ಕೇರಳ ಸಿಎಂ ತೀವ್ರಗಾಮಿ ಎಂದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ದೂರು ದಾಖಲು

|

Updated on: Oct 31, 2023 | 11:31 AM

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ವಿರುದ್ಧ ಧಾರ್ಮಿಕ ದ್ವೇಷ ಪ್ರಚಾರ ಆರೋಪ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ತೀವ್ರಗಾಮಿ ಅಂಶಗಳ ಬಗ್ಗೆ ಸಹಿಷ್ಣುತೆ ಹೊಂದಿದ್ದಾರೆ ಎಂಬ ಹೇಳಿಕೆ ಸಂಬಂಧಿಸಿದಂತೆ ಕೇರಳದ ಎರ್ನಾಕುಲಂ ಪೊಲೀಸರು ಸಾಮಾಜಿಕ ದ್ವೇಷ ಹರಡುವ ಪ್ರಕರಣದಡಿಯಲ್ಲಿ ದೂರ ದಾಖಲಿಸಿಕೊಂಡಿದ್ದಾರೆ.

ಕೇರಳ ಸಿಎಂ ತೀವ್ರಗಾಮಿ ಎಂದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ದೂರು ದಾಖಲು
ರಾಜೀವ್ ಚಂದ್ರಶೇಖರ್
Follow us on

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಅವರು ವಿರುದ್ಧ ಧಾರ್ಮಿಕ ದ್ವೇಷ ಪ್ರಚಾರ ಆರೋಪ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ತೀವ್ರಗಾಮಿ ಅಂಶಗಳ ಬಗ್ಗೆ ಸಹಿಷ್ಣುತೆ ಹೊಂದಿದ್ದಾರೆ ಎಂಬ ಹೇಳಿಕೆ ಸಂಬಂಧಿಸಿದಂತೆ ಕೇರಳದ ಎರ್ನಾಕುಲಂ ಪೊಲೀಸರು ಸಾಮಾಜಿಕ ದ್ವೇಷ ಹರಡುವ ಪ್ರಕರಣದಡಿಯಲ್ಲಿ ದೂರ ದಾಖಲಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ ಕೇರಳದ ಕೊಚ್ಚಿಯಲ್ಲಿ ನಡೆದ ಬಾಂಬ್​​​ ಸ್ಫೋಟದ ನಂತರ ಸಚಿವರು ಈ ಹೇಳಿಕೆಯನ್ನು ನೀಡಿದ್ದಾರೆ. ಅವರ ಹೇಳಿಕೆಯಲ್ಲಿ ಧಾರ್ಮಿಕ ದ್ವೇಷ ಪ್ರಚಾರ ಮಾಡುವ ಅಂಶಗಳಿದೆ ಎಂದು ಐಪಿಸಿ ಸೆಕ್ಷನ್ 153 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕೇರಳದಲ್ಲಿ ನಡೆದ ಸ್ಫೋಟದ ನಂತರ ಅನೇಕ ರಾಜಕೀಯ ಕಚ್ಚಾಟಗಳು ಶುರುವಾಗಿದೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಹಮಾಸ್​​ ಮತ್ತು ಪ್ಯಾಲೆಸ್ತೀನ್ ಪರ ರ್ಯಾಲಿ ಮಾಡುತ್ತಿರುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಿಎಂ ಪಿಣರಾಯಿ ವಿಜಯನ್ ಅವರು ಬಗ್ಗೆಯು ಮಾತನಾಡಿದ್ದಾರೆ. ಪಿಣರಾಯಿ ಸುಳ್ಳುಗಾರ, ಎಸ್‌ಡಿಪಿಐ, ಪಿಎಫ್‌ಐ ಮತ್ತು ಹಮಾಸ್‌ನೊಂದಿಗೆ ಅವರಿಗೆಸಂಪರ್ಕ ಇದೆ. ಬಿಜೆಪಿಯಲ್ಲಿ ಯಾರಿಗೂ ಎಸ್‌ಡಿಪಿಐ, ಪಿಎಫ್‌ಐ ಮತ್ತು ಹಮಾಸ್‌ನೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಲು ನಾನು ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕೇರಳ ಸಿಎಂ ಹಮಾಸ್ ಅನ್ನು ಸಮುದಾಯದೊಂದಿಗೆ ಸಮೀಕರಿಸಲು ಬಯಸಿದ್ದಾರೆ: ರಾಜೀವ್ ಚಂದ್ರಶೇಖರ್

ಇದೀಗ ಈ ಹೇಳಿಕೆ ಎಲ್ಲ ಕಡೆ ಚರ್ಚೆ ಕಾರಣವಾಗಿದೆ. ಸಚಿವರ ಹೇಳಿಕೆ ಪ್ರತಿಕ್ರಿಯೆ ನೀಡಿದ ಸಿಎಂ ಪಿಣರಾಯಿ ವಿಜಯನ್ ನಮ್ಮ ನೇತೃತ್ವದ ಸರ್ಕಾರ ಜನರ ಮೂಲಭೂತ ವಿಚಾರದ ಬಗ್ಗೆ ಮೃದು ಧೋರಣೆಯನ್ನು ಹೊಂದಿದೆ ಎಂದು ಆರೋಪಿಸಿದರೆ. ಅವರು ಈ ಆರೋಪವನ್ನು ಯಾವ ಆಧಾರದಲ್ಲಿ ಮಾಡಿದ್ದಾರೆ. ಈಗಾಗಲೇ ಕೇರಳ ಸ್ಫೋಟದ ಬಗ್ಗೆ ತನಿಖೆ ನಡೆಯುತ್ತಿದೆ. ಈ ಸಮಯದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಗಳು ಹೀಗೆ ಮಾತನಾಡಬಾರದು ಎಂದು ಹೇಳಿದ್ದಾರೆ. ಚಂದ್ರಶೇಖರ್ ಅವರ ಹೇಳಿಕೆಗಳು ಒಂದು ನಿರ್ದಿಷ್ಟ ಮನಸ್ಥಿತಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.

ಸಿಎಂ ಪಿಣರಾಯಿ ವಿಜಯನ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಚಂದ್ರಶೇಖರ್, ನಾನು ಹಮಾಸ್​​ ಬಗ್ಗೆ ಮಾತನಾಡಿರುವುದು, ಆದರೆ ಸಿಎಂ ಪಿಣರಾಯಿ ವಿಜಯನ್ ಅವರು ದೇಶದ ಮುಸ್ಲಿಂ ಸಹೋದರ ಸಹೋದರಿಯರನ್ನು ಸಮೀಕರಿಸಲು ಪ್ರಯತ್ನಿಸುತ್ತಿರುವಂತೆ ತೋರುತ್ತಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:51 am, Tue, 31 October 23