Farmers Protest: ಪಂಜಾಬ್​​ನಲ್ಲಿ ಬಿಜೆಪಿ ಮುಖಂಡನ ಹೊಲಕ್ಕೆ ನುಗ್ಗಿ ಭತ್ತದ ಸಸಿಗಳನ್ನು ಪೂರ್ತಿಯಾಗಿ ನಾಶ ಮಾಡಿದ ರೈತರು

ಗದ್ದೆಯನ್ನು ಧ್ವಂಸ ಮಾಡಿದವರ ವಿರುದ್ಧ ಹರ್ಜೀತ್​ ಸಿಂಗ್​ ಪಂಜಾಬ್​ ಡಿಜಿಪಿಗೆ ದೂರು ನೀಡಿದ್ದಾರೆ. ಗೃಹ ಸಚಿವ ಅಮಿತ್​ ಶಾರಿಗೂ ಘಟನೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಾರೆ.

Farmers Protest: ಪಂಜಾಬ್​​ನಲ್ಲಿ ಬಿಜೆಪಿ ಮುಖಂಡನ ಹೊಲಕ್ಕೆ ನುಗ್ಗಿ ಭತ್ತದ ಸಸಿಗಳನ್ನು ಪೂರ್ತಿಯಾಗಿ ನಾಶ ಮಾಡಿದ ರೈತರು
ಭತ್ತದ ಸಸಿಗಳನ್ನು ಕಿತ್ತು, ಹೊಸದಾಗಿ ಉಳುಮೆ ಮಾಡಿದ ರೈತರು
Follow us
TV9 Web
| Updated By: Lakshmi Hegde

Updated on: Jul 03, 2021 | 5:36 PM

ದೆಹಲಿ: ಸಂಯುಕ್ತ ಕಿಸಾನ್​ ಮೋರ್ಚಾ (SKM) ಸಂಘಟನೆಯ ರೈತರು ಪುಂಡಾಟಿಕೆ ತೋರಿದ್ದಾರೆ. ಪಂಜಾಬ್​​ನ ಬರ್ನಲಾ ಜಿಲ್ಲೆಯ ಧನೌಲಾ ಗ್ರಾಮದಲ್ಲಿರುವ, ಬಿಜೆಪಿ ಮುಖಂಡ ಹರ್ಜೀತ್​ ಸಿಂಗ್​ ಗ್ರೇವಾಲ್​​ ಅವರ ಭತ್ತದ ಗದ್ದೆಯನ್ನು ಸಂಪೂರ್ಣವಾಗಿ ನಾಶ ಮಾಡಿದ್ದಾರೆ. ಮಹಿಳೆಯರೂ ಸೇರಿ ಕೆಲವು ರೈತರು ಕೈಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಭಾರತೀಯ ಕಿಸಾನ್​ ಯೂನಿಯನ್​ನ ಬಾವುಟವನ್ನು ಹಿಡಿದು, ಹರ್ಜೀತ್​ ಸಿಂಗ್​​ರ ಭತ್ತದ ಗದ್ದೆಗೆ ನುಗ್ಗಿದ್ದರು. ಸುಮಾರು 1.5 ಎಕರೆ ವಿಸ್ತೀರ್ಣದ ಹೊಲದಲ್ಲಿ ಬೆಳೆದಿದ್ದ ಭತ್ತದ ಸಸಿಗಳನ್ನೆಲ್ಲ ಕಿತ್ತು ಎಸೆದು, ತಮ್ಮ ಟ್ರ್ಯಾಕ್ಟರ್​​ನಿಂದ ಮತ್ತೊಮ್ಮೆ ಗದ್ದೆಯನ್ನು ಉಳಿಮೆ ಮಾಡಿದ್ದಾರೆ.

ಹರ್ಜೀತ್​ ಗ್ರೇವಾಲಾರ ಹೇಳಿಕೆಗೆ ಕ್ರೋಧ ಬಿಜೆಪಿ ಮುಖಂಡ ಹರ್ಜೀತ್​ ಸಿಂಗ್​ ಅವರು ರೈತರ ವಿರುದ್ಧ ನೀಡಿದ್ದ ಒಂದು ಹೇಳಿಕೆಯಿಂದ ರೈತಸಂಘಟನೆಗಳು ತೀವ್ರ ಕ್ರೋಧಗೊಂಡಿದ್ದವು. ಕೆಲವು ರೈತ ಸಂಘಟನೆಗಳಿಗೆ ಪ್ರತಿಭಟನೆಯನ್ನು ಅಂತ್ಯಗೊಳಿಸುವುದು ಇಷ್ಟವಿಲ್ಲ. ಅವರು ಪ್ರತಿಭಟನೆ ಹೆಸರಲ್ಲಿ ಹಳ್ಳಿಗಳಿಂದ ನಿಧಿ ಸಂಗ್ರಹಿಸುತ್ತಿದ್ದಾರೆ. ಅಷ್ಟೇ ಅಲ್ಲ, ವಿದೇಶಗಳಿಂದಲೂ ಹಣಕಾಸಿನ ನೆರವು ಪಡೆಯುತ್ತಿದ್ದಾರೆ ಎಂದು ಹರ್ಜೀತ್​ ಸಿಂಗ್ ಆರೋಪಿಸಿದ್ದರು. ಅದಾದ ಬೆನ್ನಲ್ಲೇ ರೈತ ಸಂಘಟನೆಗಳು, ಹರ್ಜೀತ್​ ಸಿಂಗ್ ಗ್ರೇವಾಲ್​​ರ ಭೂಮಿಯನ್ನು ಕೃಷಿಚಟುವಟಿಕೆಗಾಗಿ ಯಾರೂ ಗುತ್ತಿಗೆ ಪಡೆಯುವಂತಿಲ್ಲ, ಹಾಗೇನಾದರೂ ಆದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆಯನ್ನು ನೀಡಿದ್ದರು. ಇದೀಗ ಭತ್ತದ ಸಸಿಗಳು ಬೆಳೆದು ನಿಂತ ಬೆನ್ನಲ್ಲೇ ಇಂಥ ಕೃತ್ಯ ಎಸಗಿದ್ದಾರೆ. ಇದೀಗ ಭತ್ತದ ಗದ್ದೆಯನ್ನು ರೈತರು ಧ್ವಂಸಗೊಳಿಸಿದ ವಿಡಿಯೋ ಸೋಷಿಯಲ್​ ಮೀಡಿಯಾಗಳನ್ನೂ ಸಿಕ್ಕಾಪಟೆ ವೈರಲ್ ಆಗಿದೆ.

ಎಫ್​ಐಆರ್ ದಾಖಲು ಇನ್ನು ಗದ್ದೆಯನ್ನು ಧ್ವಂಸ ಮಾಡಿದವರ ವಿರುದ್ಧ ಹರ್ಜೀತ್​ ಸಿಂಗ್​ ಪಂಜಾಬ್​ ಡಿಜಿಪಿಗೆ ದೂರು ನೀಡಿದ್ದಾರೆ. ಗೃಹ ಸಚಿವ ಅಮಿತ್​ ಶಾರಿಗೂ ಘಟನೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಾರೆ. ಹೊಲದಲ್ಲಿ ಭತ್ತದ ಸಸಿಗಳನ್ನು ಕಿತ್ತವರ ವಿರುದ್ಧ ಧನೌಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಯಾವುದೇ ಗಂಭೀರ ಕ್ರಮವನ್ನು ಸದ್ಯದ ಮಟ್ಟಿಗೆ ತೆಗೆದುಕೊಂಡಿಲ್ಲ.

ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿ ಗದ್ದೆಯನ್ನು ಧ್ವಂಸ ಮಾಡಿದವರ ವಿರುದ್ಧ ಹರ್ಜೀತ್​ ಸಿಂಗ್​ ಪಂಜಾಬ್​ ಡಿಜಿಪಿಗೆ ದೂರು ನೀಡಿದ್ದಾರೆ. ಗೃಹ ಸಚಿವ ಅಮಿತ್​ ಶಾರಿಗೂ ಘಟನೆ ಯ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಾರೆ.ಸಿ ಸಾವಿರಾರು ರೈತರು ಏಳು ತಿಂಗಳುಗಳಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಿಂಗು, ಟಿಕ್ರಿ ಮತ್ತು ಘಾಜಿಪುರ್​ಗಳಲ್ಲೇ ಬೀಡುಬಿಟ್ಟಿದ್ದಾರೆ. ಪ್ರತಿಭಟನೆ ಕೈಬಿಡುವಂತೆ ಕೃಷಿ ಸಚಿವ ನರೇಂದ್ರ ಸಿಂಗ್​ ತೋಮರ್​, ವಾಣಿಜ್ಯ ಇಲಾಖೆ ಸಚಿವ ಪಿಯುಷ್​ ಗೋಯಲ್​ ಹಲವು ಬಾರಿ ರೈತರಿಗೆ ಮನವಿ ಮಾಡಿದ್ದಾರೆ. ಆದರೆ ಮೂರು ಕೃಷಿ ಕಾಯ್ದೆಗಳನ್ನು ವಾಪಸ್​ ಪಡೆಯುವವರೆಗೂ ಪ್ರತಿಭಟನೆ ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದು ಕುಳಿತಿದ್ದಾರೆ.

ಇದನ್ನೂ ಓದಿ: Delta Variant: ಡೆಲ್ಟಾ ಮಾದರಿ ಕೊರೊನಾ ಸೋಂಕಿನ ಲಕ್ಷಣಗಳು ಈ ಮೊದಲ ಕೊವಿಡ್ ರೋಗಲಕ್ಷಣಕ್ಕಿಂತ ಭಿನ್ನವಾಗಿರಬಹುದು: ಅಧ್ಯಯನ

(Farmers destroy BJP leaders land uproot paddy In Punjab)

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ