ಶತಮಾನಗಳಿಂದ ದೇಣಿಗೆಯಾಗಿ ನೀಡಿದ ಕೋಟ್ಯಂತರ ರೂಪಾಯಿ ಮೌಲ್ಯದ ವಕ್ಫ್ ಆಸ್ತಿಯನ್ನು ನಿಯಂತ್ರಿಸುವ ದಶಕಗಳ ಹಿಂದಿನ ಕಾನೂನಿಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮಸೂದೆಯು ಅಸ್ತಿತ್ವದಲ್ಲಿರುವ ವಕ್ಫ್ ಮಸೂದೆಗೆ 40 ಕ್ಕೂ ಹೆಚ್ಚು ತಿದ್ದುಪಡಿಗಳನ್ನು ಪರಿಚಯಿಸಲು ಪ್ರಸ್ತಾಪಿಸುತ್ತದೆ. ಈ ಆಸ್ತಿಗಳನ್ನು ಭಾರತದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ವಕ್ಫ್ ಮಂಡಳಿಗಳು ನಿರ್ವಹಿಸುತ್ತವೆ. ಅವುಗಳನ್ನು ಶಿಕ್ಷಣ, ಸಮಾಜ ಕಲ್ಯಾಣ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಬಳಸಲಾಗುತ್ತದೆ. 2025ರ ಫೆಬ್ರವರಿಯಲ್ಲಿ ಬಜೆಟ್ ಅಧಿವೇಶನದಲ್ಲಿ ಮಂಡಿಸುವ ನಿರೀಕ್ಷೆಯಿದೆ.
ಈ ವಿವಾದದ ನಡುವೆಯೇ ಆಂಧ್ರಪ್ರದೇಶ ಸರ್ಕಾರ ರಾಜ್ಯದಲ್ಲಿ ವಕ್ಫ್ ಬೋರ್ಡ್ ಅನ್ನು ರದ್ದುಗೊಳಿಸಿದ ಸುದ್ದಿ ವೈರಲ್ ಆಗುತ್ತಿದೆ. ಕೆಲ ಫೇಸ್ಬುಕ್ ಬಳಕೆದಾರರು ಈ ಕುರಿತು ಪೋಸ್ಟ್ ಹಂಚಿಕೊಳ್ಳುತ್ತಿದ್ದು, ‘‘ಆಂಧ್ರಪ್ರದೇಶ ವಕ್ಫ್ ಬೋರ್ಡ್ ರದ್ದು ಮಾಡಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂತಹ ದಿಟ್ಟ ನಿರ್ಧಾರ ಕೈಗೊಂಡ ನಾಯ್ಡು ಪವನ್ ಕಲ್ಯಾಣ್ ನೇತೃತ್ವದ ಸರ್ಕಾರಕ್ಕೆ ಅಭಿನಂದನೆಗಳು. ಎಲ್ಲಾ ರಾಜ್ಯಗಳು ಸಹ ಇದನ್ನೇ ಅನುಸರಿಸಿ waqf board ನಾಮಾವಶೇಷ ಮಾಡಲಿ.’’ ಎಂದು ಶೇರ್ ಮಾಡುತ್ತಿದ್ದಾರೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ವೈರಲ್ ಆದ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ ಎಂಬುದು ಕಂಡುಬಂದಿದೆ. ಸಮ್ಮಿಶ್ರ ಸರ್ಕಾರ ಹೊಸ ರಾಜ್ಯ ವಕ್ಫ್ ಮಂಡಳಿಯನ್ನು ಸ್ಥಾಪಿಸುತ್ತಿದೆಯೇ ಹೊರತು ಇದನ್ನು ರದ್ದುಪಡಿಸುತ್ತಿಲ್ಲ.
ನಾವು ಸಂಬಂಧಿತ ಪ್ರಮುಖ ಕೀವರ್ಡ್ಗಳೊಂದಿಗೆ ಗೂಗಲ್ನಲ್ಲಿ ಹುಡುಕಿದಾಗ, ಆಂಧ್ರ ಪ್ರದೇಶ ಸರ್ಕಾರವು ಮಾರ್ಚ್ 2023 ರಿಂದ ಪ್ರಸ್ತುತ ರಾಜ್ಯ ವಕ್ಫ್ ಬೋರ್ಡ್ ಅನ್ನು ರದ್ದುಗೊಳಿಸುವ ಆದೇಶವನ್ನು ಹೊರಡಿಸಿದೆ ಎಂದು ನಮಗೆ ತಿಳಿಯಿತು. ಆದರೆ ಮಂಡಳಿಯ ವ್ಯವಹಾರಗಳು ಸರಿಯಾಗಿ ನಡೆದಿಲ್ಲ. ಸುನ್ನಿ ಮತ್ತು ಶಿಯಾ ಹಿರಿಯರಿಂದ ಸೂಕ್ತ ಪ್ರಾತಿನಿಧ್ಯದ ಕೊರತೆ, ಮಾಜಿ ಸಂಸದರನ್ನು ಮಂಡಳಿಗೆ ಸೇರಿಸಿಕೊಳ್ಳದಿರುವುದು ಮತ್ತು ಇತರ ಕಾರಣಗಳಿಂದ ಹಳೆಯ ಮಂಡಳಿಯನ್ನು ವಿಸರ್ಜಿಸಲಾಗಿದೆ.
ಟಿಡಿಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ವಕ್ಫ್ ಬೋರ್ಡ್ ಸ್ಥಾಪಿಸಲು ವೈಎಸ್ಆರ್ ಕಾಂಗ್ರೆಸ್ ಪಕ್ಷ ಹೊರಡಿಸಿದ್ದ ಆದೇಶವನ್ನು ಹಿಂಪಡೆದು ಆದೇಶ ಹೊರಡಿಸಿದೆ. ಈ ಮಂಡಳಿಯನ್ನು ಹಿಂದಿನ ಸರ್ಕಾರವು ಅಕ್ಟೋಬರ್ 2023 ರಲ್ಲಿ 11 ಸದಸ್ಯರೊಂದಿಗೆ ರಚಿಸಿತು. ಅಕ್ಟೋಬರ್ 21, 2023 ರ GOM ಸಂಖ್ಯೆ 47 ರ ಕಾನೂನುಬದ್ಧತೆಯನ್ನು ಪ್ರಶ್ನಿಸುವ ಆರೋಪಗಳನ್ನು ಪರಿಶೀಲಿಸಿದ ನಂತರ ವಕ್ಫ್ ಬೋರ್ಡ್ ಅನ್ನು ವಿಸರ್ಜಿಸಲು ಸರ್ಕಾರ ನಿರ್ಧಾರವನ್ನು ತೆಗೆದುಕೊಂಡಿದೆ.
ಈ ಕುರಿತು ಟಿವಿ9 ಕನ್ನಡ ಮತ್ತು ಟಿವಿ9 ಬಾರತ್ ವರ್ಚ್ ಸುದ್ದಿ ಪ್ರಕಟಿಸಿರುವುದನ್ನು ನೀವು ಇಲ್ಲಿ, ಇಲ್ಲಿ ಓದಬಹುದು.
ವಕ್ಫ್ ಬೋರ್ಡನ್ನೇ ವಜಾಗೊಳಿಸಿದ ಆಂಧ್ರಪ್ರದೇಶ ಸರ್ಕಾರ
आंध्र प्रदेश: नायडू सरकार का बड़ा फैसला, जगन सरकार में गठित वक्फ बोर्ड को किया भंग
ಜೊತೆಗೆ ವಕ್ಫ್ ಮಂಡಳಿಯನ್ನು ಶಾಶ್ವತವಾಗಿ ವಿಸರ್ಜಿಸಲಾಗಿದೆ ಎಂಬ ಆರೋಪವನ್ನು ಆಂಧ್ರಪ್ರದೇಶ ಫ್ಯಾಕ್ಟ್ ಚೆಕ್ ವಿಭಾಗ ತಳ್ಳಿಹಾಕಿದೆ. ಈ ಕುರಿತು ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ‘‘ಆಂಧ್ರ ಪ್ರದೇಶ ವಕ್ಫ್ ಬೋರ್ಡ್ ಮಾರ್ಚ್ 2023 ರಿಂದ ಕಾರ್ಯನಿರ್ವಹಿಸುವುದಿಲ್ಲ. ಹಲವಾರು ಪ್ರಮುಖ ಸಮಸ್ಯೆಗಳಿಂದಾಗಿ G.O Ms. ನಂ. 47 ಹಿಂಪಡೆಯುವುದು ಕಡ್ಡಾಯವಾಯಿತು. ಅದರ ಸಿಂಧುತ್ವವನ್ನು ಪ್ರಶ್ನಿಸಿ 13 ರಿಟ್ ಅರ್ಜಿಗಳು, ಸುನ್ನಿ ಮತ್ತು ಶಿಯಾ ಧಾರ್ಮಿಕ ಮುಖಂಡರ ಪ್ರಾತಿನಿಧ್ಯದ ಕೊರತೆ, ಮಾಜಿ ಸಂಸದರನ್ನು ಸೇರ್ಪಡೆಗೊಳಿಸದಿರುವುದು, ಪಾರದರ್ಶಕ ಮಾನದಂಡಗಳಿಲ್ಲದ ಕಿರಿಯ ವಕೀಲರ ನೇಮಕಾತಿ, ಕೆಲವು ಸದಸ್ಯರ ಅರ್ಹತೆಗೆ ಸಂಬಂಧಿಸಿದ ಪ್ರಶ್ನೆಗಳು, ಈ ನ್ಯೂನತೆಗಳನ್ನು ಪರಿಹರಿಸಲು GoAP ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಆದಷ್ಟು ಬೇಗ ಹೊಸ ವಕ್ಫ್ ಮಂಡಳಿಯನ್ನು ಸ್ಥಾಪಿಸಲಾಗುವುದು,’’ ಎಂದು ವಿವರಿಸಲಾಗಿದೆ.
The Andhra Pradesh Waqf Board has remained non-functional since March 2023, leading to a period of administrative stagnation. The withdrawal of G.O. Ms. No. 47 became imperative due to several substantive concerns. These include 13 writ petitions challenging its validity, the… https://t.co/0yXCvIdK4q
— FactCheck.AP.Gov.in (@FactCheckAPGov) December 1, 2024
ಆದ್ದರಿಂದ, ಆಂಧ್ರಪ್ರದೇಶದ ರಾಜ್ಯ ಸರ್ಕಾರವು ವಕ್ಫ್ ಬೋರ್ಡ್ ಅನ್ನು ಅಮಾನತುಗೊಳಿಸಿದೆ. ನ್ಯೂನತೆಗಳನ್ನು ಸರಿಪಡಿಸಿದ ನಂತರ ಅದನ್ನು ಮರುಸ್ಥಾಪಿಸಲಾಗುತ್ತದೆ. ಸದ್ಯ ವೈರಲ್ ಆಗುತ್ತಿರುವ ಹೇಳಿಕೆಯಂತೆ ಅದನ್ನು ರದ್ದು ಮಾಡಲಾಗಿಲ್ಲ ಎಂಬುದನ್ನು ನಾವು ಖಚಿತವಾಗಿ ಹೇಲುತ್ತೇವೆ.
ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ