ದೆಹಲಿ: ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಆರಂಭಗೊಂಡ ರೈತರ ಹೋರಾಟವನ್ನು ಬಲಪಡಿಸುವ ಉದ್ದೇಶದಿಂದ ಸಪ್ಟೆಂಬರ್ 25 ಶುಕ್ರವಾರ, ಭಾರತ್ ಬಂದ್ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧರಿಸಿದೆ. ರೈತ ಹೋರಾಟವನ್ನು ವಿಸ್ತರಿಸುವ ಮತ್ತು ಬಲಗೊಳಿಸುವ ಆಶಯವನ್ನು ಹೊಂದಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಿಸಾನ್ ಮೋರ್ಚಾ ಹೇಳಿದೆ.
ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ಆಶೀಶ್ ಮಿತ್ತಲ್ ದೆಹಲಿಯ ಸಿಂಘು ಗಡಿಭಾಗದಲ್ಲಿ ಮಾತನಾಡಿ, ಸಪ್ಟೆಂಬರ್ 25 ರಂದು ಭಾರತ್ ಬಂದ್ ನಡೆಸುವ ಬಗ್ಗೆ ಕರೆ ನೀಡಿದ್ದಾರೆ. ಇದೇ ದಿನಾಂಕದಂದು ಕಳೆದ ವರ್ಷ ಕೂಡ ಬಂದ್ ಆಚರಿಸಲಾಗಿತ್ತು. ಕಳೆದ ಬಾರಿ ಕೊರೊನಾ ನಡುವೆ ನಡೆಸಲಾದ ಬಂದ್ಗಿಂತ ಈ ಬಾರಿಯ ಈ ಬಂದ್ ಹೆಚ್ಚು ಯಶಸ್ಸು ಕಾಣಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
ಆಲ್ ಇಂಡಿಯಾ ಕಿಸಾನ್ ಸಭೆಯ ಸಂಚಾಲಕರೂ ಆಗಿದ್ದ ಆಶಿಶ್ ಮಿತ್ತಲ್, ಶುಕ್ರವಾರದ ಸಭೆಯಲ್ಲಿ ಮಾತನಾಡಿ, ಎರಡು ದಿನದ ಸಮಾರಂಭವು ಯಶಸ್ವಿಯಾಗಿದೆ. ಸುಮಾರು 22 ರಾಜ್ಯಗಳ ಪ್ರತಿನಿಧಿಗಳು ಇಲ್ಲಿ ಭಾಗವಹಿಸಿದ್ದಾರೆ. ಕೇವಲ 300 ರಷ್ಟು ರೈತ ಸಂಘಟನೆಯ ಮುಖಂಡರು ಮಾತ್ರ ಅಲ್ಲದೆ, ಮಹಿಳಾ, ಕಾರ್ಮಿಕ, ಬುಡಕಟ್ಟು ಹಾಗೂ ಯುವ ಮತ್ತು ವಿದ್ಯಾರ್ಥಿ ಸಂಘಟನೆಯ ಪ್ರತಿನಿಧಿಗಳು ಕೂಡ ಇಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ಒಂಭತ್ತು ತಿಂಗಳಿನಿಂದ ನಡೆಯುತ್ತಿರುವ ರೈತರ ಹೋರಾಟ, ಅದನ್ನು ಪ್ಯಾನ್ ಇಂಡಿಯಾ ಚಳುವಳಿಯಾಗಿ ಮಾಡುವಲ್ಲಿ ಬೇಕಾದ ವಿಚಾರಗಳನ್ನು ಈ ಸಮಾವೇಶದಲ್ಲಿ ಮಾತುಕತೆ ನಡೆಸಲಾಯಿತು. ಸರ್ಕಾರ ಹೇಗೆ ಕಾರ್ಪೊರೇಟ್ಗಳ ಪರವಾಗಿ ಮತ್ತು ರೈತ ಸಮುದಾಯದ ವಿರೋಧಿಯಾಗಿ ಕೆಲಸ ಮಾಡುತ್ತಿದೆ ಎಂದು ಚರ್ಚಿಸಲಾಯಿತು.
ಕಾರ್ಪೊರೇಟ್ ಪರವಾದ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು. ಎಲ್ಲಾ ಬೆಲೆಗಳಿಗೂ ಕನಿಷ್ಠ ಬೆಂಬಲ ಬೆಲೆಯನ್ನು ನೀಡುವ ಬಗ್ಗೆ ಕಾನೂನಾತ್ಮಕ ಖಚಿತತೆ ನೀಡಬೇಕು. ಎಲೆಕ್ಟ್ರಿಸಿಟಿ ಬಿಲ್ 2021ನ್ನು ಹಿಂಪಡೆಯಬೇಕು ಎಂಬ ಬೇಡಿಕೆಗಳನ್ನು ಸಮಾವೇಶದಲ್ಲಿ ಪುನರುಚ್ಚಾರ ಮಾಡಲಾಯಿತು.
ಗುರುವಾರ, ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯು ಒಂಭತ್ತು ತಿಂಗಳನ್ನು ಪೂರೈಸಿದೆ. ಕೇಂದ್ರದ ಜೊತೆಗೆ ರೈತ ಮುಖಂಡರು ಸುಮಾರು 10 ಸುತ್ತಿನ ಮಾತುಕತೆಯನ್ನು ಕೂಡ ನಡೆಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ರೈತರ ಪ್ರತಿಭಟನೆ; 40 ರೈಲು ರದ್ದು
Farmers Protest ಜಂತರ್ ಮಂತರ್ನಲ್ಲಿ ಪ್ರತಿಭಟನೆಗೆ ಸಜ್ಜಾದ ರೈತರು, ದೆಹಲಿಯಲ್ಲಿ ಬಿಗಿ ಭದ್ರತೆ
(Farmers Protest Samyukt Kisan Morcha SKM calls for Bharat Bandh on September 25)
Published On - 6:56 pm, Fri, 27 August 21