ಮೊನ್ನೆ ಮೊನ್ನೆಯಷ್ಟೇ ವಿಸ್ತರಿಸಲ್ಪಟ್ಟ ಕೇಂದ್ರ ಸಚಿವ ಸಂಪುಟದಲ್ಲಿ ಈಗ ಮಹಿಳೆಯರ ದರ್ಬಾರ್ ಎಂದಿಗಿಂತ ಸ್ವಲ್ಪ ಹೆಚ್ಚೇ ಇದೆ. ಈ ಎಲ್ಲ ಮಹಿಳೆಯರು ಒಂದೆಡೆ ಸೇರಿ ಚಹಾ ಪಾರ್ಟಿ ಮಾಡಿದ್ದಾರೆ. ಕೇಂದ್ರ ಸಚಿವ ಸಂಪುಟದಲ್ಲಿನ ತಮ್ಮ ಸಹೋದ್ಯೋಗಿ ಗೆಳತಿಯರನ್ನು ಮನೆಗೆ ಆಮಂತ್ರಿಸಿ ರುಚಿ ರುಚಿ ಚಹಾ ಸೇವಿಸುತ್ತ ಚರ್ಚಿಸಿದ್ದಾರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. ಇದೇ 7ರಂದು ಹೊಸದಾಗಿ 7ಸಂಸದೆಯರು ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. 2019ರಲ್ಲಿ ಮೂವರು ಸಂಪುಟ ದರ್ಜೆಯ ಮತ್ತು ಮೂವರು ರಾಜ್ಯ ಖಾತೆಯ ಸಚಿವೆಯರಷ್ಟೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಹೊಂದಿತ್ತು. ಆದರೆ ಈಗ ಈ ಸಂಖ್ಯೆ 11ಕ್ಕೇರಿದ್ದು, ಸಚಿವ ಸಂಪುಟದಲ್ಲಿ ಮಹಿಳೆಯರ ಬಲ ಹೆಚ್ಚಿದೆ.
ಸ್ಮೃತಿ ಇರಾನಿ, ಮೀನಾಕ್ಷಿ ಲೇಖಿ, ಸಾಧ್ವಿ ನಿರಂಜನ್ ಜ್ಯೋತಿ, ಅನುಪ್ರಿಯಾ ಪಟೇಲ್, ರೇಣುಕಾ ಸಿಂಗ್, ಪ್ರತಿಮಾ ಭೋಮುಲ್, ಭಾರತಿ ಪವಾರ್, ಶೋಭಾ ಕರಂದ್ಲಾಜೆ, ದರ್ಶನಾ ಜರ್ದೋಶ್ ಮುಂತಾದವರು ಚಹಾಕೂಟದಲ್ಲಿ ಭಾಗವಹಿಸಿದ್ದರು. ಇವರೆಲ್ಲರಿಗೂ ಚಹಾಕೂಟಕ್ಕೆ ಆಮಂತ್ರಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಖತ್ ಫೋಟೊಶೂಟ್ ಸಹ ಮಾಡಿಸಿದ್ದಾರೆ.
Smt @nsitharaman interacts with the women members of the Union Council of Ministers during a high tea session hosted at her residence today. pic.twitter.com/u9E4bBOQMf
— NSitharamanOffice (@nsitharamanoffc) July 11, 2021
Excellent, women power
— Anu Satheesh ?? (@AnuSatheesh5) July 11, 2021
With Minister @smritiirani and the ministers who were sworn in today.
From left @DarshanaJardosh @PratimaBhoumik @ShobhaBJP @bharati_mp @M_Lekhi @AnupriyaSPatel @Annapurna4BJPGrateful to National President @JPNadda for graciously joining us. pic.twitter.com/ghoW6t7sTX
— Nirmala Sitharaman (@nsitharaman) July 7, 2021
ಇದನ್ನೂ ಓದಿ:
Cabinet Reshuffle: ನರೇಂದ್ರ ಮೋದಿ ಸಚಿವ ಸಂಪುಟ ಸೇರಿದ ನೂತನ ಸಚಿವರ ಕಿರು ಪರಿಚಯ
(Finance Minister Nirmala Sitharaman hosts women minister at high tea at her residency)