Modi 2.0 ಗರಿಷ್ಠ ಸರ್ಕಾರ-ಗರಿಷ್ಠ ಆಳ್ವಿಕೆ ತಂತ್ರ; ವಿದ್ಯಾರ್ಹತೆಗೆೆ ತಕ್ಕಂತೆ ಖಾತೆ ಹಂಚಿಕೆ -ಇದು ಮೋದಿ ಸಂಪುಟ ಪುನರ್ ರಚನೆಯ ಮಂತ್ರ

PM Modi cabinet reshuffle: ಕೊರೊನಾ ಸಾಂಕ್ರಮಿಕ, ಆರ್ಥಿಕ ಕುಸಿತ ತಂದೊಡ್ಡಿರುವ ಸವಾಲು ಎದುರಿಸಲು ಸೂಕ್ತವಾಗುವಂತೆ ಸಂಪುಟ ಪುನರ್ ರಚಿಸಿದ್ದಾರೆ. ಸರಿಯಾದ ಕೈಗಳಿಗೆ ಸರಿಯಾದ ಜವಾಬ್ದಾರಿ ನೀಡಬೇಕೆಂಬ ಉದ್ದೇಶ ಸಚಿವ ಸಂಪುಟ ಪುನರ್ ರಚನೆಯಲ್ಲಿ ಎದ್ದು ಕಾಣುತ್ತಿದೆ. ಸಚಿವರ ಸಾಮರ್ಥ್ಯಕ್ಕೆ ತಕ್ಕನಾದ ಜವಾಬ್ದಾರಿ ನೀಡಿ ಜಾಣ್ಮೆ ಮೆರೆದಿದ್ದಾರೆ.

Modi 2.0 ಗರಿಷ್ಠ ಸರ್ಕಾರ-ಗರಿಷ್ಠ ಆಳ್ವಿಕೆ ತಂತ್ರ; ವಿದ್ಯಾರ್ಹತೆಗೆೆ ತಕ್ಕಂತೆ ಖಾತೆ ಹಂಚಿಕೆ -ಇದು ಮೋದಿ ಸಂಪುಟ ಪುನರ್ ರಚನೆಯ ಮಂತ್ರ
Modi 2.0 ಗರಿಷ್ಠ ಸರ್ಕಾರ-ಗರಿಷ್ಠ ಆಳ್ವಿಕೆ ತಂತ್ರ; ವಿದ್ಯಾರ್ಹತೆಗೆೆ ತಕ್ಕಂತೆ ಖಾತೆಗಳ ಹಂಚಿಕೆ -ಇದು ಪ್ರಧಾನಿ ಮೋದಿ ಸಂಪುಟ ಪುನರ್ ರಚನೆಯ ಮಂತ್ರ
Follow us
S Chandramohan
| Updated By: ಸಾಧು ಶ್ರೀನಾಥ್​

Updated on: Jul 08, 2021 | 5:44 PM

ಪ್ರಧಾನಿ ನರೇಂದ್ರ ಮೋದಿ ಈ ಬಾರಿಯ ಸಂಪುಟ ಪುನರ್ ರಚನೆಯಲ್ಲಿ ಗರಿಷ್ಠ ಸರ್ಕಾರ, ಗರಿಷ್ಠ ಆಳ್ವಿಕೆಯ ತತ್ವವನ್ನು ಆಳವಡಿಸಿಕೊಂಡಿದ್ದಾರೆ. ವಿದ್ಯಾರ್ಹತೆಗೆೆ ತಕ್ಕಂಥ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಪರಸ್ಪರ ಅಂತರ್ ಸಂಬಂಧ ಇರುವ ಇಲಾಖೆಗಳನ್ನು ಒಬ್ಬರೇ ಸಚಿವರಿಗೆ ನೀಡಿರುವುದು ವಿಶೇಷ. ಜೊತೆಗೆ ವೃತ್ತಿಪರರನ್ನು ಪ್ರಮುಖ ಇಲಾಖೆಗೆ ಸಚಿವರಾಗಿ ನೇಮಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ಪುನರ್ ರಚನೆಯಲ್ಲಿ ಕೆಲ ಮಹತ್ವದ ತೀರ್ಮಾನಗಳನ್ನು ಜಾರಿಗೆ ತಂದಿದ್ದಾರೆ. ಈ ಬಾರಿ ಸಂಪುಟ ಪುನರ್ ರಚನೆಯಲ್ಲಿ ಗರಿಷ್ಠ ಸರ್ಕಾರ, ಗರಿಷ್ಠ ಆಳ್ವಿಕೆ, ಗರಿಷ್ಠ ಪ್ರಾತಿನಿಧ್ಯ ತತ್ವವನ್ನು ಆಳವಡಿಸಿಕೊಂಡು ಸಚಿವ ಸಂಪುಟ ರಚಿಸಿದ್ದಾರೆ. ಕೊರೊನಾ ಸಾಂಕ್ರಮಿಕ, ಆರ್ಥಿಕ ಕುಸಿತ ತಂದೊಡ್ಡಿರುವ ಸವಾಲು ಎದುರಿಸಲು ಸೂಕ್ತವಾಗುವಂತೆ ಸಂಪುಟ ಪುನರ್ ರಚಿಸಿದ್ದಾರೆ. ಸರಿಯಾದ ಕೈಗಳಿಗೆ ಸರಿಯಾದ ಜವಾಬ್ದಾರಿ ನೀಡಬೇಕೆಂಬ ಉದ್ದೇಶ ಸಚಿವ ಸಂಪುಟ ಪುನರ್ ರಚನೆಯಲ್ಲಿ ಎದ್ದು ಕಾಣುತ್ತಿದೆ. ಸಚಿವರ ಸಾಮರ್ಥ್ಯಕ್ಕೆ ತಕ್ಕನಾದ ಜವಾಬ್ದಾರಿ ನೀಡಿ ಜಾಣ್ಮೆ ಮೆರೆದಿದ್ದಾರೆ.

30 ಕ್ಯಾಬಿನೆಟ್ ದರ್ಜೆಯ ಸಚಿವರಿಗೆ 53 ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಒಂದಕ್ಕೊಂದು ಅಂತರ್ ಸಂಬಂಧ ಹೊಂದಿರುವ ಖಾತೆಗಳನ್ನು ಇಬ್ಬರು ಸಚಿವರಿಗೆ ನೀಡುವ ಬದಲು ಒಬ್ಬರೇ ಸಚಿವರಿಗೆ ನೀಡಿದ್ದಾರೆ. ಈ ಮೂಲಕ ತೀರ್ಮಾನ ಕೈಗೊಳ್ಳುವುದು, ಸಮಸ್ಯೆ ಪರಿಹರಿಸುವುದು ಸುಲಭವಾಗುತ್ತೆ. ಇದರಿಂದ ಎರಡು ಬೇರೆ ಬೇರೆ ಇಲಾಖೆ ಹಾಗೂ ಇಬ್ಬರು ಸಚಿವರ ನಡುವೆ ಸಮನ್ವಯತೆಯ ಸಮಸ್ಯೆಯೇ ತಲೆದೋರದಂತೆ ಮಾಡಿದ್ದಾರೆ. ದೇಶದಲ್ಲಿ ಇದುವರೆಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಹಾಗೂ ಫಾರ್ಮಾಸೂಟಿಕಲ್ಸ್ ಖಾತೆ ಬೇರೆ ಬೇರೆಯಾಗಿ ಇದ್ದವು.

ಆದರೆ, ಈ ಎರಡು ಇಲಾಖೆಗಳು ಒಂದಕ್ಕೊಂದು ಅವಲಂಬಿತ, ಅಂತರ್ ಸಂಬಂಧ ಹೊಂದಿರುವ ಇಲಾಖೆಗಳ. ಬೇರೆ ಬೇರೆ ಸಚಿವರ ಬಳಿ ಎರಡು ಖಾತೆಗಳು ಇದ್ದಾಗ, ಕೆಲವೊಂದು ಸಮಸ್ಯೆ ಎದುರಾದಾಗ, ಸಚಿವರ ಮಧ್ಯೆ ಸಮನ್ವಯತೆಯ ಅಗತ್ಯವೂ ಇತ್ತು. ಆದರೇ, ಈಗ ಆರೋಗ್ಯ ಖಾತೆಯನ್ನು ಹೊಂದಿರುವವರಿಗೆ ಫಾರ್ಮಾಸೂಟಿಕಲ್ಸ್ ಖಾತೆಯನ್ನು ನೀಡಿದ್ದಾರೆ.

ಮನಸುಖ್ ಮಾಂಡವೀಯಾಗೆ ಆರೋಗ್ಯ, ಕುಟುಂಬ ಕಲ್ಯಾಣ ಖಾತೆಯ ಜೊತೆಗೆ ರಸಾಯನಿಕ, ರಸಗೊಬ್ಬರ, ಫಾರ್ಮಾಸೂಟಿಕಲ್ಸ್ ಖಾತೆಯನ್ನ ನೀಡಿದ್ದಾರೆ. ಇದರಿಂದ ಸಮನ್ವಯತೆಯ ಸಮಸ್ಯೆ ಉದ್ಭವವಾಗಲ್ಲ. ಒಬ್ಬರೇ ಸಚಿವರು ತೀರ್ಮಾನ ಕೈಗೊಳ್ಳುವುದು ಸುಲಭವಾಗುತ್ತೆ. ಜೊತೆಗೆ ಮನಸುಖ್ ಮಾಂಡವೀಯಾ ಕಳೆದ 2 ವರ್ಷದಿಂದ ರಸಾಯನಿಕ, ರಸಗೊಬ್ಬರ, ಫಾರ್ಮಾಸೂಟಿಕಲ್ಸ್ ಖಾತೆಯ ರಾಜ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದರು. ಇಲಾಖೆಯ ಬಗ್ಗೆ ಚೆನ್ನಾಗಿ ಜ್ಞಾನವಿದೆ.

ಕಳೆದೊಂದು ವಾರದಲ್ಲಿ ದೇಶದಲ್ಲಿ ಕೊರೊನಾ ಲಸಿಕೆಯನ್ನು ಉತ್ಪಾದಿಸುವ ಪ್ರಮುಖ ಕಂಪನಿಗಳಿಗೆ ಭೇಟಿ ನೀಡಿ ಲಸಿಕೆ ಉತ್ಪಾದನೆ ಹೆಚ್ಚಿಸುವಂತೆ ಸೂಚಿಸಿದ್ದಾರೆ. ಕೊರೊನಾ ಲಸಿಕೆ ಉತ್ಪಾದಕ ಕಂಪನಿಗಳ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ಪ್ರಯತ್ನ ನಡೆಸಿದ್ದಾರೆ. ಭಾರತ್ ಬಯೋಟೆಕ್, ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ, ಜೈಡಸ್ ಕ್ಯಾಡಿಲಾ ಕಂಪನಿಗಳಿಗೆ ಮನಸುಖ್ ಮಾಂಡವೀಯಾ ಭೇಟಿ ನೀಡಿದ್ದರು.

ಇದು ಮನಸುಖ್ ಮಾಂಡವೀಯಾ ಕ್ರಿಯಾಶೀಲತೆಗೆ ಹಿಡಿದ ಕನ್ನಡಿ. ಜೊತೆಗೆ ದೇಶದಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳ ಚಿಕಿತ್ಸೆಗೆ ಅಂಪೋಟೆರಿಸಿನ್ ಬಿ ಡ್ರಗ್ಸ್ ಮತ್ತು ಕೊರೊನಾ ರೋಗಿಗಳ ಚಿಕಿತ್ಸೆಗೆ ರೆಮಿಡಿಸಿವಿರ್ ಇಂಜೆಕ್ಷನ್ ಕೊರತೆ ಎದುರಾದಾಗ, ಇವುಗಳ ಉತ್ಪಾದನೆ ಹೆಚ್ಚಿಸಲು ಮನಸುಖ್ ಮಾಂಡವೀಯಾ ಕ್ರಮ ಕೈಗೊಂಡಿದ್ದರು.

ಈಗ ಆರೋಗ್ಯ ಇಲಾಖೆಯ ಜೊತೆಗೆ ಫಾರ್ಮಾಸೂಟಿಕಲ್ಸ್ ಖಾತೆಯ ಕ್ಯಾಬಿನೆಟ್ ದರ್ಜೆಯ ಮಂತ್ರಿಯಾಗಿ ಕಾರ್ಯನಿರ್ವಹಿಸುವ ಅವಕಾಶ ಮನಸುಖ್ ಮಾಂಡವೀಯಾಗೆ ಸಿಕ್ಕಿದೆ. ಇನ್ನೂ ಮನಸುಖ್ ಮಾಂಡವೀಯಾಗೆ ವೈದ್ಯ ಪದವಿ ಹಿನ್ನಲೆಯ ಡಾಕ್ಟರ್ ಭಾರತಿ ಪ್ರವೀಣ್ ಪವಾರ್ ರನ್ನು ಆರೋಗ್ಯ ಇಲಾಖೆಯ ರಾಜ್ಯ ಮಂತ್ರಿಯಾಗಿ ನೇಮಿಸಿರುವುದು ಸಹಾಯಕವಾಗುತ್ತೆ. ಡಾಕ್ಟರ್ ಭಾರತಿ ಪ್ರವೀಣ್ ಪವಾರ್ ವೃತ್ತಿಯಲ್ಲಿ ವೈದ್ಯೆ . ಅಪೌಷ್ಠಿಕತೆ, ಶುದ್ದ ಕುಡಿಯುವ ನೀರುನ್ನು ಜನರಿಗೆ ಒದಗಿಸಲು ಕೆಲಸ ಮಾಡಿದ ಅನುಭವ ಡಾಕ್ಟರ್ ಭಾರತಿ ಪ್ರವೀಣ್ ಪವಾರ್ ಗೆ ಇದೆ.

ಇನ್ನು ಟೆಕ್ನಾಲಜಿಯ ಇಲಾಖೆಯನ್ನು ತಂತ್ರಜ್ಞಾನ ಪರಿಣಿತ ವ್ಯಕ್ತಿಗೆ ನೀಡಿರೋದು ಈ ಬಾರಿ ಸಂಪುಟ ಪುನರ್ ರಚನೆಯ ವಿಶೇಷತೆ. ಎಲೆಕ್ಟ್ರಾನಿಕ್ಸ್ ಮತ್ತು ಇನ್ ಫಾರ್ಮೇಶನ್ ಟೆಕ್ನಾಲಜಿ ಇಲಾಖೆಯನ್ನು ಟೆಕ್ನೋಕ್ರಾಟ್ ಅಶ್ವಿನಿ ವೈಷ್ಣವ್ ಗೆ ಮೋದಿ ನೀಡಿದ್ದಾರೆ. ಅಶ್ವಿನಿ ವೈಷ್ಣವ್, ಎಲ್ಲರಂತೆ ಸಾಮಾನ್ಯದ ವ್ಯಕ್ತಿ, ರಾಜಕಾರಣಿಯಲ್ಲ. ಉನ್ನತ ವಿದ್ಯಾಭ್ಯಾಸ, ತಂತ್ರಜ್ಞಾನ, ಆಡಳಿತ ಅನುಭವ ಹೊಂದಿರುವ ವ್ಯಕ್ತಿ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ನಲ್ಲಿ ಚಿನ್ನದ ಪದಕದೊಂದಿಗೆ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಕಾನ್ಪುರದ ಐಐಟಿಯಲ್ಲಿ ಎಂ.ಟೆಕ್ ಪದವಿ ಪಡೆದಿದ್ದಾರೆ.

ಬಳಿಕ ಆಮೆರಿಕಾದ ಪೆನ್ಸಿಲ್ವೇನಿಯಾದ ವಾರ್ಟನ್ ಸ್ಕೂಲ್ ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಬಳಿಕ ಭಾರತಕ್ಕೆ ಬಂದು ಅಖಿಲ ಭಾರತ ನಾಗರಿಕ ಸೇವಾ ಪರೀಕ್ಷೆಯಲ್ಲಿ 27ನೇ ಱಂಕ್ ಪಡೆದಿದ್ದರು. ಒರಿಸ್ಸಾದ ಬಾಲಸೋರ್ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ 15 ವರ್ಷ ಆಡಳಿತ ನಡೆಸಿದ್ದಾರೆ. ಸೀಮನ್ಸ್ ಕಂಪನಿಯ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

ಜಿಇ ಟ್ರಾನ್ಸ್ ಪೋಟೇಷನ್ ಕಂಪನಿಯ ಎಂ.ಡಿ.ಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಬಳಿಕ ಒರಿಸ್ಸಾದಲ್ಲಿ ಬಿಜೆಡಿ ಬೆಂಬಲದೊಂದಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಇಂಥ ವ್ಯಕ್ತಿಯನ್ನ ಹುಡುಕಿ ಈಗ ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಇನ್ ಫಾರ್ಮೇಶನ್ ಟೆಕ್ನಾಲಜಿ ಮಂತ್ರಿಯನ್ನಾಗಿ ಮಾಡಲಾಗಿದೆ.

(ಲೇಖನ: ಎಸ್.​ ಚಂದ್ರಮೋಹನ್​, ಹಿರಿಯ ವರದಿಗಾರ, ಟಿವಿ9)

ಅಶ್ವಿನಿ ವೈಷ್ಣವ್, ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಅವರ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ದೇಶದಲ್ಲಿ ಪಬ್ಲಿಕ್, ಪ್ರೈವೇಟ್ ಪಾರ್ಟನರಶಿಪ್ ಯೋಜನೆಗಳನ್ನು ರೂಪಿಸುವಲ್ಲಿ ಅಶ್ವಿನಿ ವೈಷ್ಣವ್ ಪ್ರಮುಖ ಪಾತ್ರವಹಿಸಿದ್ದಾರೆ. ಹೀಗಾಗಿ ಅಶ್ವಿನಿ ವೈಷ್ಣವ್ ಗೆ ಪ್ರಮುಖವಾದ ರೈಲ್ವೇ ಖಾತೆಯ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನದ ಜವಾಬ್ದಾರಿ ನೀಡಲಾಗಿದೆ.

ದೇಶದ ರೈಲ್ವೇ ಕ್ಷೇತ್ರದ ಅಭಿವೃದ್ದಿ, ರೈಲ್ವೇ ಪ್ರಯಾಣಿಕರಿಗೆ ಉತ್ತಮ ಸೌಕರ್ಯ ಒದಗಿಸುವುದು ಈಗ ಅಶ್ವಿನಿ ವೈಷ್ಣವ್ ಆದ್ಯತೆ. ರೈಲ್ವೇ ಪ್ರಯಾಣಿಕರ ಸುರಕ್ಷತೆ, ಸೌಲಭ್ಯಕ್ಕಾಗಿ ಟೆಕ್ನಾಲಜಿಯನ್ನು ಮತ್ತಷ್ಟು ಸಮರ್ಥವಾಗಿ ಬಳಕೆ ಮಾಡಿಕೊಳ್ಳುವ ಅವಕಾಶ ಅಶ್ವಿನಿ ವೈಷ್ಣವ್ ಗೆ ಇದೆ. ಈ ಕ್ಷೇತ್ರದಲ್ಲಿ ಅವರು ಪರಿಣಿತರೂ ಕೂಡ ಹೌದು.

ಆಡಳಿತದ ವೃತ್ತಿಪರರನ್ನೇ ಕೇಂದ್ರ ಸರ್ಕಾರದ ಇಲಾಖೆ ನಿರ್ವಹಣೆಗೆ ತರಬೇಕೆಂಬ ಉದ್ದೇಶದಿಂದ ಅಶ್ವಿನಿ ವೈಷ್ಣವ್ ಗೆ ಸಚಿವ ಸ್ಥಾನ ನೀಡಲಾಗಿದೆ. ಮೋದಿ ಸರ್ಕಾರದಲ್ಲಿ ಪ್ರತಿಭಾವಂತರ ಕೊರತೆ ಇದೆ ಎಂಬ ಟೀಕೆಯೂ ಇತ್ತು. ಈ ಟೀಕೆಯನ್ನು ಹೋಗಲಾಡಿಸಲು ಅಶ್ವಿನಿ ವೈಷ್ಣವ್ ಗೆ ಕ್ಯಾಬಿನೆಟ್ ನಲ್ಲಿ ಸ್ಥಾನ ನೀಡಲಾಗಿದೆ.

ಇನ್ನು ಶಿಕ್ಷಣ ಹಾಗೂ ಕೌಶಾಲ್ಯಭಿವೃದ್ದಿ ಪರಸ್ಪರ ಸಂಬಂಧ ಹೊಂದಿರುವ ಇಲಾಖೆಗಳು. ಈ ಎರಡೂ ಇಲಾಖೆಗಳನ್ನ ಈ ಬಾರಿ ಒಬ್ಬರೇ ಸಚಿವರಿಗೆ ನೀಡಲಾಗಿದೆ. ಶಿಕ್ಷಣ , ಕೌಶಾಲ್ಯಭಿವೃದ್ದಿ ಖಾತೆಗಳನ್ನು ಧರ್ಮೇಂದ್ರ ಪ್ರಧಾನ್ ಗೆ ನೀಡಲಾಗಿದೆ. ತಮಗೆ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವುದರಲ್ಲಿ ಧರ್ಮೇಂದ್ರ ಪ್ರಧಾನ್ ನಿಷ್ಣಾತರು ಎಂಬುದು ಅವರಿಗಿರುವ ಹೆಗ್ಗಳಿಕೆ.

ವಾಣಿಜ್ಯ, ಜವಳಿ ಮತ್ತು ಗ್ರಾಹಕ ವ್ಯವಹಾರಗಳ ಖಾತೆಯನ್ನು ಈ ಬಾರಿ ಒಬ್ಬರಿಗೆ ನೀಡಲಾಗಿದೆ. ವಾಣಿಜ್ಯ ಮತ್ತು ಜವಳಿ ಎರಡೂ ರಫ್ತು ಸಂಬಂಧಿತ ಇಲಾಖೆಗಳು. ಜೊತೆಗೆ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಅವಕಾಶ ಇರುವ ಇಲಾಖೆಗಳು. ಈ ಇಲಾಖೆಗಳ ಜವಾಬ್ದಾರಿಯನ್ನ ಈಗ ಪಿಯೂಶ್ ಗೋಯಲ್ ಗೆ ನೀಡಲಾಗಿದೆ. ಆರೋಗ್ಯ, ಶಿಕ್ಷಣ, ಆರ್ಥಿಕತೆ, ಟೆಕ್ನಾಲಜಿ ರಾಷ್ಟ್ರೀಯ ಆದ್ಯತೆಗಳಾಗಿವೆ. ಹೀಗಾಗಿ ಈ ಖಾತೆಗಳಿಗೆ ಸಮರ್ಥರು, ಅರ್ಹರನ್ನು, ಉತ್ಸಾಹಿಗಳನ್ನು ಆಯ್ಕೆ ಮಾಡಲಾಗಿದೆ. ಶಿಕ್ಷಣ ಖಾತೆಗೆ ಇಬ್ಬರು ರಾಜ್ಯ ಖಾತೆ ಮಂತ್ರಿಗಳನ್ನ ನೇಮಿಸಲಾಗಿದೆ.

ಶಿಕ್ಷಣ ಖಾತೆ ರಾಜ್ಯ ಮಂತ್ರಿಯಾಗಿ ನೇಮಕಗೊಂಡಿರುವ ರಾಜಕುಮಾರ್ ರಂಜನ್ ಸಿಂಗ್ ನಾಲ್ಕು ದಶಕಗಳ ಕಾಲ ವಿಶ್ವವಿದ್ಯಾಲಯಗಳಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡಿದ ಅನುಭವ ಇರುವವರು. ಸಂಶೋಧನೆ ನಡೆಸಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಇನ್ನೂ ಶಿಕ್ಷಣ ಇಲಾಖೆಯ ಮತ್ತೊಬ್ಬ ರಾಜ್ಯ ಮಂತ್ರಿ ಸುಭಾಷ್ ಸರ್ಕಾರ್, ವೃತ್ತಿಯಲ್ಲಿ ವೈದ್ಯರು. ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಪ್ರಬಲವಾದ ತಂಡವನ್ನ ನಿಯೋಜಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ. ಜೊತೆಗೆ ಈ ಹೊಸ ತಂಡ ಈಗಾಗಲೇ ಘೋಷಣೆಯಾಗಿರುವ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕಾಗಿದೆ.

ಕೆಲವೊಂದು ಇಲಾಖೆಗಳಿಗೆ ಆಯಾ ಇಲಾಖೆಗೆ ಸಂಬಂಧಪಟ್ಟ ಪದವಿ ಹಿನ್ನಲೆಯವರನ್ನೇ ಕ್ಯಾಬಿನೆಟ್ ದರ್ಜೆ ಇಲ್ಲವೇ ರಾಜ್ಯ ಖಾತೆ ಮಂತ್ರಿಗಳಾಗಿ ನೇಮಿಸಲಾಗಿದೆ. ಕಾನೂನು ಪದವಿ ಪಡೆದಿರುವ ಕಿರಣ್ ರಿಜಿಜುಗೆ ಕಾನೂನು ಖಾತೆ ಕ್ಯಾಬಿನೆಟ್ ದರ್ಜೆ ಸ್ಥಾನ ನೀಡಲಾಗಿದೆ. ಇನ್ನು ಕೆಲ ಇಲಾಖೆಗಳಿಗೆ ಇಂಜಿನಿಯರ್ ಗಳನ್ನು ಕ್ಯಾಬಿನೆಟ್ ದರ್ಜೆ ಇಲ್ಲವೇ ರಾಜ್ಯ ಖಾತೆ ಮಂತ್ರಿಗಳಾಗಿ ನೇಮಿಸಲಾಗಿದೆ. ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ಕೊಡುವ ದೃಷ್ಟಿಯಿಂದ ಭೂಪೇಂದ್ರ ಯಾದವ್ ಗೆ ಕಾರ್ಮಿಕ ಖಾತೆಯನ್ನು ಮೋದಿ ನೀಡಿದ್ದಾರೆ. ಭೂಪೇಂದ್ರ ಯಾದವ್ ವಕೀಲರಾಗಿ ಕೆಲಸ ಮಾಡಿದ ಅನುಭವ ಇದೆ. ಬಿಜೆಪಿ ಸಂಘಟನೆಯಲ್ಲಿ ದುಡಿದಿದ್ದಾರೆ.

(Maximum government Maximum Governance PM Modi cabinet reshuffle new philosophy)

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್