Fact Check: ಅಹಮದಾಬಾದ್ ವಿಮಾನ ಅಪಘಾತ ಎಂದು ಮತ್ತೊಂದು ಸುಳ್ಳು ವಿಡಿಯೋ ವೈರಲ್

Ahmedabad plane crash fact check: ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ವೈರಲ್ ಆಗಿರುವ ಹೇಳಿಕೆ ಸುಳ್ಳು ಎಂದು ಕಂಡುಹಿಡಿದಿದೆ. ವಾಸ್ತವವಾಗಿ ವೈರಲ್ ಆಗುತ್ತಿರುವ ವಿಡಿಯೋ ಯಾವುದೇ ನೈಜ ಘಟನೆಯದ್ದಲ್ಲ, ಬದಲಾಗಿ ಇದು ಗೇಮಿಂಗ್ ದೃಶ್ಯಾವಳಿಯಾಗಿದೆ. ಇದನ್ನು ನಿಜವೆಂದು ಭಾವಿಸಿ ಹಂಚಿಕೊಳ್ಳಲಾಗುತ್ತಿದೆ.

Fact Check: ಅಹಮದಾಬಾದ್ ವಿಮಾನ ಅಪಘಾತ ಎಂದು ಮತ್ತೊಂದು ಸುಳ್ಳು ವಿಡಿಯೋ ವೈರಲ್
Ahmedabad Plane Crash Fact Check (5)

Updated on: Jun 18, 2025 | 6:19 PM

ಬೆಂಗಳೂರು (ಜೂ. 18): ಗುಜರಾತ್‌ನ ಅಹಮದಾಬಾದ್‌ನಲ್ಲಿ ಜೂನ್ 12 ರಂದು ನಡೆದ ಏರ್ ಇಂಡಿಯಾ (Air India) ಫ್ಲೈಟ್ AI 171 ಅಪಘಾತದಲ್ಲಿ, ವಿಮಾನದಲ್ಲಿದ್ದ 242 ಪ್ರಯಾಣಿಕರಲ್ಲಿ (ಸಿಬ್ಬಂದಿ ಸೇರಿದಂತೆ) 241 ಜನರು ಸಾವನ್ನಪ್ಪಿದರು. ಒಬ್ಬ ಪ್ರಯಾಣಿಕ ಮಾತ್ರ ಬದುಕುಳಿದಿದ್ದಾನೆ. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ಅನೇಕ ವಿಡಿಯೋಗಳನ್ನು ವೈರಲ್ ಆಗುತ್ತಿದೆ. ಅಂತಹ ಒಂದು ವಿಡಿಯೋದಲ್ಲಿ ವಿಮಾನಕ್ಕೆ ಬೆಂಕಿ ತಗುಲಿರುವುದನ್ನು ತೋರಿಸಲಾಗಿದೆ. ನಂತರ, ವಿಮಾನ ಒಂದು ಬಿಲ್ಡಿಂಗ್​ಗೆ ಡಿಕ್ಕಿ ಹೊಡೆದು ಕೆಳಗೆ ಬೀಳುತ್ತದೆ. ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿನ ಬಳಕೆದಾರರು ಈ ವಿಡಿಯೋವನ್ನು ನಿಜವೆಂದು ಭಾವಿಸಿ ಹಂಚಿಕೊಳ್ಳುತ್ತಿದ್ದಾರೆ ಮತ್ತು ಈ ವಿಡಿಯೋ ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತದ ವಿಡಿಯೋ ಎಂದು ಹೇಳಿಕೊಳ್ಳುತ್ತಿದ್ದಾರೆ.

ವೈರಲ್ ಆಗುತ್ತಿರುವುದೇನು?

ಇದನ್ನೂ ಓದಿ
ಇದು ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಶವಗಳೇ?
ಅಹಮದಾಬಾದ್ ವಿಮಾನ ಅಪಘಾತಕ್ಕೆ ಸ್ವಲ್ಪ ಮುಂಚಿನ ವಿಡಿಯೋ?
ಮೊಬೈಲ್ ಟವರ್ ಅಳವಡಿಸುವಂತೆ TRAI ನಿಂದ ನಿಮಗೆ ಸಂದೇಶ ಬರುತ್ತಿದೆಯೇ?
ಬಿರುಗಾಳಿ ಎಬ್ಬಿಸಿದ ಜಿಯೋ: 1000 ರೂ.ಗಿಂತ ಕಡಿಮೆ ಬೆಲೆಗೆ 336 ದಿನಗಳ ಯೋಜನೆ

ಇನ್​ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, “ಗುಜರಾತ್‌ನ ಅಹಮದಾಬಾದ್ ನಗರದಿಂದ ಲಂಡನ್‌ಗೆ ಹೋಗುತ್ತಿದ್ದ ವಿಮಾನ ಅಪಘಾತಕ್ಕೀಡಾಯಿತು, 242 ಜನರು ಸಾವನ್ನಪ್ಪಿದರು. ಇದು ಗುಜರಾತ್​ಗೆ ಬ್ಲ್ಯಾಕ್ ಡೇ” ಎಂದು ಬರೆದಿದ್ದಾರೆ.

 

ಇದು ಗೇಮಿಂಗ್ ವಿಡಿಯೋ:

ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ವೈರಲ್ ಆಗಿರುವ ಹೇಳಿಕೆ ಸುಳ್ಳು ಎಂದು ಕಂಡುಹಿಡಿದಿದೆ. ವಾಸ್ತವವಾಗಿ ವೈರಲ್ ಆಗುತ್ತಿರುವ ವಿಡಿಯೋ ಯಾವುದೇ ನೈಜ ಘಟನೆಯದ್ದಲ್ಲ, ಬದಲಾಗಿ ಇದು ಗೇಮಿಂಗ್ ದೃಶ್ಯಾವಳಿಯಾಗಿದೆ. ಇದನ್ನು ನಿಜವೆಂದು ಭಾವಿಸಿ ಹಂಚಿಕೊಳ್ಳಲಾಗುತ್ತಿದೆ.

ತನಿಖೆಯನ್ನು ಪ್ರಾರಂಭಿಸುವ ಮೊದಲು, ನಾವು ವಿಡಿಯೋವನ್ನು ಎಚ್ಚರಿಕೆಯಿಂದ ನೋಡಿದ್ದೇವೆ. ವಿಡಿಯೋ ಮೊದಲ ನೋಟದಲ್ಲಿ ಇದು ನಿಜವಾಗಿರುವಂತೆ ಕಾಣುತ್ತಿಲ್ಲ. ಸುತ್ತಮುತ್ತಲಿನ ಪ್ರದೇಶ ಮತ್ತು ವಿಡಿಯೋದಲ್ಲಿರುವ ಮನೆಯನ್ನು ನೋಡಿದಾಗ, ಅದು ನಕಲಿ ಎಂಬುದು ಸ್ಪಷ್ಟವಾಗುತ್ತದೆ. ವಿಮಾನ ಕೆಳಗೆ ಬಿದ್ದಾಗಲೂ ಬೆಂಕಿ ಹರಡಲಿಲ್ಲ ಮತ್ತು ಯಾವುದೇ ದೊಡ್ಡ ಅವಘಡ ಸಂಭವಿಸಿಲ್ಲ. ವೈರಲ್ ವಿಡಿಯೋದಲ್ಲಿ ಕಂಡುಬರುವ ವಿಮಾನದ ಮೇಲೆ ಕ್ವಾಂಟಾಸ್ ಎಂದು ಬರೆಯಲಾಗಿದೆ, ಆದರೆ ಜೂನ್ 13 ರಂದು ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಯಿತು.

Fact Check: ಇದು ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಶವಗಳೇ?, ಸತ್ಯ ಇಲ್ಲಿ ತಿಳಿಯಿರಿ

ನಮ್ಮ ತನಿಖೆಯನ್ನು ಮುಂದುವರೆಸುತ್ತಾ, ನಾವು ವಿಡಿಯೋದ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಂಡು ಗೂಗಲ್ ಲೆನ್ಸ್ ಮೂಲಕ ಅವುಗಳನ್ನು ಹುಡುಕಿದೆವು. ಈ ಸಂದರ್ಭ @hamzagamersz ಎಂಬ ಯೂಟ್ಯೂಬ್ ಚಾನಲ್‌ನಲ್ಲಿ ನಾವು ಅದೇ ವಿಡಿಯೋವನ್ನು ಕಂಡುಕೊಂಡಿದ್ದೇವೆ. ಆಗಸ್ಟ್ 25, 2024 ರಂದು ಅಪ್‌ಲೋಡ್ ಮಾಡಲಾದ ವಿಡಿಯೋದ ವಿವರಣೆಯಲ್ಲಿ, ‘‘Qantas 747 ವಿಮಾನವು ಮನೆಗೆ ಡಿಕ್ಕಿ ಹೊಡೆದಿದೆ #qantas #crashlanding #foryou #airport #gta6 #gta5clips’’ ಎಂದು ಬರೆಯಲಾಗಿದೆ. ವಿಡಿಯೋದಲ್ಲಿ ನೀಡಲಾದ ಹ್ಯಾಶ್‌ಟ್ಯಾಗ್‌ಗಳು ಇದು GTA ಆಟದಿಂದ ಬಂದಿದೆ ಎಂದು ಸೂಚಿಸುತ್ತವೆ.

ಹುಡುಕಾಟದ ಸಮಯದಲ್ಲಿ, @GTAsetup ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಕೂಡ ಅಪ್‌ಲೋಡ್ ಮಾಡಲಾದ ಅದೇ ವೈರಲ್ ವಿಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಆಗಸ್ಟ್ 11, 2024 ರಂದು ಅಪ್‌ಲೋಡ್ ಮಾಡಲಾದ ವಿಡಿಯೋದಲ್ಲಿ, ಅದು GTA ಆಟದದ್ದಾಗಿದೆ ಎಂದು ಹೇಳಲಾಗಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಈ ಹೇಳಿಕೆ ಸುಳ್ಳು ಎಂದು ಕಂಡುಕೊಂಡಿದ್ದೇವೆ. ಅಹಮದಾಬಾದ್ ವಿಮಾನ ಅಪಘಾತ ಎಂದು ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋ ನಿಜವಾದ ಅಪಘಾತದ್ದಲ್ಲ, ಬದಲಾಗಿ ಗೇಮಿಂಗ್ ದೃಶ್ಯಾವಳಿಯದ್ದಾಗಿದೆ.

ಬದುಕುಳಿದಿದ್ದ ವ್ಯಕ್ತಿ ಆಸ್ಪತ್ರೆಯಿಂದ ಬಿಡುಗಡೆ:

ಏರ್ ಇಂಡಿಯಾ ವಿಮಾನ ದುರಂತದಲ್ಲಿ ಬದುಕುಳಿದಿದ್ದ ವ್ಯಕ್ತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅವರ ಸಹೋದರನ ಅಂತ್ಯಸಂಸ್ಕಾರ ನೆರವೇರಿಸಬೇಕಿರುವ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ. 242 ಮಂದಿ ಪೈಕಿ ಕೇವಲ ಒಬ್ಬರು ಮಾತ್ರ ಬದುಕುಳಿದಿದ್ದರು ಅವರೇ ರಮೇಶ್​. ಆದರೆ ದುರಾದೃಷ್ಟವಶಾತ್ ಜತೆಯಲ್ಲಿದ್ದ ಸಹೋದರ ಪ್ರಾಣಬಿಟ್ಟಿದ್ದರು. ಅವರ ಅಂತ್ಯಕ್ರಿಯೆ ನಡೆಸಬೇಕಾದ ಕಾರಣ ಹೋಗುತ್ತಿದ್ದೇನೆ ಎಂದು ರಮೇಶ್​ ತಿಳಿಸಿದ್ದಾರೆ.

ವಿಮಾನದಲ್ಲಿ ರಮೇಶ್ ತುರ್ತು ನಿರ್ಗಮನ ದ್ವಾರದ ಪಕ್ಕದಲ್ಲಿ 11A ನಲ್ಲಿ ರಮೇಶ್ ಕುಳಿತಿದ್ದರು. ಅಪಘಾತದ ಸಂದರ್ಭದಲ್ಲಿ ಅವರ ಸೀಟು ಬೇರ್ಪಟ್ಟು ದೂರ ಹಾರಿತ್ತು. ಹೀಗಾಗಿ ಬೆಂಕಿಯಿಂದ ಪಾರಾಗಿದ್ದರು. ಸೀಟಿನ ಸಮೇತ ಕೆಳಗೆ ಹಾರಿದ್ದರು. ವಿಮಾನ ತುಂಡಾಗಿ ಸೀಟು ಕೂಡ ಕಳಚಿಬಂದಿತ್ತು ಎಂದು ರಮೇಶ್​ ತಿಳಿಸಿದ್ದರು.

ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ