಲ್ ದೇಶ್ಮುಖ್ ಅವರು ಮಹಾರಾಷ್ಟ್ರ ಗೃಹ ಸಚಿವರಾಗಿದ್ದಾಗ ಆಗಿನ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ವಾಜೆ ಅವರನ್ನು ಮುಂಬೈನ ಹೋಟೆಲ್, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳಿಂದ ಪ್ರತಿ ತಿಂಗಳು ₹ 100 ಕೋಟಿ ಸಂಗ್ರಹಿಸುವಂತೆ ಕೇಳಿಕೊಂಡಿದ್ದಾರೆ ಎಂದು ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಆರೋಪಿಸಿದ್ದರು. ನಂತರ ಅಮಾನತುಗೊಂಡ ವಾಜೆ ಫೆಬ್ರವರಿ 25 ರಂದು ಮುಕೇಶ್ ಅಂಬಾನಿ ಮನೆ ಮುಂದೆ ಕಾರಿನಲ್ಲಿ ಸ್ಫೋಟಕ ಇರಿಸಿದ ಪ್ರಕರಣದಲ್ಲಿ ಮತ್ತು ಮಾರ್ಚ್ 5 ರಂದು ಉದ್ಯಮಿ ಮನ್ಸುಖ್ ಹಿರಾನ್ ಅವರ ಹತ್ಯೆಯ ಆರೋಪದಲ್ಲಿ ಜೈಲಿನಲ್ಲಿದ್ದಾರೆ.
Enforcement Directorate (ED) has registered a case of money laundering against former Maharashtra Home Minister Anil Deshmukh. The case has been registered on the basis of CBI’s FIR: Enforcement Directorate (ED) sources pic.twitter.com/4a2Y2KSumQ
— ANI (@ANI) May 11, 2021
ಪ್ರಾಥಮಿಕ ವಿಚಾರಣೆಯ ಭಾಗವಾಗಿ ಅನಿಲ್ ದೇಶ್ಮುಖ್ ವಿರುದ್ಧದ ಆರೋಪಗಳನ್ನು ಪರಿಶೀಲಿಸುವಂತೆ ಬಾಂಬೆ ಹೈಕೋರ್ಟ್ ಪ್ರಧಾನ ಭ್ರಷ್ಟಾಚಾರ ವಿರೋಧಿ ಸಂಸ್ಥೆಯನ್ನು ಕೇಳಿದ ನಂತರ ಸಿಬಿಐ ಈ ಆರೋಪಗಳಲ್ಲಿ ಪ್ರೈಮಾ ಫೇಸಿ ಸತ್ಯವನ್ನು ಕಂಡುಹಿಡಿದಿದೆ. ನಂತರ, ಈ ಪ್ರಕರಣವನ್ನು ಪ್ರಾಥಮಿಕ ಮಾಹಿತಿ ವರದಿ (ಎಫ್‌ಐಆರ್) ಆಗಿ ಪರಿವರ್ತಿಸಲಾಯಿತು. ಕಳೆದ ಶನಿವಾರ ಮಹಾರಾಷ್ಟ್ರದ ಮಾಜಿ ಗೃಹ ಸಚಿವರ ನಿವಾಸಗಳ ಮೇಲೆ ಏಜೆನ್ಸಿ ದಾಳಿ ನಡೆಸಿದವು. ಸಿಬಿಐ ಎಫ್‌ಐಆರ್ ಅನ್ನು ಪರಿಶೀಲಿಸುತ್ತಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ಪ್ರತಿ ತಿಂಗಳು ₹ 100 ಕೋಟಿ ಮೊತ್ತವನ್ನು ಒಳಗೊಂಡಿರುವ ಆರೋಪಗಳು ದೊಡ್ಡದಾಗಿದೆ ಎಂದು ಇಡಿ ಹೇಳಿದೆ. ಏತನ್ಮಧ್ಯೆ, ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಸಮ್ಮಿಶ್ರ ಸರ್ಕಾರದ ಮೈತ್ರಿ ಪಕ್ಷದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಸುಲಿಗೆ ದಂಧೆ ಪ್ರಕರಣದಲ್ಲಿ ಮಾಜಿ ರಾಜ್ಯ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಕ್ರಮ ಕೈಗೊಂಡಿರುವುದು ರಾಜಕೀಯ ಪ್ರೇರಿತ ಎಂದು ಆರೋಪಿಸಿದೆ.
ಇದನ್ನೂ ಓದಿ: ಭ್ರಷ್ಟಾಚಾರ ಪ್ರಕರಣ: ಮಹಾರಾಷ್ಟ್ರ ಮಾಜಿ ಗೃಹಸಚಿವ ಅನಿಲ್ ದೇಶಮುಖ್ ವಿರುದ್ಧ ಎಫ್‌ಐಆರ್ ದಾಖಲಿಸಿದ ಸಿಬಿಐ
(Enforcement Directorate registered a case of money laundering against former Maharashtra home minister Anil Deshmukh)
Published On - 12:50 pm, Tue, 11 May 21