AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ತಿಂಗಳು ವಿದ್ಯಾರ್ಥಿಯಂತೆ ನಟಿಸಿ ಕಾಲೇಜಿನಲ್ಲಿ ನಡೆಯುತ್ತಿದ್ದ ರ‍್ಯಾಗಿಂಗ್ ಪ್ರಕರಣ ಭೇದಿಸಿದ ಲೇಡಿ ಕಾನ್ಸ್​ಟೇಬಲ್

ವಿದ್ಯಾರ್ಥಿ ಸೋಗಿನಲ್ಲಿ ಬರೋಬ್ಬರಿ ಮೂರು ತಿಂಗಳು ಕಾಲೇಜಿಗೆ ಹೋಗಿ ಕ್ಯಾಂಪಸ್​ನಲ್ಲಿ ನಡೆಯುತ್ತಿದ್ದ ರ‍್ಯಾಗಿಂಗ್ ​ ಪ್ರಕರಣವನ್ನು ಓರ್ವ ಲೇಡಿ ಕಾನ್ಸ್​ಟೇಬಲ್​ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಅಚ್ಚರಿ ಎನ್ನಿಸಿದರೂ ಸತ್ಯ. ಈ ಸುದ್ದಿ ಯಾವ ಸಿನಿಮಾಗೂ ಕಮ್ಮಿ ಇಲ್ಲ.

3 ತಿಂಗಳು ವಿದ್ಯಾರ್ಥಿಯಂತೆ ನಟಿಸಿ ಕಾಲೇಜಿನಲ್ಲಿ ನಡೆಯುತ್ತಿದ್ದ ರ‍್ಯಾಗಿಂಗ್ ಪ್ರಕರಣ ಭೇದಿಸಿದ ಲೇಡಿ ಕಾನ್ಸ್​ಟೇಬಲ್
constable Shalini Chouhan
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on:Dec 12, 2022 | 11:25 PM

Share

ಭೋಪಲ್: 24 ವರ್ಷದ ಮಹಿಳಾ ಪೊಲೀಸ್‌ ಕಾನ್ಸ್‌ ಸ್ಟೇಬಲ್‌ ಶಾಲಿನಿ ಚೌಹಾಣ್ (constable Shalini Chouhan) ಎನ್ನುವರು ಬರೋಬ್ಬರಿ 3 ತಿಂಗಳು ವಿದ್ಯಾರ್ಥಿಯಂತೆ (Student) ನಟಿಸಿ ಕಾಲೇಜಿನಲ್ಲಿ ನಡೆಯುತ್ತಿದ್ದ ರ‍್ಯಾಗಿಂಗ್ ಪ್ರಕರಣವನ್ನು (Ragging Case) ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಾಲಿನಿ ಅವರ ಕಾರ್ಯ ಸಾಧನೆಗೆ ಶಹಬ್ಬಾಸ್ ಎಂದಿದ್ದಾರೆ.

ಇದನ್ನೂ ಓದಿ: ಖ್ಯಾತ ಯೂಟ್ಯೂಬರ್​ನ ಇಬ್ಬರು ಪತ್ನಿಯರು ಒಂದೇ ಬಾರಿಗೆ ಪ್ರೆಗ್ನೆಂಟ್, ಅದು ಹೇಗೆ ಸಾಧ್ಯವೆಂದು ಅಚ್ಚರಿಗೊಂಡ ಜನ

ಮಧ್ಯಪ್ರದೇಶದ (Madhya Pradesh) ಇಂದೋರ್​ ನಗರದಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕ ಮೆಡಿಕಲ್ ಕಾಲೇಜಿನಲ್ಲಿ (Medical College) ನಡೆಯುತ್ತಿದ್ದ ರ್ಯಾಂಗಿಂಗ್​ ಮಟ್ಟ ಹಾಕಲು ಪೊಲೀಸ್‌ ಕಾನ್ಸ್‌ ಸ್ಟೇಬಲ್‌ ಶಾಲಿನಿ ಚೌಹಾಣ್ ಎಂಬುವರು ಮೂರು ತಿಂಗಳು ಯಾರಿಗೂ ಒಂದು ಸಣ್ಣ ಅನುಮಾನ ಬರದಂತೆ ವಿದ್ಯಾರ್ಥಿಯಾಗಿದ್ದಳು. ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗಳಗೆ ರ‍್ಯಾಗಿಂಗ್ ಮಾಡುತ್ತಿದ್ದ 11 ಹಿರಿಯ ವಿದ್ಯಾರ್ಥಿಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದು, ಇದೀಗ ಜೂನಿಯರ್ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡುತ್ತಿದ್ದ ಆ 11 ಹಿರಿಯ ವಿದ್ಯಾರ್ಥಿಗಳನ್ನು ಕಾಲೇಜು ಹಾಗೂ ಹಾಸ್ಟೆಲ್​ನಿಂದ ಮೂರು ತಿಂಗಳು ಕಾಲ ಅಮಾನತು ಮಾಡಲಾಗಿದೆ.

ಕಾಲೇಜಿನಲ್ಲಿ ರ‍್ಯಾಗಿಂಗ್ ನಡೆಯುತ್ತಿರುವ ಬಗ್ಗೆ ತಮಗೆ ಅನಾಮಧೇಯ ದೂರುಗಳು ಬರುತ್ತಿದ್ದವು. ಅಶ್ಲೀಲ ಕೃತ್ಯಗಳು ಎಸಗುವಂತೆ ತಮ್ಮನ್ನು ಒತ್ತಾಯಪಡಿಸಲಾಗುತ್ತದೆ. ತಲೆದಿಂಬುಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ರೀತಿಯಲ್ಲಿ ನಟಿಸುವಂತೆ ಬಲವಂತ ಮಾಡಲಾಗುತ್ತಿದೆ ಎಂದು ಹಲವು ವಿದ್ಯಾರ್ಥಿಗಳು ದೂರು ನೀಡಿದ್ದರು.

ಇದನ್ನು ತಿಳಿದ ಪೊಲೀಸರು ಕ್ಯಾಂಪಸ್​ಗೆ ತೆರಳಿ ವಿಚಾರಣೆ ಮಾಡಿದ್ದಾರೆ. ಆದರೂ ಸಹ ವಿದ್ಯಾರ್ಥಿಗಳು ಹೆದರಿಕೊಂಡು ದೂರು ನೀಡಲು ಮುಂದೆ ಬಂದಿರಲಿಲ್ಲ. ಕೊನೆಗೆ ಪೊಲೀಸ್ ಕಾನ್ಸ್​ಟೇಬಲ್ ಶಾಲಿನಿ ಅವರನ್ನು ವಿದ್ಯಾರ್ಥಿಯಂತೆ ಪ್ರತಿದಿನ ಶಾಲೆಗೆ ಕಳುಹಿಸಿ ರ‍್ಯಾಗಿಂಗ್ ಮಾಡುವವರನ್ನು ಪತ್ತೆ ಮಾಡುಬಹುದು ಎಂದು ಉಪಾಯ ಮಾಡಿದ್ದಾರೆ.

ಶಾಲಿನಿ ಅವರಿಗೆ ಪ್ರತಿನಿತ್ಯ ವಿದ್ಯಾರ್ಥಿಯ ಸೋಗಿನಲ್ಲಿ ಹೋಗುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಅದರಂತೆ ಶಾಲಿನಿ ಪ್ರತಿನಿತ್ಯ ವಿದ್ಯಾರ್ಥಿಯಂತೆ ಕಾಲೇಜಿಗೆ ಹೋಗುತ್ತಿದ್ದರು. ಎಲ್ಲರಂತೆ ಡ್ರೆಸ್, ಬ್ಯಾಕ್ ಹಾಕಿಹೊಂಡು ಕಾಲೇಜಿಗೆ ಹೋಗಿ ಪಾಠ ಕೇಳುವುದು. ಸ್ನೇಹಿತೆಯರೊಂದಿಗೆ ಕೂತು ಮಾತಾಡುವುದು, ಕ್ಲಾಸ್​ಗೆ ಬಂಕ್‌ ಹೊಡೆದು ಕ್ಯಾಂಟೀನ್‌ ನಲ್ಲಿ ಕಾಲ ಕಳೆಯುವುದು. ಹೀಗೆ ವಿದ್ಯಾರ್ಥಿಗಳು ಏನೆಲ್ಲ ಮಾಡುತ್ತಿದ್ದರೂ ಅದರಂತೆ ಒಂದು ಸಣ್ಣ ಅನುಮಾನ ಬರದಂತೆ ಆ್ಯಕ್ಟಿಂಗ್ ಮಾಡಿದ್ದಾರೆ.

ಇನ್ಸ್ ಪೆಕ್ಟರ್ ಹೇಳಿದ್ದೇನು

ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶಾಲಿನಿ ಅವರ ಇನ್ಸ್ ಪೆಕ್ಟರ್ ತೆಹಜೀಬ್ ಕಾಜಿ,ಇಂದೋರ್‌ನಲ್ಲಿರುವ ಮಹಾತ್ಮ ಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ ಕಳೆದ ಕೆಲ ತಿಂಗಳಿನಿಂದ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡುತ್ತಿದ್ದರು. ಹಲವು ಬಾರಿ ಪೊಲೀಸರಿಗೆ ಈ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಮೊದಲ ವರ್ಷದ ವಿದ್ಯಾರ್ಥಿಗಳಿಂದ ಅಸಭ್ಯವಾಗಿ ವರ್ತಿಸಬೇಕು, ದಿಂಬಿನ ಜೊತೆ ಲೈಂಗಿಕವಾಗಿ ನಟಿಸಬೇಕು ಈ ರೀತಿಯ ವರ್ತನೆಯನ್ನು ಮಾಡಬೇಕೆಂದು ಕಿರುಕುಳ ನೀಡಿದ್ದಾರೆ. ಆದರೆ ಈ ಬಗ್ಗೆ ನಮಗೆ ದೂರು ಕೇಳಿ ಬಂದಿವೆ. ವಿದ್ಯಾರ್ಥಿಗಳು ಮುಂದೆ ಬಂದು ನಮ್ಮೊಂದಿಗೆ ಮಾತಾನಾಡಲು ಹಿಂಜರಿಯುತ್ತಿದ್ದರು. ನಮ್ಮನ್ನು ಪೊಲೀಸ್‌ ಬಟ್ಟೆಯಲ್ಲಿ ನೋಡುವಾಗ ವಿದ್ಯಾರ್ಥಿಗಳು ಹೆದರಿ ಏನನ್ನು ಹೇಳುತ್ತಿರಲಿಲ್ಲ. ಹೀಗಾಗಿ ನಾವು ಈ ರೀತಿ ಪೊಲೀಸ್‌ ಕಾರ್ಯಚರಣೆಗೆ ಇಳಿಯಲು ಯೋಜನೆಯನ್ನು ಮಾಡಿದ್ದೆವು ಎಂದರು.

ಶಾಲಿನಿ ಅವರ ನೇತೃತ್ವದಲ್ಲಿ ಕಾನ್ಸ್‌ ಸ್ಟೇಬಲ್‌ ಗಳು ಪೊಲೀಸ್‌ ಬಟ್ಟೆ ಬಿಟ್ಟು ಕಾಲೇಜಿನ ಯೂನಿಫಾರಂನ್ನು ಧರಿಸಿಕೊಂಡು ಹೋಗುತ್ತಿದ್ದರು. ಅಲ್ಲಿ ವಿದ್ಯಾರ್ಥಿಗಳೊಂದಿಗೆ ಸ್ನೇಹಮಯವಾಗಿದ್ದು, ನಿಧಾನವಾಗಿ ಅಲ್ಲಿ  ಆಗುತ್ತಿರುವ ಕಿರುಕುಳದ ಬಗ್ಗೆ ಶಾಲಿನಿ ಮಾಹಿತಿ ಕಲೆ ಹಾಕಲು ಶುರು ಮಾಡಿದ್ದಾರೆ. ಯಾರಿಗಾದರೂ ಶಾಲಿನಿ ಪೊಲೀಸ್‌ ಎಂದು ಸಂಶಯ ಬಂದರೆ ಆ ಕೂಡಲೇ ಅವರು ವಿಷಯವನ್ನು ಬದಲಾಯಿಸಿ ಬೇರೆ ವಿಷಯದ ಬಗ್ಗೆ ಮಾತಾನಾಡುತ್ತಿದ್ದರು ಎಂದು ತಿಳಿಸಿದ್ದಾರೆ.

ಅನುಭವ ಹೇಳಿಕೊಂಡ ಶಾಲಿನಿ

ಇನ್ನು ಈ ಬಗ್ಗೆ ಶಾಲಿ ಮಾತನಾಡಿದ್ದು, ನನ್ನ ಬಳಿ ಬ್ಯಾಗ್‌, ಯೂನಿಫಾರಂ, ಪುಸ್ತಕಗಳಿದ್ದವು. ವಿದ್ಯಾರ್ಥಿಯಂತೆಯೇ ಕಾಣುತ್ತಿದ್ದೆ. ನಾನು ಪ್ರತಿದಿನ ಕಾಲೇಜಿಗೆ ಹೋಗಬೇಕಿತ್ತು. ಮುಕ್ತವಾಗಿ ನನ್ನ ಬಗ್ಗೆ ಮಾತಾನಾಡುತ್ತಾ, ರ‍್ಯಾಗಿಂಗ್ ಘಟನೆಗಳನ್ನು ಕೇಳುತ್ತಾ ಹೋದೆ. ನನ್ನ ಬಗ್ಗೆ ಸಂಶಯದ ಪ್ರಶ್ನೆ ಕೇಳುವಾಗ ನಾನು ಮಾತು ಬದಲಾಯಿಸುತ್ತಿದ್ದೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಸಿನಿಮಾದಲ್ಲಿ ಒಂದು ಪ್ರಕರಣವನ್ನು ಭೇದಿಸಲು ಹೇಗೆ ವೇಷದಾರಿ ಆಗುತ್ತಾರೋ ಅದೇ ಮಾದರಿಯಲ್ಲಿ ನಿಜ ಜೀವನದಲ್ಲಿ ಪೊಲೀಸ್​ ಕಾನ್ಸ್​ಟೇಬಲ್​ ವಿದ್ಯಾರ್ಥಿಯಾಗಿ ರ್ಯಾಗಿಂಗ್ ಪ್ರಕರಣವನ್ನು ಮಟ್ಟಹಾಕಿದ್ದು ನಿಜಕ್ಕೂ ಗ್ರೇಟ್. ಆ ಕಾನ್ಸ್​ಟೇಬಲ್​ಗೊಂದು ನಿಮ್ಮ ಕಡೆಯಿಂದ ಒಂದು ಸೆಲ್ಯೂಟ್ ಇರಲಿ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 10:58 pm, Mon, 12 December 22

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು