ದೆಹಲಿ: ನೂತನ ಕೃಷಿ ಕಾಯ್ದೆಯ ವಿರುದ್ಧ ನಡೆಯುತ್ತಿರುವ ರೈತರ ಚಳವಳಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಚಂಪಾರಣ್ಯ ಸತ್ಯಾಗ್ರಹ’ಕ್ಕೆ ಹೋಲಿಸಿ ಹೇಳಿಕೆ ನೀಡಿದ್ದಾರೆ. ರೈತ ಹೋರಾಟದಲ್ಲಿ ಭಾಗವಹಿಸಿರುವ ಪ್ರತಿಯೊಬ್ಬ ರೈತನೂ ‘ಸತ್ಯಾಗ್ರಹಿ’ ಎಂದು ಹೇಳಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ರೈತರ ಹೋರಾಟವನ್ನು, ಭಾರತೀಯರು ಬ್ರಿಟಿಷರ ವಿರುದ್ಧ ರೈತರು ನಡೆಸಿದ್ದ ಚಂಪಾರಣ್ಯ ಆಂದೋಲನಕ್ಕೆ ಹೋಲಿಸಿದ್ದಾರೆ. ಕೇಂದ್ರದ ಮೂರು ಹೊಸ ಕೃಷಿ ಕಾಯ್ದೆಗಳ ವಿರುದ್ಧ ರೈತ ಸತ್ಯಾಗ್ರಹಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಹಕ್ಕನ್ನು ಪಡೆದೇ ತೀರುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಅಂದು ಬ್ರಿಟಿಷರು ಕಂಪೆನಿ ಬಹದ್ದೂರ್ಗಳಾಗಿದ್ದರು. ಇಂದು ನರೇಂದ್ರ ಮೋದಿ ಮತ್ತು ಗೆಳೆಯರು ಕಂಪೆನಿ ಬಹದ್ದೂರ್ಗಳಾಗಿದ್ದಾರೆ ಎಂದು ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ಟ್ವೀಟ್ ಮೂಲಕ ಟೀಕಾಪ್ರಹಾರ ನಡೆಸಿದ್ದಾರೆ.
ಚಂಪಾರಣ್ಯ ಸತ್ಯಾಗ್ರಹವು 1917ರಲ್ಲಿ ಮಹಾತ್ಮ ಗಾಂಧಿ ನೇತೃತ್ವದಲ್ಲಿ ನಡೆದಿತ್ತು. ಬಿಹಾರದ ಚಂಪಾರಣ್ಯ ಪ್ರದೇಶದಲ್ಲಿ ನಡೆದ ರೈತರ ಈ ಸತ್ಯಾಗ್ರಹವನ್ನು ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಐತಿಹಾಸಿಕ ಘಟನೆಯಾಗಿ ಪರಿಗಣಿಸಲಾಗಿದೆ.
ರೈತರ ಪ್ರತಿಭಟನೆ, ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಮಧ್ಯೆ ಅಜ್ಜಿ ಊರಿಗೆ ಪ್ರವಾಸ ಹೊರಟ ರಾಹುಲ್ ಗಾಂಧಿ?
Published On - 8:12 pm, Sun, 3 January 21