ಹಿಂದುಸ್ತಾನ್​ ಪೆಟ್ರೋಲಿಯಂ ಕಾರ್ಪೋರೇಶನ್​​ ಲಿಮಿಟೆಡ್​​​ನಲ್ಲಿ ಭಾರೀ ಬೆಂಕಿ; ಕೆಲಸಗಾರರ ರಕ್ಷಣೆ

ಹಿಂದುಸ್ತಾನ್​ ಪೆಟ್ರೋಲಿಯಂ ಕಾರ್ಪೋರೇಶನ್​​ ಲಿಮಿಟೆಡ್​​​ನಲ್ಲಿ ಭಾರೀ ಬೆಂಕಿ; ಕೆಲಸಗಾರರ ರಕ್ಷಣೆ
ಎಚ್​​ಪಿಸಿಎಲ್​​ನಲ್ಲಿ ಬೆಂಕಿ

ಎಚ್​ಪಿಸಿಎಲ್​ನ ಕಚ್ಚಾ ಶುದ್ಧೀಕರಣ ಘಟಕದ ಪೈಪ್​​ಲೈನ್​ನಲ್ಲಿ ಸ್ಫೋಟವಾಗಿದ್ದೇ ಹೀಗೆ ಬೆಂಕಿ ಹೊತ್ತಿಕೊಳ್ಳಲು ಕಾರಣ ಎಂದು ಸ್ಥಳೀಯ ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ.

Lakshmi Hegde

|

May 25, 2021 | 4:58 PM

ಹಿಂದುಸ್ತಾನ್​ ಪೆಟ್ರೋಲಿಯಂ ಕಾರ್ಪೋರೇಶನ್​​ ಲಿಮಿಟೆಡ್ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಹಿಂದುಸ್ತಾನ್​ ಪೆಟ್ರೋಲಿಯಂ ಕಾರ್ಪೋರೇಶನ್​​ ಲಿಮಿಟೆಡ್​ (HPCL)ನಲ್ಲಿ ಇಂದು ಮಧ್ಯಾಹ್ನ ತೀವ್ರವಾದ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ತೆರಳಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲಿದ್ದ ಎಲ್ಲ ಕೆಲಸಗಾರರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.

ಎಚ್​​ಪಿಎಲ್​ ಘಟಕದಲ್ಲಿ ಏನೋ ಸ್ಫೋಟಗೊಂಡ ಶಬ್ದ ಕೇಳಿತು. ಅದರ ಬೆನ್ನಲ್ಲೇ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಸುಮಾರು 6 ಮಂದಿ ಘಟಕದೊಳಗೆ ಕೆಲಸ ಮಾಡುತ್ತಿದ್ದರು. ಅವರನ್ನೆಲ್ಲರನ್ನೂ ಸ್ಥಳಾಂತರ ಮಾಡಲಾಗಿದೆ. ಯಾವುದೇ ಸಾವಿನ, ಗಾಯದ ಪ್ರಕರಣಗಳು ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಹಾಗೇ ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಲಾಗಿದೆ. ಎಚ್​ಪಿಸಿಎಲ್​ನ ಕಚ್ಚಾ ಶುದ್ಧೀಕರಣ ಘಟಕದ ಪೈಪ್​​ಲೈನ್​ನಲ್ಲಿ ಸ್ಫೋಟವಾಗಿದ್ದೇ ಹೀಗೆ ಬೆಂಕಿ ಹೊತ್ತಿಕೊಳ್ಳಲು ಕಾರಣ ಎಂದು ಸ್ಥಳೀಯ ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಈ ಸಿಡಿಯುವನ್ನು ಮುಚ್ಚಲಾಗಿದೆ.

ಇದನ್ನೂ ಓದಿ: ರಾಮನಗರ ಕ್ಷೇತ್ರಕ್ಕೆ ಆಂಬ್ಯುಲೆನ್ಸ್ ಗಳನ್ನ ಬಿಡಲು ಯೋಚನೆ ಮಾಡಿದ್ದೆ.. ಕೊವಿಡ್ ಅನಿವಾರ್ಯ ಸಂದರ್ಭದಲ್ಲಿ ಕೊಟ್ಟಿದ್ದೇವೆ

Follow us on

Related Stories

Most Read Stories

Click on your DTH Provider to Add TV9 Kannada