AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮ್ಯಾಟ್ರಿಮೋನಿ ಪ್ರೊಫೈಲ್​ ನೋಡಿ ಮರುಳಾದ ವ್ಯಕ್ತಿ, 22 ಲಕ್ಷ ಹಣವನ್ನೂ ಕಳೆದುಕೊಂಡ್ರು, ಹುಡುಗೀನೂ ಸಿಗ್ಲಿಲ್ಲ

ಮ್ಯಾಟ್ರಿಮೋನಿಯಲ್ಲಿ ಪ್ರೊಫೈಲ್​ ನೋಡಿ ಮರುಳಾಗಿ ವ್ಯಕ್ತಿಯೊಬ್ಬ 22 ಲಕ್ಷ ರೂ. ಕಳೆದುಕೊಂಡಿರುವ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ.

ಮ್ಯಾಟ್ರಿಮೋನಿ ಪ್ರೊಫೈಲ್​ ನೋಡಿ ಮರುಳಾದ ವ್ಯಕ್ತಿ, 22 ಲಕ್ಷ ಹಣವನ್ನೂ ಕಳೆದುಕೊಂಡ್ರು, ಹುಡುಗೀನೂ ಸಿಗ್ಲಿಲ್ಲ
ಎಐ ಜನರೇಟೆಡ್ ಚಿತ್ರImage Credit source: AI Generated Image
ನಯನಾ ರಾಜೀವ್
|

Updated on: Aug 02, 2024 | 2:15 PM

Share

ಡೇಟಿಂಗ್ ಆ್ಯಪ್​, ವಾಟ್ಸಾಪ್​, ಇನ್​ಸ್ಟಾಗ್ರಾಂ, ಫೇಸ್​ಬುಕ್​ ಹಾಗೂ ಮ್ಯಾಟ್ರಿಮೊನಿ ಸೈಟ್​ಗಳು ತನ್ನ ನಿಜವಾದ ಕಾರ್ಯಗಳಿಗಿಂತ ಇದೀಗ ಮೋಸಗಳಿಂದಲೇ ಹೆಸರುವಾಸಿಯಾಗುತ್ತಿದೆ. ದಿನ ನಿತ್ಯವೂ ಇಂತಹ ಹತ್ತಾರು ಸುದ್ದಿಗಳನ್ನು ಕೇಳಿದ್ದರೂ ಕೂಡ, ಜನರು ನಂಬಿ ಮೋಸ ಹೋಗುತ್ತಲೇ ಇದ್ದಾರೆ.

ಸಾಫ್ಟ್​ವೇರ್​ ಉದ್ಯೋಗಿಯೊಬ್ಬರು ವೈಯಕ್ತಿಕ ಕಾರಣಗಳಿಂದಾಗಿ ಪತ್ನಿಗೆ ವಿಚ್ಛೇದನ ನೀಡಿ ಒಂಟಿಯಾಗಿದ್ದರು. ಸಂಗಾತಿಗಾಗಿ ಅರಸುತ್ತಿದ್ದರು. ಮ್ಯಾಟ್ರಿಪೋನಿ ಸೈಟ್​ಗಳನ್ನು ಹುಡುಕಲಾರಂಭಿಸಿದರು. ಅವರು ಒಂದು ಹೆಜ್ಜೆ ಮುಂದಿಟ್ಟು ಇನ್​ಸ್ಟಾ ಗ್ರಾಂ ಮೂಲಕ ಇಬ್ಬರೂ ಆತ್ಮೀಯರಾದರು.

ಅಂದಿನಿಂದ ಅವರು ಚಾಟ್​ ಮಾಡಲು ಆರಂಭಿಸಿದರು, ವ್ಯಕ್ತಿಯ ವಾಟ್ಸಾಪ್​ ನಂಬರ್ ತೆಗೆದುಕೊಂಡು ಸುಂದರ ಫೋಟೊಗಳನ್ನು ಕಳುಹಿಸಿದ್ದಳು.

ಆಗಷ್ಟೇ ಸಂಗಾತಿಯಿಂದ ಬೇರ್ಪಟ್ಟಿದ್ದ ವ್ಯಕ್ತಿ ಆಕೆಯ ಬಣ್ಣದ ಮಾತುಗಳಿಗೆ ಮರುಳಾಗಿದ್ದರು, ಭಾವನಾತ್ಮಕವಾಗಿಯೂ ಇಬ್ಬರ ನಡುವೆ ಬಾಂಧವ್ಯ ಹೆಚ್ಚಾಗಿತ್ತು. ನೇರ ಕರೆ ಇಲ್ಲ ಆದರೆ ಮೆಸೇಜ್ ಮೂಲಕವೇ ಮಾತನಾಡುತ್ತಿದ್ದರು. ಒಂದೊಮ್ಮೆ ಕರೆ ಮಾಡಿದರೆ ಕುಟುಂಬದ ಸದಸ್ಯರು ಇಲ್ಲಿದ್ದಾರೆ ಎಂದು ಹೇಳಿ ಕರೆ ಕಟ್ ಮಾಡುತ್ತಿದ್ದಳು.

ಮತ್ತಷ್ಟು ಓದಿ: ಶುಲ್ಕ ವಿವಾದ: ಪ್ಲೇಸ್ಟೋರ್‌ನಿಂದ ಮ್ಯಾಟ್ರಿಮೋನಿ ಆ್ಯಪ್ ತೆಗೆದುಹಾಕಿದ ಗೂಗಲ್

ಇಬ್ಬರೂ ಸ್ವಲ್ಪ ಹತ್ತಿರವಾದಾಗ ತನಗೆ ಈ ಮೊದಲು ಒಬ್ಬ ಬಾಯ್​ ಫ್ರೆಂಡ್​ ಇದ್ದಿದ್ದ ಆತ ಬ್ಲ್ಯಾಕ್​ಮೇಲ್ ಮಾಡಿ ಹಣ ಕೇಳಿ ಕಿರುಕುಳ ನೀಡುತ್ತಿದ್ದಾನೆ ಎಂದು ಆಕೆ ಹೇಳಿದ್ದಾಳೆ.

ಆಗ ಆ ವ್ಯಕ್ತಿಯ ಮನಸ್ಸು ಕರಗಿತ್ತು, ಒಂದೇ ಸಮಯಕ್ಕೆ 22 ಲಕ್ಷ ರೂ. ನೀಡಿದ್ದಾರೆ,  ಯಾವಾಗ ಭೇಟಿಯಾಗಲು ಪ್ರಯತ್ನಿಸಿದರೂ ಆಕೆ ನಿರಾಕರಿಸುತ್ತಿದ್ದಳು, ಆಗ ಅನುಮಾನ ಬಂದಿತ್ತು. ಆಗ ವ್ಯಕ್ತಿ ವಿಶಾಖಪಟ್ಟಣಂನಲ್ಲಿರುವ ಸೈಬರ್ ಕ್ರೈಂ ಪೊಲೀಸರನ್ನು ಸಂಪರ್ಕಿಸಿದ್ದಾರೆ.

ಪೊಲೀಸರು ವಾಟ್ಸಾಪ್ ಕರೆಗಳು ಹಾಗೂ ತಾಂತ್ರಿಕ ಸಾಕ್ಷ್ಯಗಳೊಂದಿಗೆ ವಿಶೇಷ ತಂಡವನ್ನು ಹೈದರಾಬಾದ್‌ಗೆ ಕಳುಹಿಸಿದ್ದಾರೆ. ಅಲ್ಲಿ ಒಂದು ವಾರ ಕೆಲಸ ಮಾಡಿದ ವಿಶಾಖ ಸೈಬರ್ ಕ್ರೈಂ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸಿದ್ದಾರೆ.

ಆಕೆಯ ಹೆಸರು ಸಾಯಿ ಪ್ರಿಯಾ, ಹೈದರಾಬಾದಿನ ಮಾದಾಪುರದಲ್ಲಿ ವಾಸಿಸುತ್ತಿದ್ದಳು, ನೀಡಿರುವ ಫೋಟೊಗಳೇ ಬೇರೆ ಆಕೆಯೇ ಬೇರೆ. ಪೊಲೀಸರು ವಿಚಾರಣೆ ನಡೆಸಿದಾಗ ನಿಜವಾದ ವಿಷಯ ಹೊರಬಿದ್ದಿದೆ.

ಆಕೆಯ ಸೋಶಿಯಲ್ ಮೀಡಿಯಾ ಖಾತೆಯನ್ನು ಪರಿಶೀಲಿಸಿದಾಗ, ಅವಳು ಇತರ ಕೆಲವು ಜನರೊಂದಿಗೆ ಚಾಟ್ ಮಾಡುತ್ತಿದ್ದಳು ಎಂದು ಕಂಡುಬಂದಿದೆ . ಆಕೆಯನ್ನು ಬಂಧಿಸಿ ರಿಮಾಂಡ್‌ಗೆ ಕಳುಹಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್