ResignModi ಹ್ಯಾಶ್​ಟ್ಯಾಗ್ ಬ್ಲಾಕ್ ಮಾಡಿದ್ದು ಕಣ್ತಪ್ಪಿನಿಂದ, ಈಗ ಪುನಸ್ಥಾಪಿಸಲಾಗಿದೆ: ಫೇಸ್​ಬುಕ್

|

Updated on: Apr 29, 2021 | 2:33 PM

Facebook: #ResignModi ಹ್ಯಾಶ್​​ಟ್ಯಾಗ್ ಬ್ಲಾಕ್ ಮಾಡಿರುವ ಬಗ್ಗೆ ಇಮೇಲ್ ಮೂಲಕ ಸ್ಪಷ್ಟನೆ ನೀಡಿದ ಫೇಸ್​ಬುಕ್ ವಕ್ತಾರ, ನಾವು ಈ ಹ್ಯಾಶ್‌ಟ್ಯಾಗ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ್ದು ಕಣ್ತಪ್ಪಿನಿಂದ. ಭಾರತ ಸರ್ಕಾರವು ನಮ್ಮಲ್ಲಿ ಹೇಳಿಲ್ಲ. ನಾವು ಹ್ಯಾಶ್​ಟ್ಯಾಗ್ ಪುನಸ್ಥಾಪಿಸಿದ್ದೇವೆ ಎಂದಿದ್ದಾರೆ.

ResignModi ಹ್ಯಾಶ್​ಟ್ಯಾಗ್ ಬ್ಲಾಕ್ ಮಾಡಿದ್ದು ಕಣ್ತಪ್ಪಿನಿಂದ, ಈಗ ಪುನಸ್ಥಾಪಿಸಲಾಗಿದೆ: ಫೇಸ್​ಬುಕ್
ನರೇಂದ್ರ ಮೋದಿ
Follow us on

ದೆಹಲಿ: ದೇಶದಲ್ಲಿ ಕೊರೊನಾವೈರಸ್ ನಿಯಂತ್ರಣದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ನೆಟ್ಟಿಗರು ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ಒತ್ತಾಯಿಸಿ #ResignModi ಹ್ಯಾಶ್​ಟ್ಯಾಗ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಮಾಡಿದ್ದರು. ಏಪ್ರಿಲ್ 28 ಬುಧವಾರ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಟೀಕೆ ಮಾಡಿದ 12,000ಕ್ಕಿಂತಲೂ ಹೆಚ್ಚು ಪೋಸ್ಟ್ ಗಳನ್ನು ಸೆನ್ಸಾರ್ ಮಾಡಿದ್ದ ಫೇಸ್​ಬುಕ್ ಕೆಲವು ಗಂಟೆಗಳ ಕಾಲ #ResignModi ಹ್ಯಾಶ್​ಟ್ಯಾಗ್ ಬ್ಲಾಕ್ ಮಾಡಿತ್ತು.

#ResignModi ಎಂಬ ಹ್ಯಾಶ್​ಟ್ಯಾಗ್ ಹುಡುಕಿದರೆ ಈ ಪೋಸ್ಟ್​ಗಳನ್ನು  ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಪೋಸ್ಟ್​​ನಲ್ಲಿರುವ ಕೆಲವು ವಿಷಯಗಳು ವೆಬ್​ಸೈಟ್​ನ ಸಮುದಾಯದ ಮಾನದಂಡಗಳನ್ನು ಉಲ್ಲಂಘಿಸಿವೆ ಎಂಬ ಸಂದೇಶ ಕಾಣಿಸುತ್ತಿತ್ತು. ಫೇಸ್​ಬುಕ್ ಈ ರೀತಿ #ResignModi ಎಂಬ ಹ್ಯಾಶ್​ಟ್ಯಾಗ್ ಬ್ಲಾಕ್ ಮಾಡಿರುವುದರ ವಿರುದ್ಧ ನೆಟ್ಟಿಗರು ಸಿಡಿದೆದ್ದಿದ್ದು, ಫೇಸ್​ಬುಕ್ ದ್ವಂದ್ವ ನಿಲುವು ತೋರಿಸಿದೆ ಎಂದು ಟೀಕೆ ಮಾಡಿದ್ದಾರೆ.

ಇದೆಲ್ಲದರ ನಡುವೆಯೇ #ResignModi ಹ್ಯಾಶ್​ಟ್ಯಾಗ್​ನ್ನು ಫೇಸ್​ಬುಕ್  ಪುನಸ್ಥಾಪಿಸಿದ್ದು, ಪ್ರಸ್ತುತ ಹ್ಯಾಶ್​ಟ್ಯಾಗ್ ಬ್ಲಾಕ್ ಆಗಿದ್ದು ಕಣ್ತಪ್ಪಿನಿಂದ ಎಂದು ಸ್ಪಷ್ಟನೆ ನೀಡಿದೆ. ಅದೇ ವೇಳೆ ಹ್ಯಾಶ್​ಟ್ಯಾಗ್ ಬ್ಲಾಕ್ ಮಾಡಲು ನಾವು
ಫೇಸ್​ಬುಕ್ ಸಂಸ್ಥೆಗೆ ಆದೇಶಿಸಿರಲಿಲ್ಲ ಎಂದು ಕೇಂದ್ರ ಸರ್ಕಾರ ತಮ್ಮ ಪ್ರಕಟಣೆಯಲ್ಲಿ ಹೇಳಿದೆ.

ಕಣ್ತಪ್ಪಿನಿಂದ ಬ್ಲಾಕ್ ಮಾಡಿದೆವು: ವಿಚಿತ್ರ ಸ್ಪಷ್ಟನೆ ನೀಡಿದ ಫೇಸ್​ಬುಕ್
ಎನ್​ಬಿಸಿ ನ್ಯೂಸ್​ನ ಟೆಕ್ ಇನ್ವೆಸ್ಟೀಷನ್ ಎಡಿಟರ್ ಒಲಿವಿಯಾ ಸಾಲನ್ ಮಾಡಿದ ಟ್ವೀಟ್​ಗೆ ಉತ್ತರಿಸಿದ ಫೇಸ್ ಬುಕ್​ನ ಆಂಡಿ ಸ್ಟೋನ್, ಈ ಹ್ಯಾಶ್​ಟ್ಯಾಗ್ ಪುನಸ್ಥಾಪಿಸಲಾಗಿದೆ, ಈ ಬಗ್ಗೆ ನಾವು ಪರಿಶೀಲಿಸುತ್ತಿದ್ದೇವೆ ಎಂದಿದ್ದಾರೆ
ಈ ಹ್ಯಾಶ್​ಟ್ಯಾಗ್ ಮಧ್ಯಾಹ್ನ 12.50ರ ಹೊತ್ತಿಗೆ ಪುನಸ್ಥಾಪಿಸಲಾಗಿದೆ .


ಹ್ಯಾಶ್​​ಟ್ಯಾಗ್ ಬ್ಲಾಕ್ ಮಾಡಿರುವ ಬಗ್ಗೆ ಇಮೇಲ್ ಮೂಲಕ ಸ್ಪಷ್ಟನೆ ನೀಡಿದ ಫೇಸ್​ಬುಕ್ ವಕ್ತಾರ, ನಾವು ಈ ಹ್ಯಾಶ್‌ಟ್ಯಾಗ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ್ದು ಕಣ್ತಪ್ಪಿನಿಂದ. ಭಾರತ ಸರ್ಕಾರವು ನಮ್ಮಲ್ಲಿ ಹೇಳಿಲ್ಲ. ನಾವು ಹ್ಯಾಶ್​ಟ್ಯಾಗ್ ಪುನಸ್ಥಾಪಿಸಿದ್ದೇವೆ ಎಂದಿದ್ದಾರೆ.

ನಾವು ಯಾವುದೇ ರೀತಿಯ ಆದೇಶ ನೀಡಿರಲಿಲ್ಲ: ಕೇಂದ್ರ
ಹ್ಯಾಶ್​​ಟ್ಯಾಗ್ ನಿರ್ಬಂಧಿಸಿದ ವಿಷಯಕ್ಕೆ ಸಂಬಂಧಿಸಿ ಚರ್ಚೆಗಳು ಸಕ್ರಿಯವಾಗುತ್ತಿದ್ದಂತೆ ಪ್ರಕಟಣೆ ಹೊರಡಿಸಿದ ಎಲೆಕ್ಟ್ರಾನಿಕ್ಸ್ ಅಂಡ್ ಐಟಿ ಸಚಿವಾಲಯವು ಯಾವುದೇ ಹ್ಯಾಶ್​​ಟ್ಯಾಗ್​ಗಳನ್ನು ಬ್ಲಾಕ್ ಮಾಡಲು ಕೇಂದ್ರ ಸರ್ಕಾರ ಫೇಸ್ಬುಕ್ ಗೆ ನಿರ್ದೇಶಿಸಿಲ್ಲ ಎಂದಿದೆ.


ಸಾರ್ವಜನಿಕ ಭಿನ್ನಾಭಿಪ್ರಾಯವನ್ನು ನಿಗ್ರಹಿಸುವ ಭಾರತ ಸರ್ಕಾರದ ಪ್ರಯತ್ನಗಳೇ ಫೇಸ್​ಬುಕ್​ನಿಂದ ಕೆಲವು ಹ್ಯಾಶ್‌ಟ್ಯಾಗ್ ತೆಗೆಯಲು ಕಾರಣವೆಂದು ಹೇಳುವ ವಾಲ್ ಸ್ಟ್ರೀಟ್ ಜರ್ನಲ್​ನ ವರದಿ ಸತ್ಯಕ್ಕೆ ದೂರವಾದುದಾಗಿದೆ. ಹ್ಯಾಶ್‌ಟ್ಯಾಗ್ ತೆಗೆದುಹಾಕಲು ಸರ್ಕಾರ ಯಾವುದೇ ನಿರ್ದೇಶನ ನೀಡಿಲ್ಲ. ಕಣ್ತಪ್ಪಿನಿಂದ ಇದು ಸಂಭವಿಸಿದ್ದು ಎಂದು ಎಫ್‌ಬಿ ಸ್ಪಷ್ಟಪಡಿಸಿದೆ ಎಂದು ತಂತ್ರಜ್ಞಾನ ಸಚಿವಾಲಯ ಟ್ವೀಟ್ ಮಾಡಿದೆ.

ಫೇಸ್​​ಬುಕ್ ವಿರುದ್ಧ ನೆಟ್ಟಿಗರ ಕಿಡಿ
ಬೇರೆ ದೇಶಗಳಲ್ಲಿ ಸುಳ್ಳು ಹಬ್ಬಿಸುವವರನ್ನು ಫೇಸ್​​ಬುಕ್ ಬ್ಲಾಕ್ ಮಾಡುತ್ತದೆ.ಆದರೆ ಭಾರತದಲ್ಲಿ ಸತ್ಯ ಹೇಳುವವರನ್ನು ಬ್ಲಾಕ್ ಮಾಡಲಾಗುತ್ತಿದೆ. ಇದು ಫೇಸ್​ಬುಕ್​ನ ದ್ವಂದ್ವ ನಿಲುವು ಎಂದು ಹಲವಾರು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ .


ಇದನ್ನೂ ಓದಿ: Ramya Divya Spandana: ಕೊರೊನಾ ಸಾವುಗಳಿಗೆ ಮೋದಿನೆ ಕಾರಣ

Killer Coronavirus| ಭಾರತದಲ್ಲಿ ಯುದ್ಧಗಳಲ್ಲಿ ಸತ್ತವರಿಗಿಂತ ಹೆಚ್ಚಿನ ಮಂದಿ ಕೊರೊನಾದಿಂದ ಸಾವು

Published On - 2:27 pm, Thu, 29 April 21