
ನವದೆಹಲಿ, ಜುಲೈ 24: ಜಗದೀಪ್ ಧನ್ಖರ್(Jagdeep Dhankhar) ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅವರ ಕಚೇರಿಗೆ ಬೀಗ ಹಾಕಲಾಗಿದೆ ಎನ್ನುವ ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಪಿಐಬಿ ಇದರ ಫ್ಯಾಕ್ಟ್ಚೆಕ್ ನಡೆಸಿದ್ದು, ಈ ಸುದ್ದಿ ಸುಳ್ಳು ಎಂಬುದಾಗಿ ತಿಳಿಸಿದೆ. ಉಪರಾಷ್ಟ್ರಪತಿ ಕಚೇರಿ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪಿಐಬಿ ಹೇಳಿದ್ದೇನು?
ಪಿಐಬಿಯು ಹಂಚಿಕೊಂಡಿರುವ ಮಾಹಿತಿಯಲ್ಲಿ ಸರ್ಕಾರವು ಉಪ ರಾಷ್ಟ್ರಪತಿ ಕಚೇರಿಗೆ ಬೀಗ ಹಾಕಿದೆ, ಉಪ ರಾಷ್ಟ್ರಪತಿಗೆ ತಮ್ಮ ಅಧಿಕೃತ ನಿವಾಸವನ್ನು ತಕ್ಷಣ ಖಾಲಿ ಮಾಡುವಂತೆ ಕೇಳಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಇದೆಲ್ಲಾ ಸುಳ್ಳು ಎಂದು ಹೇಳಿದೆ.
ವ್ಯವಹಾರ ಸಲಹಾ ಸಮಿತಿಯ ಸಭೆಗಳು ಸೇರಿದಂತೆ ಪ್ರಮುಖ ಸಭೆಗಳು ಅದೇ ದಿನ ನಿಗದಿಯಂತೆ ನಡೆದವು. ಉಪ ರಾಷ್ಟ್ರಪತಿ ಕಚೇರಿಯಲ್ಲಿ ಎಂದಿನಂತೆ ವ್ಯವಹಾರಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಉಪ ರಾಷ್ಟ್ರಪತಿ ಕಚೇರಿಗೆ ಬೀಗ ಹಾಕಲಾಗಿದೆ ಹಾಗೆಯೇ ಅವರ ಅಧಿಕೃತ ನಿವಾಸವನ್ನು ಖಾಲಿ ಮಾಡುವಂತೆ ಕೇಳಲಾಗಿದೆ ಎನ್ನುವ ಅಂತೆ, ಕಂತೆ ಹರಿದಾಡಿತ್ತು.
ಮತ್ತಷ್ಟು ಓದಿ: ಜಗದೀಪ್ ದನ್ಖರ್ ಅವರಂತೆಯೇ ಅಧಿಕಾರಾವಧಿ ಪೂರ್ಣಗೊಳಿಸದೆ ರಾಜೀನಾಮೆ ನೀಡಿದ್ದ ಇನ್ನಿಬ್ಬರು ಉಪರಾಷ್ಟ್ರಪತಿಗಳು ಯಾರು?
ಭಾರತ ಸರ್ಕಾರದ ನೋಡಲ್ ಏಜೆನ್ಸಿಯಾದ ಪಿಐಬಿ ಈ ಹೇಳಿಕೆಯನ್ನು ಪರಿಶೀಲಿಸಿದೆ. ಹಾಗೆಯೇ ಇದೆಲ್ಲಾ ಸುಳ್ಳು ಮಾಹಿತಿ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಹೇಳಿದೆ.
ಜಗದೀಪ್ ಧನ್ಖರ್ ಜುಲೈ 21ರಂದು ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆರೋಗ್ಯಕ್ಕೆ ಸಂಬಂಧಿಸಿದ ಕಾರಣವನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದ್ದರು. ಆರ್ಟಿಕಲ್ 67 (ಎ) ಅನ್ನು ಉಲ್ಲೇಖಿಸಿ ಅವರು ಈ ರಾಜೀನಾಮೆಯನ್ನು ನೀಡಿದ್ದಾರೆ. ತಮ್ಮ ರಾಜೀನಾಮೆಯಲ್ಲಿ, ಅವರು ಪ್ರಧಾನಿ ಮೋದಿ ಮತ್ತು ಇತರ ಸಂಸದರಿಗೆ ಧನ್ಯವಾದ ಅರ್ಪಿಸಿದ್ದರು. ಜಗದೀಪ್ ಧನ್ಖರ್ ಸಂಸತ್ತಿನ ಆವರಣದ ಬಳಿಯ ಚರ್ಚ್ ರಸ್ತೆಯಲ್ಲಿರುವ ಉಪರಾಷ್ಟ್ರಪತಿ ಎನ್ಕ್ಲೇವ್ನಲ್ಲಿ ವಾಸಿಸುತ್ತಿದ್ದಾರೆ. ಕಳೆದ ವರ್ಷವಷ್ಟೇ ಈ ಬಂಗಲೆಗೆ ಸ್ಥಳಾಂತರಗೊಂಡಿದ್ದರು.
ಪಿಐಬಿ ಫ್ಯಾಕ್ಟ್ ಚೆಕ್
It is being widely claimed on social media that Vice President’s official residence has been sealed and former VP has been asked to vacate his residence immediately #PIBFactCheck
❌ These claims are #Fake.
✅ Don’t fall for misinformation. Always verify news from official… pic.twitter.com/3jIDDaiu7A
— PIB Fact Check (@PIBFactCheck) July 23, 2025
ಅನಾರೋಗ್ಯದ ಕಾರಣ ನೀಡಿ ರಾಜೀನಾಮೆ
ಸೋಮವಾರ, ಧನ್ಖರ್ ಅವರು ಅನಾರೋಗ್ಯ ಕಾರಣಗಳನ್ನು ನೀಡಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮಂಗಳವಾರ ಅವರ ರಾಜೀನಾಮೆಯನ್ನು ಅಂಗೀಕರಿಸಲಾಯಿತು. ಧನ್ಖರ್ ರಾಜೀನಾಮೆಯ ನಂತರ, ದೇಶದಲ್ಲಿ ರಾಜಕೀಯ ಪ್ರಕ್ಷುಬ್ಧತೆ ಉಂಟಾಗಿದೆ. ಹೊಸ ಉಪ ರಾಷ್ಟ್ರಪತಿ ಯಾರು ಎಂಬುದರ ಕುರಿತು ಹಲವು ಊಹಾಪೋಹಗಳು ಕೇಳಿಬರುತ್ತಿವೆ.
ಸರ್ಕಾರಿ ವಸತಿ ಸೌಲಭ್ಯ
ಮಾಜಿ ಉಪರಾಷ್ಟ್ರಪತಿಗೆ ಜೀವಮಾನದ ಸರ್ಕಾರಿ ವಸತಿ ಸೌಲಭ್ಯ ಸಿಗುತ್ತದೆ. ಪ್ರಸ್ತುತ ಅವರ ವಸ್ತುಗಳನ್ನು ಪ್ಯಾಕ್ ಮಾಡಲಾಗುತ್ತಿದೆ ಮತ್ತು ಹೊಸ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ನಿಯಮಗಳ ಪ್ರಕಾರ, ಮಾಜಿ ಉಪ ರಾಷ್ಟ್ರಪತಿಗಳು ಸರ್ಕಾರಿ ಬಂಗಲೆಗೆ ಅರ್ಹರಾಗಿದ್ದಾರೆ. ಧನ್ಖರ್ ಇತ್ತೀಚೆಗೆ ಸ್ಥಳಾಂತರಗೊಂಡ ವಿಪಿ ಎನ್‌ಕ್ಲೇವ್ ಬಂಗಲೆಯನ್ನು ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯಡಿಯಲ್ಲಿ ನಿರ್ಮಿಸಲಾಗಿದೆ.
ಈ ಬಂಗಲೆಯನ್ನು ಸಾಮಾನ್ಯವಾಗಿ ಹಿರಿಯ ಕೇಂದ್ರ ಸಚಿವರು ಅಥವಾ ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರಿಗೆ ನೀಡಲಾಗುತ್ತದೆ.ದೇಶದಲ್ಲಿ ರಾಜಕೀಯ ಪ್ರಕ್ಷುಬ್ಧತೆ ಉಂಟಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ