ಭಾರತದ ಹಲವು ರಾಜ್ಯಗಳಲ್ಲಿ ವಕ್ಫ್ ಭೂಮಿಗೆ ಸಂಬಂಧಿಸಿದಂತೆ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ಬಗ್ಗೆ ಹಲವು ರಾಜಕೀಯ ನಾಯಕರು ಪ್ರಮುಖ ಹೇಳಿಕೆಗಳನ್ನೂ ನೀಡುತ್ತಿದ್ದಾರೆ. ಕೆಲವು ರಾಜ್ಯಗಳಲ್ಲಿ ರೈತರ ಜಮೀನುಗಳು ವಕ್ಫ್ ಬೋರ್ಡ್ ವ್ಯಾಪ್ತಿಗೆ ಬರುತ್ತವೆ ಎಂಬ ಸೂಚನೆಗಳೂ ಸಂಚಲನ ಮೂಡಿಸಿವೆ. ಈ ಬಗ್ಗೆ ರೈತರು ಪ್ರತಿಭಟನೆಯನ್ನೂ ನಡೆಸಿದರು. ಸದ್ಯ ಮಹಾರಾಷ್ಟ್ರದಲ್ಲಿ ಮತದಾನಕ್ಕೂ ಮುನ್ನ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ಕುರಿತ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ಮೇಲೆ ವಕ್ಫ್ ಬೋರ್ಡ್ ಹಕ್ಕು ಚಲಾಯಿಸಿದೆ ಎಂದು ಹೇಳಲಾಗುತ್ತಿದೆ.
ಜಿತೇಂದ್ರ ಪ್ರತಾಪ್ ಸಿಂಗ್ ಎಂಬ ಎಕ್ಸ್ ಖಾತೆಯಿಂದ ನವೆಂಬರ್ 18 ರಂದು ಈ ಫೋಟೋವನ್ನು ಹಂಚಿಕೊಳ್ಳಲಾಗಿದೆ. ವಕ್ಫ್ ಮಂಡಳಿಯು ಮುಂಬೈನ ಸಿದ್ಧಿವಿನಾಯಕ ದೇವಾಲಯದ ಮೇಲೆ ಹಕ್ಕು ಸಾಧಿಸಿದೆ ಎಂದು ಅವರು ಬರೆದಿದ್ದಾರೆ.
महाराष्ट्र के हिंदुओं यह देखो
वक्फ बोर्ड ने मुंबई के सुप्रसिद्ध पौराणिक सिद्धिविनायक मंदिर पर भी अपना दावा ठोक दिया
जैसे ही उद्धव ठाकरे शरद पवार और कांग्रेस तथा मौलाना सज्जाद नोमानी के बीच में मीटिंग हुई और उन लोगों ने भरोसा दिलाया कि आप जिस भी मंदिर को जिस भी प्रॉपर्टी को… pic.twitter.com/U6kezTaYG0
— 🇮🇳Jitendra pratap singh🇮🇳 (@jpsin1) November 18, 2024
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಪೋಸ್ಟ್ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಮುಂಬೈನ ಜಿಲ್ಲಾ ವಕ್ಫ್ ಅಧಿಕಾರಿ ಅವರು ಅಂತಹ ಯಾವುದೇ ಅರ್ಜಿಯನ್ನು ಸ್ವೀಕರಿಸಿಲ್ಲ ಎಂದು ಈ ಕುರಿತು ಸ್ಪಷ್ಟ ಪಡಿಸಿದ್ದಾರೆ. ಅದೇ ಸಮಯದಲ್ಲಿ, ದೇವಸ್ಥಾನದ ಸೊಸೈಟಿಯ ಖಜಾಂಚಿ ಕೂಡ ಈ ಹಕ್ಕು ಸುಳ್ಳು ಎಂದು ಹೇಳಿದ್ದಾರೆ.
ವೈರಲ್ ಕ್ಲೈಮ್ ಅನ್ನು ಪರಿಶೀಲಿಸಲು, ನಾವು ಗೂಗಲ್ನಲ್ಲಿ ಕೀವರ್ಡ್ ಸರ್ಚ್ ಮಾಡಿದ್ದೇವೆ. ಆಗ ನವೆಂಬರ್ 18 ರಂದು, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪುತ್ರ ಮತ್ತು ಮಹಾರಾಷ್ಟ್ರ ಯುವಸೇನೆಯ ಅಧ್ಯಕ್ಷ ಆದಿತ್ಯ ಠಾಕ್ರೆ ಅವರು ಈ ಪೋಸ್ಟ್ ನಕಲಿ ಎಂದು ಹೇಳಿರುವುದು ನಮಗೆ ಸಿಕ್ಕಿದೆ. ಇದು ವಿರೋಧ ಪಕ್ಷಗಳ ಪಿತೂರಿ ಎಂದು ಅವರು ಹೇಳಿದ್ದಾರೆ.
The absolutely disgusting mentality of the bjp’s ecosystem. Divide and rule. Lie and try to win.
Will the @ECISVEEP and @MumbaiPolice ever act and arrest such disgusting hate creators and Maharashtra haters?
Don’t play with our sentiments and emotions in Maharashtra for your… pic.twitter.com/bnYdFixXXN
— Aaditya Thackeray (@AUThackeray) November 18, 2024
ಹಾಗೆಯೆ ನವೆಂಬರ್ 18 ರಂದು ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸೊಸೈಟಿಯ ಖಜಾಂಚಿ ಪವನ್ ತ್ರಿಪಾಠಿ ಅವರ ಹೇಳಿಕೆಯನ್ನು ಅನೇಕ ಮಾಧ್ಯಮಗಳು ವರದಿ ಮಾಡಿವೆ. ಮುಂಬೈನ ದಾದರ್ ನಲ್ಲಿ ಈ ದೇವಸ್ಥಾನವಿದೆ ಎಂದು ಬರೆಯಲಾಗಿದೆ. ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ಮೇಲೆ ವಕ್ಫ್ ಬೋರ್ಡ್ ಹಕ್ಕು ಚಲಾಯಿಸಿದೆ ಎಂಬ ಸುಳ್ಳು ವರದಿ ವೈರಲ್ ಆಗುತ್ತಿದೆ ಎಂದು ಪವನ್ ತ್ರಿಪಾಠಿ ವಿಡಿಯೋ ಹೇಳಿಕೆ ನೀಡಿದ್ದಾರೆ. ದೇವಾಲಯವು ದೇಶಕ್ಕೆ ಮಾತ್ರವಲ್ಲದೆ ವಿಶ್ವಕ್ಕೆ ನಂಬಿಕೆಯ ಸ್ಥಳವಾಗಿದೆ. ದೇವಸ್ಥಾನದ ಮೇಲೆ ಯಾರೂ ಅಂತಹ ಹಕ್ಕು ಮಂಡಿಸುವುದಿಲ್ಲ. ಶ್ರೀ ಸಿದ್ಧಿವಿನಾಯಕ ದೇವಸ್ಥಾನವನ್ನು ಯಾವುದೇ ಮಂಡಳಿ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಹೀಗಾಗಿ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ಮೇಲಿನ ವಕ್ಫ್ ಮಂಡಳಿಯ ಹಕ್ಕು ಪೋಸ್ಟ್ ನಕಲಿಯಾಗಿದೆ. ದೇವಸ್ಥಾನದ ಸೊಸೈಟಿಯ ಅಧಿಕಾರಿಗಳು ಇದನ್ನು ನಕಲಿ ಎಂದು ಕರೆದಿದ್ದಾರೆ, ಅಲ್ಲದೆ ಮುಂಬೈ ವಕ್ಫ್ ಅಧಿಕಾರಿ ಕೂಡ ಅಂತಹ ಯಾವುದೇ ಅರ್ಜಿಯನ್ನು ನಿರಾಕರಿಸಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಗುರುಗ್ರಾಮ್‌ನಲ್ಲಿ ನಡೆದ ರ್ಯಾಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಕ್ಫ್ (ತಿದ್ದುಪಡಿ) ಮಸೂದೆ-2024 ಅನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಲಾಗುವುದು ಎಂದು ಘೋಷಿಸಿದರು. ಅವರ ಘೋಷಣೆ ತಕ್ಷಣವೇ ಅಲ್ಪಸಂಖ್ಯಾತ ಮತ್ತು ವಿರೋಧ ಪಕ್ಷದ ನಾಯಕರಲ್ಲಿ ಆಕ್ರೋಶವನ್ನು ಹುಟ್ಟುಹಾಕಿತು. ಪ್ರತಿಪಕ್ಷಗಳು, ಮುಸ್ಲಿಂ ಸಮುದಾಯದ ಹಕ್ಕುಗಳನ್ನು ಬರೆಯುವ ಪ್ರಯತ್ನ ಎಂದು ಟೀಕಿಸಿದರು.
ಕರ್ನಾಟಕದಲ್ಲಿ ವಕ್ಫ್ ಬೋರ್ಡ್ ದೇವಾಲಯಗಳು ಸೇರಿದಂತೆ ASI ರಕ್ಷಿತ ಸೈಟ್‌ಗಳ ಮೇಲೆ ಹಕ್ಕುಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ 400 ಎಕರೆಗೂ ಹೆಚ್ಚು ವಕ್ಫ್ ಭೂಮಿ ಇದ್ದು, ಚರ್ಚ್‌ಗಳು ಮತ್ತು 600 ಕ್ರಿಶ್ಚಿಯನ್ ಕುಟುಂಬಗಳು ಇವೆ ಎಂಬುದು ಕಳವಳಕಾರಿ ವಿಷಯ.
ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ