ದೆಹಲಿ: ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸಂಸತ್ ಅಂಗೀಕರಿಸಿದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸುತ್ತಿರುವ ರೈತರ ಪ್ರತಿಭಟನೆಯ ಮುನ್ನ ದೆಹಲಿ ಪೊಲೀಸರು ಜಂತರ್ ಮಂತರ್ ಸುತ್ತಮುತ್ತಲಿನ ಇಡೀ ಪ್ರದೇಶಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ‘ಕಿಸಾನ್ ಪಂಚಾಯತ್’ ಎಂದು ಕರೆಯಲ್ಪಡುವ ಧರಣಿ ಸಂಸತ್ ಬಳಿ ಇಂದಿನಿಂದ ಪ್ರಾರಂಭವಾಗಲಿದೆ.
ಪ್ರತಿಭಟನೆ ನಡೆದ ಸ್ಥಳದಲ್ಲಿ ಹೆಚ್ಚಿನ ಪ್ರಮಾಣದ ಪೊಲೀಸರು ಮತ್ತು ರಾಪಿಡ್ ಆಕ್ಷನ್ ಫೋರ್ಸ್ (ಆರ್‌ಎಎಫ್) ಯನ್ನು ನಿಯೋಜಿಸಲಾಗಿದೆ ಮತ್ತು ಬ್ಯಾರಿಕೇಡ್ ಹಾಕಲಾಗಿದೆ. ಪೊಲೀಸರು ಈಗಾಗಲೇ ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳಾಗದ ಸಿಂಘು, ಟಿಕ್ರಿ ಮತ್ತು ರೈತರು ಪ್ರತಿಭಟನೆ ನಡೆಸುತ್ತಿದ್ದ ಇತರ ಸ್ಥಳಗಳಲ್ಲಿ ಭಾರೀ ಭದ್ರತೆಗೆ ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ.
“ಟಿಕ್ರಿ ಗಡಿಯಲ್ಲಿ ಯಾವುದೇ ದುಷ್ಕರ್ಮಿಗಳ ಪ್ರವೇಶವನ್ನು ತಪ್ಪಿಸಲು ನಾವು ತಡೆಗಟ್ಟುವ ವ್ಯವಸ್ಥೆಗಳನ್ನು ಇರಿಸಿದ್ದೇವೆ. ಅವರು (ರೈತರು) ಇಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಪಡೆಯದ ಕಾರಣ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ” ಎಂದು ಡಿಸಿಪಿ (ಹೊರಗಿನ ಜಿಲ್ಲೆ) ಪರ್ವಿಂದರ್ ಸಿಂಗ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
Farmers gather to board the buses at Singhu (Delhi-Haryana) border, ahead of protest against three farm laws at Jantar Mantar in Delhi pic.twitter.com/S4JFHt6lv4
— ANI (@ANI) July 22, 2021
ಸಂಸತ್ತಿನತ್ತ ಮೆರವಣಿಗೆ ನಡೆಸುವುದಿಲ್ಲ ಎಂದು ಪ್ರತಿಭಟನಾಕಾರರಿಂದ ಭರವಸೆ ನೀಡಿದ ನಂತರ ದೆಹಲಿ ಪೊಲೀಸರು ರೈತರಿಗೆ ಪ್ರತಿಭಟನೆ ನಡೆಸಲು ಅನುಮತಿ ನೀಡಿದರು. ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ಪ್ರತಿಭಟನೆ ನಡೆಸಲು ಅವಕಾಶ ಮಾಡಿಕೊಟ್ಟಿದೆ ಮತ್ತು ಕೊವಿಡ್ -19 ನಿಬಂಧನೆಗಳನ್ನು ಅನುಸರಿಸಿ ದಿನಕ್ಕೆ 200 ಪ್ರತಿಭಟನಾಕಾರರಿಗೆ ಮಾತ್ರ ಅನುಮತಿ ನೀಡಿದೆ. ಜುಲೈ 22 ರಿಂದ ಆಗಸ್ಟ್ 9 ರವರೆಗೆ ಅನುಮತಿ ನೀಡಲಾಗಿದೆ.
Parliament is just 150 metres away from Jantar Mantar. We will hold our own Parliament sessions there. What do we have to do with hooliganism? Are we miscreants?: BKU Leader Rakesh Tikait on being asked about arrangements to tackle situations like Jan 26 Red Fort violence pic.twitter.com/srUK3pESHe
— ANI (@ANI) July 22, 2021
ಜನವರಿ 26 ಕೆಂಪು ಕೋಟೆ ಹಿಂಸಾಚಾರದಂತಹ ಸಂದರ್ಭಗಳನ್ನು ನಿಭಾಯಿಸುವ ವ್ಯವಸ್ಥೆಗಳ ಬಗ್ಗೆ ಬಿಕೆಯು ನಾಯಕ ರಾಕೇಶ್ ಟಿಕಾಯತ್, ಸಂಸತ್ ಜಂತರ್ ಮಂತರ್ನಿಂದ ಕೇವಲ 150 ಮೀಟರ್ ದೂರದಲ್ಲಿದೆ. ನಾವು ಅಲ್ಲಿ ನಮ್ಮದೇ ಸಂಸತ್ ಅಧಿವೇಶನಗಳನ್ನು ನಡೆಸುತ್ತೇವೆ. ನಾವು ಯಾಕೆ ಗೂಂಡಾಗಿರಿ ಮಾಡಬೇಕು? ನಾವು ದುಷ್ಕರ್ಮಿಗಳೇ? ಎಂದು ಉತ್ತರಿಸಿದ್ದಾರೆ.
Delhi: Punjab Congress MPs staged a protest in front of Gandhi Statue in the premises of Parliament, over three farm laws pic.twitter.com/nMgRPNjIjp
— ANI (@ANI) July 22, 2021
ಇತ್ತ ಪಂಜಾಬ್ನ ಕಾಂಗ್ರೆಸ್ ಸಂಸದರು ಸಂಸತ್ ಆವರಣದಲ್ಲಿ ಕೃಷಿ ಕಾನೂನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: Kisan Parliament ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ರೈತರಿಗೆ ದೆಹಲಿ ಸರ್ಕಾರ ಅನುಮತಿ
(Farmers to march to Delhi Security beefed up at Jantar Mantar in view of farmers’ protest)
Published On - 11:08 am, Thu, 22 July 21