Fact check ಯೋಗಿ ಸರ್ಕಾರ ಆಯ್ಕೆಯಾದರೆ ಉತ್ತರ ಪ್ರದೇಶ ಸಮೃದ್ಧಿ ಕಾಣಲಿದೆ ಎಂದು ಹೇಳಿದ್ದಾರೆಯೇ ಅಖಿಲೇಶ್ ಯಾದವ್?

Akhilesh Yadav ಅಖಿಲೇಶ್ ಇಲ್ಲಿ ಹೇಳಿದ್ದು ಯೋಗ್ಯ್ ಸರ್ಕಾರ್ ಎಂದು. ಅದನ್ನೇ ಯೋಗಿ ಸರ್ಕಾರ್ ಎಂದು ತಪ್ಪಾಗಿ ಗ್ರಹಿಸಿ ವಿಡಿಯೊ ವೈರಲ್ ಮಾಡಲಾಗಿದೆ. 'ಯೋಗ್ಯ ಸರ್ಕಾರ್' ಎಂಬ ನುಡಿಗಟ್ಟು ಯಾದವ್ ಅವರ ಪದಪ್ರಯೋಗವಾಗಿದೆ ಮತ್ತು ಅವರು ಅದನ್ನು ಅನೇಕ ಸಂದರ್ಭಗಳಲ್ಲಿ ಬಳಸಿದ್ದಾರೆ.

Fact check ಯೋಗಿ ಸರ್ಕಾರ ಆಯ್ಕೆಯಾದರೆ ಉತ್ತರ ಪ್ರದೇಶ ಸಮೃದ್ಧಿ ಕಾಣಲಿದೆ ಎಂದು ಹೇಳಿದ್ದಾರೆಯೇ ಅಖಿಲೇಶ್ ಯಾದವ್?
ಅಖಿಲೇಶ್ ಯಾದವ್ ವಿಡಿಯೊದ ಫ್ಯಾಕ್ಟ್ ಚೆಕ್
Updated By: ರಶ್ಮಿ ಕಲ್ಲಕಟ್ಟ

Updated on: Jan 20, 2022 | 4:31 PM

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ (Akhilesh Yadav) ಅವರು ಯೋಗಿ ಸರ್ಕಾರವನ್ನು ಆಯ್ಕೆ ಮಾಡಿದರೆ ಉತ್ತರ ಪ್ರದೇಶವು ಅಭಿವೃದ್ಧಿ ಹೊಂದುತ್ತದೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ಇದನ್ನು ಪುಷ್ಠೀಕರಿಸಲು 11-ಸೆಕೆಂಡ್ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಫೇಸ್​​ಬುಕ್ ಬಳಕೆದಾರ ವಿಶಾಲ್ ಕುಶ್ವಾಹ ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದು ಇದು ಸುಮಾರು ಎರಡು ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ. ಈ ವಿಡಿಯೊವನ್ನು ಮಿಷನ್ ಮೋದಿ 2024 ನಂತಹ ಹಲವಾರು ಉನ್ನತ ನೆಟ್‌ವರ್ಕ್ ಫೇಸ್‌ಬುಕ್ ಪುಟಗಳು/ಗುಂಪುಗಳಲ್ಲಿ ಅಪ್‌ಲೋಡ್ ಮಾಡಲಾಗಿದೆ. ಅಂದಹಾಗೆ ಅಖಿಲೇಶ್ ಯಾದವ್ ಅವರು ತಮ್ಮ ಭಾಷಣದಲ್ಲಿ ಹೇಳಿದ್ದೇನು? ವೈರಲ್ ವಿಡಿಯೊದಲ್ಲಿರುವುದೇನು? ಇಲ್ಲಿದೆ ಫ್ಯಾಕ್ಟ್ ಚೆಕ್.


ಫ್ಯಾಕ್ಟ್ ಚೆಕ್
ಈ ವೈರಲ್ ವಿಡಿಯೊದ  ತುಣುಕಿನ ಎಡಬದಿಯಲ್ಲಿ ಮೇಲೆ Headlines India ಎಂದು ಇದೆ.  ಫ್ಯಾಕ್ಟ್ ಚೆಕ್ ಮಾಡಿದ ಆಲ್ಟ್ ನ್ಯೂಸ್ ವರದಿ ಪ್ರಕಾರ, ಈವಿಡಿಯೊವನ್ನು  ಫೇಸ್​​ಬುಕ್​​ನಲ್ಲಿ ಹುಡುಕಿದಾಗ ಜನವರಿ 2ರಂದು ಅಪ್ ಲೋಡ್ ಆಗಿರುವ ವಿಡಿಯೊವೊಂದು ಸಿಕ್ಕಿದೆ. ವೈರಲ್ ವಿಡಿಯೊವನ್ನು 58-ಸೆಕೆಂಡ್ ದೀರ್ಘವಿರುವ ಈ ವಿಡಿಯೊದಿಂದ ತೆಗೆಯಲಾಗಿದೆ.

ಅಖಿಲೇಶ್ ಯಾದವ್ ಇಲ್ಲಿ ಹೇಳಿರುವುದನ್ನು ಗಮನವಿಟ್ಟು ಕೇಳಿದರೆ ಅವರು ಏನು ಹೇಳಿದ್ದು ಎಂಬುದು ಗೊತ್ತಾಗುತ್ತದೆ. ಅಖಿಲೇಶ್ ಹಿಂದಿಯಲ್ಲಿ ಈ ರೀತಿ ಹೇಳುತ್ತಾರೆ- ‘ಹಮ್ ಆಪ್ ಸೇ ನಿವೇದನ್ ಕರ್ನಾ ಚಾಹ್ ತೇ ಹೈ, ಅಗರ್ ಉತ್ತರ್ ಪ್ರದೇಶ್ ಕೋ ಖುಷಾಲಿ ಕೆ ರಾಸ್ತೇ ಲೇ ಜಾನಾಹೈ ತೋ ಯೋಗ್ಯ್ ಸರ್ಕಾರ್ ಬನೇಗೀ‘. ಅಂದರೆ ನೀವು ಉತ್ತರ ಪ್ರದೇಶವನ್ನು ಸಮೃದ್ಧಿಯ ಹಾದಿಗೆ ಕೊಂಡೊಯ್ಯಲು ಬಯಸಿದರೆ ಯೋಗ್ಯ ಸರ್ಕಾರವನ್ನು ಆಯ್ಕೆ ಮಾಡಬೇಕು ಎಂದು ನಾವು ನಿಮ್ಮನ್ನು ವಿನಂತಿಸಲು ಬಯಸುತ್ತೇವೆ ಎಂದು ಅಖಿಲೇಶ್ ಹೇಳಿದ್ದಾರೆ.

ಅಖಿಲೇಶ್ ಇಲ್ಲಿ ಹೇಳಿದ್ದು ಯೋಗ್ಯ್ ಸರ್ಕಾರ್ ಎಂದು. ಅದನ್ನೇ ಯೋಗಿ ಸರ್ಕಾರ್ ಎಂದು ತಪ್ಪಾಗಿ ಗ್ರಹಿಸಿ ವಿಡಿಯೊ ವೈರಲ್ ಮಾಡಲಾಗಿದೆ. ‘ಯೋಗ್ಯ ಸರ್ಕಾರ್’ ಎಂಬ ನುಡಿಗಟ್ಟು ಯಾದವ್ ಅವರ ಪದಪ್ರಯೋಗವಾಗಿದೆ ಮತ್ತು ಅವರು ಅದನ್ನು ಅನೇಕ ಸಂದರ್ಭಗಳಲ್ಲಿ ಬಳಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಯೋಗಿ ಸರ್ಕಾರವು ಚುನಾಯಿತರಾದರೆ ಉತ್ತರ ಪ್ರದೇಶವು ಸಮೃದ್ಧಿಯನ್ನು ನೋಡುತ್ತದೆ ಎಂದು ಅವರು ಒಪ್ಪಿಕೊಂಡಿದ್ದಾರೆ ಎಂದು ತಪ್ಪು ಹೇಳಿಕೆಯೊಂದಿಗೆ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಭಾಷಣದ ವಿಡಿಯೊ ತುಣುಕು ವೈರಲ್ ಮಾಡಲಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಭಾಷಣದ ವೇಳೆ ಟೆಲಿಪ್ರಾಂಪ್ಟರ್ ಕೈಕೊಟ್ಟಿದ್ದಲ್ಲ, ಅದು ತಾಂತ್ರಿಕ ದೋಷ

Published On - 4:29 pm, Thu, 20 January 22