ತಾಜ್ಮಹಲ್ನ ಶಿವ ದೇವಾಲಯವೆಂದು ಕರೆದು ಗಂಗಾಜಲ ಸಿಂಪಡಿಸಲು ಹೋಗಿದ್ದ ಮಹಿಳೆ
ತಾಜ್ಮಹಲ್ನ್ನು ಶಿವನ ದೇವಾಲಯವೆಂದು ಕರೆದ ಮಹಿಳೆಯೊಬ್ಬರು ಗಂಗಾಜಲವನ್ನು ಸಿಂಪಡಿಸಲು ಹೋಗಿ ವಿವಾದ ಹುಟ್ಟುಹಾಕಿದ್ದಾರೆ. ಕನ್ವರ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬರು ಗಂಗಾ ನದಿಯ ಪವಿತ್ರ ಜಲವನ್ನು ತೆಗೆದುಕೊಂಡು ಬಂದು ತಾಜ್ಮಹಲ್ಗೆ ಸಿಂಪಡಿಸಲು ಮುಂದಾಗಿದ್ದರು.
ಮಹಿಳೆಯೊಬ್ಬರು ತಾಜ್ಮಹಲ್ಗೆ ಗಂಗಾಜಲವನ್ನು ಸಿಂಪಡಿಸಲು ಹೋಗಿ ವಿವಾದ ಹುಟ್ಟುಹಾಕಿರುವ ಘಟನೆ ಆಗ್ರಾದಲ್ಲಿ ನಡೆದಿದೆ. ಕನ್ವರ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬರು ಗಂಗಾ ನದಿಯ ಪವಿತ್ರ ಜಲವನ್ನು ತೆಗೆದುಕೊಂಡು ಬಂದು ತಾಜ್ಮಹಲ್ಗೆ ಸಿಂಪಡಿಸಲು ಮುಂದಾಗಿದ್ದರು.
ತಾಜ್ಮಹಲ್ನ್ನು ಶಿವನಿಗೆ ಸಮರ್ಪಿತವಾದ ದೇವಾಲಯ ಎಂದು ಕರೆದು ಅದಕ್ಕೆ ಸಿಂಪಡಿಸಲು ಮುಂದಾಗಿದ್ದರು. ಅಖಿಲ ಭಾರತ ಹಿಂದೂ ಮಹಾಸಭಾದ ಜಿಲ್ಲಾಧ್ಯಕ್ಷರಾದ ಮೀನು ರಾಥೋಡ್ ಎಂದು ಗುರುತಿಸಿಕೊಂಡ ಮಹಿಳೆ ವಿವಾದಕ್ಕೊಳಗಿದ್ದಾರೆ.
ಆದರೆ ಭದ್ರತೆಗೆಂದು ನಿಯೋಜಿಸಲಾಗಿದ್ದ ತಾಜ್ ಸುರಕ್ಷಾ ಪೊಲೀಸರು ಅವರನ್ನು ತಡೆದಿದ್ದಾರೆ. ಸ್ವಲ್ಪ ಸಮಯದ ನಂತರ, ರಾಜೇಶ್ವರ ದೇವಸ್ಥಾನದಲ್ಲಿ ಗಂಗಾಜಲವನ್ನು ಅರ್ಪಿಸಿದ್ದಾರೆ ಎಂದು ಎಸಿಪಿ ಸೈಯದ್ ಅರೀಬ್ ಅಹ್ಮದ್ ತಿಳಿಸಿದ್ದಾರೆ.
ಮತ್ತಷ್ಟು ಓದಿ:ಕನ್ವರ್ ಮಾರ್ಗದಲ್ಲಿ ಅಂಗಡಿಗಳಲ್ಲಿ ಹೆಸರು ಪ್ರದರ್ಶನ; ಮಧ್ಯಂತರ ತಡೆಯಾಜ್ಞೆ ವಿಸ್ತರಿಸಿದ ಸುಪ್ರೀಂಕೋರ್ಟ್
ತಾಜ್ಮಹಲ್ ಅನ್ನು ತೇಜೋ ಮಹಾಲಯ ಎಂದು ಅವರು ಉದ್ಘರಿಸಿದ್ದು, ಇದು ಶಿವನಿಗೆ ಸಮರ್ಪಿತವಾಗಿ ದೇವಾಯಲವಾಗಿದ್ದು, ಗಂಗಾಜಲ ಸಿಂಪಡಿಸಬೇಕಿದೆ ಎಂದು ಹೇಳಿದ್ದಾರೆ. ಇದನ್ನು ಪ್ರಾಚೀನ ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದರು.
ವಿಶ್ವದ ಏಳು ಅದ್ಭುತಗಳಲ್ಲಿ ಹೆಸರಾಗಿರುವ ತಾಜ್ ಮಹಲ್ ಉತ್ತರ ಪ್ರದೇಶದ ಆಗ್ರಾದ ಯಮುನಾ ನದಿಯ ದಡದಲ್ಲಿರುವ ದಂತ-ಬಿಳಿ ಅಮೃತಶಿಲೆಯ ಸಮಾಧಿಯಾಗಿದೆ. ಕ್ರಿ.ಶ. 1631 ರಲ್ಲಿ ಐದನೇ ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ಪತ್ನಿ ಮುಮ್ತಾಜ್ ಮಹಲ್ ಸಮಾಧಿಯನ್ನು ಇರಿಸಲು ಐಕಾನಿಕ್ ಸ್ಮಾರಕವನ್ನು ಕಟ್ಟಿಸಿದ್ದ.
ಈ ಸಂಕೀರ್ಣವನ್ನು ಸುಮಾರು 42 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು, ಸಮಾಧಿಯು ಅದರ ಕೇಂದ್ರಬಿಂದುವಾಗಿದೆ. ಸಂಕೀರ್ಣವು ಮಸೀದಿ ಮತ್ತು ಅತಿಥಿ ಗೃಹವನ್ನು ಸಹ ಒಳಗೊಂಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ