Infosys Sudha Murty: ಇದೇನು ಇನ್ಫೋಸಿಸ್ ಸುಧಾ ಮೂರ್ತಿ ತಿರುಪತಿ ಟಿಟಿಡಿ ಮಂಡಳಿ ಅಧ್ಯಕ್ಷರಾಗಿ ನೇಮಕವಾದರಾ!?

ಸಾಧು ಶ್ರೀನಾಥ್​

|

Updated on:Jul 08, 2021 | 5:16 PM

Tirumala Tirupati Devasthanams Board: ಈ ಮಧ್ಯೆ ಸುಧಾ ಮೂರ್ತಿ ರಾಜೀನಾಮೆ ಮತ್ತು ಮರು ನೇಮಕದ ಮಧ್ಯೆ ಟಿಟಿಡಿ ಆಡಳಿತ ಮಂಡಳಿ ವಿಷಯದಲ್ಲಿ ವಿವಾದದ ಘಂಟಾನಾದ ತುಸು ಜೋರಾಗಿಯೇ ಕೇಳಿಬಂದಿದೆ. ಒಂದು ಕಡೆ ತಮ್ಮ ಹೊಸ ಸರ್ಕಾರ ಸ್ಥಾಪನೆಯಾಗುತ್ತಿದ್ದಂತೆ ಟಿಟಿಡಿ ಅಧ್ಯಕ್ಷರನ್ನಾಗಿ ಮುಖ್ಯಮಂತ್ರಿ ಜಗನ್​ ತಮ್ಮ ಸೋದರ ಮಾವ ವೈ ವಿ ಸುಬ್ಬಾರೆಡ್ಡಿಯನ್ನು ನೇಮಕ ಮಾಡಿದರು. ಇದೇ ಪೀಕಲಾಟಕ್ಕೆ ಇಟ್ಟುಕೊಂಡಿದ್ದು. ಮುಂದೇನಾಯ್ತು...?

Infosys Sudha Murty: ಇದೇನು ಇನ್ಫೋಸಿಸ್ ಸುಧಾ ಮೂರ್ತಿ ತಿರುಪತಿ ಟಿಟಿಡಿ ಮಂಡಳಿ ಅಧ್ಯಕ್ಷರಾಗಿ ನೇಮಕವಾದರಾ!?
ಇದೇನು ಇನ್ಫೋಸಿಸ್ ಸುಧಾ ಮೂರ್ತಿ ತಿರುಪತಿ ಟಿಟಿಡಿ ಆಡಳಿತ ಮಂಡಳಿ ಅಧ್ಯಕ್ಷರಾಗಿ ನೇಮಕವಾದರಾ!?
Follow us

ಸಾಮಾಜಿಕ ಜಾಲತಾಣದಲ್ಲಿ ಮೂರು ದಿನದಿಂದ ಇನ್ಫೋಸಿಸ್ ಫೌಂಡೇಶನ್​ ಅಧ್ಯಕ್ಷೆ ಸುಧಾ ಮೂರ್ತಿ ಅವರು ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ (ಟಿಟಿಡಿ) ಅಧ್ಯಕ್ಷರಾಗಿ ನೇಮಕವಾಗಿದ್ದಾರೆ, ಕನ್ನಡಿಗರಿಗೆ ಇದಕ್ಕಿಂತ ಸೌಭಾಗ್ಯ ಮತ್ಯಾವುದಿದೆ ಎಂದು ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಆದರೆ ಇನ್ಫಿ ಸುಧಾ ಮೂರ್ತಿ ನಿಜಕ್ಕೂ ತಿರುಪತಿ ವೆಂಕಟೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರಾ? ಎಂಬ ಪ್ರಶ್ನೆಯ ಬೆನ್ನುಹತ್ತಿದಾಗ ದೊರೆತ ಮಾಹಿತಿಯೇ ಬೇರೆ.

ಅಸಲಿಗೆ 2 ವರ್ಷಗಳ ಹಿಂದೆ 2019ರ ಸೆಪ್ಟೆಂಬರ್​ನಲ್ಲಿ ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ ಚುಕ್ಕಾಣಿ ಹಿಡಿದಿರುವ ಆಂಧ್ರ ಪ್ರದೇಶ ಸರ್ಕಾರವು ಸುಧಾ ಮೂರ್ತಿ ಸೇರಿದಂತೆ ಇನ್ನೂ ಇಬ್ಬರನ್ನು (ಸಂಪತ್​ ರವಿ ನಾರಾಯಣ್ ಮತ್ತು ರಮೇಶ್​ ಶೆಟ್ಟಿ) ಮಂಡಳಿಯ (TTD Board) ಸದಸ್ಯರನ್ನಾಗಿ ನೇಮಕ ಮಾಡಿತ್ತು.

ಟಿಟಿಡಿ ಆಡಳಿತ ಮಂಡಳಿಯಲ್ಲಿ ಒಟ್ಟು 26 ಸದಸ್ಯರು ನೇಮಕಗೊಳ್ಳುತ್ತಾರೆ. ಒಬ್ಬರು ಅಧ್ಯಕ್ಷರಾಗಿ (TTD Chairman) ನೇಮಕಗೊಳ್ಳುತ್ತಾರೆ. ಆಂಧ್ರ ಪ್ರದೇಶದಿಂದ 7 ಮಂದಿ, ತೆಲಂಗಾಣದಿಂದ 7 ಮಂದಿ, ತಮಿಳುನಾಡಿನಿಂದ 4 ಮಂದಿ, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ತಲಾ 3 ಮಂದಿ ಹಾಗೂ ದೆಹಲಿಯನ್ನು ಒಬ್ಬರು ಪ್ರತಿನಿಧಿಸುತ್ತಾರೆ. ಆಂಧ್ರ ಪ್ರದೇಶದ ಹಿಂದಿನ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಅವರು ಟಿಟಿಡಿ ಆಡಳಿತ ಮಂಡಳಿಗೆ ಸುಧಾ ಮೂರ್ತಿ ಅವರನ್ನು ಈ ಹಿಂದೆ ನೇಮಕ ಮಾಡಿದ್ದರು.

ಅದಕ್ಕೂ ಮುನ್ನವೂ ಸುಧಾ ಮೂರ್ತಿ ಅವರು ಟಿಟಿಡಿ ಸದಸ್ಯರಾಗಿ ನೇಮಕಗೊಂಡಿದ್ದರು. 2017 ಮತ್ತು 2018ರಲ್ಲಿ ಎರಡು ಬಾರಿ 14 ತಿಂಗಳ ಕಾಲ ಟಿಟಿಡಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಈ ಮಧ್ಯೆ, ಚಂದ್ರ ಬಾಬು ಹೋಗಿ ಜಗನ್​ ಮೋಹನ್​ ರೆಡ್ಡಿ ಹೊಸದಾಗಿ ಆಂಧ್ರ ಸಿಎಂ ಆದಾಗ ವಾಡಿಕೆಯಂತೆ ಸುಧಾ ಮೂರ್ತಿ ಅವರು ಟಿಟಿಡಿ ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

 Infosys Sudha Murty appointed as Tirumala Tirupati Devasthanams Board chairman says social media posts but not in reality

ಸುಧಾ ಮೂರ್ತಿ ಅವರು ಟಿಟಿಡಿ ಆಡಳಿತ ಮಂಡಳಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ…

ಆದಾಗ್ಯೂ ತಕ್ಷಣವೇ ಆಂಧ್ರ ಮುಖ್ಯಮಂತ್ರಿ ಜಗನ್ (Chief Minister Jagan Mohan Reddy)​ ಸುಧಾ ಮೂರ್ತಿ ಅವರನ್ನು ಟಿಟಿಡಿ ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ಮತ್ತೆ ನೇಮಕ ಮಾಡಿದರು. ಅಲ್ಲಿಂದೀಚೆಗೆ ಸುಧಾ ಮೂರ್ತಿ ಅವರು ಟಿಟಿಡಿ ಆಡಳಿತ ಮಂಡಳಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಆದರೆ ಈ ಮಧ್ಯೆ ಸುಧಾ ಮೂರ್ತಿ ಅವರ ರಾಜೀನಾಮೆ ಮತ್ತು ಮರು ನೇಮಕದ ಮಧ್ಯೆ ಟಿಟಿಡಿ ಆಡಳಿತ ಮಂಡಳಿ ವಿಷಯದಲ್ಲಿ ವಿವಾದದ ಘಂಟಾನಾದ ತುಸು ಜೋರಾಗಿಯೇ ಕೇಳಿಬಂದಿದೆ. ಒಂದು ಕಡೆ ತಮ್ಮ ಹೊಸ ಸರ್ಕಾರ ಸ್ಥಾಪನೆಯಾಗುತ್ತಿದ್ದಂತೆ ಟಿಟಿಡಿ ಅಧ್ಯಕ್ಷರನ್ನಾಗಿ ಮುಖ್ಯಮಂತ್ರಿ ಜಗನ್​ ಅವರು ತಮ್ಮ ಸೋದರ ಮಾವ ವೈ ವಿ ಸುಬ್ಬಾರೆಡ್ಡಿಯನ್ನು (YV Subba Reddy) ನೇಮಕ ಮಾಡಿ ಆದೇಶ ಹೊರಡಿಸಿದರು.

ಇದು ನಿಜಕ್ಕೂ ಪೀಕಲಾಟಕ್ಕೆ ಇಟ್ಟುಕೊಂಡಿದ್ದು. ಅಸಲಿಗೆ ವೈ ವಿ ಸುಬ್ಬಾರೆಡ್ಡಿ ಸಿಎಂ ಜಗನ್​ ಹತ್ತಿರದ ಸಂಬಂಧಿ ಎಂತಲೂ, ಸುಬ್ಬಾರೆಡ್ಡಿ ಕ್ರೈಸ್ತ ಧರ್ಮಕ್ಕೆ ಪರಿವರ್ತನೆಗೊಂಡಿದ್ದಾರೆಂದೂ, ಆ ಕಾರಣಕ್ಕಾಗಿಯೇ ತಾನು ಟಿಟಿಡಿ ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಸುಧಾ ಮೂರ್ತಿ ಹೇಳಿದ್ದಾರೆಂದು ಭಾರೀ ಸುದ್ದಿ ಹರಿದಾಡತೊಡಗಿತು.

ಆದರೆ ವಾಸ್ತವದಲ್ಲಿ ವೈ ವಿ ಸುಬ್ಬಾರೆಡ್ಡಿ ಆಂಧ್ರ ಸಿಎಂ ಜಗನ್ ಸಂಬಂಧಿಯೇ ಆದರೂ, ಕ್ರೈಸ್ತ ಧರ್ಮದ ಪರ (Christian) ಒಲವು ಇರುವವರಾದರೂ ಆ ಧರ್ಮಕ್ಕೆ ಮತಾಂತರಗೊಂಡವರಲ್ಲ. ಆ ಬಗ್ಗೆ ಖುದ್ದು ವೈ ವಿ ಸುಬ್ಬಾರೆಡ್ಡಿಯೇ ಸ್ಪಷ್ಟನೆ ನೀಡಿ, ತಾನು ಅಪ್ಪಟ ಹಿಂದೂ ಧಾರ್ಮಿಕ ಎಂದು ಪ್ರತಪಾದಿಸಿದ್ದರು. ಜೊತೆಗೆ ರಾಜಕೀಯವಾಗಿ ಮತ್ತು ಕುಟುಂಬ ಕುರುಡು ಪ್ರೀತಿಯೂ ಇಲ್ಲಿ ಕೆಲಸ ಮಾಡಿತ್ತು. ಹಾಗಾಗಿ ಅವರ ಟಿಟಿಡಿ ಅಧ್ಯಕ್ಷ ಸ್ಥಾನ ಅಬಾಧಿತವಾಗಿ ಮುಂದುವರಿದುಕೊಂಡು ಬಂದಿದೆ.

ಆದರೆ ಈ ಮಧ್ಯೆ, ಸುಧಾ ಮೂರ್ತಿ ಅವರು ರಾಜೀನಾಮೆ ನೀಡಿದ್ದನ್ನೇ ಮುಂದಿಟ್ಟುಕೊಂಡು ಸುಧಾ ಮೂರ್ತಿ ಅವರನ್ನೇ ಟಿಟಿಡಿ ಅಧ್ಯಕ್ಷ ಸ್ಥಾನದಲ್ಲಿ ನೋಡಬಯಸಿ, ಸುಖಾಸುಮ್ಮನೆ ಸುಧಾ ಮೂರ್ತಿ (Infosys Foundation chairperson Sudha Murty) ಅವರೇ ಟಿಟಿಡಿ ಅಧ್ಯಕ್ಷರು ಎಂದು ಸಾಮಾಜಿಕ ಜಾಲತಾಣದಲ್ಲಿ ಪುಕಾರು ಎಬ್ಬಿಸಿದ್ದಾರೆ.

ನನ್ನ ರಾಜೀನಾಮೆ ಮತ್ತು ಮರು ನೇಮಕದಲ್ಲಿ ರಾಜಕೀಯ ಇಲ್ಲ. ಹೊಸಬರು ಮುಖ್ಯಮಂತ್ರಿ ಆದಾಗ ನಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸಂಪ್ರದಾಯ. ಅದರಂತೆ ರಾಜೀನಾಮೆ ನೀಡಿದ್ದೆ ಅಷ್ಟೇ. ಅದಾದ ಮೇಲೆ ಸಿಎಂ ಜಗನ್​ ನನ್ನನ್ನು ಮತ್ತೆ ನೇಮಕ ಮಾಡಿದರು. ಟಿಟಿಡಿ ಆಡಳಿತ ಮಂಡಳಿ ಜೊತೆಗಿನ ನನ್ನ ಸಂಪರ್ಕ, ಒಡನಾಟ ನಿಜಕ್ಕೂ ಚೆನ್ನಾಗಿದೆ. ಜೀವಮಾನದಲ್ಲಿ ಇಂತಹ ಸೇವೆ ಸಲ್ಲಿಸಲು ಎದುರು ನೋಡುತ್ತೇವೆ ಎಂದು ಸಂತಸ ಹಂಚಿಕೊಂಡಿದ್ದರು.

ಇನ್ನೂ ಬಿಡಿಸಿ ಹೇಳಬೇಕು ಅಂದ್ರೆ ಇನ್ಫೋಸಿಸ್​ ಸುಧಾ ಮೂರ್ತಿ ಅವರು 2017ರ ಫೆಬ್ರವರಿ 19ರಂದು ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡಿದ್ದರು. ಅದಾದ ಮೇಲೆ ಮತ್ತೆ 2018ರಲ್ಲಿ ಮರು ನೇಮಕಗೊಂಡಿದ್ದರು. ಏಕೆಂದ್ರೆ TTD Board ಅಂದರೆ ಅದೊಂದು ಪಾಪಕೂಪ. ಅದರಲ್ಲಿ ಭ್ರಷ್ಟಾಚಾರ ತುಂಬಿ ಹರಿಯುತ್ತಿದೆ ಎಂಬ ಮಾತು ಬಲಾಢ್ಯವಾಗಿ ಜನಜನಿತವಾಗಿತ್ತು. ಅದರಲ್ಲೂ ಜೆ ಶೇಖರ್​ ರೆಡ್ಡಿ (J Sekhar Reddy) ಎಂಬಾತ ಈ ಅನಾಚಾರದ ಕೇಂದ್ರ ಬಿಂದು ಎಂಬುದು ಎತ್ತಿಕಾಣುತ್ತಿತ್ತು.

ಹಾಗಾಗಿ ಆಂಧ್ರ ಸರ್ಕಾರ ಆತನನ್ನು 2016ರ ಡಿಸೆಂಬರ್​ 10ರಂದು ಸದಸ್ಯ ಸ್ಥಾನದಿಂದ ಕಿತ್ತು ಹಾಕಿತ್ತು. ಮತ್ತು ತಿರುಪತಿ ವೆಂಕಟೇಶ್ವರ ದೇವಸ್ಥಾನದ ಆಡಳಿತ ಮಂಡಳಿ ವರ್ಚಸ್ಸನ್ನು ಮತ್ತೆ ಗಳಿಸಲು ಅರ್ಹ ವ್ಯಕ್ತಿಗಾಗಿ ತಲಾಶೆ ಮಾಡಿದಾಗ ಅವರಿಗೆ ಕಂಡಿದ್ದು ಕನ್ನಡತಿ ಸುಧಾ ಮೂರ್ತಿ. ಹಾಗಾಗಿ ಚಂದ್ರ ಬಾಬು ನಾಯ್ಡು ತಕ್ಷಣ ಅವರನ್ನು ಶೇಖರ್​ ರೆಡ್ಡಿ ಸ್ಥಾನದಲ್ಲಿ ಸದಸ್ಯರನ್ನಾಗಿ ನೇಮಕ ಮಾಡಿತು.

ಅಲ್ಲಿಂದೀಚೆಗೆ ಅವರು ಮಂಡಳಿತ ಸದಸ್ಯರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಮುಂದೆ ವೆಂಕಟೇಶ್ವರನ ಆಶೀರ್ವಾದವಿದ್ದರೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುವಷ್ಟು ಅರ್ಹರು ಅನ್ನುತ್ತಾರೆ ಪದ್ಮ ಶ್ರೀ ಸುಧಾ ಮೂರ್ತಿ ಅವರ ಹಿತೈಷಿಗಳು.

BSY ಭೇಟಿಯಾದ ಟಿಟಿಡಿ ಅಧ್ಯಕ್ಷ, ತಿರುಪತಿಯಲ್ಲಿ ರಾಜ್ಯದ ವಸತಿಗೃಹ ನಿರ್ಮಾಣಕ್ಕೆ ಗ್ರೀನ್‌ ಸಿಗ್ನಲ್‌ (Infosys Sudha Murty appointed as Tirumala Tirupati Devasthanams Board chairman says social media posts but not in reality)

ತಾಜಾ ಸುದ್ದಿ

Related Stories

Click on your DTH Provider to Add TV9 Kannada