ಇವಿಎಂ-ವಿವಿಪ್ಯಾಟ್ ನಡುವೆ ವ್ಯತ್ಯಾಸ ಕಂಡುಬಂದಿಲ್ಲ; ಪ್ರತಿಪಕ್ಷಗಳ ಆರೋಪಕ್ಕೆ ಮಹಾರಾಷ್ಟ್ರದ ಚುನಾವಣಾಧಿಕಾರಿ ಸ್ಪಷ್ಟನೆ
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮತಯಂತ್ರಗಳ ಬಗ್ಗೆ ವಿಪಕ್ಷಗಳು ಅನುಮಾನ ಹೊರಹಾಕಿದ್ದು. ಪ್ರತಿಪಕ್ಷಗಳ ಆರೋಪವನ್ನು ಮಹಾರಾಷ್ಟ್ರ ಚುನಾವಣಾ ಆಯೋಗವು ತಳ್ಳಿ ಹಾಕಿದೆ. ಇವಿಎಂ-ವಿವಿಪ್ಯಾಟ್ನಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಸಂಬಂಧಪಟ್ಟ ಡಿಇಒಗಳಿಂದ ಪಡೆದ ವರದಿಗಳ ಪ್ರಕಾರ ವಿವಿಪ್ಯಾಟ್ ಸ್ಲಿಪ್ ಎಣಿಕೆ ಮತ್ತು ಇವಿಎಂ ಕಂಟ್ರೋಲ್ ಯೂನಿಟ್ ಎಣಿಕೆ ನಡುವೆ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ ಎಂದು ಮಹಾರಾಷ್ಟ್ರ ಚುನಾವಣಾ ಆಯೋಗ ತಿಳಿಸಿದೆ.
ಮುಂಬೈ: ಮಹಾರಾಷ್ಟ್ರದ ವಿರೋಧ ಪಕ್ಷಗಳು ಇನ್ನೂ ಚುನಾವಣಾ ತೀರ್ಪನ್ನು ಸ್ವೀಕರಿಸಿಲ್ಲ. ಚುನಾವಣಾ ಫಲಿತಾಂಶದಲ್ಲಿ ಇವಿಎಂ ಮತ್ತು ಭಾರತದ ಚುನಾವಣಾ ಆಯೋಗದ ಪಾತ್ರದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಲೇ ಇವೆ. ಆದರೆ, ಪರಿಶೀಲನೆ ಪ್ರಕ್ರಿಯೆಯ ಭಾಗವಾಗಿ ವಿವಿಪ್ಯಾಟ್ ಸ್ಲಿಪ್‌ಗಳು ಮತ್ತು ಇವಿಎಂ ಅಂಕಿಅಂಶಗಳನ್ನು ತಾಳೆ ಮಾಡಿದಾಗ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ ಎಂದು ಮಹಾರಾಷ್ಟ್ರ ಚುನಾವಣಾ ಆಯೋಗ ಹೇಳಿದೆ.
“ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಯಾದೃಚ್ಛಿಕವಾಗಿ ಆಯ್ಕೆ ಮಾಡಲಾದ 5 ವಿಧಾನಸಭಾ ಕ್ಷೇತ್ರಗಳ ವಿವಿಪ್ಯಾಟ್ ಸ್ಲಿಪ್‌ಗಳನ್ನು ಎಣಿಕೆ ಮಾಡುವುದು ಕಡ್ಡಾಯವಾಗಿದೆ” ಎಂದು ಮಹಾರಾಷ್ಟ್ರದ ಮುಖ್ಯ ಚುನಾವಣಾ ಅಧಿಕಾರಿ ತಿಳಿಸಿದ್ದಾರೆ. ಅದರ ಪ್ರಕಾರ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಯಾದೃಚ್ಛಿಕವಾಗಿ ಆಯ್ಕೆಯಾದ 5 ಮತಗಟ್ಟೆಗಳ VVPAT ಸ್ಲಿಪ್ ಎಣಿಕೆಯನ್ನು ನವೆಂಬರ್ 23ರಂದು ಮಾಡಲಾಗಿದೆ. ಎಣಿಕೆ ಪ್ರಕ್ರಿಯೆಯನ್ನು ಎಣಿಕೆ ವೀಕ್ಷಕರು ಅಥವಾ ಅಭ್ಯರ್ಥಿಗಳ ಪ್ರತಿನಿಧಿಗಳ ಮುಂದೆ ನಡೆಸಲಾಗಿದೆ. ಅದರ ಪ್ರಕಾರ, ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಚುನಾವಣಾ ಆಯೋಗ ಸರಿಯಾದ ನಿಯಮವನ್ನು ಅನುಸರಿಸಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: Maharashtra CM: ಮಹಾರಾಷ್ಟ್ರ ಸಿಎಂ ಆಗಿ ಮತ್ತೆ ಪಟ್ಟಕ್ಕೇರಿದ ದೇವೇಂದ್ರ ಫಡ್ನವಿಸ್; ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಭಾಗಿ
ಈ ವರ್ಷದ ಏಪ್ರಿಲ್‌ನಲ್ಲಿ, ವಿವಿಪ್ಯಾಟ್‌ನೊಂದಿಗೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (ಇವಿಎಂ) ಬಳಸಿ ಚಲಾಯಿಸಿದ ಮತಗಳ ಸಂಪೂರ್ಣ ಕ್ರಾಸ್ ವೆರಿಫಿಕೇಶನ್ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.
VVPAT ಎಂಬುದು ಮತ ಪರಿಶೀಲನಾ ಕಾರ್ಯವಿಧಾನವಾಗಿದ್ದು, EVM ಬಟನ್ ಒತ್ತಿದ ನಂತರ ಸಂಕ್ಷಿಪ್ತವಾಗಿ ಗೋಚರಿಸುವ ಸ್ಲಿಪ್ ಮೂಲಕ ಮತದಾರರು ತಮ್ಮ ಮತಗಳನ್ನು ಸರಿಯಾಗಿ ದಾಖಲಿಸಲಾಗಿದೆಯೇ ಎಂದು ನೋಡಲು ಅನುವು ಮಾಡಿಕೊಡುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ