ಅಸ್ಸಾಂನಲ್ಲಿ ಬಾಲ್ಯವಿವಾಹದ ವಿರುದ್ಧ ಕ್ರಮ; ಬಂಧಿತರಾದವರಲ್ಲಿ ಹಿಂದೂ-ಮುಸ್ಲಿಮರೆಷ್ಟು ಎಂದು ಲೆಕ್ಕ ಹೇಳಿದ ಸಿಎಂ ಹಿಮಂತ ಬಿಸ್ವಾ ಶರ್ಮಾ

|

Updated on: Mar 16, 2023 | 7:55 PM

ನಮ್ಮವರಲ್ಲಿ ಕೆಲವರನ್ನು ಕೂಡಾ ನಾವು ಬಂಧಿಸಿದ್ದೇವೆ. ಏಕೆಂದರೆ ನಿಮಗೆ (ವಿರೋಧ ಸದಸ್ಯರು) ಬೇಸರವಾಗಬಹುದು. ಫೆಬ್ರವರಿ 3 ರ ದಮನದ ನಂತರ ಮುಸ್ಲಿಮರ ಬಂಧನಗಳ ಅನುಪಾತವು 55:45 ಆಗಿದೆ.

ಅಸ್ಸಾಂನಲ್ಲಿ ಬಾಲ್ಯವಿವಾಹದ ವಿರುದ್ಧ ಕ್ರಮ; ಬಂಧಿತರಾದವರಲ್ಲಿ ಹಿಂದೂ-ಮುಸ್ಲಿಮರೆಷ್ಟು ಎಂದು ಲೆಕ್ಕ ಹೇಳಿದ ಸಿಎಂ ಹಿಮಂತ ಬಿಸ್ವಾ ಶರ್ಮಾ
ಹಿಮಂತ ಬಿಸ್ವಾ ಶರ್ಮಾ
Follow us on

ಗುವಾಹಟಿ: ಕಳೆದ ತಿಂಗಳು ಅಸ್ಸಾಂನಲ್ಲಿ (Assam) ಬಾಲ್ಯವಿವಾಹದ (Child Marriage) ವಿರುದ್ಧದ ವಿವಾದಾತ್ಮಕ ಕ್ರಮವು ಧರ್ಮ ಆಧಾರಿತವಲ್ಲ ಎಂದು ಖಚಿತಪಡಿಸಿಕೊಳ್ಳಲು ತಮ್ಮ ಸರ್ಕಾರ ಪ್ರಯತ್ನಿಸಿದೆ. ಮುಸ್ಲಿಮರು ಮತ್ತು ಹಿಂದೂಗಳನ್ನು ಸಮಾನ ಅನುಪಾತದಲ್ಲಿ ಬಂಧಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಹೇಳಿದ್ದಾರೆ. ಅಸ್ಸಾಂ ಶಾಸಕಾಂಗ ಸಭೆಯ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಿದ ಅವರು, ಪ್ರತಿ ಆರು ತಿಂಗಳಿಗೊಮ್ಮೆ ಇಂತಹ ಕ್ರಮ ನಡೆಸಲಾಗುವುದು. 2026 ರ ವೇಳೆಗೆ ಬಾಲ್ಯ ವಿವಾಹವನ್ನು ನಿರ್ಮೂಲನೆ ಮಾಡುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದಿದ್ದಾರೆ. ಫೆಬ್ರವರಿ 3 ಕ್ರಮದ ನಂತರ ಮುಸ್ಲಿಂ- ಹಿಂದೂಗಳ ಬಂಧನಗಳ ಅನುಪಾತವು 55:45 ಆಗಿದೆ ಎಂದು ಅವರು ಹೇಳಿದ್ದಾರೆ.”ನಮ್ಮವರಲ್ಲಿ ಕೆಲವರನ್ನು ಕೂಡಾ ನಾವು ಬಂಧಿಸಿದ್ದೇವೆ. ಏಕೆಂದರೆ ನಿಮಗೆ (ವಿರೋಧ ಸದಸ್ಯರು) ಬೇಸರವಾಗಬಹುದು. ಫೆಬ್ರವರಿ 3 ರ ದಮನದ ನಂತರ ಮುಸ್ಲಿಮರ ಬಂಧನಗಳ ಅನುಪಾತವು 55:45 ಆಗಿದೆ. ರಾಜ್ಯ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ಧನ್ಯವಾದಗಳು ಅರ್ಪಿಸಿ ನಡೆದ ಚರ್ಚೆಯಲ್ಲಿ ಶರ್ಮಾ ಉತ್ತರಿಸಿದ್ದಾರೆ.

ಜನರು ‘ಅಪರಾಧಿಗಳಿಗಾಗಿ ಅಳುತ್ತಿದ್ದಾರೆ’ ಆದರೆ ಗರ್ಭ ಧರಿಸುವ 11 ವರ್ಷದ ಹೆಣ್ಣುಮಕ್ಕಳಿಗಾಗಿ ಅಳುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

“NFHS 5 (ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ) ದತ್ತಾಂಶವು ಧುಬ್ರಿ ಮತ್ತು ದಕ್ಷಿಣ ಸಲ್ಮಾರಾದಲ್ಲಿ (ಮುಸ್ಲಿಂ ಬಹುಸಂಖ್ಯಾತ ಜಿಲ್ಲೆಗಳು) ಸಮಸ್ಯೆ ಹೆಚ್ಚು ಎಂದು ತೋರಿಸುತ್ತದೆ. ದಿಬ್ರುಗಢ್ ಮತ್ತು ತಿನ್ಸುಕಿಯಾದಲ್ಲಿ ಅಲ್ಲ.ಆದರೆ ನೀವು ಪ್ರತಿಯೊಂದು ವಿಷಯವನ್ನು ಕೋಮುವಾದಗೊಳಿಸುತ್ತಿರುವುದರಿಂದ, ನಾನು ದಿಬ್ರುಗಢ್ ಪೊಲೀಸ್ ವರಿಷ್ಠಾಧಿಕಾರಿಗೆ ಹೇಳಿದ್ದೇನೆ. ಅಲ್ಲಿಂದ ಕೆಲವರನ್ನು ಬಂಧಿಸಿ ಎಂದು. ಕಾಂಗ್ರೆಸ್ ಕಾಲದಲ್ಲಿ ಸಂಗ್ರಹಿಸಿದ NFHS 4 ದತ್ತಾಂಶವು ಹೆಚ್ಚಿನ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಅಸ್ಸಾಂ ಜಿಲ್ಲೆಗಳಲ್ಲಿ ಅತಿ ಹೆಚ್ಚು ಅಪ್ರಾಪ್ತ ವಯಸ್ಸಿನ ವಿವಾಹಗಳು ಮತ್ತು ಹೆರಿಗೆಗಳನ್ನು ಮಾಡಲಾಗುತ್ತದೆ ಎಂದು ತೋರಿಸುತ್ತದೆ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ರಾಷ್ಟ್ರೀಯ ಆರೋಗ್ಯ ಮಿಷನ್ ಡೇಟಾವನ್ನು ಉಲ್ಲೇಖಿಸಿ, ಬಾಲ್ಯ ವಿವಾಹಗಳ ಹೆಚ್ಚಿನ ಪ್ರಕರಣಗಳು ದಕ್ಷಿಣ ಸಲ್ಮಾರಾ ಮತ್ತು ಧುಬ್ರಿಯಿಂದ ನಡೆದಿವೆ, ಆದರೆ ಅವರು ಡಿಬ್ರುಗಢ ಎಸ್‌ಪಿ ಅಲ್ಲಿಂದ ಇಬ್ಬರು ಮೂವರನ್ನು ಬಂಧಿಸಲಾಗಿದೆ. ಇದನ್ನೂ ಕೋಮುವಾದಗೊಳಿಸಲಾಗುತ್ತದೆ ಎಂದು ಶರ್ಮಾ ಹೇಳಿದ್ದಾರೆ.

ಬಾಲ್ಯವಿವಾಹ ನಡೆಸುತ್ತಿರುವ ಆರೋಪಿಗಳ ವಿರುದ್ಧ ಬಿಜೆಪಿ ನೇತೃತ್ವದ ಸರ್ಕಾರವು ಬಾಲ್ಯವಿವಾಹ ನಿಷೇಧ ಕಾಯಿದೆ, 2006 (ಪಿಸಿಎಂಎ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ, 2012 (ಪೋಕ್ಸೊ) ಜಡಿದಿರುವುದನ್ನುಪ್ರತಿಪಕ್ಷಗಳು ಪ್ರತಿಭಟಿಸಿವೆ. ಕಾಂಗ್ರೆಸ್ ಶಾಸಕ ಅಬ್ದುರ್ ರಶೀದ್ ಮಂಡಲ್ ಇತ್ತೀಚೆಗೆ ವಿಧಾನಸಭೆಯಲ್ಲಿ ಅಸ್ಸಾಂ ಸರ್ಕಾರ ಎರಡು ಕಾಯ್ದೆಗಳನ್ನು ಬಳಸಿಕೊಂಡು ಜನರಲ್ಲಿ ಭಯವನ್ನುಂಟು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಪ್ರತಿಪಕ್ಷದ ನಾಯಕ ದೇಬಬ್ರತ ಸೈಕಿಯಾ ಅವರು, ಬಾಲ್ಯವಿವಾಹ ಆರೋಪಿಗಳ ಮೇಲೆ ಪೋಕ್ಸೊ ಮತ್ತು ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಿರುವುದು ಸಮಾಜದಲ್ಲಿ ಪ್ರಕ್ಷುಬ್ಧತೆಯನ್ನು ಸೃಷ್ಟಿಸಿವೆ. ಅನೇಕ ಹಿರಿಯ ನಾಯಕರನ್ನು ಬಂಧಿಸಲಾಗಿದೆ ಎಂದಿದ್ದಾರೆ.
2021ರ ಏಪ್ರಿಲ್‌ನಿಂದ 2023ರ ಫೆಬ್ರುವರಿ ವರೆಗೆ ರಾಜ್ಯದಲ್ಲಿ 4,111 ಬಾಲ್ಯ ವಿವಾಹಗಳು ನಡೆದಿವೆ ಎಂದು ಅಸ್ಸಾಂ ಮುಖ್ಯಮಂತ್ರಿ ಸ್ವತಂತ್ರ ಶಾಸಕ ಅಖಿಲ್ ಗೊಗೊಯ್ ಅವರ ಪ್ರಶ್ನೆಗೆ ಸೋಮವಾರ ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ.

7,142 ಆರೋಪಿಗಳನ್ನು ಹೆಸರಿಸಿ ಒಟ್ಟು 4,670 ಪ್ರಕರಣಗಳನ್ನು ದಾಖಲಿಸಲಾಗಿದೆ. ಈಗಾಗಲೇ 3,483 ಜನರನ್ನು ಬಂಧಿಸಲಾಗಿದೆ, ಅದರಲ್ಲಿ 1,182 ಮಂದಿ ಜೈಲಿನಲ್ಲಿದ್ದಾರೆ, 2,253 ಮಂದಿ ಜಾಮೀನು ಪಡೆದಿದ್ದಾರೆ ಮತ್ತು 48 ಮಂದಿಗೆ ನೋಟಿಸ್ ನೀಡಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ