AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ವರ್ ಮಾರ್ಗದಲ್ಲಿ ಅಂಗಡಿಗಳಲ್ಲಿ ಹೆಸರು ಪ್ರದರ್ಶನ; ಮಧ್ಯಂತರ ತಡೆಯಾಜ್ಞೆ ವಿಸ್ತರಿಸಿದ ಸುಪ್ರೀಂಕೋರ್ಟ್

ಸ್ವಯಂಪ್ರೇರಿತವಾಗಿ ಹೆಸರುಗಳನ್ನು ಪ್ರದರ್ಶಿಸಲು ಯಾವುದೇ ಸಮಸ್ಯೆ ಇಲ್ಲ. ಧಾಬಾದ ಹೊರಗೆ ಮಾಲೀಕರ ಹೆಸರುಗಳು ಮತ್ತು ಉದ್ಯೋಗಿಗಳ ಹೆಸರುಗಳನ್ನು ಹಾಕಲು ಒತ್ತಾಯಿಸಲಾಗುವುದಿಲ್ಲ ಎಂದು ನಮ್ಮ ಆದೇಶವು ಹೇಳುತ್ತದೆ ಎಂದು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್‌ವಿಎನ್ ಭಟ್ಟಿ ಅವರನ್ನೊಳಗೊಂಡ ಪೀಠ ಮಧ್ಯಂತರ ತಡೆಯಾಜ್ಞೆಯನ್ನು ವಿಸ್ತರಿಸಿದೆ.ಜುಲೈ 22 ರಿಂದ ಪ್ರಾರಂಭವಾದ ಕನ್ವರ್ ಯಾತ್ರೆ ಆಗಸ್ಟ್ 6 ರವರೆಗೆ ನಡೆಯಲಿದೆ.

ಕನ್ವರ್ ಮಾರ್ಗದಲ್ಲಿ ಅಂಗಡಿಗಳಲ್ಲಿ ಹೆಸರು ಪ್ರದರ್ಶನ; ಮಧ್ಯಂತರ ತಡೆಯಾಜ್ಞೆ ವಿಸ್ತರಿಸಿದ ಸುಪ್ರೀಂಕೋರ್ಟ್
ಕನ್ವರ್ ಯಾತ್ರೆ
ರಶ್ಮಿ ಕಲ್ಲಕಟ್ಟ
|

Updated on:Jul 27, 2024 | 6:40 AM

Share

ದೆಹಲಿ ಜುಲೈ 27: ಯಾತ್ರೆಯನ್ನು ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಕನ್ವರ್ ಯಾತ್ರೆ (Kanwar yatra) ಸಾಗುವ ಮಾರ್ಗದಲ್ಲಿರುವ ಆಹಾರ ಮಳಿಗೆ ಮತ್ತು ಅಂಗಡಿಗಳಲ್ಲಿ ಮಾಲೀಕರು ಮತ್ತು ಉದ್ಯೋಗಿಗಳ ಹೆಸರನ್ನು ಪ್ರದರ್ಶಿಸಲು ನಿರ್ದೇಶಿಸಿರುವುದಾಗಿ ಉತ್ತರ ಪ್ರದೇಶ (Uttar Pradesh) ಸರ್ಕಾರ ಹೇಳಿದ್ದರೂ ಈ ಆದೇಶಕ್ಕೆ ನೀಡಿರುವ ಮಧ್ಯಂತರ ತಡೆಯಾಜ್ಞೆಯನ್ನು ಸುಪ್ರೀಂಕೋರ್ಟ್ (Supreme Court) ಶುಕ್ರವಾರ ವಿಸ್ತರಿಸಿದೆ.

ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್‌ವಿಎನ್ ಭಟ್ಟಿ ಅವರನ್ನೊಳಗೊಂಡ ಪೀಠ, ಆದಾಗ್ಯೂ, ಸ್ವಯಂಪ್ರೇರಿತವಾಗಿ ಹೆಸರುಗಳನ್ನು ಪ್ರದರ್ಶಿಸಲು ಅಂಗಡಿಗಳು ಮತ್ತು ಆಹಾರ ಮಳಿಗೆಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. “ಸ್ವಯಂಪ್ರೇರಿತವಾಗಿ ಹೆಸರುಗಳನ್ನು ಪ್ರದರ್ಶಿಸಲು ಯಾವುದೇ ಸಮಸ್ಯೆ ಇಲ್ಲ. ಧಾಬಾದ ಹೊರಗೆ ಮಾಲೀಕರ ಹೆಸರುಗಳು ಮತ್ತು ಉದ್ಯೋಗಿಗಳ ಹೆಸರುಗಳನ್ನು ಹಾಕಲು ಒತ್ತಾಯಿಸಲಾಗುವುದಿಲ್ಲ ಎಂದು ನಮ್ಮ ಆದೇಶವು ಹೇಳುತ್ತದೆ” ಎಂದು ಹೇಳಿದೆ.

ಯುಪಿ ಮತ್ತು ಉತ್ತರಾಖಂಡ್ ಸರ್ಕಾರಗಳು ಜುಲೈ 22 ರಿಂದ ಪ್ರಾರಂಭವಾದ ಯಾತ್ರಾ ಋತುವಿನಲ್ಲಿ ಅಂಗಡಿಗಳು, ಆಹಾರಮಳಿಗೆ ಮತ್ತು ವ್ಯಾಪಾರಿಗಳು ತಮ್ಮ ಆವರಣದ ಹೊರಗೆ ಮಾಲೀಕರು ಮತ್ತು ಸಿಬ್ಬಂದಿಯ ಹೆಸರನ್ನು ಪ್ರದರ್ಶಿಸಲು ನಿರ್ದೇಶಿಸಿವೆ. ಈ ಯಾತ್ರೆ ಆಗಸ್ಟ್ 6 ರವರೆಗೆ ನಡೆಯಲಿದೆ. ಜುಲೈ 22 ರಂದು ಸುಪ್ರೀಂಕೋರ್ಟ್ ಯುಪಿ, ಉತ್ತರಾಖಂಡ ಸರ್ಕಾರದ ನಿರ್ದೇಶನಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ತಡೆಯಾಜ್ಞೆಗೆ ಪ್ರತಿಕ್ರಿಯೆಯಾಗಿ ಉತ್ತರ ಪ್ರದೇಶ ಸರ್ಕಾರವು, ತನ್ನ ನಿರ್ದೇಶನವು ಯಾವುದೇ ಸಮುದಾಯದ ವಿರುದ್ಧ ತಾರತಮ್ಯ ಮಾಡುವ ಗುರಿಯನ್ನು ಹೊಂದಿಲ್ಲ. ಆದರೆ ಯಾತ್ರೆಯ ಸಮಯದಲ್ಲಿ ಮತ್ತು ಮೊದಲು ಕನ್ವಾರಿಯಾಗಳು ಅನುಸರಿಸುವ ಕಟ್ಟುನಿಟ್ಟಾದ ಆಹಾರ ಪದ್ಧತಿಗಳನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ ಎಂದು ಹೇಳಿದೆ. ನಿರ್ದೇಶನಗಳ ಹಿಂದಿನ ಕಲ್ಪನೆಯು ಪಾರದರ್ಶಕತೆ ಮತ್ತು ಗ್ರಾಹಕರು/ಕನ್ವಾರಿಯಾ ಅವರು ಯಾತ್ರೆಯ ಅವಧಿಯಲ್ಲಿ ಅವರು ಸೇವಿಸುವ ಆಹಾರದ ಬಗ್ಗೆ ತಿಳುವಳಿಕೆಯುಳ್ಳ ಆಯ್ಕೆಯಾಗಿದ್ದು, ಅವರ ಧಾರ್ಮಿಕ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿಗದೆ ಎಂದು ಯುಪಿ ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ಹೇಳಿದೆ.

ಯಾವುದೇ ಕನ್ವಾರಿಯಾ ಅವರು ತಮ್ಮ ನಿಗದಿತ ಆಹಾರವಲ್ಲದೆ ಬೇರೆ ಆಹಾರವನ್ನು ತಪ್ಪಾಗಿ ಸೇವಿಸಿದರೆ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗೆ ಕಾರಣವಾಗಬಹುದು ಎಂದು ಅದು ಹೇಳಿದೆ. “ಇಂತಹ ಸಂದರ್ಭಗಳು ನಿಸ್ಸಂಶಯವಾಗಿ ಲಕ್ಷಾಂತರ ಜನರು ಬರಿಗಾಲಿನಲ್ಲಿ, ಪವಿತ್ರ ನೀರನ್ನು ಹೊತ್ತೊಯ್ಯುವ ಜನರ ಆತಂಕಕ್ಕೆ ಕಾರಣವಾಗುತ್ತವೆ. ಅವರ ಆಯ್ಕೆಯ ಸ್ಥಳದಿಂದ ತಿಳಿಯದೆ ಊಟವನ್ನು ತೆಗೆದುಕೊಳ್ಳುವ ರೂಪದಲ್ಲಿ ಒಂದು ದುರ್ಘಟನೆಯು ಸಂಭವಿಸಬಹುದು. ಕನ್ವಾರಿಯಾ ಯಾತ್ರೆ ವೇಳೆ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವುದು ರಾಜ್ಯದ ಕರ್ತವ್ಯವಾಗಿದೆ”ಎಂದು ಯುಪಿ ಸರ್ಕಾರ ಹೇಳಿದೆ.

ಪವಿತ್ರ ಹಬ್ಬಗಳಾದ ಮೊಹರಂ ಮತ್ತು ಈದ್ ಸಮಯದಲ್ಲಿ ಹಜ್ ಯಾತ್ರೆಗಳಿಗೆ ವಿಶೇಷ ವ್ಯವಸ್ಥೆ ಮತ್ತು ಇಡೀ ರಾಜ್ಯದಲ್ಲಿ ಸಂಚಾರ ನಿರ್ಬಂಧಗಳನ್ನು ಒಳಗೊಂಡಂತೆ ಇತರ ಧರ್ಮಗಳಿಗೂ ಇದೇ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ. ಉತ್ತರಾಖಂಡ ಸರ್ಕಾರದ ವಕೀಲರು ಸಹ ಇದೇ ಅಫಿಡವಿಟ್ ಸಲ್ಲಿಸಿದ್ದು, ಅಂತಹ ಬಹಿರಂಗಪಡಿಸುವಿಕೆಯನ್ನು ಕಡ್ಡಾಯಗೊಳಿಸುವ ಕಾನೂನು ಇದೆ ಎಂದು ಹೇಳಿದರು.

ಇದನ್ನೂ ಓದಿ: ಎಂಎಸ್‌ಪಿ ಕುರಿತು ಸ್ವಾಮಿನಾಥನ್ ಸಲಹೆಯನ್ನು ಯುಪಿಎ ತಿರಸ್ಕರಿಸಿತ್ತು: ಶಿವರಾಜ್ ಸಿಂಗ್ ಚೌಹಾಣ್

ತಡೆಯಾಜ್ಞೆಯು ಮುಂದಿನ ವಿಚಾರಣೆಯ ಆಗಸ್ಟ್ 5 ರವರೆಗೆ ಮುಂದುವರಿಯುತ್ತದೆ. ರಾಜ್ಯ ನಿರ್ದೇಶನಗಳನ್ನು ಪ್ರಶ್ನಿಸಿ ಅರ್ಜಿಯನ್ನು ಎನ್‌ಜಿಒ, ಅಸೋಸಿಯೇಷನ್ ಆಫ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಸಲ್ಲಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:38 am, Sat, 27 July 24

ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್