ಮುಂಬೈ: ನಮ್ಮದಲ್ಲದ ಇತರ ಕ್ಷೇತ್ರದ ವಿದ್ಯಾಮಾನಗಳ ಕುರಿತು ಪ್ರತಿಕ್ರಿಯಿಸುವಾಗ ಜಾಗ್ರತೆಯಿಂದ ಇರಬೇಕು ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಸಚಿನ್ ತೆಂಡೂಲ್ಕರ್ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪಾಪ್ ತಾರೆ ರಿಹಾನ್ನಾ, ಭಾರತದಲ್ಲಿ ನಡೆಯುತ್ತಿರುವ ರೈತ ಹೋರಾಟದ ಪರ ವಹಿಸಿ ಟ್ವೀಟ್ ಮಾಡಿದ್ದರು. ಅದಕ್ಕೆ ವಿರುದ್ಧವಾಗಿ ಸಚಿನ್ ತೆಂಡೂಲ್ಕರ್, ಅಕ್ಷಯ್ ಕುಮಾರ್ ಸಹಿತ ಹಲವು ಭಾರತೀಯ ಸೆಲೆಬ್ರಿಟಿಗಳು ಟ್ವೀಟ್ ಮಾಡಿ ಪ್ರತ್ಯುತ್ತರ ನೀಡಿದ್ದರು.
‘‘ಹಲವಾರು ಭಾರತೀಯರು ತಮ್ಮ ನಿಲುವಿನ ಬಗ್ಗೆ ಟ್ವೀಟ್ ಮಾಡಿದ್ದರು. ಆದರೆ, ತಮ್ಮದಲ್ಲದ ಇತರ ಕ್ಷೇತ್ರದ ಬಗ್ಗೆ ಮಾತನಾಡುವಾಗ ಜಾಗರೂಕರಾಗಿರಬೇಕು. ಹೀಗೆಂದು ನಾನು ಸಚಿನ್ ತೆಂಡೂಲ್ಕರ್ಗೆ ಸಲಹೆ ನೀಡಲು ಬಯಸುತ್ತೇನೆ’’ ಎಂದು ಶರದ್ ಪವಾರ್ ANIಗೆ ಹೇಳಿಕೆ ನೀಡಿದ್ದಾರೆ.
ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ ಘಟನೆ ನಡೆದ ಕೆಲವು ದಿನಗಳ ಬಳಿಕ, ಶರದ್ ಪವಾರ್ ಹೀಗೆ ಪ್ರತಿಕ್ರಿಯಿಸಿದ್ದಾರೆ. ಪ್ರತಿಭಟನಾ ನಿರತ ರೈತರನ್ನು ಖಲಿಸ್ತಾನಿಗಳು ಹಾಗೂ ಭಯೋತ್ಪಾದಕರು ಎಂದು ಕೇಂದ್ರ ಸರ್ಕಾರ ಹೇಳುತ್ತಿರುವ ಬಗ್ಗೆಯೂ ಪವಾರ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಪವಾರ್, ಚಳುವಳಿಯಲ್ಲಿ ಭಾಗಿಯಾಗಿರುವವರು ನಮ್ಮ ದೇಶದ ಜನತೆಗೆ ಅನ್ನ ನೀಡುತ್ತಿರುವ ರೈತರು. ಅವರನ್ನು ಖಲಿಸ್ತಾನಿ ಅಥವಾ ಭಯೋತ್ಪಾದಕರು ಎಂದು ಕರೆಯುವ ಹಕ್ಕಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರತಿಭಟನೆ ನಿರತ ರೈತರಿಗೆ ಬೆಂಬಲ ಸೂಚಿಸಿದ ಪಾಪ್ ತಾರೆ ರಿಹಾನ್ನಾ, ಪರಿಸರ ಹೋರಾಟಗಾರ್ತಿ ಗ್ರೇಟಾ ಥುನ್ಬರ್ಗ್
Farmers Protest | ವ್ಯಂಗ್ಯವಾಡಿದ ಟ್ರೋಲಿಗರಿಗೆ ತಕ್ಕ ಉತ್ತರ ನೀಡಿದ ಮಿಯಾ ಖಲೀಫಾ
ಶರದ್ ಪವಾರ್ ನೀಡಿರುವ ಹೇಳಿಕೆಗೆ ಸಂಬಂಧಿಸಿ, ಬಿಜೆಪಿ ಲೋಕಸಭಾ ಸದಸ್ಯ ಮೀನಾಕ್ಷಿ ಲೇಖಿ ಪ್ರತಿಕ್ರಿಯಿಸಿದ್ದಾರೆ. ಈ ಸಲಹೆಯನ್ನು ಮಿಯಾ ಖಲೀಫಾ, ರಿಹಾನ್ನಾ ಹಾಗೂ ಗ್ರೇಟಾ ಥುನ್ಬರ್ಗ್ಗೆ ನೀಡಬೇಕು ಎಂದು ಅನಿಸುತ್ತಿದೆ. ಮಾಜಿ ಕೃಷಿ ಸಚಿವರಾದ ಪವಾರ್, APMC ಜೊತೆ ಬದಲಾವಣೆಗಾಗಿ ಕೆಲಸ ಮಾಡಿ ಈಗ ನಿಜ ತಿಳಿದೂ ಸುಮ್ಮನಿರುವುದು ಹೇಗೆ ಎಂದು ಟ್ವೀಟ್ ಮಾಡಿದ್ದಾರೆ.
ಮೀನಾಕ್ಷಿ ಲೇಖಿ ಟ್ವೀಟ್ ಮೂಲಕ ಪ್ರತಿಕ್ರಿಯೆ
How I feel his advice was made available to Mia Khalifa, Rihanna & Greta Thunberg ! I was also thinking what about knowing & yet not speaking, since he has been a former Agriculture Minister, worked with APMC’s , issued letters in favour of reforms…. https://t.co/MLJ1XA5LHx
— Meenakashi Lekhi (@M_Lekhi) February 6, 2021
ಶರದ್ ಪವಾರ್ ಕೃಷಿ ಸಚಿವರಾಗಿದ್ದ ಸಂದರ್ಭ, ಕೃಷಿ ವಲಯದಲ್ಲಿ ಖಾಸಗಿ ಭಾಗವಹಿಸುವಿಕೆಗೆ ಪ್ರೋತ್ಸಾಹ ನೀಡುವ ವಿಚಾರದಲ್ಲಿ ಒಲವು ತೋರಿದ್ದರು. ಕೃಷಿ ವಿಭಾಗಕ್ಕೆ ಬದಲಾವಣೆ ತರಲು ಯೋಚಿಸಿದ್ದರು. ಆಗ ಪವಾರ್ ಬರೆದಿದ್ದ ಪತ್ರವೊಂದನ್ನು ಕಳೆದ ಡಿಸೆಂಬರ್ನಲ್ಲಿ, ಬಿಜೆಪಿ ಹೊರಹಾಕಿತ್ತು. ಶರದ್ ಪವಾರ್ ದ್ವಂದ್ವ ನಿಲುವಿನ ಬಗ್ಗೆ ಟೀಕಿಸಿತ್ತು. ಕಳೆದ ವಾರ ನರೇಂದ್ರ ಸಿಂಗ್ ತೋಮರ್, ಶರದ್ ಪವಾರ್ ಜೊತೆಗೆ ನೇರಾನೇರ ಟ್ವೀಟ್ ಟೀಕೆ ಮಾಡಿದ್ದರು.
Fact Check | ಪಾಪ್ ತಾರೆ ರಿಹಾನ್ನಾ ಕೈಯಲ್ಲಿ ಪಾಕ್ ಧ್ವಜ; ಫೋಟೊಶಾಪ್ ಫೋಟೊ ವೈರಲ್
Rihanna controversy ವಿವಾದಿತ ಗಾಯಕಿ ರಿಹಾನ್ನಾ ಮಾತೃದೇಶಕ್ಕೆ ಭಾರತದ ಕೊರೊನಾ ಲಸಿಕೆ ಸರಬರಾಜಾಯ್ತು!
Published On - 11:30 am, Sun, 7 February 21