Munawar Faruqui ಮುನಾವರ್​ ಫಾರೂಖಿ ವಿರುದ್ಧ ಕೇಸ್​ ದಾಖಲಾಗಿದ್ದು ಕೇವಲ 1 ಕಾರಣಕ್ಕಲ್ಲ !

ಇಂದೋರ್​ನ 56 ಡುಕಾನ್​​ ಎಂಬಲ್ಲಿನ ಕೆಫೆಯೊಂದರಲ್ಲಿ ಅಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುನಾವರ್​ ಹಿಂದು ದೇವತೆಗಳು ಮತ್ತು ಗೃಹ ಸಚಿವ ಅಮಿತ್​ ಶಾಗೆ ಅವಮಾನ ಮಾಡಿದ್ದಾರೆ ಎನ್ನಲಾಗಿತ್ತು.

Munawar Faruqui ಮುನಾವರ್​ ಫಾರೂಖಿ ವಿರುದ್ಧ ಕೇಸ್​ ದಾಖಲಾಗಿದ್ದು ಕೇವಲ 1 ಕಾರಣಕ್ಕಲ್ಲ !
ಕಾಮಿಡಿಯನ್​ ಮುನಾವರ್ ಫಾರೂಖಿ
Follow us
Lakshmi Hegde
| Updated By: ರಾಜೇಶ್ ದುಗ್ಗುಮನೆ

Updated on: Feb 06, 2021 | 1:26 PM

ಇಂದೋರ್​: ಮಧ್ಯಪ್ರದೇಶದ ಇಂದೋರ್​​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿಂದೂ ದೇವರು- ದೇವತೆಗಳಿಗೆ ಅವಮಾನ ಮಾಡಿದ ಆರೋಪದಡಿ ಜ.1ರಂದು ಬಂಧಿತನಾಗಿದ್ದ ಕಾಮಿಡಿಯನ್​ ಮುನಾವರ್​ ಫಾರೂಖಿಗೆ ನಿನ್ನೆ ಸುಪ್ರೀಂಕೋರ್ಟ್​ ಮಧ್ಯಂತರ ಜಾಮೀನು ನೀಡಿದೆ. ಬಂಧನಕ್ಕೊಳಗಾಗಿ ಸುಮಾರು 1 ತಿಂಗಳ ಬಳಿಕ ಫಾರೂಖಿ ಬಿಡುಗಡೆಯಾಗಿದ್ದಾರೆ.

ಇಂದೋರ್​ನ 56 ಡುಕಾನ್​​ ಎಂಬಲ್ಲಿನ ಕೆಫೆಯೊಂದರಲ್ಲಿ ಅಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುನಾವರ್​ ಹಿಂದು ದೇವತೆಗಳು ಮತ್ತು ಗೃಹ ಸಚಿವ ಅಮಿತ್​ ಶಾಗೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಶಾಸಕಿ ಮಾಲಿನಿ ಗೌರ್​ ಪುತ್ರ, ಹಿಂದ್​ ರಕ್ಷಕ್​ ಸಂಘಟನೆಯ ಸಮಾವೇಶಕನೂ ಆಗಿರುವ ಏಕಲವ್ಯ ಗೌರ್​ ದೂರು ದಾಖಲಿಸಿದ್ದರು. ಅವರ ದೂರಿನ ಅನ್ವಯ ಮುನಾವರ್​ ಫಾರೂಖಿ ಸೇರಿ ಒಟ್ಟು ಆರು ಮಂದಿಯ ಬಂಧನವಾಗಿತ್ತು.

ಅನುಮತಿಯನ್ನೂ ಪಡೆದಿರಲಿಲ್ಲ ! ಹೊಸವರ್ಷಾಚರಣೆಯಂದು ಕೆಫೆಯಲ್ಲಿ ಕಾರ್ಯಕ್ರಮ ನಡೆಸಲು ಮೊದಲನೇದಾಗಿ ಮುನಾವರ್​ ಫಾರೂಖಿ ಮತ್ತು ಸಹಚರರು ಅನುಮತಿಯನ್ನೇ ಪಡೆದಿರಲಿಲ್ಲ. ಎರಡನೇದಾಗಿ ಕೊವಿಡ್​ ನಿಯಂತ್ರಣಾ ನಿಯಮಗಳನ್ನು ಸಂಫೂರ್ಣವಾಗಿ ಉಲ್ಲಂಘನೆ ಮಾಡಿದ್ದರು. ಅದಾದ ಬಳಿಕ ಕಾರ್ಯಕ್ರಮದಲ್ಲಿ ಹಿಂದು ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದರು. ಅಮಿತ್​ ಶಾರನ್ನೂ ಅವಮಾನಿಸಿದ್ದರು. ಹೀಗಾಗಿ ಐಪಿಸಿ ಸೆಕ್ಷನ್​ 188, 269, 34, ಮತ್ತು 295Aದಡಿ ಪ್ರಕರಣ ದಾಖಲಾಗಿತ್ತು. ಇದೇ ಕಾರಣಕ್ಕೆ ಬಂಧಿಸಲ್ಪಟ್ಟಿದ್ದರು.

ಆದರೆ ಫಾರೂಖಿ ಪರ ವಕೀಲ, ಅಂಶುಮಾನ್​ ಶ್ರೀವಾಸ್ತವಾ, ಈ ಎಲ್ಲ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಅವರ ವಿರುದ್ಧ ಮಾಡಲಾದ ಆರೋಪದಲ್ಲಿ ಸ್ಪಷ್ಟತೆಯೇ ಇಲ್ಲ. ರಾಜಕೀಯ ಕಾರಣಕ್ಕಾಗಿ ಅವರನ್ನು ಬಂಧಿಸಲಾಗಿದೆ. ಅಂದಿನ ಕಾರ್ಯಕ್ರಮದಲ್ಲಿ ಫಾರೂಖಿಯಾಗಲೀ, ಉಳಿದ ನಟರಾಗಲೀ, ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಮಾತುಗಳನ್ನಾಡಿಲ್ಲ. ಯಾರನ್ನೂ ಅವಮಾನಿಸಿಲ್ಲ ಎಂದು ಹೇಳಿದ್ದಾರೆ.

ಈ ಮೊದಲು ಪ್ರಕರಣದ ವಿಚಾರಣೆ ನಡೆಸಿದ್ದ ಮಧ್ಯಪ್ರದೇಶ ಹೈಕೋರ್ಟ್​ ಜಾಮೀನು ನೀಡಲು ನಿರಾಕರಿಸಿತ್ತು. ಒಬ್ಬ ವ್ಯಕ್ತಿ ತನಗೆ ಕೊಟ್ಟಿರುವ ಸ್ವಾತಂತ್ರ್ಯವನ್ನು ಇನ್ನೊಬ್ಬರಿಗೆ ನೋವಾಗುವ ರೀತಿ ಬಳಸಿಕೊಳ್ಳಬಾರದು. ಸಮತೋಲಿತವಾಗಿ ಮಾತನಾಡಬೇಕಾಗುತ್ತದೆ ಎಂದು ಕೋರ್ಟ್​ ಹೇಳಿತ್ತು. ಆದರೆ ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿ ಆರ್​.ಎಫ್​.ನಾರಿಮನ್​ ನೇತೃತ್ವದ ಪೀಠ ಫಾರೂಖಿಗೆ ಮಧ್ಯಂತರ ಜಾಮೀನು ನೀಡಿದೆ. ಮುನಾವರ್ ಫಾರೂಖಿ ಮಧ್ಯಪ್ರದೇಶದ ಇಂದೋರ ಮೂಲದ ಹಾಸ್ಯನಟ. ಅವರು ಮೂಲತಃ ಗುಜರಾತ್ನ ಜುನಾಗಢ್​​ನವರು.

Munawar Faruqui ಹಿಂದೂ ದೇವತೆಗಳು ಮತ್ತು ಅಮಿತ್​ ಶಾ ನಿಂದನೆ ಆರೋಪ ಹೊತ್ತ ಮುನಾವರ್ ಫಾರೂಖಿಗೆ ಮಧ್ಯಂತರ ಜಾಮೀನು

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ