“ಮಹಾ ಕುಂಭ”, ನಂಬಿಕೆ, ಸಾಮರಸ್ಯ ಮತ್ತು ಸಂಸ್ಕೃತಿಗಳ ಒಕ್ಕೂಟದ ಮಹಾನ್ ಹಬ್ಬ ಜನವರಿ 13 ರಿಂದ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಪ್ರಾರಂಭವಾಗಿದೆ. ಇಂದು ಕುಂಭಮೇಳದ ಮೂರನೇ ದಿನ. ಹೀಗಿರುವಾಗ ಸದ್ಯ ಈಗ ಸಾಮಾಜಿಕ ಮಾಧ್ಯಮದಲ್ಲಿ ಕುಂಭಮೇಳಕ್ಕೆ ಲಿಂಕ್ ಮಾಡುವ ವಿಡಿಯೋ ಒಂದು ವೈರಲ್ ಆಗುತ್ತಿದೆ, ಇದರಲ್ಲಿ ಕೆಲವು ಬಾಬಾಗಳು ಮದ್ಯಪಾನ ಮತ್ತು ಮಾಂಸಾಹಾರಿ ಆಹಾರವನ್ನು ಸೇವಿಸುವುದನ್ನು ಕಾಣಬಹುದು. ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡು ಕುಂಭಮೇಳದ ಬಗ್ಗೆ ಮಾತನಾಡುತ್ತಿದ್ದಾರೆ.
ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, “ಕುಂಭ ಸ್ನಾನದ ಚಳಿ ಮತ್ತು ದಿನದ ಆಯಾಸವನ್ನು ಹೋಗಲಾಡಿಸಲು, ಶುದ್ಧ ಸಸ್ಯಾಹಾರಿ ಬಾಬಾಗಳು ಪಾನೀಯ ಸೇವಿಸುತ್ತಿದ್ದಾರೆ, ಇದು ಬಾಬಾಗಳ ಮೋಕ್ಷದ ಮಾರ್ಗವಾಗಿದೆ” ಎಂದು ಬರೆದಿದ್ದಾರೆ. ಈ ಬಳಕೆದಾರರು ತಮ್ಮ ಪೋಸ್ಟ್‌ನಲ್ಲಿ ಮಹಾಕುಂಭ ಪ್ರಯಾಗರಾಜ್, ಮಹಾಕುಂಭ 2025, ಮಹಾಕುಂಭ ಅಮೃತ್ ಸ್ನಾನ ಮುಂತಾದ ಹ್ಯಾಶ್‌ಟ್ಯಾಗ್‌ಗಳನ್ನು ಸಹ ಸೇರಿಸಿದ್ದಾರೆ.
कुम्भ स्नान की ठंडी व दिन भर की थकान को दूर करने के लिए बाबाओं का शुद्ध शाकाहारी चीखना व पेय, यह है बाबाओं के पापमुक्ति का मार्ग।#महाकुम्भ_प्रयागराज #महाकुम्भ2025 #महाकुम्भ_अमृत_स्नान pic.twitter.com/vNriDzrW31
— Lautan Ram Nishad (@LautanRamNish) January 14, 2025
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಮಹಾಕುಂಭ ಮೇಳಕ್ಕೂ ಈ ವಿಡಿಯೋಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಕಂಡುಬಂದಿದೆ. ಅಸಲಿಗೆ ಮಹಾಕುಂಭ ಮೇಳ ಆರಂಭಕ್ಕು ಮುನ್ನವೇ ಈ ವಿಡಿಯೋ ಅನೇಕ ಸಾಮಾಜಿಕ ತಾಣಗಳಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ಮಾಡಿದ್ದೇವೆ. ಕುಂಭಮೇಳ ಜನವರಿ 13 ರಿಂದ ಪ್ರಾರಂಭಗಿದೆ. ಆದರೆ, ಈ ವಿಡಿಯೋ ಸೆಪ್ಟೆಂಬರ್ 2024 ರಿಂದ ಇಂಟರ್ನೆಟ್‌ನಲ್ಲಿ ಲಭ್ಯವಿದೆ ಎಂದು ನಾವು ಕಂಡುಕೊಂಡಿದ್ದೇವೆ. ಅನೇಕ ಬಳಕೆದಾರರು ಬಾಬಾಗಳು ಮಾಂಸಾಹಾರ ಮತ್ತು ಮದ್ಯಪಾನ ಮಾಡುತ್ತಿರುವ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
Fact Check: ಪಾಕಿಸ್ತಾನದಲ್ಲಿ 6 ಜನ ಸಹೋದರರು ತಮ್ಮ 6 ಸಹೋದರಿಯರನ್ನು ವಿವಾಹವಾಗಿದ್ದು ನಿಜವೇ?, ಇಲ್ಲಿದೆ ಸತ್ಯಾಂಶ
ಯೋಗಿ ಕುಮಾರ್ ಲಲಿತ್ ಎಂಬ ಬಳಕೆದಾರರು 17 ಸೆಪ್ಟೆಂಬರ್ 2024 ರಂದು ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವುದು ನಮಗೆ ಸಿಕ್ಕಿದೆ. ಹ್ಯಾಶ್‌ಟ್ಯಾಗ್‌ನಲ್ಲಿ ಶ್ರೀಆದಿಶಕ್ತಿಭೈರವಧಂ, ಅಘೋರಿಭೈರವಧಂ, ಅಘೋರಿಸಾಧು ಮುಂತಾದ ಪದಗಳನ್ನು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು 5 ನವೆಂಬರ್ 2024 ರಂದು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಇದು ಕುಂಭಮೇಳದ ವಿಡಿಯೋ ಅಲ್ಲ ಆದರೆ ಹಳೆಯದು ಎಂದು ಸ್ಪಷ್ಟಪಡಿಸುತ್ತದೆ.
ಟಿವಿ9 ಕನ್ನಡ ತನಿಖೆಯಿಂದ ಈ ವಿಡಿಯೋ ಕುಂಭಮೇಳಕ್ಕೆ ಸಂಬಂಧ ಪಟ್ಟಿಲ್ಲ ಎಂಬುದು ಸ್ಪಷ್ಟವಾಗಿದೆ. ಏಕೆಂದರೆ ಈ ವಿಡಿಯೋ ಸೆಪ್ಟೆಂಬರ್ 2024 ರಿಂದ ಇಂಟರ್ನೆಟ್‌ನಲ್ಲಿ ಲಭ್ಯವಿದೆ. ಆದ್ದರಿಂದ ನಕಲಿ ಹೇಳಿಕೆಯೊಂದಿಗೆ ಈಗ ಈ ವಿಡಿಯೋವನ್ನು ವೈರಲ್ ಮಾಡಲಾಗುತ್ತಿದೆ. ಆದರೆ, ಈ ವಿಡಿಯೋ ಯಾವಾಗಿನದ್ದು ಹಾಗೂ ಯಾವ ಜಾಗದ್ದು ಎಂಬುದನ್ನು ನಿಖರವಾಗಿ ಕಂಡುಹಿಡಿಯಲು ನಮಗೆ ಸಾಧ್ಯವಾಗಿಲ್ಲ.
2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ:
ಪೌಷ ಪೂರ್ಣಿಮೆಯಂದು ಭಜನೆಗಳು ಮತ್ತು ಘೋಷಣೆಗಳೊಂದಿಗೆ ಪ್ರಯಾಗ್‌ರಾಜ್‌ನಲ್ಲಿ ಪ್ರಾರಂಭವಾದ ಮಹಾಕುಂಭ ಸಂಕ್ರಾಂತಿಯ ದಿನದಂದು ರಾಜ ಸ್ನಾನಕ್ಕೆ ಸಾಕ್ಷಿಯಾಯಿತು. ಈ ಮಹಾ ಕುಂಭಮೇಳವು 144 ವರ್ಷಗಳ ನಂತರ ಸಂಭವಿಸುತ್ತಿದೆ. ಈ ಬಾರಿಯ ಮಹಾ ಕುಂಭ ಮೇಳವು ಇನ್ನಷ್ಟು ಶುಭಕರವಾಗಿದೆ ಎಂದು ಋಷಿಗಳು ಹೇಳಿಕೊಳ್ಳುತ್ತಾರೆ. ವಿಶ್ವದ ಅತಿದೊಡ್ಡ ಧಾರ್ಮಿಕ ಕೂಟಗಳಲ್ಲಿ ಒಂದಾದ ಕುಂಭಮೇಳವು ಕೋಟ್ಯಂತರ ಯಾತ್ರಿಕರನ್ನು ಆಕರ್ಷಿಸುತ್ತಲೇ ಇದೆ. ಸಂಕ್ರಾಂತಿಯ ದಿನದಂದು 2.5 ಕೋಟಿ ಭಕ್ತರು ತೀರ್ಥ ಸ್ನಾನ ಮಾಡಿದ್ದಾರೆ ಎಂದು ಹೇಳಲಾಗಿದೆ. ಮಹಾಕುಂಭ ಜನವರಿ 13 ರಿಂದ ಫೆಬ್ರವರಿ 26 ರವರೆಗೆ ನಡೆಯಲಿದೆ. ಸುಮಾರು 10,000 ಎಕರೆ ಪ್ರದೇಶದಲ್ಲಿ ಇದನ್ನು ಆಯೋಜಿಸಲಾಗುತ್ತಿದೆ. ಜನವರಿ 2024 ರಲ್ಲಿ ಅಯೋಧ್ಯೆಯಲ್ಲಿ ಭಗವಾನ್ ರಾಮ್ ಲಾಲಾ ಪವಿತ್ರೀಕರಣದ ನಂತರ ನಡೆಯುತ್ತಿರುವ ಮೊದಲ ಮಹಾಕುಂಭ ಇದಾಗಿದೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ