ಡೇಟಿಂಗ್ ಆ್ಯಪ್, ವಾಟ್ಸಾಪ್, ಇನ್ಸ್ಟಾಗ್ರಾಂ, ಫೇಸ್ಬುಕ್ ಹಾಗೂ ಮ್ಯಾಟ್ರಿಮೊನಿ ಸೈಟ್ಗಳು ತನ್ನ ನಿಜವಾದ ಕಾರ್ಯಗಳಿಗಿಂತ ಇದೀಗ ಮೋಸಗಳಿಂದಲೇ ಹೆಸರುವಾಸಿಯಾಗುತ್ತಿದೆ. ದಿನ ನಿತ್ಯವೂ ಇಂತಹ ಹತ್ತಾರು ಸುದ್ದಿಗಳನ್ನು ಕೇಳಿದ್ದರೂ ಕೂಡ, ಜನರು ನಂಬಿ ಮೋಸ ಹೋಗುತ್ತಲೇ ಇದ್ದಾರೆ.
ಸಾಫ್ಟ್ವೇರ್ ಉದ್ಯೋಗಿಯೊಬ್ಬರು ವೈಯಕ್ತಿಕ ಕಾರಣಗಳಿಂದಾಗಿ ಪತ್ನಿಗೆ ವಿಚ್ಛೇದನ ನೀಡಿ ಒಂಟಿಯಾಗಿದ್ದರು. ಸಂಗಾತಿಗಾಗಿ ಅರಸುತ್ತಿದ್ದರು. ಮ್ಯಾಟ್ರಿಪೋನಿ ಸೈಟ್ಗಳನ್ನು ಹುಡುಕಲಾರಂಭಿಸಿದರು. ಅವರು ಒಂದು ಹೆಜ್ಜೆ ಮುಂದಿಟ್ಟು ಇನ್ಸ್ಟಾ ಗ್ರಾಂ ಮೂಲಕ ಇಬ್ಬರೂ ಆತ್ಮೀಯರಾದರು.
ಅಂದಿನಿಂದ ಅವರು ಚಾಟ್ ಮಾಡಲು ಆರಂಭಿಸಿದರು, ವ್ಯಕ್ತಿಯ ವಾಟ್ಸಾಪ್ ನಂಬರ್ ತೆಗೆದುಕೊಂಡು ಸುಂದರ ಫೋಟೊಗಳನ್ನು ಕಳುಹಿಸಿದ್ದಳು.
ಆಗಷ್ಟೇ ಸಂಗಾತಿಯಿಂದ ಬೇರ್ಪಟ್ಟಿದ್ದ ವ್ಯಕ್ತಿ ಆಕೆಯ ಬಣ್ಣದ ಮಾತುಗಳಿಗೆ ಮರುಳಾಗಿದ್ದರು, ಭಾವನಾತ್ಮಕವಾಗಿಯೂ ಇಬ್ಬರ ನಡುವೆ ಬಾಂಧವ್ಯ ಹೆಚ್ಚಾಗಿತ್ತು. ನೇರ ಕರೆ ಇಲ್ಲ ಆದರೆ ಮೆಸೇಜ್ ಮೂಲಕವೇ ಮಾತನಾಡುತ್ತಿದ್ದರು. ಒಂದೊಮ್ಮೆ ಕರೆ ಮಾಡಿದರೆ ಕುಟುಂಬದ ಸದಸ್ಯರು ಇಲ್ಲಿದ್ದಾರೆ ಎಂದು ಹೇಳಿ ಕರೆ ಕಟ್ ಮಾಡುತ್ತಿದ್ದಳು.
ಮತ್ತಷ್ಟು ಓದಿ: ಶುಲ್ಕ ವಿವಾದ: ಪ್ಲೇಸ್ಟೋರ್‌ನಿಂದ ಮ್ಯಾಟ್ರಿಮೋನಿ ಆ್ಯಪ್ ತೆಗೆದುಹಾಕಿದ ಗೂಗಲ್
ಇಬ್ಬರೂ ಸ್ವಲ್ಪ ಹತ್ತಿರವಾದಾಗ ತನಗೆ ಈ ಮೊದಲು ಒಬ್ಬ ಬಾಯ್ ಫ್ರೆಂಡ್ ಇದ್ದಿದ್ದ ಆತ ಬ್ಲ್ಯಾಕ್ಮೇಲ್ ಮಾಡಿ ಹಣ ಕೇಳಿ ಕಿರುಕುಳ ನೀಡುತ್ತಿದ್ದಾನೆ ಎಂದು ಆಕೆ ಹೇಳಿದ್ದಾಳೆ.
ಆಗ ಆ ವ್ಯಕ್ತಿಯ ಮನಸ್ಸು ಕರಗಿತ್ತು, ಒಂದೇ ಸಮಯಕ್ಕೆ 22 ಲಕ್ಷ ರೂ. ನೀಡಿದ್ದಾರೆ, ಯಾವಾಗ ಭೇಟಿಯಾಗಲು ಪ್ರಯತ್ನಿಸಿದರೂ ಆಕೆ ನಿರಾಕರಿಸುತ್ತಿದ್ದಳು, ಆಗ ಅನುಮಾನ ಬಂದಿತ್ತು. ಆಗ ವ್ಯಕ್ತಿ ವಿಶಾಖಪಟ್ಟಣಂನಲ್ಲಿರುವ ಸೈಬರ್ ಕ್ರೈಂ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಪೊಲೀಸರು ವಾಟ್ಸಾಪ್ ಕರೆಗಳು ಹಾಗೂ ತಾಂತ್ರಿಕ ಸಾಕ್ಷ್ಯಗಳೊಂದಿಗೆ ವಿಶೇಷ ತಂಡವನ್ನು ಹೈದರಾಬಾದ್‌ಗೆ ಕಳುಹಿಸಿದ್ದಾರೆ. ಅಲ್ಲಿ ಒಂದು ವಾರ ಕೆಲಸ ಮಾಡಿದ ವಿಶಾಖ ಸೈಬರ್ ಕ್ರೈಂ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸಿದ್ದಾರೆ.
ಆಕೆಯ ಹೆಸರು ಸಾಯಿ ಪ್ರಿಯಾ, ಹೈದರಾಬಾದಿನ ಮಾದಾಪುರದಲ್ಲಿ ವಾಸಿಸುತ್ತಿದ್ದಳು, ನೀಡಿರುವ ಫೋಟೊಗಳೇ ಬೇರೆ ಆಕೆಯೇ ಬೇರೆ. ಪೊಲೀಸರು ವಿಚಾರಣೆ ನಡೆಸಿದಾಗ ನಿಜವಾದ ವಿಷಯ ಹೊರಬಿದ್ದಿದೆ.
ಆಕೆಯ ಸೋಶಿಯಲ್ ಮೀಡಿಯಾ ಖಾತೆಯನ್ನು ಪರಿಶೀಲಿಸಿದಾಗ, ಅವಳು ಇತರ ಕೆಲವು ಜನರೊಂದಿಗೆ ಚಾಟ್ ಮಾಡುತ್ತಿದ್ದಳು ಎಂದು ಕಂಡುಬಂದಿದೆ . ಆಕೆಯನ್ನು ಬಂಧಿಸಿ ರಿಮಾಂಡ್‌ಗೆ ಕಳುಹಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ