ಗಾರ್ಬಾ ಕಾರ್ಯಕ್ರಮದಲ್ಲಿ ಮಗಳಿಗೆ ಕಿರುಕುಳ ನೀಡಿದ ಯುವಕರ ಜತೆ ಹೊಡೆದಾಟ, ತಂದೆ ಸಾವು
ಗಾರ್ಬಾ ಕಾರ್ಯಕ್ರಮದ ವೇಳೆ ತನ್ನ ಮಗಳಿಗೆ ಕಿರುಕುಳ ನೀಡಿದ ಇಬ್ಬರು ಯುವಕರೊಂದಿಗೆ ನಡೆದ ಹೊಡೆದಾಟದಲ್ಲಿ ತಂದೆಯೊಬ್ಬರು ಸಾವನ್ನಪ್ಪಿರುವ ಮನಕಲಕುವ ಘಟನೆ ಫರಿದಾಬಾದ್‌ನ ರೆಸಿಡೆನ್ಶಿಯಲ್ ಸೊಸೈಟಿಯಲ್ಲಿ ನಡೆದಿದೆ. ಸೋಮವಾರ ರಾತ್ರಿ ಫರಿದಾಬಾದ್‌ನ ಸೆಕ್ಟರ್ 87 ರಲ್ಲಿ ಪ್ರಿನ್ಸೆಸ್ ಪಾರ್ಕ್ ಸೊಸೈಟಿಯಲ್ಲಿ ನಡೆದ ಗರ್ಬಾ ಕಾರ್ಯಕ್ರಮದಲ್ಲಿ ವ್ಯಕ್ತಿ ತನ್ನ ಕುಟುಂಬ ಸದಸ್ಯರೊಂದಿಗೆ ಭಾಗವಹಿಸಿದ್ದರು.

ಅಲ್ಲಿ ಇಬ್ಬರು ಮಗಳ ಬಳಿಗೆ ಬಂದು ಆಕೆಯ ಫೋನ್ ನಂಬರ್ ಕೇಳಿದ್ದರು. ದಾಂಡಿಯಾ ಕಾರ್ಯಕ್ರಮದ ವೇಳೆ ಅವರು ಅನುಚಿತವಾಗಿ ಬಾಲಕಿಯ ಕೈ ಸ್ಪರ್ಶಿಸಿದ್ದರು ಎಂದು ಬಾಲಕಿಯ ಮನೆಯವರು ಆರೋಪಿಸಿದ್ದಾರೆ.
ಘಟನೆಯ ವಿಷಯ ಮನೆಯವರಿಗೆ ತಿಳಿಯುತ್ತಿದ್ದಂತೆಯೇ ಎರಡು ಕಡೆಯವರ ನಡುವೆ ಮಾರಾಮಾರಿ ನಡೆದಿದೆ. ವಾಗ್ವಾದದ ಸಮಯದಲ್ಲಿ, ವ್ಯಕ್ತಿಯನ್ನು ತಳ್ಳಿದ್ದಾರೆ, ನೆಲಕ್ಕೆ ಬಿದ್ದವರಿಗೆ ಮತ್ತೆ ಪ್ರಜ್ಞೆಯೇ ಬರಲಿಲ್ಲ.
ವಸತಿ ಸಮುಚ್ಚಯದಲ್ಲಿ ಗಾರ್ಬಾ ಕಾರ್ಯಕ್ರಮದ ಸಂದರ್ಭದಲ್ಲಿ ಎರಡು ಕಡೆಯವರು ಕೊರಳಪಟ್ಟಿಗಳನ್ನು ಹಿಡಿದುಕೊಂಡು ಪರಸ್ಪರ ತಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಮತ್ತಷ್ಟು ಓದಿ: ಗುಜರಾತ್ನಲ್ಲಿ ಗಾರ್ಬಾ ನೃತ್ಯದ ವೇಳೆ 10 ಮಂದಿ ಹೃದಯಾಘಾತದಿಂದ ಸಾವು, ವೈದ್ಯರು ಕೊಟ್ಟ ಕಾರಣಗಳಿವು
ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ತನಿಖಾಧಿಕಾರಿ ಜಮೀಲ್ ಖಾನ್ ಪ್ರಕಾರ, ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ