AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗದೀಪ್ ಧನಖರ್ ರಾಜೀನಾಮೆ ಬೆನ್ನಲ್ಲೇ ಉಪರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ ಶುರು ಮಾಡಿದ ಚುನಾವಣಾ ಆಯೋಗ

ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನಖರ್ ರಾಜೀನಾಮೆ ನೀಡಿದ್ದಾರೆ. ಚುನಾವಣಾ ಆಯೋಗವು ಉಪರಾಷ್ಟ್ರಪತಿ ಚುನಾವಣೆ ನಡೆಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ವೈದ್ಯಕೀಯ ಕಾರಣಗಳನ್ನು ಉಲ್ಲೇಖಿಸಿ ಜಗದೀಪ್ ಧನಖರ್ ಸೋಮವಾರ ಸಂಜೆ ತಮ್ಮ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆಯನ್ನು ಕಳುಹಿಸಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಜಗದೀಪ್ ಧನಖರ್ ರಾಜೀನಾಮೆ ಬೆನ್ನಲ್ಲೇ ಉಪರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ ಶುರು ಮಾಡಿದ ಚುನಾವಣಾ ಆಯೋಗ
Election Commission
ಸುಷ್ಮಾ ಚಕ್ರೆ
|

Updated on: Jul 23, 2025 | 4:38 PM

Share

ನವದೆಹಲಿ, ಜುಲೈ 23: ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನಖರ್ (Jagdeep Dhankhar) ರಾಜೀನಾಮೆ ನೀಡಿದ 2 ದಿನಗಳ ನಂತರ ಭಾರತೀಯ ಚುನಾವಣಾ ಆಯೋಗ (ಇಸಿಐ) ಇಂದು ಉಪರಾಷ್ಟ್ರಪತಿ ಚುನಾವಣೆ (Vice President Election) ನಡೆಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಮೂಲಗಳ ಪ್ರಕಾರ, ಭಾರತ ಚುನಾವಣಾ ಆಯೋಗವು ಮುಂದಿನ 48ರಿಂದ 72 ಗಂಟೆಗಳಲ್ಲಿ ಉಪರಾಷ್ಟ್ರಪತಿ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಲಿದೆ. ಆಗಸ್ಟ್ ಕೊನೆಯ ವಾರದೊಳಗೆ ಭಾರತಕ್ಕೆ ನೂತನ ಉಪರಾಷ್ಟ್ರಪತಿ ಆಯ್ಕೆಯಾಗುವ ನಿರೀಕ್ಷೆಯಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ನಿನ್ನೆ ಸಂಜೆ ಔಪಚಾರಿಕವಾಗಿ ಜಗದೀಪ್ ಧನಖರ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಜಗದೀಪ್ ಅವರ ಅಧಿಕಾರಾವಧಿ ಮುಗಿಯಲು ಇನ್ನೂ 2 ವರ್ಷಗಳು ಬಾಕಿ ಇತ್ತು.

ಸಂವಿಧಾನದ 68(2)ನೇ ವಿಧಿಯ ಪ್ರಕಾರ, ರಾಜೀನಾಮೆಯ ಸಂದರ್ಭದಲ್ಲಿ ಉಪರಾಷ್ಟ್ರಪತಿ ಚುನಾವಣೆಯನ್ನು ನಡೆಸಲು ಯಾವುದೇ ನಿಗದಿತ ಸಮಯ ಇರುವುದಿಲ್ಲ. ಚುನಾವಣೆಯನ್ನು “ಸಾಧ್ಯವಾದಷ್ಟು ಬೇಗ” ನಡೆಸಬೇಕೆಂದು ನಿಬಂಧನೆಯು ಆದೇಶಿಸುತ್ತದೆ. ಚುನಾವಣೆಯ ಅಗತ್ಯವನ್ನು ಸೂಚಿಸುವ ಔಪಚಾರಿಕ ಅಧಿಸೂಚನೆಯನ್ನು ಮುಂದಿನ ಎರಡು-ಮೂರು ದಿನಗಳಲ್ಲಿ ಹೊರಡಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಉಪರಾಷ್ಟ್ರಪತಿ ಜಗದೀಪ್ ಧನಖರ್ ರಾಜೀನಾಮೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಗೀಕಾರ

1952ರ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ಕಾಯ್ದೆಯ ಪ್ರಕಾರ, ಅಧಿಸೂಚನೆ ಹೊರಡಿಸಿದ ನಂತರ ಚುನಾವಣಾ ಆಯೋಗವು ನಾಮಪತ್ರಗಳ ಪರಿಶೀಲನೆ, ಹಿಂಪಡೆಯುವಿಕೆ, ಮತದಾನ ಮತ್ತು ಎಣಿಕೆ ಸೇರಿದಂತೆ ಎಲ್ಲ ಪ್ರಕ್ರಿಯೆಯನ್ನು ಗರಿಷ್ಠ 32 ದಿನಗಳಲ್ಲಿ ಪೂರ್ಣಗೊಳಿಸಬೇಕು. ಅದರಂತೆ, ಭಾರತದ ಮುಂದಿನ ಉಪರಾಷ್ಟ್ರಪತಿಗಳು ಆಗಸ್ಟ್ 2025ರ ಅಂತ್ಯದ ವೇಳೆಗೆ ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ. ನಾಮನಿರ್ದೇಶನದ 14 ದಿನಗಳ ಒಳಗೆ ನಾಮಪತ್ರಗಳನ್ನು ಸಲ್ಲಿಸಬೇಕು.

ಉಪರಾಷ್ಟ್ರಪತಿ ಚುನಾವಣೆಗೆ ಚುನಾವಣಾ ಅಧಿಕಾರಿಗಳನ್ನು ಸಹ ಅಂತಿಮಗೊಳಿಸುತ್ತಿರುವುದಾಗಿ ಚುನಾವಣಾ ಸಮಿತಿ ತಿಳಿಸಿದೆ. “ಭಾರತೀಯ ಚುನಾವಣಾ ಆಯೋಗವು 2025 ರ ಉಪರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದ ಸಿದ್ಧತೆಗಳನ್ನು ಈಗಾಗಲೇ ಪ್ರಾರಂಭಿಸಿದೆ. ಪೂರ್ವಸಿದ್ಧತಾ ಚಟುವಟಿಕೆಗಳು ಪೂರ್ಣಗೊಂಡ ನಂತರ, ಭಾರತದ ಉಪರಾಷ್ಟ್ರಪತಿ ಕಚೇರಿಗೆ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಲಾಗುವುದು” ಎಂದು ಚುನಾವಣಾ ಆಯೋಗ ತಿಳಿಸಿದೆ.

ಇದನ್ನೂ ಓದಿ: Explainer: ಜಗದೀಪ್ ಧನ್ಖರ್ ರಾಜೀನಾಮೆ, ಭಾರತದಲ್ಲಿ ಉಪ ರಾಷ್ಟ್ರಪತಿ ಆಯ್ಕೆ ಹೇಗೆ? ಪ್ರಕ್ರಿಯೆ ಏನು?

ಮುಂದಿನ ಉಪರಾಷ್ಟ್ರಪತಿಗಳ ಚುನಾವಣೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಎರಡೂ ಸದಸ್ಯರು ಉಪರಾಷ್ಟ್ರಪತಿಗಳನ್ನು ಆಯ್ಕೆ ಮಾಡುತ್ತಾರೆ. ಮೇಲ್ಮನೆಯ ನಾಮನಿರ್ದೇಶಿತ ಸದಸ್ಯರು ಸಹ ಮತ ಚಲಾಯಿಸಲು ಅರ್ಹರಾಗಿರುತ್ತಾರೆ. ಪ್ರಸ್ತುತ, NDA ಲೋಕಸಭೆಯಲ್ಲಿ 293 ಸದಸ್ಯರನ್ನು ಹೊಂದಿದ್ದರೆ, ರಾಜ್ಯಸಭೆಯಲ್ಲಿ 133 ಸದಸ್ಯರನ್ನು ಹೊಂದಿದೆ. ಒಟ್ಟಾರೆ ಶಾಸಕರ ಸಂಖ್ಯೆ 426. NDA ಬೆಂಬಲಿತ ಅಭ್ಯರ್ಥಿಯನ್ನು ಉಪರಾಷ್ಟ್ರಗಳ ಆಯ್ಕೆ ಮಾಡಲು ಈ ಸಂಖ್ಯೆ ಸಾಕು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ