ಸರ್ಕಾರಿ ಕೆಲಸ ಸಿಗದ ಕಾರಣ ಯುವಕನೊಬ್ಬ ಯಮುನಾ ನದಿಗೆ (Yamuna River) ಹಾರಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಭಾನುವಾರ ರಾತ್ರಿ ಯಮುನಾ ನದಿಗೆ ಹಾರುವ ಮೊದಲು ಕರ್ಮವೀರ್ ಸಿಂಗ್ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಸರ್ಕಾರಿ ಕೆಲಸ ಸಿಗಲಿಲ್ಲ, ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ. ನಾಗ್ಲಾ ತಾಲ್ಫಿ ನಿವಾಸಿ ಕರ್ಮವೀರ್ ಕೂಡ ಸೇನಾ ನೇಮಕಾತಿಗೆ ಬಹಳ ಸಮಯದಿಂದ ತಯಾರಿ ನಡೆಸುತ್ತಿದ್ದರು ಎಂದು ನ್ಯೂ ಆಗ್ರಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಇನ್ಸ್‌ಪೆಕ್ಟರ್ ವಿಜಯ್ ವಿಕ್ರಮ್ ಸಿಂಗ್ ತಿಳಿಸಿದ್ದಾರೆ. ಸರ್ಕಾರಿ ನೌಕರಿ ಸಿಗದೆ ಆತ ನೊಂದಿದ್ದ ಎಂದು ಅವರು ಹೇಳಿದ್ದಾರೆ.
ಯುವಕನ ಶವ ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಡೈವರ್‌ಗಳ ಸಹಾಯದಿಂದ ಯಮುನಾ ನದಿಯಲ್ಲಿ ಮೃತದೇಹ ಹುಡುಕುತ್ತಿದ್ದಾರೆ ಎಂದು ಎಸ್‌ಎಚ್‌ಒ ಹೇಳಿದರು. ಆದಾಗ್ಯೂ, ಅವರ ಮೊಬೈಲ್ ಮತ್ತು ಚಪ್ಪಲಿ ಸಿಕ್ಕಿದೆ ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.