ಮತ್ತೊಂದು ಸೆಲ್ಫಿ ದುರಂತ: ಯುವ ಇಂಜಿನಿಯರ್ ಸಾವು
ಮತ್ತೊಂದು ಸೆಲ್ಫಿ ದುರಂತ ಸಂಭವಿಸಿದೆ. ಇದೂ ನಿಜಕ್ಕೂ ಸೆಲ್ಫಿ ದುರಂತವೇ ಸರಿ. ಏಕೆಂದ್ರೆ ಇದು ಸ್ವಯಂಕೃತಾಪರಾಧ! ಇಂಜಿನಿಯರುಗಳ ದಿನದಂದೇ ಸೆಲ್ಫಿ ತೆಗೆದುಕೊಳ್ಳಲು ಹೋದ ಇಂಜಿನಿಯರ್ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಬೇಕಿದೆ. ಏನಾಯಿತೆಂದ್ರೆ ಒಡಿಶಾದ ಭಾರೀ ನೀರಾವರಿ ಯೋಜನೆ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ಮುಕುಂದನ್ ಎಂಬ ಯುವ ಇಂಜಿನಿಯರ್, ಮೊನ್ನೆ ಭಾನುವಾರ ಸಂಜೆ ತನ್ನಿಬ್ಬರು ಸಹೋದ್ಯೋಗಿಗಳ ಜೊತೆ ಸಾಲುಂಕಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಪಾಲಝರ್ ಅಣೆಕಟ್ಟೆ ಪ್ರದೇಶಕ್ಕೆ ತೆರಳಿದ್ದ. ಆ ವೇಳೆ ಡ್ಯಾಮ್ ಬಳಿ ಮೂವರೂ ಸಹೋದ್ಯೋಗಿಗಳು ಸೆಲ್ಫಿ ತೆಗೆದುಕೊಳ್ಳಲು […]
ಮತ್ತೊಂದು ಸೆಲ್ಫಿ ದುರಂತ ಸಂಭವಿಸಿದೆ. ಇದೂ ನಿಜಕ್ಕೂ ಸೆಲ್ಫಿ ದುರಂತವೇ ಸರಿ. ಏಕೆಂದ್ರೆ ಇದು ಸ್ವಯಂಕೃತಾಪರಾಧ! ಇಂಜಿನಿಯರುಗಳ ದಿನದಂದೇ ಸೆಲ್ಫಿ ತೆಗೆದುಕೊಳ್ಳಲು ಹೋದ ಇಂಜಿನಿಯರ್ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಬೇಕಿದೆ.
ಏನಾಯಿತೆಂದ್ರೆ ಒಡಿಶಾದ ಭಾರೀ ನೀರಾವರಿ ಯೋಜನೆ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ಮುಕುಂದನ್ ಎಂಬ ಯುವ ಇಂಜಿನಿಯರ್, ಮೊನ್ನೆ ಭಾನುವಾರ ಸಂಜೆ ತನ್ನಿಬ್ಬರು ಸಹೋದ್ಯೋಗಿಗಳ ಜೊತೆ ಸಾಲುಂಕಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಪಾಲಝರ್ ಅಣೆಕಟ್ಟೆ ಪ್ರದೇಶಕ್ಕೆ ತೆರಳಿದ್ದ. ಆ ವೇಳೆ ಡ್ಯಾಮ್ ಬಳಿ ಮೂವರೂ ಸಹೋದ್ಯೋಗಿಗಳು ಸೆಲ್ಫಿ ತೆಗೆದುಕೊಳ್ಳಲು ಹವಣಿಸಿದ್ದಾರೆ. ಅದು ಹೇಗೋ ಮುಕುಂದನ್ ಕೈಯಲ್ಲಿದ್ದ ಮೊಬೈಲ್ ನೀರಿನಲ್ಲಿ ಬಿದ್ದುಬಿಟ್ಟಿದೆ. ಅಯ್ಯೋ ಮೊಬೈಲ್ ಹೋಯ್ತಲ್ಲಾ ಅಂತಾ 22 ವರ್ಷದ ಮುಕುಂದನ್, ಹಿಂದೆಮುಂದೆ ನೋಡದೆ ನೀರಿಗೆ ಧುಮುಕಿದ್ದಾನೆ.
ಅಯ್ಯೋ ಮುಕುಂದನ್ ನೀರಲ್ಲಿ ಧುಮಿಕಿದನಲ್ಲಾ ಅಂತಾ ಅವನ ತ್ತೊಬ್ಬ ಸಹೋದ್ಯೋಗಿಯೂ ನೀರಿಗೆ ಬಿದ್ದಿದ್ದಾನೆ. ಸ್ಥಳದಲ್ಲೇ ಇದ್ದ ಮೀನುಗಾರರು ಈತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ, ಆದ್ರೆ ಮುಕುಂದನ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.