ಆಗ್ರಾ: ಆಗ್ರಾದ ತಾಜ್‌ಮಹಲ್‌ನಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆಯ ಇಮೇಲ್ ಬಂದ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಇಂದು ಉತ್ತರ ಪ್ರದೇಶ ಪ್ರವಾಸೋದ್ಯಮ ಪ್ರಾದೇಶಿಕ ಕಚೇರಿಗೆ ಬಾಂಬ್ ಬೆದರಿಕೆ ಬಂದಿದ್ದು, ನಂತರ ಅದು ಸುಳ್ಳು ಕರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಗ್ರಾದ ತಾಜ್ ಮಹಲ್‌ಗೆ ಮಂಗಳವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. “ಪ್ರವಾಸೋದ್ಯಮ ಇಲಾಖೆಗೆ ಇಮೇಲ್ ಬಂದಿದೆ. ಅದರ ಆಧಾರದ ಮೇಲೆ ತಾಜ್‌ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಬ್ ನಿಷ್ಕ್ರಿಯ ದಳ (ಬಿಡಿಎಸ್) ತಂಡ ಮತ್ತು ಸ್ಥಳೀಯ ಪೊಲೀಸರು ಮೊಘಲ್ ಸ್ಮಾರಕವಾದ ತಾಜ್ ಮಹಲ್‌ಗೆ ಧಾವಿಸಿ ದೇಶದ ಪ್ರಮುಖ ಪ್ರವಾಸಿ ಸ್ಥಳದ ಆವರಣದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆಗ್ರಾದಲ್ಲಿರುವ ಉತ್ತರ ಪ್ರದೇಶ ಪ್ರವಾಸೋದ್ಯಮದ ಪ್ರಾದೇಶಿಕ ಕಚೇರಿಗೆ ಮಂಗಳವಾರ ತಾಜ್‌ಮಹಲ್ ಸ್ಫೋಟಿಸುವ ಬೆದರಿಕೆಯ ಇಮೇಲ್ ಬಂದಿದ್ದು, ನಂತರ ಅದು ಸುಳ್ಳು ಎಂದು ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ತಾಜ್ಮಹಲ್ನ ಶಿವ ದೇವಾಲಯವೆಂದು ಕರೆದು ಗಂಗಾಜಲ ಸಿಂಪಡಿಸಲು ಹೋಗಿದ್ದ ಮಹಿಳೆ
ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಮತ್ತು ಇತರ ತಂಡಗಳನ್ನು ಸೇವೆಗೆ ಕರೆದೊಯ್ದರೂ ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ ಎಂದು ತಾಜ್ ಮಹಲ್ನ ಭದ್ರತೆಯನ್ನು ವಹಿಸಿರುವ ಎಸಿಪಿ ತಿಳಿಸಿದ್ದಾರೆ.
Uttar Pradesh | Taj Mahal in Agra received a bomb threat via email today
ACP Taj Security Syed Areeb Ahmed says, “Tourism department received the email. Based on that, a case is being registered at Tajganj police station. Further investigation is being done…”
(Pics: ACP Taj… pic.twitter.com/1lw3E34dOM
— ANI (@ANI) December 3, 2024
“ತಾಜ್ ಮಹಲ್ ಸ್ಫೋಟಿಸುವ ಬೆದರಿಕೆಯ ಇಮೇಲ್ ಉತ್ತರ ಪ್ರದೇಶ ಪ್ರವಾಸೋದ್ಯಮ ಕಚೇರಿಗೆ ಬಂದಿದೆ. ಇಮೇಲ್ ಪ್ರಕಾರ ನಮಗೆ ಏನೂ ಸಿಕ್ಕಿಲ್ಲ. ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಮತ್ತು ಇತರ ತಂಡಗಳು ಸುರಕ್ಷತಾ ಪರಿಶೀಲನೆಗಾಗಿ ತಾಜ್ ಮಹಲ್ ತಲುಪಿವೆ” ಎಂದು ಅವರು ಹೇಳಿದ್ದಾರೆ.
ತಾಜ್ ಮಹಲ್ ಅನ್ನು ವಿಶ್ವದ 7 ಅದ್ಭುತಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದನ್ನು ಮೊಘಲ್ ಚಕ್ರವರ್ತಿ ಷಹಜಹಾನ್ 1648ರಲ್ಲಿ ತನ್ನ ಪತ್ನಿ ಮುಮ್ತಾಜ್ ಮಹಲ್ ನೆನಪಿಗಾಗಿ ನಿರ್ಮಿಸಿದನು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ