AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಸ್ಥಾನ: ಕೋಟಾದ ಕೋಚಿಂಗ್ ಸೆಂಟರ್​​ನಲ್ಲಿ ಕಲಿಯುತ್ತಿದ್ದ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ

ಇಲ್ಲಿ ಯಾವುದೇ ಆತ್ಮಹತ್ಯೆ ಟಿಪ್ಪಣಿ ಸಿಗಲಿಲ್ಲ. ಹೆಚ್ಚಿನ ಮಾಹಿತಿಗಾಗಿ ಅವರ ಮೊಬೈಲ್ ಫೋನ್ ಪರಿಶೀಲಿಸುತ್ತಿದೇವೆ. ಇವರಿಬ್ಬರೂ ಕಳೆದ ಮೂರು ವರ್ಷದಿಂದ ಕೋಟಾದಲ್ಲಿ ವಾಸಿಸುತ್ತಿದ್ದು, ರಾತ್ರಿ ಊಟ ಮುಗಿಸಿದ ನಂತರ ನೇಣು ಬಿಗಿದಿರುವ ಸಾಧ್ಯತೆ ಇದೆ. ಇದರಲ್ಲಿ ಒಬ್ಬ ಹುಡುಗ ಆತನ ಸಹೋದರಿಗೆ ರಾತ್ರಿ ಕರೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ರಾಜಸ್ಥಾನ: ಕೋಟಾದ ಕೋಚಿಂಗ್ ಸೆಂಟರ್​​ನಲ್ಲಿ ಕಲಿಯುತ್ತಿದ್ದ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ
ಪ್ರಾತಿನಿಧಿಕ ಚಿತ್ರ
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on: Dec 12, 2022 | 8:25 PM

Share

ರಾಜಸ್ಥಾನದ (Rajasthan) ಕೋಟಾದಲ್ಲಿ (Kota) ಖಾಸಗಿ ಕೋಚಿಂಗ್ ಇನ್ಸಿಟ್ಯೂಟ್​​ನಲ್ಲಿ ಕಲಿಯುತ್ತಿದ್ದ ಮೂವರು ಹದಿಹರೆಯದ ವಿದ್ಯಾರ್ಥಿಗಳು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಎರಡು ಪ್ರತ್ಯೇಕ ಪ್ರಕರಣದಲ್ಲಿ ಮೂವರು ವಿದ್ಯಾರ್ಥಿಗಳು ಜೀವ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಾಗಿ ಕೋಚಿಂಗ್ ಕೊಡುವ ದೇಶದ ಕೋಚಿಂಗ್ ಸೆಂಟರ್ ಗಳಿರುವ ಕೋಟಾದಿಂದ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ವರದಿ ಆಗಿರುವುದು ಆಘಾತದ ಸಂಗತಿಯಾಗಿದೆ. ಬಿಹಾರ ಮೂಲದ ಇಬ್ಬರು ವಿದ್ಯಾರ್ಥಿಗಳು ಕೋಟಾದಲ್ಲಿರುವ ಪ್ರತಿಷ್ಠಿತ ಕೋಚಿಂಗ್ ಸೆಂಟರ್​​ನಲ್ಲಿ ಕಲಿಯುತ್ತಿದ್ದರು ಎಂದು ಕೋಟಾ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಕೇಶಾರ್ ಸಿಂಗ್ ಶೆಖಾವತ್ ಹೇಳಿದ್ದಾರೆ. ಈ ವಿದ್ಯಾರ್ಥಿಗಳು ತಮ್ಮ ಪೇಯಿಂಗ್ ಗೆಸ್ಟ್ ರೂಂನಲ್ಲಿದ್ದ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಒಬ್ಬನಿಗೆ 19 ಮತ್ತು ಮತ್ತೊಬ್ಬನಿಗೆ 18 ವಯಸ್ಸು ಎಂದು ಅವರು ಹೇಳಿದ್ದಾರೆ. ಇವರಿಬ್ಬರು 11 ನೇ ತರಗತಿ ವಿದ್ಯಾರ್ಥಿಗಳಾಗಿದ್ದು, ಕಳೆದ 6 ತಿಂಗಳಿನಿಂದ ಒಂದೇ ಪಿಜಿಯಲ್ಲಿ ಬೇರೆ ಬೇರೆ ರೂಂಗಳಲ್ಲಿ ವಾಸಿಸುತ್ತಿದ್ದರು.ಅವರು ಸ್ನೇಹಿತರಾಗಿದ್ದರೇ ಅಲ್ಲವೇ ಎಂಬುದರ ಬಗ್ಗೆ ನಾವು ಪತ್ತೆ ಹಚ್ಚುತ್ತಿದ್ದೇವೆ. ಪಿಜಿ ಮಾಲೀಕರು ಪೊಲೀಸ್ ನಿಯಂತ್ರಣಾ ಕೊಠಡಿಗೆ ಕರೆ ಮಾಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದಿದ್ದಾರೆ ಶೆಖಾವತ್. ಈ ಹುಡುಗರಲ್ಲಿ ಒಬ್ಬ ಬೆಳಗ್ಗೆ ತಮ್ಮ ಕೋಣೆಯಿಂದ ಹೊರಬರದೇ ಇದ್ದಾಗ ಪಿಜಿ ಮಾಲೀಕರು ಬಾಗಿಲು ತಟ್ಟಿದ್ದಾರೆ. ಆದರೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ ಬಾಗಿಲು ಒಡೆದು ನೋಡಿದರೆ ಹುಡುಗನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮಧ್ಯಾಹ್ನ ಇನ್ನೊಬ್ಬ ಹುಡುಗನ ಸಹೋದರಿ ಆತನನ್ನು ಭೇಟಿಯಾಗಲು ಬಂದಿದ್ದಳು. ಆತನೂ ಬಾಗಿಲು ತಟ್ಟಿದಾಗ ತೆರೆಯದೇ ಇದ್ದ ಕಾರಣ ಬಾಗಿಲು ಒಡೆಯಲಾಯಿತು. ಅಲ್ಲಿ ಹುಡುಗ ಫ್ಯಾನ್​​ಗೆ ನೇಣು ಬಿಗಿದಿದ್ದ ಎಂದು ಎಸ್ ಪಿ ಹೇಳಿದ್ದಾರೆ.

ಇಲ್ಲಿ ಯಾವುದೇ ಆತ್ಮಹತ್ಯೆ ಟಿಪ್ಪಣಿ ಸಿಗಲಿಲ್ಲ. ಹೆಚ್ಚಿನ ಮಾಹಿತಿಗಾಗಿ ಅವರ ಮೊಬೈಲ್ ಫೋನ್ ಪರಿಶೀಲಿಸುತ್ತಿದೇವೆ. ಇವರಿಬ್ಬರೂ ಕಳೆದ ಮೂರು ವರ್ಷದಿಂದ ಕೋಟಾದಲ್ಲಿ ವಾಸಿಸುತ್ತಿದ್ದು, ರಾತ್ರಿ ಊಟ ಮುಗಿಸಿದ ನಂತರ ನೇಣು ಬಿಗಿದಿರುವ ಸಾಧ್ಯತೆ ಇದೆ. ಇದರಲ್ಲಿ ಒಬ್ಬ ಹುಡುಗ ಆತನ ಸಹೋದರಿಗೆ ರಾತ್ರಿ ಕರೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಮಧ್ಯಪ್ರದೇಶದ ಶಿವಪುರಿ ನಿವಾಸಿ, 17ರ ಹರೆಯದ ಹುಡುಗ ವಿಷ ಸೇವಿಸಿ ಆತ್ಮಹತ್ಯೆ ಮಾಡಿದ್ದಾನೆ. ಚಿಕಿತ್ಸೆ ವೇಳೆ ಈತ ಮೃತಪಟ್ಟಿದ್ದಾನೆ. ಬಾಲಕ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ (NEET) ತಯಾರಿ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ವರ್ಷಗಳಿಂದ ಕೋಟಾದಲ್ಲಿ ನೆಲೆಸಿದ್ದರು.

ಕಳೆದ ರಾತ್ರಿ ಆತ  ಪಿಜಿಯ ಗ್ಯಾಲರಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದುನೀರು ತುಂಬಲು ಅಲ್ಲಿಗೆ ಬಂದ ಇನ್ನೊಬ್ಬ ವಿದ್ಯಾರ್ಥಿಯು ಗಮನಿಸಿ ಹಾಸ್ಟೆಲ್ ಮಾಲೀಕರಿಗೆ ಮಾಹಿತಿ ನೀಡಿದ್ದನು. ಅವರು ಆಸ್ಪತ್ರೆಗೆ ಕರೆದೊಯ್ದರು ಅಲ್ಲಿ ಹುಡುಗ  ಸಾವಿಗೀಡಾಗಿದ್ದಾನೆ ಎಂದು ಘೋಷಿಸಲಾಯಿತು ಎಂದು ಕುನಾಡಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಗಂಗಾ ಸಹಾಯ ಶರ್ಮಾ ಹೇಳಿದರು. ಆತನ ಬಳಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ, ಆದರೆ ಪೊಲೀಸರು ಕೊಠಡಿಯಿಂದ ಇಲಿ ವಿಷವನ್ನು ವಶಪಡಿಸಿಕೊಂಡಿದ್ದಾರೆ.

ನವೆಂಬರ್ ಕೊನೆಯ ವಾರದಲ್ಲಿ, ಉತ್ತರಾಖಂಡದ 16 ವರ್ಷದ ವಿದ್ಯಾರ್ಥಿ ಕೋಟಾದ ಇಂದ್ರ ವಿಹಾರ್‌ನಲ್ಲಿರುವ ತನ್ನ ಪಿಜಿ ಕೊಠಡಿಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜುಲೈನಲ್ಲಿ ಇನ್ನೊಬ್ಬ NEET ಆಕಾಂಕ್ಷಿ ಆತ್ಮಹತ್ಯೆ ಮಾಡಿಕೊಂಡರು. 16 ವರ್ಷದ ಯುವಕ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ನಿವಾಸಿಯಾಗಿದ್ದಾನೆ.

ಇದನ್ನೂ ಓದಿ: ತನ್ನಂತೆ ಕಾಣುವ ವ್ಯಕ್ತಿಯನ್ನು ಭಸ್ಮ ಮಾಡಿ ಜೈಲೂಟ ಮಾಡುತ್ತಿದಾತ ಆತ್ಮಹತ್ಯೆಗೆ ಶರಣು, ಇಷ್ಟಕ್ಕೂ ಆತ ಕೊಲೆ ಮಾಡಿದ್ದು ಯಾಕೆ, ನೆರವಾದವರು ಯಾರು?

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ