AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಾಧಾನಕರ ಸಂಗತಿ: ಸ್ಪುಟ್ನಿಕ್ ಲೈಟ್ ಲಸಿಕೆ ಪ್ರಯೋಗ 3ನೇ ಹಂತಕ್ಕೆ.. ಅಕ್ಟೋಬರ್ ವೇಳೆಗೆ ಭಾರತಕ್ಕೆ 85 ಕೋಟಿ ಡೋಸ್ ಲಭ್ಯ

Russia Sputnik Light Covid vaccine: ಔಷಧ ಉತ್ಪಾದನೆಯಲ್ಲಿ ವಿಶ್ವದಲ್ಲಿ ಭಾರತ ನಾಯಕನಿದ್ದಂತೆ. ಸ್ಪುಟ್ನಿಕ್ V ಲಸಿಕೆ‌ಯನ್ನ ಒಪ್ಪಂದದ ಪ್ರಕಾರ ಪೂರೈಸಲಾಗುತ್ತೆ. ಭಾರತದ ಇತರೆ ಕಂಪನಿ, ರಾಜ್ಯ ಸರ್ಕಾರಗಳಿಂದ ಮನವಿ ಬರುತ್ತಿದೆ. ಎಲ್ಲ ಪ್ರಸ್ತಾವಗಳನ್ನ ಎಚ್ಚರಿಕೆಯಿಂದ ಪರಿಶೀಲಿಸುತ್ತೇವೆ ಎಂದು ಭಾರತದ ರಷ್ಯಾ ಉಪ ರಾಯಭಾರಿ ಬಾಬುಶಿಕನ್ ತಿಳಿಸಿದ್ದಾರೆ. ಕೊರೊನಾ ವಿರುದ್ಧದ ಹೋರಾಟಕ್ಕೆ ರಷ್ಯಾ ಭಾರತದ ಜೊತೆ ಕೈ ಜೋಡಿಸಿದೆ.

ಸಮಾಧಾನಕರ ಸಂಗತಿ: ಸ್ಪುಟ್ನಿಕ್ ಲೈಟ್ ಲಸಿಕೆ ಪ್ರಯೋಗ 3ನೇ ಹಂತಕ್ಕೆ.. ಅಕ್ಟೋಬರ್ ವೇಳೆಗೆ ಭಾರತಕ್ಕೆ 85 ಕೋಟಿ ಡೋಸ್ ಲಭ್ಯ
ಸ್ಪುಟ್ನಿಕ್ ಲೈಟ್
ಆಯೇಷಾ ಬಾನು
|

Updated on: May 25, 2021 | 3:07 PM

Share

ದೆಹಲಿ: ಕೋವಿಡ್​ ಮಾರಿಯ ಹುಟ್ಟಡಿಗಿಸಲು ಅತ್ಯಗತ್ಯವಾಗಿರುವ ಲಸಿಕೆಗೆ ಭಾರತದಲ್ಲಿ ಹಾಹಾಕಾರ ಎದ್ದಿದೆ. ಜನ ಸಂಖ್ಯೆ ನೋಡಿದರೆ ಕೋಟಿಗಳಲ್ಲಿ… ಲಸಿಕೆಗಳು ಲಕ್ಷಗಳಲ್ಲಿ ಎಂಬಂತಾಗಿ ಲಸಿಕೆ ಸಿಗದೆ ಪರದಾಡುವ ಪರಿಸ್ಥಿತಿ ಭಾರತದ್ದಾಗಿದೆ. ಆದರೆ ಈಗ ಸ್ವಲ್ಪ ಸಮಾಧಾನಕರ ಸಂಗತಿಯೊಂದು ಕೇಳಿಬಂದಿದೆ. ​ ಇದೇ ಆಗಸ್ಟ್ ತಿಂಗಳಲ್ಲಿ ರಷ್ಯಾದ ಸ್ಪುಟ್ನಿಕ್-v ಲಸಿಕೆ ಉತ್ಪಾದನೆ ಆರಂಭವಾಗಲಿದೆ. ಅಕ್ಟೋಬರ್ ವೇಳೆಗೆ ಭಾರತದಲ್ಲಿ 85 ಕೋಟಿ ಡೋಸ್ ಸ್ಪುಟ್ನಿಕ್ ಲಸಿಕೆ ಲಭ್ಯವಾಗಲಿದೆ. ಆ ಮೂಲಕ ಕೇಂದ್ರ ಸರ್ಕಾರವು ನಿರೀಕ್ಷಿಸಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಲಸಿಕೆ ಭಾರತಕ್ಕೆ ಲಭ್ಯವಾಗಲಿದೆ. ಇದರ ಜೊತೆಗೆ ರಷ್ಯಾದ ಮತ್ತೊಂದು ಲಸಿಕೆ ಸ್ಪುಟ್ನಿಕ್ ಲೈಟ್ನ 3ನೇ ಹಂತದ ವೈದ್ಯಕೀಯ ಪ್ರಯೋಗ ನಡೆಯುತ್ತಿದ್ದು ಸ್ಪುಟ್ನಿಕ್ ಲೈಟ್ ಲಸಿಕೆ ಕೂಡ ಭಾರತಕ್ಕೆ ಬರುವ ವಿಶ್ವಾಸವಿದೆ.

ಔಷಧ ಉತ್ಪಾದನೆಯಲ್ಲಿ ವಿಶ್ವದಲ್ಲಿ ಭಾರತ ನಾಯಕನಿದ್ದಂತೆ. ಸ್ಪುಟ್ನಿಕ್ V ಲಸಿಕೆ‌ಯನ್ನ (Russia Sputnik Light Covid vaccine) ಒಪ್ಪಂದದ ಪ್ರಕಾರ ಪೂರೈಸಲಾಗುತ್ತೆ. ಭಾರತದ ಇತರೆ ಕಂಪನಿ, ರಾಜ್ಯ ಸರ್ಕಾರಗಳಿಂದ ಮನವಿ ಬರುತ್ತಿದೆ. ಎಲ್ಲ ಪ್ರಸ್ತಾವಗಳನ್ನ ಎಚ್ಚರಿಕೆಯಿಂದ ಪರಿಶೀಲಿಸುತ್ತೇವೆ ಎಂದು ಭಾರತದ ರಷ್ಯಾ ಉಪ ರಾಯಭಾರಿ ಬಾಬುಶಿಕನ್ ತಿಳಿಸಿದ್ದಾರೆ. ರಷ್ಯಾದಿಂದ ಇಂದು ದೆಹಲಿ ವಿಮಾನ ನಿಲ್ದಾಣಕ್ಕೆ ರೆಮಿಡಿಸಿವರ್ ಇಂಜೆಕ್ಷನ್ ತಲುಪಿದೆ. ಈ ರೀತಿ ಕೊರೊನಾ ವಿರುದ್ಧದ ಹೋರಾಟಕ್ಕೆ ರಷ್ಯಾ ಭಾರತದ ಜೊತೆ ಕೈ ಜೋಡಿಸಿದೆ.

ರಷ್ಯಾದ ಸ್ಪುಟ್ನಿಕ್ ಲಸಿಕೆಯು ಕೊರೊನಾ ವೈರಸ್ ವಿರುದ್ಧ ಶೇಕಡಾ 91.6ರಷ್ಟು ಪರಿಣಾಮಕಾರಿಯಾಗಿದೆ. ಹೀಗಾಗಿ ರಷ್ಯಾದ ಸ್ಪುಟ್ನಿಕ್ ಲಸಿಕೆಗೆ ಭಾರತದಲ್ಲಿ ಬಾರಿ ಬೇಡಿಕೆ ಇದೆ. ಹೀಗಾಗಿ ರಷ್ಯಾದ ಸ್ಪುಟ್ನಿಕ್ ಲಸಿಕೆಯ ಉತ್ಪಾದನೆಯು ಆಗಸ್ಟ್ ತಿಂಗಳಲ್ಲಿ ಭಾರತದಲ್ಲಿ ಆರಂಭವಾಗಲಿದೆ. ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಬರೋಬ್ಬರಿ 85 ಕೋಟಿ ಡೋಸ್ ಸ್ಪುಟ್ನಿಕ್ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತದೆ ಎಂದು ರಷ್ಯಾದಲ್ಲಿರುವ ಭಾರತದ ರಾಯಭಾರಿ ವೆಂಕಟೇಶ್ ವರ್ಮಾ ಶನಿವಾರ ರಷ್ಯಾದ ಸೇಂಟ್ ಪೀಟರ್ ಬರ್ಗ್‌ನಲ್ಲಿ ಹೇಳಿದ್ದಾರೆ. ಈಗ ಜೊತೆಗೆ ರಷ್ಯಾದ ಮತ್ತೊಂದು ಲಸಿಕೆ ಸ್ಪುಟ್ನಿಕ್ ಲೈಟ್ನ 3ನೇ ಹಂತದ ವೈದ್ಯಕೀಯ ಪ್ರಯೋಗ ನಡೆಯುತ್ತಿದ್ದು ಸ್ಪುಟ್ನಿಕ್ ಲೈಟ್ ಲಸಿಕೆ ಕೂಡ ಭಾರತಕ್ಕೆ ಬರುವ ವಿಶ್ವಾಸವಿದೆ. (spatial light vaccine 3rd phase testing spatial light Vaccine will be available in India)

ಇದನ್ನೂ ಓದಿ: ಅಕ್ಟೋಬರ್ ವೇಳೆಗೆ 85 ಕೋಟಿ ಡೋಸ್ ಸ್ಪುಟ್ನಿಕ್ ಲಸಿಕೆ ಲಭ್ಯ; ರಷ್ಯಾದಿಂದ ಭಾರತಕ್ಕೆ ನಿರೀಕ್ಷೆಗೂ ಮೀರಿದ ಸಹಾಯ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!