ಭಾರತ-ಚೀನಾ ಗಡಿಯಲ್ಲಿ ಮತ್ತೆ ಘರ್ಷಣೆ: 30ಕ್ಕೂ ಹೆಚ್ಚು ಸೇನಾ ಯೋಧರಿಗೆ ಗಾಯ

ಗಡಿ ವಿಚಾರವಾಗಿ ಬಾಲಬಿಚ್ಚಿದ ಚೀನಾ ಸೇನೆ ಭಾರತ ಗಡಿಪ್ರವೇಶ ಮಾಡಿದ್ದು, ಇದಕ್ಕೆ ಭಾರತೀಯ ಸೇನೆ ಸಹ ಪ್ರತಿರೋಧ ಒಡ್ಡಿ ಚೀನಾ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದೆ. ಆದ್ರೆ, ಘಟನೆಯಲ್ಲಿ ಉಭಯ ದೇಶದ ಯೋಧರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಭಾರತ-ಚೀನಾ ಗಡಿಯಲ್ಲಿ ಮತ್ತೆ ಘರ್ಷಣೆ: 30ಕ್ಕೂ ಹೆಚ್ಚು ಸೇನಾ ಯೋಧರಿಗೆ ಗಾಯ
ಭಾರತ-ಚೀನಾ ಗಡಿಯಲ್ಲಿ ಮತ್ತೆ ಘರ್ಷಣೆ
Edited By:

Updated on: Dec 12, 2022 | 8:17 PM

ಗಡಿಯಲ್ಲಿ ಭಾರತದ ಪ್ರದೇಶವನ್ನು ಅತಿಕ್ರಮಣದ ಮೂಲಕ ಸ್ವಾಧೀನಕ್ಕೆ ತೆಗೆದುಕೊಳ್ಳಲು ಸದಾ ಹವಣಿಸುತ್ತಲೇ ಇರುವ ಚೀನಾ ಮತ್ತೆ ಉಪಟಳ ಮುಂದುವರಿಸಿದೆ. ಗಡಿಯಲ್ಲಿ ಭಾರತ-ಚೀನಾ ಯೋಧರ(Indian, Chinese troops) ನಡುವೆ ಮತ್ತೆ ಘರ್ಷಣೆಯಾಗಿದ್ದು, ಘಟನೆಯಲ್ಲಿ ಉಭಯ ದೇಶಗಳ 30ಕ್ಕೂ ಹೆಚ್ಚು ಸೇನಾ ಯೋಧರಿಗೆ ಗಾಯಗಳಾಗಿವೆ. ಮಾಧ್ಯಮ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಗಲಾಟೆ ನಡೆದ ಬಗ್ಗೆ ಭಾರತೀಯ ಸೇನೆ (Indian Army) ದೃಢಪಡಿಸಿದೆ.


ಅರುಣಾಚಲ ಪ್ರದೇಶದಲ್ಲಿ ಭಾರತ-ಚೀನಾ ಗಡಿ ಭಾಗ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಡಿಸೆಂಬರ್​ 9ರಂದು ಶುಕ್ರವಾರ ತಡರಾತ್ರಿ ಚೀನಾ ಹಾಗೂ ಭಾರತೀಯ ಸೇನಾ ಯೋಧರ ನಡುವೆ ಸಂಘರ್ಷ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘರ್ಷಣೆಯಲ್ಲಿ ಭಾರತ ಹಾಗೂ ಚೀನಾ ದೇಶದ 30ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ. ಈ ಗಲಾಟೆ ನಡೆದ ಬಳಿಕ ಉಭಯ ದೇಶದ ಸೇನಾಧಿಕಾರಿಗಳು ಫ್ಲ್ಯಾಗ್ ಮೀಟಿಂಗ್ ನಡೆಸಿ ಶಾಂತಿ  ಕಾಪಾಡಲು ತೀರ್ಮಾನಿಸಿದ್ದಾರೆ.

ನಿತ್ಯ ನಡೆಯುವ ಗಸ್ತು ವೇಳೆ ಚೀನಾ ಸೇನೆ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿರುವ ಭಾರತದ ಗಡಿ ಪ್ರವೇಶಿಸಿದೆ. ಇದಕ್ಕೆ ಭಾರತೀಯ ಸೇನಾಪಡೆ ತೀವ್ರ ಆಕ್ಷೇಪಿಸಿದೆ. ಈ ವೇಳೆ ಭಾರತ, ಚೀನಾ ಸೇನಾ ಯೋಧರ ನಡುವೆ ತಳ್ಳಾಟ, ನೂಕಾಟ ನಡೆದಿದ್ದು, ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಬಳಿಕ ಭಾರತೀಯ ಯೋಧರು ತಕ್ಕ ತಿರುಗೇಟು ಕೊಟ್ಟಿದ್ದರಿಂದ ಚೀನಾ ಸೇನೆ ಗಡಿಯಿಂದ ಕಾಲ್ಕಿತ್ತಿದೆ. ಈ ಮೂಲಕ ಭಾರತ ಸೇನೆ, ಚೀನಾ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ