ದೆಹಲಿ ರೇಪ್​ ಕೇಸ್​; ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿಗೆ ಫೇಸ್​​ಬುಕ್​ನಿಂದ ನೋಟಿಸ್​​

| Updated By: Lakshmi Hegde

Updated on: Aug 18, 2021 | 9:54 AM

Facebook: ಆಗಸ್ಟ್​ 1ರಂದು ದೆಹಲಿಯ 9 ವರ್ಷದ ಬಾಲಕಿ ಮೇಲೆ ಚಿತಾಗಾರದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿತ್ತು. ದಕ್ಷಿಣ ದೆಹಲಿಯಲ್ಲಿ ನಡೆದ ಈ ರೇಪ್​ ಕೇಸ್​ಗೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ದೆಹಲಿ ರೇಪ್​ ಕೇಸ್​; ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿಗೆ ಫೇಸ್​​ಬುಕ್​ನಿಂದ ನೋಟಿಸ್​​
ರಾಹುಲ್ ಗಾಂಧಿ
Follow us on

ದೆಹಲಿಯ ಚಿತಾಗಾರವೊಂದರಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅತ್ಯಾಚಾರ ಸಂತ್ರಸ್ತೆಯ ಪಾಲಕರ ಫೋಟೋವನ್ನು ಇನ್​​ಸ್ಟಾಗ್ರಾಂನಲ್ಲಿ ಹಾಕಿರುವ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿಯವರಿಗೆ ಫೇಸ್​​ಬುಕ್​ ನೋಟಿಸ್​ ನೀಡಿದೆ. ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿ ಅವರಿಗೆ ಸಮಾಧಾನ ಹೇಳಿದ್ದ ರಾಹುಲ್​ ಗಾಂಧಿ, ನಂತರ ಫೋಟೋವನ್ನು ಟ್ವಿಟರ್​, ಇನ್​ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದರು. ಆದರೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಟ್ವಿಟರ್​ ರಾಹುಲ್​ ಗಾಂಧಿಯವರ ಅಕೌಂಟ್​​ನ್ನೇ ಲಾಕ್​ ಮಾಡಿತ್ತು. ರಾಹುಲ್​ ಗಾಂಧಿ ಟ್ವಿಟರ್​ ಪೋಸ್ಟ್​ ರಿಮೂವ್​ ಆಗಿದ್ದಕ್ಕೆ ಕಾಂಗ್ರೆಸ್​ ಕಿಡಿಕಾರುತ್ತಿದೆ. ಈ ಮಧ್ಯೆ ಇನ್​ಸ್ಟಾಗ್ರಾಂನಲ್ಲಿ ಹಾಕಿರುವ ಪೋಸ್ಟ್​ ಕೂಡ ತೆಗೆದುಹಾಕುವಂತೆ ಫೇಸ್​ಬುಕ್​ ನೋಟಿಸ್​ ನೀಡಿದೆ.

ಆಗಸ್ಟ್​ 1ರಂದು ದೆಹಲಿಯ 9 ವರ್ಷದ ಬಾಲಕಿ ಮೇಲೆ ಚಿತಾಗಾರದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿತ್ತು. ದಕ್ಷಿಣ ದೆಹಲಿಯಲ್ಲಿ ನಡೆದ ಈ ರೇಪ್​ ಕೇಸ್​ಗೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅದಾದ ಎರಡು-ಮೂರು ದಿನಗಳಲ್ಲಿ ರಾಹುಲ್​ ಗಾಂಧಿ, ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿದ್ದರು. ನ್ಯಾಯದ ಹೋರಾಟದ ಹಾದಿಯಲ್ಲಿ ನಾನು ಸದಾ ನಿಮ್ಮ ಜತೆಗಿರುತ್ತೇನೆ ಎಂದು ಭರವಸೆ ನೀಡಿದ್ದರು. ಅದಾದ ಬಳಿಕ ಸೋಷಿಯಲ್​ ಮೀಡಿಯಾಗಳಲ್ಲಿ ಫೋಟೊ ಶೇರ್ ಮಾಡಿಕೊಂಡಿದ್ದರು.

ಫೇಸ್​ಬುಕ್​ನಿಂದ ನೋಟಿಸ್​
ಇದೀಗ ಇನ್​ಸ್ಟಾಗ್ರಾಂನಲ್ಲಿ ಹಾಕಿರುವ ಫೋಟೋ ತೆಗೆಯವಂತೆ ರಾಹುಲ್​ ಗಾಂಧಿಗೆ ನೋಟಿಸ್​ ನೀಡಿರುವ ಫೇಸ್​ಬುಕ್​, ಬಾಲನ್ಯಾಯ ಕಾಯ್ದೆ 2015ರ 74ನೇ ಸೆಕ್ಷನ್​ ಮತ್ತು ಪೊಸ್ಕೊ ಕಾಯ್ದೆ 2012ರ ಸೆಕ್ಷನ್​ 23 ಮತ್ತು, ಭಾರತೀಯ ದಂಡ ಸಂಹಿತೆಯ 288ನೇ ಸೆಕ್ಷನ್​​ನಡಿ, ನೀವು ಇನ್​ಸ್ಟಾಗ್ರಾಂನಲ್ಲಿ ಅತ್ಯಾಚಾರ ಸಂತ್ರಸ್ತೆಯ ಪಾಲಕರ ಫೋಟೋವನ್ನು ಹಾಕಿ, ಅವರ ಗುರುತು ಬಹಿರಂಗಪಡಿಸಿದ್ದು ಕಾನೂನು ಬಾಹಿರವಾಗಿದೆ. ಮಕ್ಕಳ ಹಕ್ಕು ರಕ್ಷಣಾ ರಾಷ್ಟ್ರೀಯ ಆಯೋಗ (NCPCR)ದ ಸೂಚನೆ ಅನ್ವಯ ನೀವು ಆ ಪೋಸ್ಟ್​​ನ್ನು ಕೂಡಲೇ ತೆಗೆದುಹಾಕಬೇಕು ಎಂದು ನೋಟಿಸ್​​ನಲ್ಲಿ ಉಲ್ಲೇಖಿಸಿದೆ.

ಇನ್​ಸ್ಟಾಗ್ರಾಂ ಕೂಡ ಫೇಸ್​ಬುಕ್​ ಮಾಲೀಕತ್ವದಲ್ಲೇ ಇದೆ. ಹಾಗಾಗಿ ಈಗ ಫೇಸ್​​ಬುಕ್​ನಿಂದಲೇ ಸೂಚನೆ ನೀಡಲಾಗಿದೆ. ರಾಹುಲ್​ ಗಾಂಧಿ ಸಂತ್ರಸ್ತೆಯ ಪಾಲಕರ ಫೋಟೋ ಬಹಿರಂಗ ಪಡಿಸಿದ್ದರ ವಿರುದ್ಧ ಮಕ್ಕಳ ಹಕ್ಕು ರಕ್ಷಣಾ ರಾಷ್ಟ್ರೀಯ ಆಯೋಗ ತಿರುಗಿಬಿದ್ದಿದೆ. ಇದು ಟ್ವಿಟರ್ ಹಾಗೂ ಫೇಸ್​ಬುಕ್​ ಎರಡೂ ಸಾಮಾಜಿಕ ಜಾಲತಾಣಗಳಿಗೆ ನೋಟಿಸ್​ ನೀಡಿ, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು.

ಇದನ್ನೂ ಓದಿ: Alia Bhatt: ಚಿತ್ರೀಕರಣದ ಸೆಟ್​ಗೆ ರಿಕ್ಷಾದಲ್ಲಿ ಬಂದ ಆಲಿಯಾ; ಅದೇನು ದೊಡ್ಡ ವಿಷಯ ಅಲ್ಲ ಎಂದು ಕುಟುಕಿದ ನೆಟ್ಟಿಗರು

ಉಪನ್ಯಾಸಕ ಹುದ್ದೆ ತೊರೆದ ವ್ಯಕ್ತಿಗೆ ಕೃಷಿಯೇ ಪ್ರಯೋಗ ಶಾಲೆ; ನೀರಿನ ಮಿತ ಬಳಕೆ ಹಾಗೂ ಸಹಜ ಕೃಷಿಯೇ ಮೂಲ ಮಂತ್ರ

(Facebook sends notice to Rahul Gandhi over revealing identity victim’s family)

Published On - 9:45 am, Wed, 18 August 21