AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಮವಾರ ಸಿಎಂಗಳ ಜತೆ ಮೋದಿ ಸಭೆ​, ಲಾಕ್​ಡೌನ್ ಭವಿಷ್ಯ ನಿರ್ಧಾರವಾಗುತ್ತಾ?

ಬೆಂಗಳೂರು: ಲಾಕ್​ಡೌನ್.. ಲಾಕ್​ಡೌನ್.. ಲಾಕ್​ಡೌನ್.. ಎರಡನೇ ಹಂತದ ಲಾಕ್​ಡೌನ್ ಜಾರಿಯಾಗಿ ಇಂದಿಗೆ 11 ದಿನಗಳಾಗಿವೆ. ಆದ್ರೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ದೇಶಾದ್ಯಂತ 25 ಸಾವಿರಕ್ಕೂ ಅಧಿಕ ಮಂದಿಗೆ ಮಹಾಮಾರಿ ಅಟ್ಯಾಕ್ ಮಾಡಿದೆ. 826 ಮಂದಿಯನ್ನು ಡ್ರ್ಯಾಗನ್ ವೈರಸ್ ಬಲಿ ಪಡೆದಿದೆ. ಹೆಮ್ಮಾರಿ ಕೊರೊನಾ ತನ್ನ ಬಾಹುವನ್ನು ಕ್ಷಣಕ್ಷಣಕ್ಕೂ ಚಾಚುತ್ತಿದೆ. ಸಿಎಂಗಳ ಜತೆ ಸಭೆಯಲ್ಲಿ ಲಾಕ್​ಡೌನ್ ಭವಿಷ್ಯ ನಿರ್ಧಾರ? 2ನೇ ಹಂತದ ಲಾಕ್​ಡೌನ್ ಮೇ 3ಕ್ಕೆ ಅಂತ್ಯವಾಗಲಿದೆ. ಕೊರೊನಾ ಸೋಂಕು ತಡೆಗಟ್ಟೋ […]

ಸೋಮವಾರ ಸಿಎಂಗಳ ಜತೆ ಮೋದಿ ಸಭೆ​, ಲಾಕ್​ಡೌನ್ ಭವಿಷ್ಯ ನಿರ್ಧಾರವಾಗುತ್ತಾ?
ಸಾಧು ಶ್ರೀನಾಥ್​
|

Updated on:Apr 26, 2020 | 7:45 PM

Share

ಬೆಂಗಳೂರು: ಲಾಕ್​ಡೌನ್.. ಲಾಕ್​ಡೌನ್.. ಲಾಕ್​ಡೌನ್.. ಎರಡನೇ ಹಂತದ ಲಾಕ್​ಡೌನ್ ಜಾರಿಯಾಗಿ ಇಂದಿಗೆ 11 ದಿನಗಳಾಗಿವೆ. ಆದ್ರೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ದೇಶಾದ್ಯಂತ 25 ಸಾವಿರಕ್ಕೂ ಅಧಿಕ ಮಂದಿಗೆ ಮಹಾಮಾರಿ ಅಟ್ಯಾಕ್ ಮಾಡಿದೆ. 826 ಮಂದಿಯನ್ನು ಡ್ರ್ಯಾಗನ್ ವೈರಸ್ ಬಲಿ ಪಡೆದಿದೆ. ಹೆಮ್ಮಾರಿ ಕೊರೊನಾ ತನ್ನ ಬಾಹುವನ್ನು ಕ್ಷಣಕ್ಷಣಕ್ಕೂ ಚಾಚುತ್ತಿದೆ.

ಸಿಎಂಗಳ ಜತೆ ಸಭೆಯಲ್ಲಿ ಲಾಕ್​ಡೌನ್ ಭವಿಷ್ಯ ನಿರ್ಧಾರ? 2ನೇ ಹಂತದ ಲಾಕ್​ಡೌನ್ ಮೇ 3ಕ್ಕೆ ಅಂತ್ಯವಾಗಲಿದೆ. ಕೊರೊನಾ ಸೋಂಕು ತಡೆಗಟ್ಟೋ ನಿಟ್ಟಿನಲ್ಲಿ ಲಾಕ್​ಡೌನ್ ವಿಧಿಸಲಾಗಿತ್ತು. ಇನ್ನು 8 ದಿನಗಳಲ್ಲಿ ಲಾಕ್​ಡೌನ್ ಅವಧಿ ಮುಗಿಯಲಿದೆ. ಹೀಗಾಗಿ ಮೇ 3ರ ನಂತರ ಏನು ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಲಾಕ್​ಡೌನ್ ಮತ್ತೆ ಮುಂದುವರಿಸ್ತಾರಾ ಅಥವಾ ಲಾಕ್​ಡೌನ್ ತೆರವು ಮಾಡ್ತಾರಾ ಅನ್ನೋ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.

ಲಾಕ್​ಡೌನ್ ಮುಂದುವರಿಸೋ ಬಗ್ಗೆ 6 ರಾಜ್ಯಗಳ ನಿರ್ಧಾರ: ಈ ನಡುವೆ ಕೆಲ ರಾಜ್ಯಗಳಲ್ಲಿ ಕೊರೊನಾ ಸೋಂಕು ಆತಂಕಕಾರಿಯಾಗಿ ಹರಡ್ತಿದ್ದು, ಕೆಲ ರಾಜ್ಯಗಳಲ್ಲಿ ಪರಿಸ್ಥಿತಿ ಕೈ ಮೀರೋ ಹಂತಕ್ಕೆ ತಲುಪಿದೆ. ಹೀಗಾಗಿ ಲಾಕ್​ಡೌನ್ ಮತ್ತಷ್ಟು ದಿನಗಳ ಕಾಲ ಮುಂದುವರಿಸೋ ಬಗ್ಗೆ ರಾಜ್ಯಗಳು ಇಂಗಿತ ವ್ಯಕ್ತಪಡಿಸಿವೆ. ದೆಹಲಿ ಬಳಿಕ ಒಡಿಶಾ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಪಂಜಾಬ್​ನಲ್ಲಿ ಲಾಕ್​ಡೌನ್ ಮುಂದುವರಿಸೋ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಮೇ 16ರವರೆಗೆ ಅಂದ್ರೆ ಮತ್ತೆ 13 ದಿನಗಳ ಕಾಲ ಈ ರಾಜ್ಯಗಳು ಲಾಕ್​ಡೌನ್ ಮುಂದುವರಿಸಲಿವೆ.

ಮಹಾಮಾರಿ ಹೊಡೆತಕ್ಕೆ ಕೊರೊನಾ ವಾರಿಯರ್ಸ್ ಬಲಿ: ಈ ನಡುವೆ ಮಹಾಮಾರಿ ಕೊರೊನಾಗೆ ಇಂದು ಇಬ್ಬರು ಕೊರೊನಾ ವಾರಿಯರ್ಸ್ ಬಲಿಯಾಗಿದ್ದಾರೆ. ಮುಂಬೈನಲ್ಲಿ 52 ವರ್ಷದ ಪೊಲೀಸ್ ಪೇದೆ ಕೊರೊನಾಗೆ ಪ್ರಾಣ ತೆತ್ತಿದ್ದಾರೆ. ಮತ್ತೊಂದೆಡೆ ಪಶ್ಚಿಮ ಬಂಗಾಳದಲ್ಲಿ ಕೊರೊನಾ ವಿರುದ್ಧ ಹೋರಾಡ್ತಿದ್ದ ಸರ್ಕಾರಿ ಆಸ್ಪತ್ರೆ ವೈದ್ಯ ಕೂಡ ಸೋಂಕಿನಿಂದಾಗಿ ಬಲಿಯಾಗಿದ್ದಾರೆ.

ಒಟ್ನಲ್ಲಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮತ್ತೊಂದೆಡೆ ನಾಳೆ ನಡೆಯಲಿರೋ ಸಿಎಂಗಳ ವಿಡಿಯೋ ಕಾನ್ಫರೆನ್ಸ್ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಕೆಲ ರಾಜ್ಯಗಳು ಮನವಿ ಮಾಡಿರೋದನ್ನು ನೋಡಿದ್ರೆ ಲಾಕ್​ಡೌನ್ ಎರಡು ವಾರಗಳ ಮಟ್ಟಿಗಾದ್ರೂ ಮುಂದುವರಿಸಿದ್ರೂ ಅಚ್ಚರಿ ಇಲ್ಲ.

https://www.facebook.com/Tv9Kannada/videos/1050024458732273/

Published On - 7:39 pm, Sun, 26 April 20