SC Verdict on NEET-UG: ಇದು ವ್ಯವಸ್ಥಿತ ಉಲ್ಲಂಘನೆಯಲ್ಲ, ನೀಟ್​ ಅಕ್ರಮದ ಕುರಿತು ಸುಪ್ರೀಂಕೋರ್ಟ್​ ಅಂತಿಮ ತೀರ್ಪು

ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ ಅಂತಿಮ ತೀರ್ಪು ನೀಡಿದೆ. ಎಲ್ಲಾ ಕಕ್ಷಿದಾರರ ವಾದ ಆಲಿಸಿದ ಬಳಿಕ ಇದು ವ್ಯವಸ್ಥಿತ ವೈಫಲ್ಯವಲ್ಲ ಎಂಬ ತೀರ್ಮಾನಕ್ಕೆ ಬಂದಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಪಾಟ್ನಾ ಹಾಗೂ ಹಜಾರಿಬಾಗ್​ಗೆ ಮಾತ್ರ ಸೀಮಿತವಾಗಿತ್ತು ಹೀಗಾಗಿ ನೀಟ್​ ಯುಜಿ ಪ್ರಶ್ನೆ ಪತ್ರಿಕೆಯಲ್ಲಿ ಯಾವುದೇ ವ್ಯವಸ್ಥಿತ ಉಲ್ಲಂಘನೆಯಾಗಿಲ್ಲ ಎಂದು ಸುಪ್ರೀಂಕೋರ್ಟ್​ ಹೇಳಿದೆ.

SC Verdict on NEET-UG: ಇದು ವ್ಯವಸ್ಥಿತ ಉಲ್ಲಂಘನೆಯಲ್ಲ, ನೀಟ್​ ಅಕ್ರಮದ ಕುರಿತು ಸುಪ್ರೀಂಕೋರ್ಟ್​ ಅಂತಿಮ ತೀರ್ಪು
ಸುಪ್ರೀಂಕೋರ್ಟ್​
Follow us
ನಯನಾ ರಾಜೀವ್
|

Updated on:Aug 02, 2024 | 1:02 PM

ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ ಅಂತಿಮ ತೀರ್ಪು ನೀಡಿದೆ. ಎಲ್ಲಾ ಕಕ್ಷಿದಾರರ ವಾದ ಆಲಿಸಿದ ಬಳಿಕ ಇದು ವ್ಯವಸ್ಥಿತ ಉಲ್ಲಂಘನೆಯಲ್ಲ ಎಂಬ ತೀರ್ಮಾನಕ್ಕೆ ಬಂದಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಪಾಟ್ನಾ ಹಾಗೂ ಹಜಾರಿಬಾಗ್​ಗೆ ಮಾತ್ರ ಸೀಮಿತವಾಗಿತ್ತು ಹೀಗಾಗಿ ನೀಟ್​ ಯುಜಿ ಪ್ರಶ್ನೆ ಪತ್ರಿಕೆಯಲ್ಲಿ ಯಾವುದೇ ವ್ಯವಸ್ಥಿತ ಉಲ್ಲಂಘನೆಯಾಗಿಲ್ಲ ಎಂದು ಸುಪ್ರೀಂಕೋರ್ಟ್​ ಹೇಳಿದೆ.

ಆದರೆ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಈ ವಿಚಾರವನ್ನು ಇಲ್ಲಿಗೇ ಬಿಡಲು ಸಾಧ್ಯವಿಲ್ಲ, ಹಾಗಾಗಿ ಉದ್ಭವಿಸಿರುವ ಸಮಸ್ಯೆಗಳನ್ನು ಕೇಂದ್ರ ಈ ವರ್ಷವೇ ಸರಿಪಡಿಸಿ ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್​ ಹೇಳಿದೆ.

ನಾವು ರಚನಾತ್ಮಕ ನ್ಯೂನತೆಗಳ ಬಗ್ಗೆ ಗಮನಹರಿಸಿದ್ದೇವೆ, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಗುರುತನ್ನು ಖಚಿತಪಡಿಸಿಕೊಳ್ಳುವುದು ಮತ್ತು ಪೇಪರ್ ಸೋರಿಕೆಯನ್ನು ತಡೆಗಟ್ಟಲು ಎಸ್​ಒಪಿ ಸಿದ್ಧಪಡಿಸುವುದು ಸರ್ಕಾರ ಹಾಗೂ ಎನ್​ಟಿಎ ಜವಾಬ್ದಾರಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಮತ್ತಷ್ಟು ಓದಿ: ನೀಟ್ ಪರೀಕ್ಷೆ ವಿವಾದ; ಮೆಡಿಕಲ್, ಎಂಜಿನಿಯರಿಂಗ್ ಸೀಟ್​ ಗೊಂದಲ, ಈ ವಾರದಲ್ಲಿ ಕೌನ್ಸೆಲಿಂಗ್ ದಿನಾಂಕ ಪ್ರಕಟ

ಸುಪ್ರೀಂಕೋರ್ಟ್​ನ ತೀರ್ಪಿನಿಂದ ಯಾರೊಬ್ಬರ ದೂರು ಪರಿಹಾರವಾಗಿಲ್ಲವೆನಿಸಿದರೆ ಅವರು ಹೈಕೋರ್ಟ್​ಗೆ ಹೋಗಬಹುದು. ಪೇಪರ್ ಸೋರಿಕೆ ವ್ಯವಸ್ಥಿತವಾಗಿಲ್ಲ ಎಂಬುದು ನಮ್ಮ ತೀರ್ಮಾನ. ಪೇಪರ್ ಸೋರಿಕೆ ದೊಡ್ಡ ಪ್ರಮಾಣದಲ್ಲಿ ನಡೆದಿಲ್ಲ ಎಂದು ಕೋರ್ಟ್​ ಹೇಳಿದೆ. ನೀಟ್ ಮರುಪರೀಕ್ಷೆಯ ಬೇಡಿಕೆಯನ್ನು ನಾವು ತಿರಸ್ಕರಿಸುತ್ತಿದ್ದೇವೆ ಎಂದು ನ್ಯಾಯಾಲಯ ಹೇಳಿದೆ.

ವಿಚಾರಣೆ ಸಂದರ್ಭದಲ್ಲಿ ಪರೀಕ್ಷೆ ನಡೆಸುವ ವಿಧಾನ ಬದಲಿಸುವಂತೆ ನ್ಯಾಯಾಲಯವು ಎನ್​ಟಿಎಗೆ ಕೇಳಿದೆ. ಪ್ರಶ್ನೆ ಪತ್ರಿಕೆಯನ್ನು ಹೊಂದಿಸುವ ಸಮಯದಿಂದ ಪರೀಕ್ಷೆ ಮುಗಿಯುವವರೆಗೆ ಸಂಸ್ಥೆಯು ಕಠಿಣ ತನಿಖೆ ನಡೆಸಬೇಕು. ತೆರೆದ ಈ ರಿಕ್ಷಾ ಬದಲಿಗೆ ಲಾಕ್​ ಮಾಡಿರುವ ವಾಹನದಲ್ಲೇ ಪ್ರಶ್ನೆಪತ್ರಿಕೆ ಕೊಂಡೊಯ್ಯಬೇಕು. ಎಲೆಕ್ಟ್ರಾನಿಕ್ ಫಿಂಗರ್​ಪ್ರಿಂಟ್​ಗಳ ರೆಕಾರ್ಡಿಂಗ್ ಮತ್ತು ಸೈಬರ್ ಭದ್ರತೆಗೆ ವ್ಯವಸ್ಥೆ ಮಾಡಿ ಇದರಿಂದ ಡೇಟಾವನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು.

ನೀಟ್ ಪೇಪಟ್ ಸೋರಿಕೆ ಪ್ರಕರಣವನ್ನು ಸಿಬಿಐ ಮತ್ತು ಇಒಯು ನಡೆಸಿತ್ತು. ಈ ತನಿಖೆಯ ಸಮಯದಲ್ಲಿ ಅನೇಕ ಆರೋಪಿಗಳನ್ನು ಬಂಧಿಸಲಾಗಿತ್ತು. ಜಾರ್ಖಂಡ್​ನ ಹಜಾರಿಬಾಗ್ ಮತ್ತು ಪಾಟ್ನಾದಿಂದ ಪತ್ರಿಕೆ ಸೋರಿಕೆಯಾಗಿದೆ ಎಂಬುದನ್ನು ಬಹಿರಂಗಪಡಿಸಿತು. ಸಿಬಿಐ ಮೊದಲು ದಾಖಲಿಸಿದ್ದ ಎಫ್​ಐಆರ್​ನಲ್ಲಿ ಎಂಟು ಆರೋಪಿಗಳ ಹೆಸರಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:49 pm, Fri, 2 August 24