AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಅದಾನಿ ಪತ್ನಿಗೆ ನಮಸ್ಕಾರ ಮಾಡಿದ್ರಾ ಪ್ರಧಾನಿ ನರೇಂದ್ರ ಮೋದಿ?

ಖ್ಯಾತ ಉದ್ಯಮಿ ಅದಾನಿಯವರ ಪತ್ನಿ ಪ್ರೀತಿ ಅದಾನಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ನಮಸ್ಕರಿಸುತ್ತಿದ್ದಾರೆ ಎಂಬ ಒಕ್ಕಣೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೊದ ಫ್ಯಾಕ್ಟ್​ಚೆಕ್ ಇಲ್ಲಿದೆ.

Fact Check: ಅದಾನಿ ಪತ್ನಿಗೆ ನಮಸ್ಕಾರ ಮಾಡಿದ್ರಾ ಪ್ರಧಾನಿ ನರೇಂದ್ರ ಮೋದಿ?
ವೈರಲ್ ಆಗಿರುವ ಫೋಟೊ
ರಶ್ಮಿ ಕಲ್ಲಕಟ್ಟ
|

Updated on:Jun 07, 2021 | 3:31 PM

Share

ಬೆಂಗಳೂರು: ಮಹಿಳೆಯೊಬ್ಬರಿಗೆ ಪ್ರಧಾನಿ ನರೇಂದ್ರ ಮೋದಿ ನಮಸ್ಕರಿಸುತ್ತಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಮೋದಿ ನಮಸ್ಕರಿಸುತ್ತಿರುವ ಮಹಿಳೆ ಉದ್ಯಮಿ ಗೌತಮ್ ಅದಾನಿ ಅವರ ಪತ್ನಿ ಪ್ರೀತಿ ಅದಾನಿ ಎಂಬ ವಿವರಣೆಯೊಂದಿಗೆ ಹಲವಾರು ನೆಟ್ಟಿಗರು ಈ ಫೋಟೊ ಶೇರ್ ಮಾಡಿದ್ದಾರೆ.

ಕಿಸಾನ್ ಕಾಂಗ್ರೆಸ್​ನ ರಾಷ್ಟ್ರೀಯ ಉಪಾಧ್ಯಕ್ಷ ಸುರೇಂದರ್ ಸೋಲಂಕಿ ಅವರು ಇದೇ ಫೋಟೊ ಮತ್ತು ನೀತಾ ಅಂಬಾನಿ ಜತೆ ಮೋದಿ ನಗುತ್ತಾ ಮಾತನಾಡುತ್ತಿರುವ ಫೋಟೊವನ್ನು ಶೇರ್ ಮಾಡಿ ಇದು ನಾಚಿಕೆಗೇಡಿನ ಸರ್ಕಾರ. ಚಳಿಯಲ್ಲಿ ರೈತರು ಉಸಿರುಗಟ್ಟುತ್ತಿರುವಾಗ ಮೋದಿ ಶಿರಬಾಗಿ ತಮ್ಮ ಮಾಲಕಿ ಪ್ರೀತಿ ಅದಾನಿ ಮತ್ತು ನೀತಾ ಅಂಬಾನಿಗಾಗಿ ತಟಸ್ಥರಾಗಿದ್ದರು ಎಂದು ಟ್ವೀಟಿಸಿದ್ದಾರೆ.

ಫ್ಯಾಕ್ಟ್ ಚೆಕ್ ಈ ಫೋಟೊವನ್ನು ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿದ್ದು, ಫೋಟೊದಲ್ಲಿರುವ ಮಹಿಳೆ ಅದಾನಿಯವರ ಪತ್ನಿ ಪ್ರೀತಿ ಅದಾನಿ ಅಲ್ಲ ಎಂದು ಹೇಳಿದೆ. ಫೋಟೊದ ಸತ್ಯಾಸತ್ಯತೆ ಅರಿಯಲು TinEyeನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ 2018ರಲ್ಲಿ ಒನ್ ಇಂಡಿಯಾ ಹಿಂದಿಯಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ಈ ಫೋಟೊ ಬಳಸಿರುವುದು ಗಮನಕ್ಕೆ ಬಂದಿದೆ.

ಇದು 2015ರಲ್ಲಿ ಕ್ಲಿಕ್ಕಿಸಿದ ಫೋಟೊ. ಫೋಟೊದಲ್ಲಿರುವ ಮಹಿಳೆ ದೀಪಿಕಾ ಮಂಡೋಲ್. ಇವರು ದೆಹಲಿ ಮೂಲದ ಎನ್​ಜಿಒ ದಿವ್ಯಜ್ಯೋತಿ ಕಲ್ಚರಲ್ ಆರ್ಗನೈಸೇಷನ್ ಮತ್ತು ಸೋಷ್ಯಲ್ ವೆಲ್ಫೇರ್ ಸೊಸೈಟಿಯ (DCOWS) ಸಿಎಫ್ಒ ಆಗಿದ್ದಾರೆ. 2018ರಲ್ಲಿ ಅಮರ್ ಉಜಾಲಾದಲ್ಲಿಯೂ ಇದೇ ಫೋಟೊ ಪ್ರಕಟವಾಗಿತ್ತು.

Fact Check | ಭಾರತೀಯ ರೈಲ್ವೆಯನ್ನು ಅದಾನಿ ಖರೀದಿಸಿದ್ದಾರೆ ಎಂಬ ವೈರಲ್ ವಿಡಿಯೊ ಹಿಂದಿನ ಮರ್ಮವೇನು?

Published On - 7:54 pm, Fri, 18 December 20

ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ
ಗಣ್ಯರಿಗೆ ಖಾಸಗಿ ಆಸ್ಪತ್ರೆಗಳೇ ಯಾಕೆ? ಸರ್ಕಾರೀ ಆಸ್ಪತ್ರೆ ಯಾಕೆ ಬೇಡ?
ಗಣ್ಯರಿಗೆ ಖಾಸಗಿ ಆಸ್ಪತ್ರೆಗಳೇ ಯಾಕೆ? ಸರ್ಕಾರೀ ಆಸ್ಪತ್ರೆ ಯಾಕೆ ಬೇಡ?
ಹೋಶಿಯಾರ್​ಪುರದಲ್ಲಿ ಬಸ್ ಪಲ್ಟಿ, 8 ಮಂದಿ ಸಾವು, 25 ಜನರಿಗೆ ಗಾಯ
ಹೋಶಿಯಾರ್​ಪುರದಲ್ಲಿ ಬಸ್ ಪಲ್ಟಿ, 8 ಮಂದಿ ಸಾವು, 25 ಜನರಿಗೆ ಗಾಯ