ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಜತೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದ ಹುಡುಗಿ?; ವೈರಲ್ ಫೋಟೊದಲ್ಲಿರುವುದು ಅಮೂಲ್ಯ ಅಲ್ಲ

| Updated By: ರಶ್ಮಿ ಕಲ್ಲಕಟ್ಟ

Updated on: Sep 25, 2022 | 4:29 PM

Fact Check ಇದೇ ಫೋಟೋವನ್ನು ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಅವರು "ಎಚ್ಚರಿಕೆಯಿಂದ ನೋಡಿ. ಭಾರತ್ ಜೋಡೋ ಅಲ್ಲ, ಇದು ಭಾರತ್ ತೋಡೋ!!" ಎಂಬ ಶೀರ್ಷಿಕೆಯೊಂದಿಗೆ ಟ್ವೀಟ್ ಮಾಡಿದ್ದು ನಂತರ ಅದನ್ನು ಡಿಲೀಟ್ ಮಾಡಿದ್ದಾರೆ.

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಜತೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದ ಹುಡುಗಿ?; ವೈರಲ್ ಫೋಟೊದಲ್ಲಿರುವುದು ಅಮೂಲ್ಯ ಅಲ್ಲ
Follow us on

ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi ) ವಿದ್ಯಾರ್ಥಿನಿಯೊಬ್ಬಳನ್ನು  ತಬ್ಬಿಕೊಂಡಿರುವ ಫೋಟೊ ವೈರಲ್ ಆಗಿದ್ದು, ರಾಹುಲ್ ಜತೆ ಇರುವುದು 2020 ಫೆಬ್ರುವರಿಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಿ ಬಂಧಿತರಾದ ಬೆಂಗಳೂರಿನ ವಿದ್ಯಾರ್ಥಿನಿ ಅಮೂಲ್ಯ ಲಿಯೋನಾ ನೊರೊನ್ಹಾ (Amulya Leona Noronha) ಎಂದು ಹಲವರು ಟ್ವೀಟ್ ಮಾಡಿದ್ದಾರೆ. ಆದಾಗ್ಯೂ ರಾಹುಲ್ ಜತೆ ಇರುವ ಹುಡುಗಿ ಅಮೂಲ್ಯ ಅಲ್ಲ, ಆಕೆ  ಕೇರಳ ಸ್ಟೂಡೆಂಟ್ಸ್ ಯೂನಿಯನ್ ಎರ್ನಾಕುಳಂ ಘಟಕದ ಪ್ರಧಾನ ಕಾರ್ಯದರ್ಶಿ ಮಿವಾ ಜೋಲಿ(Miva Jolly) ಎಂದು ಫ್ಯಾಕ್ಟ್ ಚೆಕ್ ವೆಬ್ ಸೈಟ್ ಬೂಮ್ ಲೈವ್ ವರದಿ ಮಾಡಿದೆ. ಬೆಂಗಳೂರಿನಲ್ಲಿ ಓದುತ್ತಿರುವ ಪತ್ರಿಕೋದ್ಯಮ ವಿದ್ಯಾರ್ಥಿನಿ ಅಮೂಲ್ಯ ನೊರೊನ್ಹಾ ಅವರನ್ನು ಫೆಬ್ರವರಿ 20, 2020 ರಂದು ಅಖಿಲ ಭಾರತ ಮಜ್ಲಿಸ್- ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ)  ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರುದ್ಧದ ರ್ಯಾಲಿಯಲ್ಲಿ ವೇದಿಕೆಯ ಮೇಲೆ ನಿಂತು ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದಾಗ ಬಂಧಿಸಲಾಗಿತ್ತು.

150 ದಿನಗಳ ಸುದೀರ್ಘ ಭಾರತ್ ಜೋಡೋ ಯಾತ್ರೆಯ 17 ನೇ ದಿನದಲ್ಲಿ, ರಾಹುಲ್ ಗಾಂಧಿ ಮತ್ತು ಇತರ ಪ್ರಮುಖ ಕಾಂಗ್ರೆಸ್ ನಾಯಕರು ಕೇರಳ ರಾಜ್ಯದಲ್ಲಿ ಸಂಚರಿಸುತ್ತಿದ್ದಾರೆ. ಕನ್ಯಾಕುಮಾರಿಯಲ್ಲಿ ಆರಂಭವಾದ ಪಾದಯಾತ್ರೆ ಸೆಪ್ಟೆಂಬರ್ 30 ರಂದು ಕರ್ನಾಟಕವನ್ನು ತಲುಪಲಿದೆ. ವೈರಲ್  ಪೋಸ್ಟ್‌ನಲ್ಲಿ ಎಡಭಾಗದಲ್ಲಿ ಗಾಂಧಿ ಇರುವ ಹುಡುಗಿ ನೊರೊನ್ಹಾ ಇಬ್ಬರೂ ಒಂದೇ ಎಂದು ಹಲವರು ಟ್ವೀಟ್ ಮಾಡಿದ್ದಾರೆ. ಸುರಭಿ ಗುಪ್ತಾ (@Surabhi_Journo) ಎಂಬವರು “ರಾಹುಲ್ ಗಾಂಧಿ ಅವರು ತಮ್ಮ ಭಾರತ ಜೋಡೋ ಯಾತ್ರೆಯಲ್ಲಿ ಓವೈಸಿಯ ವೇದಿಕೆಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಗಳನ್ನು ಕೂಗಿದ ಹುಡುಗಿಯನ್ನು ತಬ್ಬಿಕೊಳ್ಳುತ್ತಿರುವುದು ಕಂಡುಬಂದಿದೆ. ವಿಷಯವೇನು?  ಎಂದು ಟ್ವೀಟ್ ಮಾಡಿದ್ದಾರೆ.

ಇದೇ ಫೋಟೋವನ್ನು ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಅವರು “ಎಚ್ಚರಿಕೆಯಿಂದ ನೋಡಿ. ಭಾರತ್ ಜೋಡೋ ಅಲ್ಲ, ಇದು ಭಾರತ್ ತೋಡೋ!!” ಎಂಬ ಶೀರ್ಷಿಕೆಯೊಂದಿಗೆ ಟ್ವೀಟ್ ಮಾಡಿದ್ದು ನಂತರ ಅದನ್ನು ಡಿಲೀಟ್ ಮಾಡಿದ್ದಾರೆ.

ಫ್ಯಾಕ್ಟ್ ಚೆಕ್

ರಾಹುಲ್ ಗಾಂಧಿಯನ್ನು ಅಪ್ಪಿಕೊಂಡಿರುವ ವೈರಲ್ ಫೋಟೋದಲ್ಲಿರುವ ಹುಡುಗಿ ಕೆಎಸ್​ಯು ಸದಸ್ಯೆ ಮಿವಾ ಜಾಲಿ.  ಜಾಲಿ ತನ್ನ Instagram ಹ್ಯಾಂಡಲ್‌ನಲ್ಲಿ  ಸೆಪ್ಟೆಂಬರ್ 21, 2022 ರಂದು, “H A P P I E S T ‼️M O M E N T ‼️ I N MA L I F E ‼️…. Ma own Ragaಎಂಬ ಶೀರ್ಷಿಕೆಯೊಂದಿಗೆ ಫೋಟೊ ಟ್ವೀಟ್ ಮಾಡಿದ್ದಾರೆ. ಕೇರಳದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಗಾಂಧಿಯನ್ನು ಭೇಟಿಯಾದ ವಿಡಿಯೋವನ್ನು ಸಹ ಪೋಸ್ಟ್ ಮಾಡಿದ್ದಾರೆ.


ವೈರಲ್ ಫೋಟೋದಲ್ಲಿರುವುದು ನಾನೇ

ಕೇರಳ ಸ್ಟೂಡೆಂಟ್ಸ್ ಯೂನಿಯನ್  ಎರ್ನಾಕುಲಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಿವಾ ಜಾಲಿ,  ಅವರನ್ನು ಬೂಮ್ ಸಂಪರ್ಕಿಸಿದ್ದು”ರಾಹುಲ್ ಜಿ ಜೊತೆಗಿನ ಫೋಟೋದಲ್ಲಿ ಅದು ನಾನೇ. ಕೇರಳದ ಎರ್ನಾಕುಲಂ ಜಿಲ್ಲೆಯ ಭಾರತ್ ಜೋಡೋ ಯಾತ್ರೆಯಲ್ಲಿ ಫೋಟೋ ಕ್ಲಿಕ್ಕಿಸಲಾಗಿದೆ ಎಂದು ಹೇಳಿದ್ದಾರೆ.