ಕೊರೊನಾ ವಿರುದ್ಧ ಪ್ರತಿಯೊಬ್ಬ ನಾಗರಿಕ ಸೈನಿಕರಂತೆ ಕೆಲಸ ಮಾಡುತ್ತಿದ್ದಾರೆ -ಮೋದಿ

ಕೊರೊನಾ ವಿರುದ್ಧ ಪ್ರತಿಯೊಬ್ಬ ನಾಗರಿಕ ಸೈನಿಕರಂತೆ ಕೆಲಸ ಮಾಡುತ್ತಿದ್ದಾರೆ -ಮೋದಿ

ದೆಹಲಿ: ರೋಗಿಗಳಿಗೆ ಔಷಧ ವಿತರಣೆ ಸೇರಿದಂತೆ ಎಲ್ಲದರಲ್ಲೂ ನಾವು ಮಾದರಿಯಾಗಿದ್ದೇವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಜನ ಒಬ್ಬರು ಮತ್ತೊಬ್ಬರ ಸಹಾಯಕ್ಕೆ ಮುಂದೆ ಬರುತ್ತಿದ್ದಾರೆ. ಮಹಾಮಾರಿ ಕೊರೊನಾ ಮಧ್ಯೆ ರೈತರು ಬೆಳಗ್ಗೆಯಿಂದ ಸಂಜೆಯವರೆಗೂ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವರು ತಮ್ಮ ಪಿಂಚಣಿಯನ್ನು ನೀಡ್ತಿದ್ದಾರೆ. ಕೆಲವರು ಮಾಸ್ಕ್​ ತಯಾರಿಸುತ್ತಿದ್ದಾರೆ ಎಂದು ಮನ್​ ಕಿ ಬಾತ್​ನ 64ನೇ ಎಪಿಸೋಡ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದರು.

ದೇಶದ ಪ್ರತಿಯೊಬ್ಬ ನಾಗರಿಕ ಈ ಹೋರಾಟದಲ್ಲಿ ಸೈನಿಕ. ಪ್ರತಿಯೊಬ್ಬರೂ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದಾರೆ. ಕೆಲವರು ತಮ್ಮ ಬೆಳೆಯನ್ನು ಬಡವರಿಗೆ ದಾನ ಮಾಡ್ತಿದ್ದಾರೆ. ದೇಶದ 130 ಕೋಟಿ ಜನರಿಗೆ ನಾನು ಶಿರಭಾಗಿ ನಮಿಸುತ್ತೇನೆ ಎಂದರು.

ಕೊರೊನಾ ವಾರಿಯರ್ಸ್​ಗಾಗಿ ವೆಬ್‌ಸೈಟ್‌ ಲಾಂಚ್​: ಸರ್ಕಾರ ಕೊರೊನಾ ವಾರಿಯರ್ಸ್​ಗಾಗಿ covidwarriors.gov.in ವೆಬ್‌ಸೈಟ್‌ ಮಾಡಲಾಗಿದೆ. ಇದರ ಜೊತೆ ನೀವೂ ಜೊತೆಗೂಡಬಹುದು. ಕೊವಿಡ್ ವಾರಿಯರ್ಸ್ ರೀತಿ ನೀವೂ ಹೋರಾಡಬಹುದು. ದೇಶದ ಜನರು ತೋರಿರುವ ಸಂಕಲ್ಪ ಹೊಸ ದಿಶೆಯನ್ನ ತೋರಿದೆ. ಈ ಸಂಕಷ್ಟದಲ್ಲಿ ದೇಶದ ಜನರ ಸಂಕಲ್ಪಶಕ್ತಿ ತಿಳಿಯುತ್ತಿದೆ.

ಎಲ್ಲೆಡೆ ಪೌರಕಾರ್ಮಿಕರನ್ನು ಹೂವಿನ ಮಳೆಗೈದು ಸ್ವಾಗತಿಸುತ್ತಿದ್ದಾರೆ. ಆದ್ರೆ ಕೆಲವೆಡೆ ಕೊವಿಡ್ ವಾರಿಯರ್ಸ್, ವೈದ್ಯರ ಮೇಲೆ ಹಲ್ಲೆ ಮಾಡುತ್ತಿರುವುದು ಖಂಡನೀಯ. ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಮೋದಿ ಎಚ್ಚರಿಕೆ ನೀಡಿದರು.

ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಜನ ನಿಲ್ಲಿಸಬೇಕು. ಮಾಸ್ಕ್ ಸಭ್ಯ ಸಮಾಜದ ಪ್ರತೀಕವಾಗಿ ಬದಲಾಗಲಿದೆ. ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅಗತ್ಯ. ಕೊರೊನಾ ಸೋಂಕಿನಿಂದ ಹಬ್ಬ ಆಚರಣೆಯಲ್ಲಿ ಬದಲಾವಣೆ ತರಲಿದೆ. ಜನರು ಮನೆಯಲ್ಲಿದ್ದು ಕುಟುಂಬಸ್ಥರ ಜತೆ ಹಬ್ಬ ಆಚರಿಸಿ ಎಂದು ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಕರೆ ನೀಡಿದರು.

https://www.facebook.com/Tv9Kannada/videos/2564932267089158/

Click on your DTH Provider to Add TV9 Kannada