ಕೊವಿಡ್​ 19ನಿಂದ ಮೃತಪಡುವ ಉದ್ಯೋಗಿಗಳ ವೇತನ ಪ್ರತಿ ತಿಂಗಳೂ ಅವರ ಕುಟುಂಬಕ್ಕೆ ತಲುಪಲಿದೆ: ಟಾಟಾ ಸ್ಟೀಲ್​ ಕಂಪನಿಯ ಮಹತ್ವದ ನಿರ್ಧಾರ

ಮೇ 23ರಂದು ಹೇಳಿಕೆ ಬಿಡುಗಡೆ ಮಾಡಿದ್ದು, ಆ ಉದ್ಯೋಗಿಯ ಕುಟುಂಬಕ್ಕೆ ಸಂಬಳದ ಜತೆ ವೈದ್ಯಕೀಯ ಅನುಕೂಲ ಮತ್ತು ವಸತಿ ಸೌಲಭ್ಯವನ್ನೂ ನೀಡಲಾಗುವುದು ಎಂದು ತಿಳಿಸಿದೆ.

ಕೊವಿಡ್​ 19ನಿಂದ ಮೃತಪಡುವ ಉದ್ಯೋಗಿಗಳ ವೇತನ ಪ್ರತಿ ತಿಂಗಳೂ ಅವರ ಕುಟುಂಬಕ್ಕೆ ತಲುಪಲಿದೆ: ಟಾಟಾ ಸ್ಟೀಲ್​ ಕಂಪನಿಯ ಮಹತ್ವದ ನಿರ್ಧಾರ
ಟಾಟಾ ಸ್ಟೀಲ್​ (ಸಾಂದರ್ಭಿಕ ಚಿತ್ರ)
Follow us
Lakshmi Hegde
|

Updated on:May 25, 2021 | 7:29 PM

ಜೆಮ್​ಶೆಡ್​ಪುರದಲ್ಲಿರುವ ಸ್ಟೀಲ್​ ತಯಾರಿಕಾ ಕಂಪನಿ ಟಾಟಾ ಸ್ಟೀಲ್​ ಈ ಕೊವಿಡ್​ 19 ಸಂದರ್ಭದಲ್ಲಿ ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ತನ್ನ ಕಂಪನಿಯ ಯಾವುದೇ ಉದ್ಯೋಗಿ ಕೊವಿಡ್​ ಸೋಂಕಿನಿಂದ ಮೃತಪಟ್ಟರೆ, ಅವರಿಗೆ ನೀಡಲಾಗುತ್ತಿದ್ದ ತಿಂಗಳ ವೇತನವನ್ನು ನಿಲ್ಲಿಸುವುದಿಲ್ಲ. ಅವರ ಕುಟುಂಬಕ್ಕೆ ಕೊಡುತ್ತೇವೆ ಎಂದು ತಿಳಿಸಿದೆ.

ಸಾಮಾಜಿಕ ಭದ್ರತಾ ಯೋಜನೆಯಡಿ ಕಂಪನಿ ತಿಂಗಳ ವೇತನವನ್ನು ಮುಂದುವರಿಸುತ್ತದೆ. ಒಬ್ಬ ಉದ್ಯೋಗಿ ಕೊವಿಡ್​ 19ನಿಂದ ಮೃತಪಟ್ಟ ತಕ್ಷಣ ಅವರಿಗೆ ನೀಡಲಾಗುತ್ತಿದ್ದ ವೇತನವನ್ನು ನಿಲ್ಲಿಸುವುದಿಲ್ಲ. ಅವರ ನಿವೃತ್ತಿಯವರೆಗೆ, ಅಂದರೆ 60ವರ್ಷ ಆಗುವವರೆಗೂ ಕುಟುಂಬಕ್ಕೆ ಆ ಹಣ ನೀಡಲಾಗುತ್ತದೆ ಎಂದು ಕಂಪನಿ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ಬಿಡುಗಡೆ ಮಾಡಿದೆ.

ಮೇ 23ರಂದು ಹೇಳಿಕೆ ಬಿಡುಗಡೆ ಮಾಡಿದ್ದು, ಆ ಉದ್ಯೋಗಿಯ ಕುಟುಂಬಕ್ಕೆ ಸಂಬಳದ ಜತೆ ವೈದ್ಯಕೀಯ ಅನುಕೂಲ ಮತ್ತು ವಸತಿ ಸೌಲಭ್ಯವನ್ನೂ ನೀಡಲಾಗುವುದು ಎಂದು ತಿಳಿಸಿದೆ. ಇದರೊಂದಿಗೆ ಕೊರೊನಾದಿಂದ ಸಾವನ್ನಪ್ಪುವ ಉದ್ಯೋಗಿಗಳ ಮಕ್ಕಳ ಶಿಕ್ಷಣದ ವೆಚ್ಚವನ್ನೂ ಟಾಟಾ ಸ್ಟೀಲ್​ ಭರಿಸಲಿದೆ ಎಂದೂ ಮಾಹಿತಿ ನೀಡಿದೆ. ಕಂಪನಿಯ ಉಳಿದ ಉದ್ಯೋಗಿಗಳ ವೇತನದಲ್ಲಿ ಹೆಚ್ಚಳವಾದರೂ ಇವರ ಸಂಬಳದಲ್ಲಿ ಹೆಚ್ಚಳ ಮಾಡಲಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ. ಈ ಮೂಲಕ ಟಾಟಾ ಸ್ಟೀಲ್​ ಕಾರ್ಪೋರೇಟ್​ ವಲಯದಲ್ಲಿ ಒಂದು ಮಹತ್ವದ ಹೆಜ್ಜೆ ಇಟ್ಟಿದ್ದು, ಉಳಿದ ಕಂಪನಿಗಳಿಗೆ ಮಾದರಿಯಾಗಿದೆ.

ಇದನ್ನೂ ಓದಿ: Pope Francis: ಪೋಪ್ ಫ್ರಾನ್ಸಿಸ್​ಗೆ ಎಲೆಕ್ಟ್ರಿಕ್ ಕಾರು ಸಿದ್ಧಪಡಿಸಲಿದೆ ಫಿಸ್ಕರ್ ಆಟೋಮೊಬೈಲ್ ಕಂಪೆನಿ

Karnataka Rain: ಯಾಸ್ ಚಂಡಮಾರುತದ ಪ್ರಭಾವ; ಕರ್ನಾಟಕದಲ್ಲಿ ಇಂದಿನಿಂದ ಮೇ 29ರವರೆಗೂ ವ್ಯಾಪಕ ಮಳೆ

Published On - 6:38 pm, Tue, 25 May 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್