Gandhi Jayanti ಗಾಂಧಿ ಜಯಂತಿವರೆಗೂ ಸರ್ಕಾರಕ್ಕೆ ಜೀವದಾನ ನೀಡಿದ ಪ್ರತಿಭಟನಾ ನಿರತ ರೈತರು! ಮುಂದೇನು?
ಇಂದು ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ರೈತರು ರಸ್ತೆ ತಡೆ ನಡೆಸಿದ್ದಾರೆ. ತುರ್ತು ಹಾಗೂ ಅಗತ್ಯ ವಸ್ತುಗಳ ವಾಹನ ಸಂಚಾರಕ್ಕೆ ಯಾವುದೇ ಅಡೆತಡೆ ಮಾಡದೆ, ಶಾಂತಿಯುತ ಚಕ್ಕಾ ಜಾಮ್ ಮಾಡಿದ್ದಾರೆ. ಆಂಬುಲೆನ್ಸ್, ಶಾಲಾ ವಾಹನ ನಿಲ್ಲಿಸದೆ ರಸ್ತೆ ತಡೆ ಕೈಗೊಂಡಿದ್ದಾರೆ.

ದೆಹಲಿ: ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರು, ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರಕ್ಕೆ ಅಕ್ಟೋಬರ್ 2ರವರೆಗೆ ಗಡುವು ನೀಡಿದ್ದಾರೆ. ಅಲ್ಲಿಯರವರೆಗೂ ಗಾಜಿಪುರ ಗಡಿಯಲ್ಲಿ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿಕೆ ನೀಡಿದ್ದಾರೆ.
ನೂತನ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಲು, ಅಕ್ಟೋಬರ್ 2ರವರೆಗೆ ಸರ್ಕಾರಕ್ಕೆ ಸಮಯಾವಕಾಶ ನೀಡುತ್ತೇವೆ. ಆ ಬಳಿಕ, ಮುಂದಿನ ಯೋಜನೆಯನ್ನು ರೂಪಿಸಿಕೊಳ್ಳುತ್ತೇವೆ. ಅವಸರದ ಮತ್ತು ಒತ್ತಡದ ಸನ್ನಿವೇಶದಲ್ಲಿ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ (BKU) ನಾಯಕ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ನಾವು ಹಿಂತಿರುಗುವ ಪ್ರಶ್ನೆಯೇ ಇಲ್ಲ. ಕೃಷಿ ಕಾಯ್ದೆ ಹಿಂಪಡೆಯುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ. ಒತ್ತಡ ತಂತ್ರ ಹೇರಿ ಚರ್ಚೆಗೆ ಕರೆದರೆ ನಾವು ಬರುವುದಿಲ್ಲ. ಕೇಂದ್ರ ಸರ್ಕಾರದ 3 ಕೃಷಿ ಕಾಯ್ದೆ ಹಿಂಪಡೆಯಲೇಬೇಕು. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ಹೇಳಿದ್ದಾರೆ.
ಕೇಂದ್ರ ಅಕ್ಟೋಬರ್ 2ರೊಳಗೆ ಕಾಯ್ದೆ ಹಿಂಪಡೆಯದೆ ಹೋದರೆ, ನಮ್ಮ ಹೋರಾಟದ ಚಿತ್ರಣ ಬದಲಾಗಲಿದೆ. ಜ.26ರಂದು ನಡೆದ ಹಿಂಸಾಚಾರದ ಬಗ್ಗೆ ದಾಖಲೆ ಇದೆ. ಘಟನೆ ಸಂಬಂಧ ನಮ್ಮ ಬಳಿಯೂ ಸಾಕ್ಷ್ಯಾಧಾರಗಳು ಇವೆ. ನಮಗೆ ನೋಟಿಸ್ ನೀಡಿ ಹೆದರಿಸುವ ಕೆಲಸ ಮಾಡಬೇಡಿ. ನಿಮ್ಮ ಯಾವುದೇ ಒತ್ತಡ ತಂತ್ರಗಳಿಗೆ ನಾವು ಮಣಿಯುವುದಿಲ್ಲ ಎಂದು ಟಿಕಾಯತ್ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರ ರೈತ ಹೋರಾಟದ ಬಗ್ಗೆ ತಾಳಿರುವ ನಿಲುವಿಗೆ ರೈತ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಗಣರಾಜ್ಯೋತ್ಸವ ದಿನ ನಡೆದ ಟ್ರಾಕ್ಟರ್ ಚಳುವಳಿ, ಹಿಂಸಾತ್ಮಕ ಘಟನೆಗಳ ಬಳಿಕ, ದೆಹಲಿ ಗಡಿಭಾಗಗಳಲ್ಲಿ ಇಂಟರ್ನೆಟ್ ಸೌಲಭ್ಯ ಸ್ಥಗಿತಗೊಳಿಸಿರುವ ಬಗ್ಗೆಯೂ ರೈತರು ಆಕ್ಷೇಪ ವ್ಯಕ್ತಪಡಿಸಿದ್ದರು. ಕೇಂದ್ರದ ನಿಲುವಿನ ವಿರುದ್ಧ ರೈತರು ಇಂದು (ಫೆ.6) ಚಕ್ಕಾ ಜಾಮ್ ನಡೆಸಿದ್ದಾರೆ. ಕರ್ನಾಟಕ, ದೆಹಲಿ ಗಡಿಭಾಗ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ ಹಾಗೂ ಮತ್ತಿತರ ಭಾಗಗಳಲ್ಲಿ ರೈತ ಹೋರಾಟಗಾರರು ರಸ್ತೆ ತಡೆ ಮಾಡಿದ್ದಾರೆ.
ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯು ಎರಡು ತಿಂಗಳ ಗಡಿದಾಟಿ ಸಾಗುತ್ತಿದೆ. ಇಂದು ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ರೈತರು ರಸ್ತೆ ತಡೆ ನಡೆಸಿದ್ದಾರೆ. ತುರ್ತು ಹಾಗೂ ಅಗತ್ಯ ವಸ್ತುಗಳ ವಾಹನ ಸಂಚಾರಕ್ಕೆ ಯಾವುದೇ ಅಡೆತಡೆ ಮಾಡದೆ, ಶಾಂತಿಯುತ ಚಕ್ಕಾ ಜಾಮ್ ಮಾಡಿದ್ದಾರೆ. ಆಂಬುಲೆನ್ಸ್, ಶಾಲಾ ವಾಹನ ನಿಲ್ಲಿಸದೆ ರಸ್ತೆ ತಡೆ ಕೈಗೊಂಡಿದ್ದಾರೆ.
ಆಂಬುಲೆನ್ಸ್ಗೆ ದಾರಿ ಮಾಡಿಕೊಟ್ಟ ಪ್ರತಿಭಟನಾ ನಿರತ ರೈತರು
#WATCH | Haryana: Farmers blocking Palwal-Agra Highway at Atohan Chowk near Palwal as part of their country-wide 'Chakka Jaam' make way for an ambulance. pic.twitter.com/HguODNX39f
— ANI (@ANI) February 6, 2021
ದೆಹಲಿ-ಉತ್ತರ ಪ್ರದೇಶದ ಗಾಜಿಪುರ್ ಗಡಿಭಾಗದಲ್ಲಿ ನಿಯೋಜನೆಗೊಂಡಿರುವ ಪೊಲೀಸರು
#WATCH: Heavy security deployment at Ghazipur border (Delhi-Uttar Pradesh), in view of protests against the farm laws.
(Video source: Delhi Police) pic.twitter.com/yyQGSj393R
— ANI (@ANI) February 6, 2021
ಇಂಟರ್ನೆಟ್ ಸೌಲಭ್ಯವು ಸಿಂಘು, ಗಾಜಿಪುರ್, ಟಿಕ್ರಿ ಗಡಿಭಾಗದಲ್ಲಿ ಇಂದು ರಾತ್ರಿ 11.59ರವರೆಗೆ ಲಭ್ಯವಿರುವುದಿಲ್ಲ. ಸಾರ್ವಜನಿಕ ಹಿತಾಸಕ್ತಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹರ್ಯಾಣದ ಎರಡು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯು ನಾಳೆ ಸಂಜೆಯವರೆಗೆ ಕಡಿತಗೊಂಡಿರುತ್ತದೆ ಎಂದು ಹರ್ಯಾಣ ಸರ್ಕಾರ ತಿಳಿಸಿದೆ. ಸೋನಿಪತ್ ಮತ್ತು ಝಾಜ್ಜರ್ನಲ್ಲಿ ನಾಳೆ ಸಂಜೆ 5 ಗಂಟೆಯವರೆಗೆ ವಾಯ್ಸ್ ಕಾಲ್ ಸೇವೆ ಹೊರತುಪಡಿಸಿ, ಎಲ್ಲಾ ಎಸ್ಎಮ್ಎಸ್ ಸೇವೆಗಳು, ಅಂತರ್ಜಾಲ (2G/3G/4G/CDMA/GPRS) ಸೇವೆಗಳು ಲಭ್ಯವಿರುವುದಿಲ್ಲ.
Chakka Jam: ಇಂದು ಮಧ್ಯಾಹ್ನ ರಸ್ತೆ ತಡೆ ಪ್ರೋಗ್ರಾಂ, ದೆಹಲಿ ಗಡಿಭಾಗಗಳಲ್ಲಿ ಪೊಲೀಸ್ ಬಿಗಿ ಭದ್ರತೆ
Published On - 4:20 pm, Sat, 6 February 21




