Rihanna controversy ವಿವಾದಿತ ಗಾಯಕಿ ರಿಹಾನ್ನಾ ಮಾತೃದೇಶಕ್ಕೆ ಭಾರತದ ಕೊರೊನಾ ಲಸಿಕೆ ಸರಬರಾಜಾಯ್ತು!

Rihanna tweet ಭಾರತದ ಕೃಷಿ ಕಾಯ್ದೆ ತಿದ್ದುಪಡಿ ಬಗ್ಗೆ ಮಾತನಾಡಿದ್ದರೂ ಭಾರತ ಅದರ ಬಗ್ಗೆ ತಲೆಕೆಡಿಸಿಕೊಳ್ಳದೇ ಆಕೆಯ ದೇಶಕ್ಕೆ ಕೊರೊನಾ ಲಸಿಕೆ ಕಳುಹಿಸಿಕೊಟ್ಟಿರುವುದಕ್ಕೆ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗಿದೆ.

Rihanna controversy ವಿವಾದಿತ ಗಾಯಕಿ ರಿಹಾನ್ನಾ ಮಾತೃದೇಶಕ್ಕೆ ಭಾರತದ ಕೊರೊನಾ ಲಸಿಕೆ ಸರಬರಾಜಾಯ್ತು!
ಪಾಪ್​ ಗಾಯಕಿ ರಿಹಾನ್ನಾ
Follow us
Skanda
|

Updated on:Feb 06, 2021 | 3:32 PM

ಕೃಷಿ ಕಾಯ್ದೆ (Farm Laws) ತಿದ್ದುಪಡಿ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿರುವ ವಿದೇಶಿ ಪಾಪ್​ ಗಾಯಕಿ ರಿಹಾನ್ನಾ (Rihanna) ಅವರ ದೇಶ ಬಾರ್ಬಡೋಸ್​ಗೆ (Barbados) ಭಾರತ ಕೊರೊನಾ ಲಸಿಕೆ (Corona Vaccine) ವಿತರಿಸಿರುವುದು ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಭಾರತದ ಆಂತರಿಕ ವಿಚಾರದ ಬಗ್ಗೆ ಮೂಗು ತೂರಿಸಿದರೆಂಬ ಕಾರಣಕ್ಕೆ ರಿಹಾನ್ನಾ ಅವರು ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಅಲ್ಲದೇ, ಈ ಬಗ್ಗೆ ದೇಶದೊಳಗೂ ಪರ-ವಿರೋಧ ಚರ್ಚೆ ತಾರಕಕ್ಕೇರಿದ್ದು, ಬೇರೆ ಬೇರೆ ಆಯಾಮಗಳನ್ನೂ ಪಡೆದಿವೆ.

ಇಷ್ಟೆಲ್ಲಾ ಅಸಮಾಧಾನದ ನಡುವೆಯೂ ಭಾರತ ಬಾರ್ಬಡೋಸ್​ ದೇಶಕ್ಕೆ ಕೊರೊನಾ ಲಸಿಕೆ ರಫ್ತು ಮಾಡುವ ಮೂಲಕ ಮಾನವೀಯತೆಯೇ ದೊಡ್ಡದು ಎಂದು ಸಾರಿದೆ. ಇದೇ ಭಾರತದ ಸೌಂದರ್ಯ ಎಂದು ಅನೇಕರು ಹಾಡಿ ಹೊಗಳುತ್ತಿದ್ದಾರೆ. ಇನ್ನೊಂದೆಡೆ ಬಾರ್ಬಡೋಸ್​ ಪ್ರಧಾನ ಮಂತ್ರಿ ಮಿಯಾ ಅಮೋರ್ ಮೊಟ್ಲಿ ಕೂಡಾ ಭಾರತಕ್ಕೆ ಧನ್ಯವಾದ ತಿಳಿಸಿದ್ದು, ಕೊರೊನಾ ಲಸಿಕೆಯಂತಹ ಅತ್ಯಮೂಲ್ಯ ಉಡುಗೊರೆಗಾಗಿ ನಾವು ಕೃತಜ್ಞರಾಗಿದ್ದೇವೆ ಎಂದು ಹೇಳಿದ್ದಾರೆ.

ಆಕ್ಸ್​ಫರ್ಡ್​ ಆಸ್ಟ್ರಾಜೆನೆಕಾ ಸಂಸ್ಥೆ ಅಭಿವೃದ್ಧಿಪಡಿಸಿ, ಪುಣೆಯ ಸೆರಮ್​ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ತಯಾರಾದ ಕೊವಿಶೀಲ್ಡ್​ ಕೊರೊನಾ ಲಸಿಕೆಯನ್ನು ಬಾರ್ಬಡೋಸ್​ ದೇಶಕ್ಕೆ ಕಳುಹಿಸಿಕೊಟ್ಟಿದೆ. ಇತ್ತೀಚೆಗಷ್ಟೇ ಬಾರ್ಬಡೋಸ್​ ಮೂಲದ ಹಾಡುಗಾರ್ತಿ ರಿಹಾನ್ನಾ ಭಾರತದ ಕೃಷಿ ಕಾಯ್ದೆ ತಿದ್ದುಪಡಿ ಬಗ್ಗೆ ಮಾತನಾಡಿದ್ದರೂ ಭಾರತ ಅದರ ಬಗ್ಗೆ ತಲೆಕೆಡಿಸಿಕೊಳ್ಳದೇ ಆಕೆಯ ದೇಶಕ್ಕೆ ಕೊರೊನಾ ಲಸಿಕೆ ಕಳುಹಿಸಿಕೊಟ್ಟಿರುವುದಕ್ಕೆ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗಿದೆ.

Fact Check | ಪಾಪ್ ತಾರೆ ರಿಹಾನ್ನಾ ಕೈಯಲ್ಲಿ ಪಾಕ್ ಧ್ವಜ; ಫೋಟೊಶಾಪ್ ಫೋಟೊ ವೈರಲ್

Published On - 12:01 pm, Sat, 6 February 21

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ