ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಪುಸ್ತಕದ ಕಪಾಟಿನಲ್ಲಿ “ಭಾರತವನ್ನು ಕ್ರಿಶ್ಚಿಯನ್ ರಾಷ್ಟ್ರವಾಗಿ ಪರಿವರ್ತಿಸುವುದು ಹೇಗೆ” ಎಂಬ ಪುಸ್ತಕವಿದೆ ಎಂದು ತೋರಿಸುವ ಫೋಟೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆದಾಗ್ಯೂ, ವೈರಲ್ ಆಗಿರುವ ಫೋಟೊ ಎಡಿಟ್ ಮಾಡಿದ್ದು. ಸೋನಿಯಾ ಗಾಂಧಿ ಅವರ ಶೆಲ್ಫ್ ನಲ್ಲಿರುವ ಪುಸ್ತಕದ ಹೆಸರನ್ನು ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡಲಾಗಿದೆ.
ಸೋನಿಯಾ ಗಾಂಧಿಯವರ ಶೆಲ್ಫ್ ನಲ್ಲಿರುವುದು ಯಾವ ಪುಸ್ತಕ?
ವೈರಲ್ ಫೋಟೊ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ದಿ ಕ್ವಿಂಟ್, ಸೋನಿಯಾ ಗಾಂಧಿ ಅವರ ಕಪಾಟಿನಲ್ಲಿ How to convert India into Christian nation ಎಂಬ ಪುಸ್ತಕ ಇಲ್ಲ ಎಂದು ಹೇಳಿದೆ. ವೈರಲ್ ಆಗಿರುವ ಫೋಟೊದ ಒರಿಜಿನಲ್ ಫೋಟೊವನ್ನು ಪರಿಶೀಲಿಸಿದರೆ ಕಪಾಟಿನಲ್ಲಿ ಅಂತಹ ಯಾವುದೇ ಪುಸ್ತಕ ಇಲ್ಲ.
ವೈರಲ್ ಚಿತ್ರದ ಜತೆಗಿರುವ ಒಕ್ಕಣೆ ಏನು
ಸೋನಿಯಾ ಗಾಂಧಿಯವರ ಗ್ರಂಥಾಲಯದಲ್ಲಿ“ ಭಾರತವನ್ನು ಕ್ರಿಶ್ಚಿಯನ್ ರಾಷ್ಟ್ರವಾಗಿ ಪರಿವರ್ತಿಸುವುದು ಹೇಗೆ ”ಎಂಬ ಪುಸ್ತಕ? ದಯವಿಟ್ಟು ರಿಟ್ವೀಟ್ ಮಾಡಿ ಮತ್ತು ಬಹಿರಂಗಪಡಿಸಿ ಎಂಬ ಒಕ್ಕಣೆಯೊಂದಿಗೆ ಸೋನಿಯಾ ಗಾಂಧಿ ಅವರ ಫೋಟೊ ವೈರಲ್ ಆಗಿದೆ.
See the sonia Gandhi back side book ….How to convert India into christian nation….@BJYM4Andhra pic.twitter.com/PGapvNkpvt
— R Vignesh ???? (@RVignes25569421) June 1, 2021
ಫೇಸ್‌ಬುಕ್‌ನ ಇನ್ನೊಬ್ಬ ಬಳಕೆದಾರರು, “ಜೂಮ್ ಮಾಡಿ ಮತ್ತು ಬಲಭಾಗವನ್ನು ನೋಡಿ. “ಭಾರತವನ್ನು ಕ್ರಿಶ್ಚಿಯನ್ ರಾಷ್ಟ್ರವಾಗಿ ಪರಿವರ್ತಿಸುವುದು ಹೇಗೆ” ಎಂಬ ಪುಸ್ತಕ. ಯಾವುದೇ ಹೆಚ್ಚಿನ ಪುರಾವೆ ಅಗತ್ಯವಿದೆಯೇ? ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಒಕ್ಕಣೆಯೊಂದಿಗೆ ಸೋನಿಯಾ ಗಾಂಧಿ ಅವರ ಫೋಟೊ ಫೇಸ್‌ಬುಕ್ ಮತ್ತು ಟ್ವಿಟರ್ ನಲ್ಲಿ ವೈರಲ್ ಆಗಿದೆ.
ಫ್ಯಾಕ್ಟ್ ಚೆಕ್
ವೈರಲ್ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಹಿಂದೂಸ್ತಾನ್ ಟೈಮ್ಸ್ ನಲ್ಲಿ ಪ್ರಕಟವಾದ ಸುದ್ದಿ ಸಿಕ್ಕಿದ್ದು , ಅದರಲ್ಲಿ ಇದೇ ಚಿತ್ರ ಸಿಕ್ಕಿದೆ. ಈ ಫೋಟೊ ಪಿಟಿಐ ಸುದ್ದಿಸಂಸ್ಥೆಯದ್ದು ಎಂದು ದಿ ಕ್ವಿಂಟ್ ವರದಿ ಮಾಡಿದೆ. ಪಿಟಿಐ ಆರ್ಕೈವ್ನಲ್ಲಿ ಈ ಫೋಟೊಗಾಗಿ ಹುಡುಕಾಡಿದಾಗ2020 ರಲ್ಲಿ ಗಾಂಧಿಯವರ ವಿಡಿಯೊ ಸಂವಾದದಿಂದ ಈ ಚಿತ್ರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಯಿತು.
ಕಾಂಗ್ರೆಸ್ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹುಡುಕಾಡಿ ವಿಡಿಯೊವನ್ನು ಪರಿಶೀಲಿಸಿ ಮೂಲ ವಿಡಿಯೊವನ್ನು ನೋಡಿದಾಗ, ಬಿಹಾರ ಚುನಾವಣೆಯ ಒಂದು ದಿನ ಮೊದಲು 2020 ಅಕ್ಟೋಬರ್ 27 ರಂದು ಗಾಂಧಿ ಬಿಹಾರದ ಜನರನ್ನು ಉದ್ದೇಶಿಸಿ ಮಾತನಾಡಿದ್ದ ವಿಡಿಯೊ ಇದಾಗಿದೆ.
बिहार की पवित्र और ऐतिहासिक धरती को मैं नमन करती हूं। आज बिहार में सत्ता और अंहकार में डूबी सरकार अपने रास्ते से अलग हट गई है।
कांग्रेस अध्यक्षा श्रीमती सोनिया गांधी जी का बिहार की जनता के नाम संदेश।#SpeakUpBihar pic.twitter.com/J3dTstuK4L
— Congress (@INCIndia) October 27, 2020
ವೈರಲ್ ಚಿತ್ರದಲ್ಲಿನ ಅಂಶಗಳನ್ನು ಕಾಂಗ್ರೆಸ್ ವಿಡಿಯೊದಲ್ಲಿನ ದೃಶ್ಯಕ್ಕೆಗೆ ಹೋಲಿಸಿ ನೋಡಿದಾಗ ಸೋನಿಯಾ ಗಾಂಧಿಯವರ ಹಿನ್ನೆಲೆಯಲ್ಲಿರುವ ಕಪಾಟಿನಲ್ಲಿದ್ದದ್ದು ಪವಿತ್ರ ಬೈಬಲ್. ಆದರೆ ‘ಭಾರತವನ್ನು ಕ್ರಿಶ್ಚಿಯನ್ ರಾಷ್ಟ್ರವಾಗಿ ಪರಿವರ್ತಿಸುವುದು ಹೇಗೆ’ ಎಂಬ ಶೀರ್ಷಿಕೆಯ ಪುಸ್ತಕ ಮತ್ತು ಯೇಸುಕ್ರಿಸ್ತನ ಪ್ರತಿಮೆಯನ್ನು ಈ ಚಿತ್ರದಲ್ಲಿ ಎಡಿಟ್ ಮಾಡಲಾಗಿದೆ.
We’ve decided to file an FIR against all those handles sharing this morphed image.
Dirty tricks of Amit Malware & company won’t be tolerated further. https://t.co/7T9RtbkBvT
— Srinivas B V (@srinivasiyc) June 1, 2021
ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ ಅವರು, “ಈ ಎಡಿಟ್ ಮಾಡಿದ ಚಿತ್ರವನ್ನು ಹಂಚಿಕೊಳ್ಳುವ ಎಲ್ಲ ಸೋಷ್ಯಲ್ ಮೀಡಿಯಾ ಹ್ಯಾಂಡಲ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ನಾವು ನಿರ್ಧರಿಸಿದ್ದೇವೆ. ಅಮಿತ್ ಮಾಲ್ವೇರ್ ಮತ್ತು ಕಂಪನಿಯ ಕೊಳಕು ತಂತ್ರಗಳನ್ನು ಇನ್ನಷ್ಟು ಸಹಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Fact Check: ಕಾಂಗ್ರೆಸ್ ಟೂಲ್ಕಿಟ್ ಎಂದು ವೈರಲ್ ಆದ ದಾಖಲೆ ಕಾಂಗ್ರೆಸ್ ಪಕ್ಷದ ನಕಲಿ ಲೆಟರ್ಹೆಡ್ ಬಳಸಿ ಮಾಡಿದ್ದು
Published On - 4:42 pm, Tue, 1 June 21