ತ್ರಿಶ್ಶೂರ್: ಕೊವಿಡ್ ಕಾಲದಲ್ಲಿ ಮಾಸ್ಕ್ ನಮ್ಮ ಜೀವನದ ಅತ್ಯಗತ್ಯ ಭಾಗವೆಂದು ಸಾಬೀತಾದಂತೆ, ಕೇರಳದ ವಿದ್ಯಾರ್ಥಿಯೊಬ್ಬ ಸಂವಹನವನ್ನು ಸರಾಗಗೊಳಿಸುವ ಒಂದು ನವೀನ ಗ್ಯಾಜೆಟ್ ಅನ್ನು ವಿನ್ಯಾಸಗೊಳಿಸಿದ್ದಾನೆ. ವಿಶೇಷವಾಗಿ ಮುಂಚೂಣಿಯ ಆರೋಗ್ಯ ಕಾರ್ಯಕರ್ತರು ಮತ್ತು ರಕ್ಷಣಾತ್ಮಕ ಪದರಗಳಿರುವ ಮಾಸ್ಕ್ ಧರಿಸುವ ವೈದ್ಯಕೀಯ ಸಿಬ್ಬಂದಿಗೆ ಈ ಮಾಸ್ಕ್ ಹೆಚ್ಚು ಅನುಕೂಲಕರವಾಗಿರುತ್ತದೆ. ತ್ರಿಶ್ಶೂರ್ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ಬಿ.ಟೆಕ್ ವಿದ್ಯಾರ್ಥಿ ಕೆವಿನ್ ಜಾಕೋಬ್ ಮೈಕ್ ಮತ್ತು ಸ್ಪೀಕರ್ ಇರುವ ಮಾಸ್ಕ್ ವಿನ್ಯಾಸಗೊಳಿಸಿದ್ದಾನೆ. ಕೆವಿನ್ ತನ್ನ ಪೋಷಕರಿಂದ ಈ ಕಲ್ಪನೆಗೆ ಸ್ಫೂರ್ತಿ ಪಡೆದಿದ್ದಾನೆ.
ಕೆವಿನ್ ಪೋಷಕರು ವೈದ್ಯರಾಗದ್ದಾರೆ. ಭಾರೀ ಪಿಪಿಇ ಕಿಟ್‌ಗಳನ್ನು ಧರಿಸಿರುವಾಗ ಇತರರೊಂದಿಗೆ ಸಂವಹನ ನಡೆಸಲು ಕಷ್ಟಪಡುತ್ತಿರುವುದನ್ನು ಕೆವಿನ್ ಕಣ್ಣಾರೆ ನೋಡಿದ್ದಾನೆ. ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ, ರೋಗಿಗಳೊಂದಿಗೆ ಸಂವಹನ ನಡೆಸುವಾಗ ಕೆವಿನ್ ತನ್ನ ವೈದ್ಯರ ಪೋಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ನೋಡಿದ್ದು, ಇದಕ್ಕೊಂದು ಪರಿಹಾರ ಕಂಡುಕೊಳ್ಳಲು ತೀರ್ಮಾನಿಸಿದ್ದನು
Kerala | Kevin Jacob, a first year B Tech student from Thrissur, has designed a mask with a mic & speaker attached to ease communication amid pandemic
“My parents are doctors & they’ve been struggling to communicate with their patients since the onset of COVID,” he said (23.05) pic.twitter.com/pnvkhzZETt
— ANI (@ANI) May 23, 2021
ಮ್ಯಾಗ್ನೆಟ್ ಬಳಸಿ ಮಾಸ್ಕ್ ಗೆ ಜೋಡಿಸಲಾದ ಗ್ಯಾಜೆಟ್ ಮೂವತ್ತು ನಿಮಿಷಗಳ ಚಾರ್ಜ್ ಸಮಯದಲ್ಲಿ ಒಟ್ಟು 6 ರಿಂದ 7 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ . ತನ್ನ ಹೆತ್ತವರಿಗೆ ಇದನ್ನು ಕೊಟ್ಟು ಮೊದಲ ಮೂಲ ಮಾದರಿಯನ್ನು ಪರೀಕ್ಷಿಸಿದ ನಂತರ, ಬೇಡಿಕೆ ಹೆಚ್ಚಿನ ಮಾಸ್ಕ್ ತಯಾರಿಸಿದ್ದಾನೆ ಕೆವಿನ್. ರೋಗಿಗಳೊಂದಿನ ಸರಾಗ ಸಂವಹನಕ್ಕೆ ನೆರವಾಗುವ ಈ ಗ್ಯಾಜೆಟ್ ಅನ್ನು ಬಳಸುತ್ತಿರುವ ಹಲವಾರು ವೈದ್ಯರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಪ್ರೊಟೆಕ್ಟಿವ್ ಶೀಲ್ಡ್ ಮತ್ತು ಮತ್ತು ಸಮವಸ್ತ್ರದ ಭಾರವಾದ ಪದರಗಳ ಮೂಲಕವೂ ಸಂವಹನ ನಡೆಸುವಾಗ ಹೆಚ್ಚು ಕಷ್ಟಪಡಬೇಕಾಗಿಲ್ಲ, ಸಾಧನದ ಬಳಕೆದಾರರಿಂದ ಒಟ್ಟಾರೆ ಪ್ರತಿಕ್ರಿಯೆ ಸಕಾರಾತ್ಮಕವಾಗಿದೆ ಎಂದು ಕೆವಿನ್ ಹೇಳಿದ್ದಾನೆ.
My parents found it difficult to communicate clearly via layers of masks & face shield. Seeing them, this idea struck me. I have made over 50 such devices that are being used by doctors across South India: Kevin Jacob, who designed mask with mic & speaker attached #Kerala (23.05) pic.twitter.com/ShgeLLXnCZ
— ANI (@ANI) May 23, 2021
ಕೆವಿನ್ ಈಗ ಇದೇ ರೀತಿಯ ಮಾಸ್ಕ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲು ದೊಡ್ಡ ಕಂಪನಿಗಳ ಸಹಕರಿಸಲು ಬಯಸುತ್ತಿದ್ದಾರೆ. ಪ್ರಸ್ತುತ, ಕೆವಿನ್ ಈಗಾಗಲೇ 50 ಕ್ಕೂ ಹೆಚ್ಚು ಸಾಧನಗಳನ್ನು ತಯಾರಿಸಿದ್ದು , ಇದನ್ನು ಈಗಾಗಲೇ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ವೈದ್ಯರು ಬಳಸಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಮಾಸ್ಕ್ ಧರಿಸದ ಪ್ರಕರಣ: ಸೂಪರ್ ಮಾರ್ಕೆಟ್ ಮಾಲೀಕನ ವಿರುದ್ಧ ದೂರು ದಾಖಲಿಸಿದ ವೈದ್ಯ ಕಕ್ಕಿಲಾಯ
ದೇಶದಲ್ಲಿ ಈಗಲೂ ಶೇ.50ರಷ್ಟು ಜನರು ಮಾಸ್ಕ್ ಧರಿಸುತ್ತಿಲ್ಲ, ಜೂನ್ ಅಂತ್ಯದೊಳಗೆ ಪ್ರತಿದಿನ 45 ಲಕ್ಷ ಕೊವಿಡ್ ಟೆಸ್ಟ್
Published On - 6:13 pm, Tue, 25 May 21