AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಲಭ ಸಂವಹನಕ್ಕಾಗಿ ಮೈಕ್ ಇರುವ ಮಾಸ್ಕ್ ವಿನ್ಯಾಸಗೊಳಿಸಿದ ಕೇರಳದ ವಿದ್ಯಾರ್ಥಿ

Face Mask With Mic :ಮ್ಯಾಗ್ನೆಟ್ ಬಳಸಿ ಮಾಸ್ಕ್ ಗೆ ಜೋಡಿಸಲಾದ ಗ್ಯಾಜೆಟ್ ಮೂವತ್ತು ನಿಮಿಷಗಳ ಚಾರ್ಜ್ ಸಮಯದಲ್ಲಿ ಒಟ್ಟು 6 ರಿಂದ 7 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ . ತನ್ನ ಹೆತ್ತವರಿಗೆ ಇದನ್ನು ಕೊಟ್ಟು ಮೊದಲ ಮೂಲ ಮಾದರಿಯನ್ನು ಪರೀಕ್ಷಿಸಿದ ನಂತರ, ಬೇಡಿಕೆ ಹೆಚ್ಚಿನ ಮಾಸ್ಕ್ ತಯಾರಿಸಿದ್ದಾನೆ ಕೆವಿನ್.

ಸುಲಭ ಸಂವಹನಕ್ಕಾಗಿ ಮೈಕ್ ಇರುವ ಮಾಸ್ಕ್ ವಿನ್ಯಾಸಗೊಳಿಸಿದ ಕೇರಳದ ವಿದ್ಯಾರ್ಥಿ
ಕೆವಿನ್
ರಶ್ಮಿ ಕಲ್ಲಕಟ್ಟ
|

Updated on:May 25, 2021 | 6:15 PM

Share

ತ್ರಿಶ್ಶೂರ್: ಕೊವಿಡ್ ಕಾಲದಲ್ಲಿ ಮಾಸ್ಕ್ ನಮ್ಮ ಜೀವನದ ಅತ್ಯಗತ್ಯ ಭಾಗವೆಂದು ಸಾಬೀತಾದಂತೆ, ಕೇರಳದ ವಿದ್ಯಾರ್ಥಿಯೊಬ್ಬ ಸಂವಹನವನ್ನು ಸರಾಗಗೊಳಿಸುವ ಒಂದು ನವೀನ ಗ್ಯಾಜೆಟ್ ಅನ್ನು ವಿನ್ಯಾಸಗೊಳಿಸಿದ್ದಾನೆ. ವಿಶೇಷವಾಗಿ ಮುಂಚೂಣಿಯ ಆರೋಗ್ಯ ಕಾರ್ಯಕರ್ತರು ಮತ್ತು ರಕ್ಷಣಾತ್ಮಕ ಪದರಗಳಿರುವ ಮಾಸ್ಕ್ ಧರಿಸುವ ವೈದ್ಯಕೀಯ ಸಿಬ್ಬಂದಿಗೆ ಈ ಮಾಸ್ಕ್ ಹೆಚ್ಚು ಅನುಕೂಲಕರವಾಗಿರುತ್ತದೆ. ತ್ರಿಶ್ಶೂರ್ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ಬಿ.ಟೆಕ್ ವಿದ್ಯಾರ್ಥಿ ಕೆವಿನ್ ಜಾಕೋಬ್ ಮೈಕ್ ಮತ್ತು ಸ್ಪೀಕರ್ ಇರುವ ಮಾಸ್ಕ್ ವಿನ್ಯಾಸಗೊಳಿಸಿದ್ದಾನೆ. ಕೆವಿನ್ ತನ್ನ ಪೋಷಕರಿಂದ ಈ ಕಲ್ಪನೆಗೆ ಸ್ಫೂರ್ತಿ ಪಡೆದಿದ್ದಾನೆ.

ಕೆವಿನ್ ಪೋಷಕರು ವೈದ್ಯರಾಗದ್ದಾರೆ. ಭಾರೀ ಪಿಪಿಇ ಕಿಟ್‌ಗಳನ್ನು ಧರಿಸಿರುವಾಗ ಇತರರೊಂದಿಗೆ ಸಂವಹನ ನಡೆಸಲು ಕಷ್ಟಪಡುತ್ತಿರುವುದನ್ನು ಕೆವಿನ್ ಕಣ್ಣಾರೆ ನೋಡಿದ್ದಾನೆ.  ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ, ರೋಗಿಗಳೊಂದಿಗೆ ಸಂವಹನ ನಡೆಸುವಾಗ ಕೆವಿನ್ ತನ್ನ ವೈದ್ಯರ ಪೋಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ನೋಡಿದ್ದು, ಇದಕ್ಕೊಂದು ಪರಿಹಾರ ಕಂಡುಕೊಳ್ಳಲು ತೀರ್ಮಾನಿಸಿದ್ದನು

ಮ್ಯಾಗ್ನೆಟ್ ಬಳಸಿ ಮಾಸ್ಕ್ ಗೆ ಜೋಡಿಸಲಾದ ಗ್ಯಾಜೆಟ್ ಮೂವತ್ತು ನಿಮಿಷಗಳ ಚಾರ್ಜ್ ಸಮಯದಲ್ಲಿ ಒಟ್ಟು 6 ರಿಂದ 7 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ . ತನ್ನ ಹೆತ್ತವರಿಗೆ ಇದನ್ನು ಕೊಟ್ಟು ಮೊದಲ ಮೂಲ ಮಾದರಿಯನ್ನು ಪರೀಕ್ಷಿಸಿದ ನಂತರ, ಬೇಡಿಕೆ ಹೆಚ್ಚಿನ ಮಾಸ್ಕ್ ತಯಾರಿಸಿದ್ದಾನೆ ಕೆವಿನ್. ರೋಗಿಗಳೊಂದಿನ ಸರಾಗ ಸಂವಹನಕ್ಕೆ ನೆರವಾಗುವ ಈ ಗ್ಯಾಜೆಟ್ ಅನ್ನು ಬಳಸುತ್ತಿರುವ ಹಲವಾರು ವೈದ್ಯರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಪ್ರೊಟೆಕ್ಟಿವ್ ಶೀಲ್ಡ್ ಮತ್ತು ಮತ್ತು ಸಮವಸ್ತ್ರದ ಭಾರವಾದ ಪದರಗಳ ಮೂಲಕವೂ ಸಂವಹನ ನಡೆಸುವಾಗ ಹೆಚ್ಚು ಕಷ್ಟಪಡಬೇಕಾಗಿಲ್ಲ, ಸಾಧನದ ಬಳಕೆದಾರರಿಂದ ಒಟ್ಟಾರೆ ಪ್ರತಿಕ್ರಿಯೆ ಸಕಾರಾತ್ಮಕವಾಗಿದೆ ಎಂದು ಕೆವಿನ್ ಹೇಳಿದ್ದಾನೆ.

ಕೆವಿನ್ ಈಗ ಇದೇ ರೀತಿಯ ಮಾಸ್ಕ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲು ದೊಡ್ಡ ಕಂಪನಿಗಳ ಸಹಕರಿಸಲು ಬಯಸುತ್ತಿದ್ದಾರೆ. ಪ್ರಸ್ತುತ, ಕೆವಿನ್ ಈಗಾಗಲೇ 50 ಕ್ಕೂ ಹೆಚ್ಚು ಸಾಧನಗಳನ್ನು ತಯಾರಿಸಿದ್ದು , ಇದನ್ನು ಈಗಾಗಲೇ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ವೈದ್ಯರು ಬಳಸಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಮಾಸ್ಕ್ ಧರಿಸದ ಪ್ರಕರಣ: ಸೂಪರ್ ಮಾರ್ಕೆಟ್ ಮಾಲೀಕನ ವಿರುದ್ಧ ದೂರು ದಾಖಲಿಸಿದ ವೈದ್ಯ ಕಕ್ಕಿಲಾಯ

ದೇಶದಲ್ಲಿ ಈಗಲೂ ಶೇ.50ರಷ್ಟು ಜನರು ಮಾಸ್ಕ್ ಧರಿಸುತ್ತಿಲ್ಲ, ಜೂನ್ ಅಂತ್ಯದೊಳಗೆ ಪ್ರತಿದಿನ 45 ಲಕ್ಷ ಕೊವಿಡ್ ಟೆಸ್ಟ್

Published On - 6:13 pm, Tue, 25 May 21

ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ