Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಆಂಧ್ರ ಸರ್ಕಾರ ವಕ್ಫ್ ಬೋರ್ಡನ್ನೇ ರದ್ದು ಗೊಳಿಸಿದೆ ಎಂದು ಸುಳ್ಳು ಸುದ್ದಿ ವೈರಲ್

ಆಂಧ್ರಪ್ರದೇಶ ಸರ್ಕಾರ ರಾಜ್ಯದಲ್ಲಿ ವಕ್ಫ್ ಬೋರ್ಡ್ ಅನ್ನು ರದ್ದುಗೊಳಿಸಿದ ಸುದ್ದಿ ವೈರಲ್ ಆಗುತ್ತಿದೆ. ಕೆಲ ಫೇಸ್​ಬುಕ್ ಬಳಕೆದಾರರು ಈ ಕುರಿತು ಪೋಸ್ಟ್ ಹಂಚಿಕೊಳ್ಳುತ್ತಿದ್ದು ಆಂಧ್ರಪ್ರದೇಶ ವಕ್ಫ್ ಬೋರ್ಡ್ ರದ್ದು ಮಾಡಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎನ್ನುತ್ತಿದ್ದಾರೆ.

Fact Check: ಆಂಧ್ರ ಸರ್ಕಾರ ವಕ್ಫ್ ಬೋರ್ಡನ್ನೇ ರದ್ದು ಗೊಳಿಸಿದೆ ಎಂದು ಸುಳ್ಳು ಸುದ್ದಿ ವೈರಲ್
ವೈರಲ್​​ ಫೋಟೋ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 03, 2024 | 6:03 PM

ಶತಮಾನಗಳಿಂದ ದೇಣಿಗೆಯಾಗಿ ನೀಡಿದ ಕೋಟ್ಯಂತರ ರೂಪಾಯಿ ಮೌಲ್ಯದ ವಕ್ಫ್ ಆಸ್ತಿಯನ್ನು ನಿಯಂತ್ರಿಸುವ ದಶಕಗಳ ಹಿಂದಿನ ಕಾನೂನಿಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮಸೂದೆಯು ಅಸ್ತಿತ್ವದಲ್ಲಿರುವ ವಕ್ಫ್ ಮಸೂದೆಗೆ 40 ಕ್ಕೂ ಹೆಚ್ಚು ತಿದ್ದುಪಡಿಗಳನ್ನು ಪರಿಚಯಿಸಲು ಪ್ರಸ್ತಾಪಿಸುತ್ತದೆ. ಈ ಆಸ್ತಿಗಳನ್ನು ಭಾರತದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ವಕ್ಫ್ ಮಂಡಳಿಗಳು ನಿರ್ವಹಿಸುತ್ತವೆ. ಅವುಗಳನ್ನು ಶಿಕ್ಷಣ, ಸಮಾಜ ಕಲ್ಯಾಣ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಬಳಸಲಾಗುತ್ತದೆ. 2025ರ ಫೆಬ್ರವರಿಯಲ್ಲಿ ಬಜೆಟ್ ಅಧಿವೇಶನದಲ್ಲಿ ಮಂಡಿಸುವ ನಿರೀಕ್ಷೆಯಿದೆ. ಈ ವಿವಾದದ ನಡುವೆಯೇ ಆಂಧ್ರಪ್ರದೇಶ ಸರ್ಕಾರ ರಾಜ್ಯದಲ್ಲಿ ವಕ್ಫ್ ಬೋರ್ಡ್ ಅನ್ನು ರದ್ದುಗೊಳಿಸಿದ ಸುದ್ದಿ ವೈರಲ್ ಆಗುತ್ತಿದೆ. ಕೆಲ ಫೇಸ್​ಬುಕ್ ಬಳಕೆದಾರರು ಈ ಕುರಿತು ಪೋಸ್ಟ್ ಹಂಚಿಕೊಳ್ಳುತ್ತಿದ್ದು, ‘‘ಆಂಧ್ರಪ್ರದೇಶ ವಕ್ಫ್ ಬೋರ್ಡ್ ರದ್ದು ಮಾಡಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂತಹ ದಿಟ್ಟ ನಿರ್ಧಾರ ಕೈಗೊಂಡ ನಾಯ್ಡು ಪವನ್ ಕಲ್ಯಾಣ್ ನೇತೃತ್ವದ ಸರ್ಕಾರಕ್ಕೆ ಅಭಿನಂದನೆಗಳು. ಎಲ್ಲಾ ರಾಜ್ಯಗಳು ಸಹ ಇದನ್ನೇ ಅನುಸರಿಸಿ waqf board ನಾಮಾವಶೇಷ ಮಾಡಲಿ.’’ ಎಂದು ಶೇರ್ ಮಾಡುತ್ತಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ವೈರಲ್ ಆದ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ ಎಂಬುದು ಕಂಡುಬಂದಿದೆ. ಸಮ್ಮಿಶ್ರ ಸರ್ಕಾರ ಹೊಸ ರಾಜ್ಯ ವಕ್ಫ್ ಮಂಡಳಿಯನ್ನು ಸ್ಥಾಪಿಸುತ್ತಿದೆಯೇ ಹೊರತು ಇದನ್ನು ರದ್ದುಪಡಿಸುತ್ತಿಲ್ಲ.

ನಾವು ಸಂಬಂಧಿತ ಪ್ರಮುಖ ಕೀವರ್ಡ್​ಗಳೊಂದಿಗೆ ಗೂಗಲ್​ನಲ್ಲಿ ಹುಡುಕಿದಾಗ, ಆಂಧ್ರ ಪ್ರದೇಶ ಸರ್ಕಾರವು ಮಾರ್ಚ್ 2023 ರಿಂದ ಪ್ರಸ್ತುತ ರಾಜ್ಯ ವಕ್ಫ್ ಬೋರ್ಡ್ ಅನ್ನು ರದ್ದುಗೊಳಿಸುವ ಆದೇಶವನ್ನು ಹೊರಡಿಸಿದೆ ಎಂದು ನಮಗೆ ತಿಳಿಯಿತು. ಆದರೆ ಮಂಡಳಿಯ ವ್ಯವಹಾರಗಳು ಸರಿಯಾಗಿ ನಡೆದಿಲ್ಲ. ಸುನ್ನಿ ಮತ್ತು ಶಿಯಾ ಹಿರಿಯರಿಂದ ಸೂಕ್ತ ಪ್ರಾತಿನಿಧ್ಯದ ಕೊರತೆ, ಮಾಜಿ ಸಂಸದರನ್ನು ಮಂಡಳಿಗೆ ಸೇರಿಸಿಕೊಳ್ಳದಿರುವುದು ಮತ್ತು ಇತರ ಕಾರಣಗಳಿಂದ ಹಳೆಯ ಮಂಡಳಿಯನ್ನು ವಿಸರ್ಜಿಸಲಾಗಿದೆ.

ಟಿಡಿಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ವಕ್ಫ್ ಬೋರ್ಡ್ ಸ್ಥಾಪಿಸಲು ವೈಎಸ್ಆರ್ ಕಾಂಗ್ರೆಸ್ ಪಕ್ಷ ಹೊರಡಿಸಿದ್ದ ಆದೇಶವನ್ನು ಹಿಂಪಡೆದು ಆದೇಶ ಹೊರಡಿಸಿದೆ. ಈ ಮಂಡಳಿಯನ್ನು ಹಿಂದಿನ ಸರ್ಕಾರವು ಅಕ್ಟೋಬರ್ 2023 ರಲ್ಲಿ 11 ಸದಸ್ಯರೊಂದಿಗೆ ರಚಿಸಿತು. ಅಕ್ಟೋಬರ್ 21, 2023 ರ GOM ಸಂಖ್ಯೆ 47 ರ ಕಾನೂನುಬದ್ಧತೆಯನ್ನು ಪ್ರಶ್ನಿಸುವ ಆರೋಪಗಳನ್ನು ಪರಿಶೀಲಿಸಿದ ನಂತರ ವಕ್ಫ್ ಬೋರ್ಡ್ ಅನ್ನು ವಿಸರ್ಜಿಸಲು ಸರ್ಕಾರ ನಿರ್ಧಾರವನ್ನು ತೆಗೆದುಕೊಂಡಿದೆ.

ಈ ಕುರಿತು ಟಿವಿ9 ಕನ್ನಡ ಮತ್ತು ಟಿವಿ9 ಬಾರತ್ ವರ್ಚ್ ಸುದ್ದಿ ಪ್ರಕಟಿಸಿರುವುದನ್ನು ನೀವು ಇಲ್ಲಿ, ಇಲ್ಲಿ ಓದಬಹುದು.

ವಕ್ಫ್​ ಬೋರ್ಡನ್ನೇ ವಜಾಗೊಳಿಸಿದ ಆಂಧ್ರಪ್ರದೇಶ ಸರ್ಕಾರ

आंध्र प्रदेश: नायडू सरकार का बड़ा फैसला, जगन सरकार में गठित वक्फ बोर्ड को किया भंग

ಜೊತೆಗೆ ವಕ್ಫ್ ಮಂಡಳಿಯನ್ನು ಶಾಶ್ವತವಾಗಿ ವಿಸರ್ಜಿಸಲಾಗಿದೆ ಎಂಬ ಆರೋಪವನ್ನು ಆಂಧ್ರಪ್ರದೇಶ ಫ್ಯಾಕ್ಟ್ ಚೆಕ್ ವಿಭಾಗ ತಳ್ಳಿಹಾಕಿದೆ. ಈ ಕುರಿತು ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ‘‘ಆಂಧ್ರ ಪ್ರದೇಶ ವಕ್ಫ್ ಬೋರ್ಡ್ ಮಾರ್ಚ್ 2023 ರಿಂದ ಕಾರ್ಯನಿರ್ವಹಿಸುವುದಿಲ್ಲ. ಹಲವಾರು ಪ್ರಮುಖ ಸಮಸ್ಯೆಗಳಿಂದಾಗಿ G.O Ms. ನಂ. 47 ಹಿಂಪಡೆಯುವುದು ಕಡ್ಡಾಯವಾಯಿತು. ಅದರ ಸಿಂಧುತ್ವವನ್ನು ಪ್ರಶ್ನಿಸಿ 13 ರಿಟ್ ಅರ್ಜಿಗಳು, ಸುನ್ನಿ ಮತ್ತು ಶಿಯಾ ಧಾರ್ಮಿಕ ಮುಖಂಡರ ಪ್ರಾತಿನಿಧ್ಯದ ಕೊರತೆ, ಮಾಜಿ ಸಂಸದರನ್ನು ಸೇರ್ಪಡೆಗೊಳಿಸದಿರುವುದು, ಪಾರದರ್ಶಕ ಮಾನದಂಡಗಳಿಲ್ಲದ ಕಿರಿಯ ವಕೀಲರ ನೇಮಕಾತಿ, ಕೆಲವು ಸದಸ್ಯರ ಅರ್ಹತೆಗೆ ಸಂಬಂಧಿಸಿದ ಪ್ರಶ್ನೆಗಳು, ಈ ನ್ಯೂನತೆಗಳನ್ನು ಪರಿಹರಿಸಲು GoAP ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಆದಷ್ಟು ಬೇಗ ಹೊಸ ವಕ್ಫ್ ಮಂಡಳಿಯನ್ನು ಸ್ಥಾಪಿಸಲಾಗುವುದು,’’ ಎಂದು ವಿವರಿಸಲಾಗಿದೆ.

ಆದ್ದರಿಂದ, ಆಂಧ್ರಪ್ರದೇಶದ ರಾಜ್ಯ ಸರ್ಕಾರವು ವಕ್ಫ್ ಬೋರ್ಡ್ ಅನ್ನು ಅಮಾನತುಗೊಳಿಸಿದೆ. ನ್ಯೂನತೆಗಳನ್ನು ಸರಿಪಡಿಸಿದ ನಂತರ ಅದನ್ನು ಮರುಸ್ಥಾಪಿಸಲಾಗುತ್ತದೆ. ಸದ್ಯ ವೈರಲ್ ಆಗುತ್ತಿರುವ ಹೇಳಿಕೆಯಂತೆ ಅದನ್ನು ರದ್ದು ಮಾಡಲಾಗಿಲ್ಲ ಎಂಬುದನ್ನು ನಾವು ಖಚಿತವಾಗಿ ಹೇಲುತ್ತೇವೆ.

ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ