Kisan Parliament ಜಂತರ್ ಮಂತರ್​ನಲ್ಲಿ ಪ್ರತಿಭಟನೆ ನಡೆಸಲು ರೈತರಿಗೆ ದೆಹಲಿ ಸರ್ಕಾರ ಅನುಮತಿ

ಪ್ರತಿಭಟನೆಗೆ ಅನುಕೂಲವಾಗುವಂತೆ, ದೆಹಲಿ ವಿಪತ್ತು ನಿರ್ವಹಣಾ ಕಾಯ್ದೆ (ಡಿಡಿಎಂಎ) ಅಡಿಯಲ್ಲಿ ಕೊವಿಡ್ ನಿರ್ಬಂಧಗಳನ್ನು ವಿಧಿಸುವ ಆದೇಶದಲ್ಲಿ ರಾಜ್ಯ ಸರ್ಕಾರ ಬದಲಾವಣೆಗಳನ್ನು ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ

Kisan Parliament ಜಂತರ್ ಮಂತರ್​ನಲ್ಲಿ ಪ್ರತಿಭಟನೆ ನಡೆಸಲು ರೈತರಿಗೆ ದೆಹಲಿ ಸರ್ಕಾರ ಅನುಮತಿ
ಸಂಗ್ರಹ ಚಿತ್ರ
TV9kannada Web Team

| Edited By: Rashmi Kallakatta

Jul 21, 2021 | 7:39 PM

ದೆಹಲಿ: ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರವು ನಾಳೆ ಜಂತರ್ ಮಂತರ್ ನಲ್ಲಿ ಕಿಸಾನ್ ಸಂಸತ್ (farmers’ parliament) ನಡೆಸಲು ರೈತ ಗುಂಪುಗಳಿಗೆ ಅನುಮತಿ ನೀಡಿದೆ. ಆದರೆ ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಪೊಲೀಸರು ಕೂಡ ಪ್ರತಿಭಟನೆಗೆ ಅನುಮತಿ ನೀಡಿದ್ದು ಜನವರಿ 26 ರಂತೆ ಪ್ರತಿಭಟನೆ ಹಳಿ ತಪ್ಪದಂತೆ ತಡೆಯಲು ವ್ಯವಸ್ಥೆ ಮಾಡಿದ್ದಾರೆ. ರಾಷ್ಟ್ರ ರಾಜಧಾನಿಯ ಸಿಂಘು ಗಡಿಯಿಂದ ಸಂಸತ್ತಿನ ಕಡೆಗೆ ಪ್ರತಿದಿನ 200 ಗುಂಪುಗಳಾಗಿ ಮೊದಲು ಮೆರವಣಿಗೆ ನಡೆಸಲು ರೈತರು ಯೋಜಿಸಿದ್ದಾರೆ. ನಂತರ ಪೊಲೀಸರು ಅವರ ಆಂದೋಲನವನ್ನು ಮುಂದುವರಿಸಲು ಸ್ಥಳಕ್ಕೆ ಕರೆದೊಯ್ಯುತ್ತಾರೆ.

ಪ್ರತಿಭಟನೆಗೆ ಅನುಕೂಲವಾಗುವಂತೆ, ದೆಹಲಿ ವಿಪತ್ತು ನಿರ್ವಹಣಾ ಕಾಯ್ದೆ (ಡಿಡಿಎಂಎ) ಅಡಿಯಲ್ಲಿ ಕೊವಿಡ್ ನಿರ್ಬಂಧಗಳನ್ನು ವಿಧಿಸುವ ಆದೇಶದಲ್ಲಿ ರಾಜ್ಯ ಸರ್ಕಾರ ಬದಲಾವಣೆಗಳನ್ನು ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಡಿಡಿಎಂಎ ಮಾರ್ಗಸೂಚಿಗಳು ಯಾವುದೇ ಕೂಟಗಳನ್ನು ಅನುಮತಿಸುವುದಿಲ್ಲ. 2020 ರ ನವೆಂಬರ್‌ನಲ್ಲಿ ರೂಪುಗೊಂಡ ದೇಶಾದ್ಯಂತದ ರೈತ ಸಂಘಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ನಾಳೆ ಆರಂಭವಾಗಲಿರುವ ಜಂತರ್ ಮಂತರ್‌ನಲ್ಲಿ ಕಿಸಾನ್ ಸಂಸತ್ ಕಾರ್ಯತಂತ್ರದ ಬಗ್ಗೆ ವಿವರಿಸಿದೆ.

ನಾಳೆ ಪ್ರತಿಭಟನಾ ನಿರತ ರೈತರು ನಾಲ್ಕು ಬಸ್‌ಗಳಲ್ಲಿ ಸಂಸತ್ ಭವನ ಸಂಕೀರ್ಣಕ್ಕೆ ಹೋಗಲಿದ್ದು, ಅದು ಸಿಂಘುನಲ್ಲಿರುವ ಎಸ್‌ಕೆಎಂ ಕಚೇರಿಯಿಂದ ಹೊರಡಲಿದೆ. ಸಂಸತ್ತಿನ ಮುಂಗಾರು ಅಧಿವೇಶನ ಮುಗಿಯುವ ಆಗಸ್ಟ್ 13 ರವರೆಗೆ ಕಿಸಾನ್ ಸಂಸತ್ ನಡೆಯಲಿದೆ ಎಂದು ಎಸ್‌ಕೆಎಂ ಸದಸ್ಯ ಡಾ. ದರ್ಶನ್ ಪಾಲ್ ತಿಳಿಸಿದ್ದಾರೆ. “ಎಲ್ಲವೂ ಸಂಸತ್ತಿನಂತೆಯೇ ಇರುತ್ತದೆ. ಸ್ಪೀಕರ್, ಡೆಪ್ಯೂಟಿ ಸ್ಪೀಕರ್, ಟೀ ಬ್ರೇಕ್ ಇತ್ಯಾದಿ ಇರುತ್ತದೆ. ಈ ಸಂಸತ್ ಖಂಡಿತವಾಗಿಯೂ ನಡೆಯುತ್ತದೆ” ಎಂದು ಭಾರತೀಯ ಕಿಸಾನ್ ಯೂನಿಯನ್ (ದೋಬಾ) ಸದಸ್ಯ ಮಂಜಿತ್ ಸಿಂಗ್ ರೈ ಹೇಳಿದರು.

ಭಾಗವಹಿಸುವ ರೈತರಿಗೆ ಗುರುತಿನ ಪತ್ರಗಳನ್ನು ನೀಡಲಾಗುವುದು. ಪೊಲೀಸರು ಅವರನ್ನು ತಡೆದರೆ, ಬಂಧನಕ್ಕೆ ಅವರೇ ಶರಣಾಗುತ್ತಾರೆ.ಯಾವುದೇ ಪ್ರತಿರೋಧವನ್ನು ತೋರಿಸುವುದಿಲ್ಲ,

“ನಾವು ಆರು ತಿಂಗಳವರೆಗೆ ಜೈಲುವಾಸ ಅನುಭವಿಸಲು ರೈತರನ್ನು ಕೇಳಿಕೊಂಡಿದ್ದೇವೆ. ಅದರ ಹೊರತಾಗಿಯೂ, ಮೆರವಣಿಗೆಗೆ ಹೋಗಲು ಅವರಲ್ಲಿ ಉತ್ಸಾಹವಿದೆ” ಎಂದು ಎಸ್ಕೆಎಂ ರಾಮಿಂದರ್ ಪಟಿಯಾಲ ಹೇಳಿದರು.

ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರನ್ನು ಶಾಂತಿಯುತವಾಗಿ ಇತ್ಯರ್ಥಗೊಳಿಸಲು ಪೊಲೀಸರು ವ್ಯವಸ್ಥೆ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ದೆಹಲಿ ಪೊಲೀಸ್ ಮತ್ತು ಅರೆಸೈನಿಕ ಪಡೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ನಂತರ ಪ್ರತಿಭಟನಾಕಾರರು ಸಂಜೆ 5 ಗಂಟೆಗೆ ಜಂತರ್ ಮಂತರಿನಿಂದ ಹಿಂತಿರುಗಲಿದ್ದಾರೆ.

ಸಂಸತ್ತಿನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಎರಡು ಬ್ಯಾಚ್ ರೈತರು ಕೇರಳದಿಂದ ದೆಹಲಿಗೆ ತೆರಳಿದ್ದಾರೆ. ಅದೇ ರೀತಿ ಕರ್ನಾಟಕ, ತಮಿಳುನಾಡು ಮತ್ತು ಇತರ ದೂರದ ರಾಜ್ಯಗಳಿಂದಲೂ ರೈತರ ತುಕಡಿಗಳು ತಲುಪುತ್ತಿವೆ ಎಂದು ಎಸ್‌ಕೆಎಂ ಪ್ರಕಟಣೆ ತಿಳಿಸಿದೆ.

“ಸಿರ್ಸಾದಲ್ಲಿ, ಸರ್ದಾರ್ ಬಲ್ದೇವ್ ಸಿಂಗ್ ಸಿರ್ಸಾ ಅವರ ಅನಿರ್ದಿಷ್ಟ ಉಪವಾಸ ಇಂದು 4 ನೇ ದಿನವನ್ನು ಪ್ರವೇಶಿಸಿದೆ. ಪ್ರತಿಭಟನಾಕಾರರು ಮೊದಲೇ ಘೋಷಿಸಿದಂತೆ, ಇಂದು ಬೆಳಿಗ್ಗೆ ಎರಡು ಗಂಟೆಗಳ ಕಾಲ ಮೂರು ವಿಭಿನ್ನ ಸ್ಥಳಗಳಲ್ಲಿ ಹೆದ್ದಾರಿಯನ್ನು ತಡೆದರು.”

ಏತನ್ಮಧ್ಯೆ ಸಿಂಘುನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಸಿಮೆಂಟ್ ಮತ್ತು ಗಾರೆ ಬಳಸಿದ್ದಾರೆ. ರೈತರ ಟ್ರಾಕ್ಟರ್ ರ್ಯಾಲಿಯ ನಂತರ ದೆಹಲಿಯಲ್ಲಿ ಜನವರಿ 26 ರ ಹಿಂಸಾಚಾರವನ್ನು ಪುನರಾವರ್ತಿಸದಂತೆ ಇರುವ ಕ್ರಮ ಇದಾಗಿದೆ. ಪ್ರತಿಭಟನೆಯಲ್ಲಿ ಸಂಸತ್ ಗೆ ಮುತ್ತಿಗೆ ಹಾಕುವುದಿಲ್ಲ ಎಂದು ರೈತರು ಈ ಹಿಂದೆ ಹೇಳಿದ್ದರು.

ಕಿಸಾನ್ ಸಂಸತ್ ಗೆ ಅನುಮತಿ ಪಡೆಯಲು ಒಕ್ಕೂಟಗಳು ಈ ಹಿಂದೆ ಸಿಂಘು ಗಡಿಯ ಸಮೀಪವಿರುವ ಮಂತ್ರಂ ರೆಸಾರ್ಟ್‌ನಲ್ಲಿ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿದ್ದವು.  ಅಧಿಕಾರಿಗಳು ಮೊದಲಿಗೆ ಪ್ರತಿಭಟನೆಗೆ ಪರ್ಯಾಯ ಸ್ಥಳಗಳನ್ನು ಸೂಚಿಸಿದ್ದರು. ಏಳು ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಜಾಗರೂಕತೆ ಇಟ್ಟುಕೊಳ್ಳಬೇಕು ಮತ್ತು ಅಗತ್ಯವಿದ್ದರೆ ಅವುಗಳನ್ನು ಮುಚ್ಚುವಂತೆ ಪೊಲೀಸರು ದೆಹಲಿ ಮೆಟ್ರೋ ರೈಲ್ವೆ ನಿಗಮಕ್ಕೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ:  Kisan Parliament: ನಾಳೆಯಿಂದ ಜಂತರ್ ಮಂತರ್​​ನಲ್ಲಿ ಕಿಸಾನ್ ಪಾರ್ಲಿಮೆಂಟ್, ಪ್ರತಿದಿನ ಇಲ್ಲಿ ಸೇರಲಿದ್ದಾರೆ 200 ರೈತರು

(Delhi government has given permission to farmer groups to hold a Farmers’ parliament says Sources)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada